ಬೆಂಗಳೂರು : ಅಂತರಂಗ ಬಹಿರಂಗ ತಂಡ ಪ್ರಸ್ತುತ ಪಡಿಸುವ ‘ಅನುಮಾನದ ಅವಾಂತರ’ ಹಾಸ್ಯ ನಾಟಕ ಪ್ರದರ್ಶನವನ್ನು ದಿನಾಂಕ 16 ಫೆಬ್ರವರಿ 2025ರಂದು ಸಂಜೆ 7-00 ಗಂಟೆಗೆ ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಟರ್ ವಾಡಿಯಾ ಸಭಾಂಗಣದಲ್ಲಿ ಆಯೋಜಿಲಾಗಿದೆ. ಮೋಲಿಯರ್ ಮೂಲ ಕಥೆಯನ್ನು ಎಂ. ರಾಮಾರಾವ್ ಅನುವಾದಿಸಿದ್ದು, ಎಸ್. ವಿಕಾಸ್ ನಿರ್ದೇಶನ ಮಾಡಿದ್ದಾರೆ. ಬುಕ್ ಮೈ ಶೋನಲ್ಲಿ ಟಿಕೆಟ್ ಲಭ್ಯವಿದ್ದು, ನೇರ ಬುಕ್ಕಿಂಗ್‌ಗಾಗಿ 86605 47776 ಸಂಖ್ಯೆಯನ್ನು ಸಂಪರ್ಕಿಸಬಹುದು.
ಹವ್ಯಾಸಿ ರಂಗಭೂಮಿಯಲ್ಲಿ ಸಾಕಷ್ಟು ಪರಿಣಿತಿಯನ್ನು ಪಡೆದಂತಹ ಹತ್ತಾರು ಹುಡುಗರು ಸೇರಿ ಸ್ಥಾಪಿಸಲ್ಪಟ್ಟ ಸಂಸ್ಥೆಯೇ ‘ಅಂತರಂಗ ಬಹಿರಂಗ’. ಈ ತಂಡದ ಮುಖ್ಯ ಉದ್ದೇಶ ಹೊಸ ಕಲಾವಿದರಿಗೆ ಅವಕಾಶ ಹಾಗೂ ಆಧುನಿಕ ಕಾಂಟೆಂಪರರಿ ವಿಷಯ ಆಧಾರಿತ ಕಥಾ ವಸ್ತು ಕೊಡುವುದು. ಅದರಂತೆಯೇ ನಡೆದು ಬರುತ್ತಿದ್ದು, ಇದರ ಜೊತೆಗೆ ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರ, ಸಾಂಸ್ಕೃತಿಕ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ಒಯ್ಯುವುದು ಹಾಗೂ ಆದಷ್ಟು ಹಳೆ ಪ್ರೇಕ್ಷಕರ ಜೊತೆ ಜೊತೆಗೆ ಹೊಸ ಪ್ರೇಕ್ಷಕರನ್ನು ರಂಗಭೂಮಿಗೆ ಆಕರ್ಷಿಸುವುದು ನಮ್ಮ ಮತ್ತೊಂದು ಉದ್ದೇಶವಾಗಿದೆ. ಆರು ವರ್ಷಗಳಲ್ಲಿ ಸುಮಾರು 30,000 ಹೊಸ ಪ್ರೇಕ್ಷಕರನ್ನು ಕರೆ ತಂದಿರುವುದೇ ಈ ತಂಡದ ಹೆಗ್ಗಳಿಕೆ.