ಬೆಂಗಳೂರು: ಚಿತ್ರಕಲೆಯ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕಲಾಶಿಬಿರ, ತರಬೇತಿ ಕಾರ್ಯಾಗಾರಗಳಲ್ಲಿ ಅವಕಾಶ ಕಲ್ಪಿಸಲು ಕರ್ನಾಟಕ ಲಲಿತಕಲಾ ಅಕಾಡೆಮಿ ನಿರ್ಧರಿಸಿದೆ. 2024-25ನೇ ಸಾಲಿನ ಗಿರಿಜನ ಉಪಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಅಕಾಡೆಮಿ ಹಮ್ಮಿಕೊಳ್ಳುವ ಕಲಾಶಿಬಿರ, ತರಬೇತಿ ಕಾರ್ಯಾಗಾರ ಮತ್ತು ಕಮ್ಮಟಗಳಲ್ಲಿ ಅವಕಾಶ ಕಲ್ಪಿಸಲಾಗುತ್ತಿದ್ದು ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ. 18 ವರ್ಷ ಮೇಲ್ಪಟ್ಟ ಆಸಕ್ತಿಯುಳ್ಳ ವಿದ್ಯಾರ್ಥಿಗಳು ಪೂರ್ಣ ವಿವರಗಳೊಂದಿಗೆ ಪಾಸ್‌ಪೋರ್ಟ್ ಅಳತೆಯ ಎರಡು ಭಾವಚಿತ್ರ, 5*6 ಅಳತೆಯ ನಾಲ್ಕು ಚಿತ್ರಕಲಾಕೃತಿಗಳ ಛಾಯಾಚಿತ್ರಗಳನ್ನು
ದಿನಾಂಕ 15 ನವೆಂಬರ್ 2024ರ ಒಳಗಾಗಿ ಅರ್ಜಿ ಸಲ್ಲಿಸಬೇಕಾಗಿದ್ದು, ಅರ್ಜಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಲಲಿತಕಲಾ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ. ಸಿ. ರಸ್ತೆ, ಬೆಂಗಳೂರು- 560 002 ಇಲ್ಲಿಗೆ ಕಳುಹಿಸಲು ಕೋರಲಾಗಿದೆ. ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ : 080-22480297.
Subscribe to Updates
Get the latest creative news from FooBar about art, design and business.
ಚಿತ್ರಕಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಕಲಾಶಿಬಿರಕ್ಕೆ ಅರ್ಜಿ ಆಹ್ವಾನ | ನವೆಂಬರ್ 15
No Comments1 Min Read
Previous Articleಧರ್ಮಸ್ಥಳದಲ್ಲಿ ರಾಜ್ಯ ಮಹಿಳಾ ಗೋಷ್ಠಿ | ಅಕ್ಟೋಬರ್ 27
Related Posts
Comments are closed.