ಮಂಗಳೂರು : ಬ್ಯಾರಿ ಭಾಷೆಯಲ್ಲಿ ನಾಟಕಗಳನ್ನು ರೂಪಿಸಲು ಉತ್ತೇಜನ ನೀಡುವ ಉದ್ದೇಶದಿಂದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಬ್ಯಾರಿ ಕಿರುನಾಟಕ ತರಬೇತಿ ಕಾರ್ಯಾಗಾರ ಮತ್ತು ಪ್ರದರ್ಶನ ಯೋಜನೆ ಹಮ್ಮಿಕೊಂಡಿದೆ.
ಮಂಗಳೂರಿನಲ್ಲಿ ಹತ್ತು ದಿನಗಳ ಕಾಲ ನಡೆಯಲಿರುವ ಬ್ಯಾರಿ ನಾಟಕ ತರಬೇತಿ ಕಾರ್ಯಾಗಾರದಲ್ಲಿ ಸಿನಿಮಾ ನಿರ್ದೇಶಕರು ಮತ್ತು ಹಿರಿಯ ಕಲಾವಿದರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಾಗಾರಕ್ಕೆ ಪ್ರವೇಶ ಉಚಿತವಾಗಿದ್ದು, ಆಯ್ಕೆಯಾದ ಕಲಾವಿದರಿಗೆ ತರಬೇತಿ ಸಮಯದಲ್ಲಿ ಊಟೋಪಚಾರ, ಬಸ್ ಪ್ರಯಾಣ ವೆಚ್ಚ ನೀಡಲಾಗುವುದು. ತರಬೇತಿ ಪಡೆದ ಆಯ್ದ ಕಲಾವಿದರ ತಂಡದಿಂದ ನಾಟಕ ಪ್ರದರ್ಶನ ಕಾರ್ಯಕ್ರಮವನ್ನೂ ಅಕಾಡೆಮಿ ವತಿಯಿಂದ ಹಮ್ಮಿಕೊಳ್ಳಲಾಗುವುದು.
ಆಸಕ್ತರು ನೋಂದಾವಣೆಗಾಗಿ ತಮ್ಮ ಹೆಸರು, ಪೂರ್ಣ ಅಂಚೆ ವಿಳಾಸ, ವಿದ್ಯಾರ್ಹತೆ ಮತ್ತು ದೂರವಾಣಿ ಸಂಖ್ಯೆ ಸಹಿತ ಅರ್ಜಿಯನ್ನು ದಿನಾಂಕ 25 ಮೇ 2025ರ ಒಳಗಾಗಿ ತಲುಪುವಂತೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, 2ನೇ ಮಹಡಿ, ಸಾಮರ್ಥ್ಯ ಸೌಧ, ಮಿನಿ ವಿಧಾನಸೌಧದ ಬಳಿ, ಮಂಗಳೂರು -575001 ಇಲ್ಲಿಗೆ ಅಥವಾ [email protected] ವಿಳಾಸಕ್ಕೆ ಇ-ಮೇಲ್ ಮಾಡಬಹುದು. ಮಾಹಿತಿಗೆ ದೂರವಾಣಿ ಸಂಖ್ಯೆ : 0824 2412297 ಅಥವಾ 7483946578ನ್ನು ಸಂಪರ್ಕಿಸಬಹುದು ಎಂದು ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್. ತಿಳಿಸಿದ್ದಾರೆ.