ಮಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಶ್ರಯದಲ್ಲಿ ಶ್ರೀ ಸತ್ಯನಾರಾಯಣ ಶಾನಭಾಗ ಇವರು ಸಂಪಾದಿಸಿದ ‘ಆನ್ವೀಕ್ಷಿಕೀ‘ ಸಮಕಾಲೀನ ಆಖ್ಯಾನಗಳು ಪುಸ್ತಕ ಲೋಕಾರ್ಪಣೆ ಹಾಗೂ ಸಂವಾದ ಕಾರ್ಯಕ್ರಮವು ದಿನಾಂಕ 28-06-2023ರ ಸಂಜೆ 06.30ಕ್ಕೆ ಮಂಗಳೂರಿನ ಪ್ರತಾಪನಗರದ ಸಂಘನಿಕೇತನದಲ್ಲಿ ನಡೆಯಲಿದೆ.
ಮಂಗಳೂರು ಮಹಾನಗರದ ಮಾನ್ಯ ಸಂಘಚಾಲಕರಾದ ಡಾ.ಸತೀಶ್ ರಾವ್ ಅಧ್ಯಕ್ಷತೆ ವಹಿಸಲಿದ್ದು, ಕನ್ನಡ ಪ್ರಾಧ್ಯಾಪಕರು ಮತ್ತು ಖ್ಯಾತ ಚಿಂತಕರಾದ ಡಾ. ಅಜಕ್ಕಳ ಗಿರೀಶ್ ಭಟ್ ವಕ್ತಾರರಾಗಿ ಭಾಗವಹಿಸಲಿದ್ದಾರೆ.

