ಬೆಂಗಳೂರು : ಕಲೆ ಮತ್ತು ಸಾಹಿತ್ಯಕ್ಕೆ ಸಮರ್ಪಿತವಾದ ರಾಷ್ಟ್ರೀಯ ಸಂಸ್ಥೆ ‘ಸಂಸ್ಕಾರ ಭಾರತೀ ಕರ್ನಾಟಕ (ನೋಂ.)’ ಇದರ ವತಿಯಿಂದ ‘ಭರತಮುನಿ ಸಂಮಾನ 2024’ಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ನಾಟ್ಯಶಾಸ್ತ್ರ, ಕಾವ್ಯತತ್ವ ವಿವೇಚನೆಗಷ್ಟೇ ಸೀಮಿತವಾಗಿರದ, ನಾಟಕ ಕಲೆಯ ಸಂಕ್ಷಿಪ್ತ ವಿಶ್ವಕೋಶವೆನ್ನಿಸಿದ ‘ನಾಟ್ಯಶಾಸ್ತ್ರ’ದ ಕರ್ತೃ, ಭಾರತದ ಸುವಿಖ್ಯಾತ ಶಾಸ್ತ್ರಜ್ಞ ಶ್ರೀ ಭರತ ಮುನಿಯು ‘ರಂಗ ಪಿತಾಮಹ’ರೆಂಬುದಾಗಿಯೇ ಸರ್ವವಿದಿತ.
ಕಲೆ ಮತ್ತು ಸಾಹಿತ್ಯಕ್ಕೆ ಸಮರ್ಪಿತವಾದ ರಾಷ್ಟ್ರೀಯ ಸಂಸ್ಥೆಯಾದ ಸಂಸ್ಕಾರ ಭಾರತೀ ಕಳೆದ ನಾಲ್ಕು ದಶಕಗಳಿಂದ ಕಲೆಯ ಮೂಲಕ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಭಾರತೀಯ ಮೌಲ್ಯಗಳ ಆಧಾರದ ಮೇಲೆ ಸಾಮಾಜಿಕ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರದರ್ಶನ ನೀಡುವ ಮೂಲಕ ಅನೇಕ ಯಶಸ್ಸನ್ನು ಸಾಧಿಸಿದವರಿಗೆ ಪ್ರತಿ ವರ್ಷದಂತೆ ಈ ವರ್ಷವೂ ಸಹ ಅಖಿಲ ಭಾರತ ಮಟ್ಟದಲ್ಲಿ ಪ್ರದರ್ಶನ ಕಲೆ ಮತ್ತು ಸಾಹಿತ್ಯದ ವಿಭಾಗಗಳಲ್ಲಿ ಸಾಧನೆ ಮಾಡಿದ ಇಬ್ಬರು ಕಲಾವಿದರಿಗೆ ಭರತಮುನಿ ಸಂಮಾನವನ್ನು ನೀಡಿ ಪುರಸ್ಕರಿಸಲಾಗುವುದು.
ಪ್ರಶಸ್ತಿಯು ತಲಾ ಒಂದು ಲಕ್ಷದ ಐವತ್ತೊಂದು ಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರ, ಭರತಮುನಿ ಸ್ಮೃತಿ ಚಿಹ್ನೆ ಒಳಗೊಂಡಿದೆ. ಸೂಕ್ತ ಸಾಧಕರನ್ನು ಯಾರು ಬೇಕಾದರೂ ನಾಮನಿರ್ದೇಶನ ಮಾಡಬಹುದು. ಸ್ವಯಂ ಪ್ರಸ್ತಾವನೆ ಅಮಾನ್ಯವಾಗಿದೆ. 50 ಮೇಲ್ಪಟ್ಟವರು ಅರ್ಹರು. sanskarbharti.org ವೆಬ್‌ಸೈಟ್‌ನಲ್ಲಿ ವಿವರಗಳನ್ನು ಕಾಣಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ಸೆಪ್ಟೆಂಬರ್ 2024. ಆಯ್ಕೆ ಪ್ರಕ್ರಿಯೆಯು ರಾಷ್ಟ್ರ ಮಟ್ಟದ ತೀರ್ಪುಗಾರರ ಸಮಿತಿಯಿಂದ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಸಂಸ್ಕಾರ ಭಾರತೀ ಪ್ರಾಂತ ಕಾರ್ಯಾಲಯ, ‘ಧಾರಿಣಿ’, #30, 1ನೇ ಮಹಡಿ, 3ನೇ ಮುಖ್ಯರಸ್ತೆ, 1ನೇ ತಿರುವು, ಕೆ.ಇ.ಬಿ. ಬಡಾವಣೆ, ಕತ್ರಿಗುಪ್ಪೆ ಮುಖ್ಯರಸ್ತೆ ಬನಶಂಕರಿ, 3ನೇ ಹಂತ, ಬೆಂಗಳೂರು -560085. ದೂರವಾಣಿ: 9901763058. ಇ-ಮೇಲ್ : [email protected].