ಮೈಸೂರು : ಅದಮ್ಯ ರಂಗ ಶಾಲೆಯು ಕಳೆದ ಎಂಟು ವರ್ಷಗಳಿಂದ ಮೈಸೂರಿನ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ವಯಸ್ಕರ ಮತ್ತು ಮಕ್ಕಳ ರಂಗಭೂಮಿಗೆ ಅಪಾರ ಕೊಡುಗೆ ನೀಡುತ್ತಾ ಬರುತ್ತಿದೆ. ಅದಮ್ಯದ ಮುಂದಿನ ಭಾಗವಾಗಿ 30 ದಿನಗಳ ಅವಧಿಯ ಅಭಿನಯ ತರಬೇತಿ ಮತ್ತು ಕಲಾತ್ಮಕ ಚಲನಚಿತ್ರ ತಯಾರಿ ಮತ್ತು ಚಿತ್ರೀಕರಣ 27-05-2024ರಂದು ಪ್ರಾರಂಭವಾಗಲಿದೆ.
ಅಭಿನಯ ತರಬೇತಿ, ಧ್ವನಿ ಮುದ್ರಣ, ಪ್ರಸಾದನ, ಸಂಕಲನ ಸೇರಿದಂತೆ ಸಿನಿಮಾ ಮಾಧ್ಯಮದ ಬೇರೆ ಬೇರೆ ಆಯಾಮಗಳ ಕುರಿತು ಪರಿಚಯಾತ್ಮಕ ಪ್ರಾಯೋಗಿಕ ತರಗತಿಗಳು ನಡೆಯಲಿದ್ದು, ನುರಿತ ನಿರ್ದೇಶಕರು ಮತ್ತು ಚಲನಚಿತ್ರ ಕಲಾವಿದರು ತರಬೇತಿ ನೀಡಲಿದ್ದಾರೆ. ಕಾರ್ಯಾಗಾರದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳನ್ನು ತೊಡಗಿಸಿಕೊಂಡು ಕಲಾತ್ಮಕ ಸಿನಿಮಾ ತಯಾರಾಗಲಿದ್ದು, ಪ್ರತಿದಿನ ಸಂಜೆ 6.30ರಿಂದ 9.00ರವರೆಗೂ ಚಿತ್ರೀಕರಣ ನಡೆಯಲಿದೆ. ಮೊದಲು ನೋಂದಣಿ ಮಾಡಿಕೊಂಡ ಗರಿಷ್ಠ 30 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು.
ವಯೋಮಿತಿ 16ರಿಂದ 50 ವರ್ಷ ಹೆಚ್ಚಿನ ಮಾಹಿತಿಗಾಗಿ ರಂಗಶಾಲೆ ಕಾರ್ಯದರ್ಶಿ ಚಂದ್ರು ಮಂಡ್ಯ – 8660103141 ಇವರನ್ನು ಸಂಪರ್ಕಿಸಬಹುದು.
Subscribe to Updates
Get the latest creative news from FooBar about art, design and business.
Previous Articleನಯನ ಸಭಾಂಗಣದಲ್ಲಿ ಕಾಸರಗೋಡಿನ ರಂಗಚಿನ್ನಾರಿಯಿಂದ ನಾಟಕ ಪ್ರದರ್ಶನ | ಜೂನ್ 1