ಬೆಂಗಳೂರು: ಜನ ಸಾಮಾನ್ಯರಲ್ಲಿ ಅದರಲ್ಲಿಯೂ ವಿಶೇಷವಾಗಿ ಕನ್ನಡ ಯುವಜನತೆಯಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಕುರಿತು ಆಸಕ್ತಿ ಮೂಡಿಸಲು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿದ್ದ ಬಿ. ಎಂ. ಶ್ರೀ. ಇವರು ರೂಪಿಸಿದ ಮುಖ್ಯ ಯೋಜನೆ ಕನ್ನಡ ಸಾಹಿತ್ಯ ಪರೀಕ್ಷೆಗಳು. 1940ರ ಜೂನ್ ತಿಂಗಳಿನಿಂದ ‘ಕನ್ನಡ ಅಣುಗ’ ‘ಕನ್ನಡ ಕಾವ’ ‘ಕನ್ನಡ ಜಾಣ’ ಪರೀಕ್ಷೆಗಳು ಆರಂಭವಾದವು. 1948ರಲ್ಲಿ ‘ಅಣುಗ’ವನ್ನು ಕೈ ಬಿಡಲಾಯಿತು. 1966ರಲ್ಲಿ ‘ಕನ್ನಡ ರತ್ನ’ ಪರೀಕ್ಷೆ ಆರಂಭವಾಗಿದ್ದು 1992ರಲ್ಲಿ ‘ಕನ್ನಡ ಪ್ರವೇಶ’ ಆರಂಭವಾಯಿತು. ಈ ಎಲ್ಲಾ ಪರೀಕ್ಷೆಗಳು ಲಕ್ಷಾಂತರ ಕನ್ನಡಿಗರಲ್ಲಿ ಭಾಷೆ ಮತ್ತು ಸಾಹಿತ್ಯದ ಕುರಿತು ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದ್ದು ನಿರಂತರವಾಗಿ ನಡೆದು ಕೊಂಡು ಬರುತ್ತಿವೆ.
ಕನ್ನಡ ಸಾಹಿತ್ಯ ಪರಿಷತ್ತು 2024-25ನೆಯ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ ಹಾಗೂ ರತ್ನ ಪರೀಕ್ಷೆಗಳು 2024ರ ಡಿಸೆಂಬರ್ ಕೊನೆಯ ವಾರದಲ್ಲಿ ನಡೆಯಲಿದೆ. ಅರ್ಜಿಯನ್ನು ಸಲ್ಲಿಸಲು 31 -08-2024 ಕೊನೆಯ ದಿನಾಂಕವಾಗಿದ್ದು, 15-09-2024ರವರೆಗೆ ದಂಡದ ಶುಲ್ಕ ರೂಪಾಯಿ 50.00 ಅನ್ನು ಹೆಚ್ಚುವರಿಯಾಗಿ ನೀಡಿ ಅರ್ಜಿ ಸಲ್ಲಿಸಬಹುದು.
ಪರೀಕ್ಷಾ ನಿಯಮಾವಳಿ ಹಾಗೂ ಅರ್ಜಿಯನ್ನು ರೂಪಾಯಿ 25.00ರ ಶುಲ್ಕ ಪಾವತಿಸಿ, ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕ ಮಾರಾಟ ಮಳಿಗೆಯಲ್ಲಿ (ಬೆಂಗಳೂರು) ದಿನಾಂಕ 01-07-2024ರಿಂದ ಪಡೆಯಬಹುದು. ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಈ ಹೆಸರಿಗೆ ಮೂವತ್ತು ರೂಪಾಯಿಗಳನ್ನು ಮನಿಯಾರ್ಡರ್ ಮಾಡಿದರೆ ಅರ್ಜಿಯನ್ನು ತಾವು ನೀಡಿರುವ ವಿಳಾಸಕ್ಕೆ ಅಂಚೆಯ ಮೂಲಕ ಕಳುಹಿಸಲಾಗುವುದು.
ಪರೀಕ್ಷಾ ಅರ್ಜಿಗಳನ್ನು ಅಂತರ್ಜಾಲ ತಾಣ www.kasapa.in ಮೂಲಕವೂ ಪಡೆದು ಕೊಳ್ಳಬಹುದು. ಇವರು ನಿಗದಿತ ಪರೀಕ್ಷಾ ಶುಲ್ಕದೊಂದಿಗೆ ಅರ್ಜಿ ಶುಲ್ಕ ರೂಪಾಯಿ 25/-ನ್ನು ಪ್ರತ್ಯೇಕವಾಗಿ ಪಾವತಿಸುವುದು.
ಹೆಚ್ಚಿನ ವಿವರಗಳಿಗೆ ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು – 560018 ಅಥವಾ ಕನ್ನಡ ಸಾಹಿತ್ಯ ಪರಿಷತ್ತಿನ ಅಂತರ್ಜಾಲ ತಾಣಗಳಾದ
ಫೇಸ್ ಬುಕ್ : https://www.facebook.com/kasapaofficial,
https://www.facebook.com/KannadaSahityaParishattu
ಟ್ವಿಟರ್ : https://twitter.com/kannadaparishat
ಕೂ ಆಪ್ : https://www.kooapp.com/profile/kasapa
ಇನ್ ಸ್ಟಾಗ್ರಾಮ್ : https://www.instagram.com/kannadasahityaparishattu
ವೆಬ್ ಸೈಟ್ : https://kannadasahithyaparishattu.in
ದೂರವಾಣಿ ಸಂಖ್ಯೆ :080-27712991, 22423867, 26623584 ಇವುಗಳ ಮೂಲಕವೂ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ.