ಶಿವಮೊಗ್ಗ : ಕರ್ನಾಟಕ ಸಂಘ 2023ನೇ ಸಾಲಿನಲ್ಲಿ ಮೊದಲ ಮುದ್ರಣ ಕಂಡ ಕನ್ನಡ ಪುಸ್ತಕಗಳಿಗೆ ಬಹುಮಾನ ನೀಡಲು ಲೇಖಕರು, ಪ್ರಕಾಶಕರಿಂದ ಕೃತಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು 20-03-2024 ಕೊನೆಯ ದಿನ.
ಕಾದಂಬರಿಗೆ ‘ಕುವೆಂಪು ಪ್ರಶಸ್ತಿ’, ಅನುವಾದಕ್ಕೆ ‘ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ ಪ್ರಶಸ್ತಿ’, ಮಹಿಳಾ ಸಾಹಿತ್ಯಕ್ಕೆ ‘ಎಂ.ಕೆ. ಇಂದಿರಾ ಪ್ರಶಸ್ತಿ’, ಮುಸ್ಲಿಂ ಬರಹಗಾರರಿಗೆ ‘ಪಿ. ಲಂಕೇಶ್ ಪ್ರಶಸ್ತಿ’, ಕವನ ಸಂಕಲನಕ್ಕೆ ‘ಡಾ. ಜಿ. ಎಸ್. ಶಿವರುದ್ರಪ್ಪ ಪ್ರಶಸ್ತಿ’, ಅಂಕಣ ಬರಹಕ್ಕೆ ‘ಡಾ. ಹಾ. ಮಾ. ನಾಯಕ ಪ್ರಶಸ್ತಿ’, ಸಣ್ಣ ಕಥಾ ಸಂಕಲನಕ್ಕೆ ‘ಡಾ. ಯು. ಆರ್. ಅನಂತಮೂರ್ತಿ ಪ್ರಶಸ್ತಿ’, ನಾಟಕಕ್ಕೆ ‘ಡಾ. ಕೆ.ವಿ. ಸುಬ್ಬಣ್ಣ ಪ್ರಶಸ್ತಿ’, ಪ್ರವಾಸ ಸಾಹಿತ್ಯಕ್ಕೆ ‘ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ ಪ್ರಶಸ್ತಿ’, ವಿಜ್ಞಾನ ಸಾಹಿತ್ಯಕ್ಕೆ ‘ಹಸೂಡಿ ವೆಂಕಟಶಾಸ್ತ್ರಿ ಪ್ರಶಸ್ತಿ’, ಮಕ್ಕಳ ಸಾಹಿತ್ಯಕ್ಕೆ ‘ಡಾ. ನಾ. ಡಿಸೋಜ ಪ್ರಶಸ್ತಿ’ ಹಾಗೂ ವೈದ್ಯ ಸಾಹಿತ್ಯಕ್ಕೆ ‘ಡಾ. ಎಚ್. ಡಿ. ಚಂದ್ರಪ್ಪಗೌಡ ಪ್ರಶಸ್ತಿ’ ನೀಡಲಾಗುವುದು. ಆಯ್ಕೆಯಾದ ಕೃತಿಗಳಿಗೆ 10,000 ರೂ. ನಗದು ಬಹುಮಾನ ಮತ್ತು ಫಲಕ ನೀಡಿಲಾಗುವುದು.
ಬರಹಗಾರರು, ಪ್ರಕಾಶಕರು ಪತ್ರದ ಮೂಲಕ ಸ್ವವಿವರ, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಯಾವ ಪ್ರಶಸ್ತಿಗೆ ಅರ್ಜಿ ಸಲ್ಲಿಸುತ್ತೇವೆ ಎಂಬ ಬಗ್ಗೆ ತಿಳಿಸಬೇಕು. ಅರ್ಜಿ ಸಂಗಡ ಪುಸ್ತಕದ 4 ಪ್ರತಿಗಳನ್ನು
ಗೌರವ ಕಾರ್ಯದರ್ಶಿ,
ಕರ್ನಾಟಕ ಸಂಘ, ಬಿ.ಎಚ್.ರಸ್ತೆ,
ಶಿವಮೊಗ್ಗ-577201 ಈ ವಿಳಾಸಕ್ಕೆ ಕಳುಹಿಸಬೇಕು.