ಬೆಂಗಳೂರು: ಈ ಹೊತ್ತಿಗೆ ಕಥೆ ಹಾಗೂ ಕಾವ್ಯ ಪ್ರಶಸ್ತಿಗೆ ಅಪ್ರಕಟಿತ ಕಥೆ ಹಾಗೂ ಅಪ್ರಕಟಿತ ಕಾವ್ಯ ಸಂಕಲನಗಳನ್ನು ಆಹ್ವಾನಿಸಲಾಗಿದೆ. ವಿಜೇತ ಕಥಾ ಮತ್ತು ಕವನ ಸಂಕಲನಕ್ಕೆ ತಲಾ 10,000 ರೂ. ಬಹುಮಾನವಿದೆ.
ಕಥಾ ಸಂಕಲನವು 8 ರಿಂದ 10 ಸ್ವತಂತ್ರ ಕಥೆಗಳನ್ನು ಒಳಗೊಂಡಿರಬೇಕು. ಕವನ ಸಂಕಲನವು 35 ರಿಂದ 40 ಕವನಗಳನ್ನು ಒಳಗೊಂಡಿರಬೇಕು. ಡಿ. ಟಿ. ಪಿ. ಮಾಡಿಸಿ, ಬೈಂಡ್ ಮಾಡಿಸಿದ ಸಂಕಲನದ 3 ಪ್ರತಿಗಳನ್ನು ಪ್ರತ್ಯೇಕ ಹಾಳೆಯಲ್ಲಿ ತಮ್ಮ ಹೆಸರು, ಸಂಕಲನದ ಹೆಸರು, ಸಂಪೂರ್ಣ ವಿಳಾಸ ಹಾಗೂ ಫೋಟೊ ಜೊತೆಗೆ ಕಳುಹಿಸಬೇಕು. ವಿಜೇತ ಕೃತಿಗಳು ಬಹುಮಾನ ಘೋಷಣೆಯಾದ ತಿಂಗಳೊಳಗೆ ಪ್ರಕಟಗೊಳ್ಳಬೇಕು.
ಸ್ಪರ್ಧೆಗೆ ಪ್ರವೇಶ ಕಳುಹಿಸಲು ಕೊನೆಯ 20 ನವಂಬರ್ 2024, ವಿಳಾಸ: ಈ ಹೊತ್ತಿಗೆ, ನಂ.65, ಮುಗುಳ್ನಗೆ, 3ನೇ ಕ್ರಾಸ್, ಪಿ. ಎನ್. ಬಿ. ನಗರ, ದೊಡ್ಡಕಲ್ಲಸಂದ್ರ, ಕೋಣನಕುಂಟೆ, ಬೆಂಗಳೂರು- 560062.
Subscribe to Updates
Get the latest creative news from FooBar about art, design and business.