ಕಾಸರಗೋಡು : ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಇದರ ಕೇಂದ್ರ ಸಮಿತಿಯ ಸಹಕಾರದಲ್ಲಿ ಕಾಸರಗೋಡು ಜಿಲ್ಲಾ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಇದರ ಆಶ್ರಯದಲ್ಲಿ ಬೇಕಲ ರಾಮ ನಾಯಕ ಅವರ ಬದುಕು – ಬರಹದ ಕುರಿತ ಸ್ಮರಣಾಂಜಲಿ ಕಾರ್ಯಕ್ರಮವು ದಿನಾಂಕ 27 ಏಪ್ರಿಲ್ 2025ರಂದು ಅಪರಾಹ್ನ ಘಂಟೆ 2.00ರಿಂದ ಕಾಸರಗೋಡಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ನಡೆಯಲಿದೆ. ಈ ಸಂದರ್ಭಕಾಸರಗೋಡು ಜಿಲ್ಲೆಯ ಆಸಕ್ತ ಕವಿಗಳಿಗೆ ಚುಟುಕುಗಳನ್ನು ವಾಚಿಸಲು ಅವಕಾಶವಿದೆ.
ಆಸಕ್ತರು 20 ಏಪ್ರಿಲ್ 2025ರ ಒಳಗಾಗಿ 9447490344 ಮೊಬೈಲ್ ಸಂಖ್ಯೆಗೆ ವಾಟ್ಸ್ ಆ್ಯಪ್ ಮೂಲಕ ತಮ್ಮ ಭಾಗವಹಿಸುವಿಕೆಯನ್ನು ತಿಳಿಸಬಹುದಾಗಿದೆ.
Subscribe to Updates
Get the latest creative news from FooBar about art, design and business.
Previous Articleಅಭಿಮಾನಪಡುವ ಅಭಿನಂದನೆ