ಧಾರವಾಡ : ಕನ್ನಡದ ಹೆಸರಾಂತ ಸಾಹಿತಿ, ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ ಅವರ ಹೆಸರಲ್ಲಿ ನಿಡುವ “ವಿಮರ್ಶಾ ಪ್ರಶಸ್ತಿಗೆ” ವಿಮರ್ಶಾ ಕೃತಿಗಳನ್ನು ಆಹ್ವಾನಿಸಲಾಗಿದೆ.
ಕನ್ನಡದ ಹೆಸರಾಂತ ಸಾಹಿತಿ. ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ ಅವರ ಸ್ಮರಣಾರ್ಥ ಪ್ರತಿ ವರ್ಷ ಕನ್ನಡದ ಒಂದು ಸ್ವತಂತ್ರ ವಿಮರ್ಶಾ ಕೃತಿಗೆ ಧಾರವಾಡದ ಡಾ.ಗಿರಡ್ಡಿ ಗೋವಿಂದರಾಜ ಫೌಂಡೇಶನ್ ಪ್ರಶಸ್ತಿ ನೀಡಲು ನಿರ್ಧರಿಸಿದೆ.
ಪ್ರಸ್ತುತ ಪ್ರಶಸ್ತಿಯನ್ನು 01 ಜನವರಿ 2024 ರಿಂದ 31ಡಿಸೆಂಬರ್ 2024ರ ವರೆಗೆ ಪ್ರಥಮ ಸಲ ಮುದ್ರಣಗೊಂಡಿರುವ ಕನ್ನಡದ ವಿಮರ್ಶಾ ಕೃತಿಗೆ ನೀಡಲಾಗುವುದು. ಈ ಪ್ರಶಸ್ತಿಯು ರೂಪಾಯಿ 25ಸಾವಿರ ನಗದು ಮತ್ತು ಸ್ಮರಣಿಕೆ ಒಳಗೊಂಡಿರುತ್ತದೆ. ಒಬ್ಬ ವಿಮರ್ಶಕರ ಒಂದು ಕೃತಿಯನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸಲಾಗುವುದು.
ಪ್ರಶಸ್ತಿಗೆ ಕಳುಹಿಸುವ ಕೃತಿಯ 4 ಪ್ರತಿಗಳನ್ನು 10 ಆಗಸ್ಟ್ 2025ರ ಒಳಗಾಗಿ ತಲುಪುವಂತೆ ಅಧ್ಯಕ್ಷರು, ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್, ಕೆ/ಆಫ್ ಹಿರೇಮಲ್ಲೂರ ಈಶ್ವರನ್ ಪದವಿ ಪೂರ್ವ ವಿದ್ಯಾಲಯ, ಕಲ್ಯಾಣನಗರ, ಧಾರವಾಡ-580007. ಈ ವಿಳಾಸಕ್ಕೆ ಕಳುಹಿಸಿಕೊಡಬೇಕು.
ಅವಧಿ ಮೀರಿ – ತಲುಪುವ ಕೃತಿಗಳನ್ನು ಪ್ರಶಸ್ತಿಗೆ ಸ್ವೀಕರಿಸುವುದಿಲ್ಲ. ಸಂಗ್ರಹ, ಸಂಕಲನ, ಅನುವಾದ, ಪಿ. ಎಚ್. ಡಿ. ಸಂಶೋಧನಾ ಪ್ರಬಂಧಗಳಂಥ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ ಎಂದು ಫೌಂಡೇಶನ್ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಪ್ರೊ.ಶಶಿಧರ ತೋಡಕರ ಕಾರ್ಯದರ್ಶಿಗಳು-9448621142. ಇವರನ್ನು ಸಂಪರ್ಕಿಸಬಹುದು.
Subscribe to Updates
Get the latest creative news from FooBar about art, design and business.