ಪಡುಬಿದ್ರಿ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲ್ಲೂಕು ಘಟಕದ ವತಿಯಿಂದ ಆಯೋಜಿಸುವ ಸಾಹಿತ್ಯ ಸಮ್ಮೇಳನದ ಅಂಗವಾಗಿ ಪಲಿಮಾರಿನಲ್ಲಿ ಜರುಗುವ ಕಾಪು ತಾಲ್ಲೂಕಿನ ಪ್ರೌಢ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಕವನ ಸ್ಪರ್ಧೆ, ಪದವಿ ಹಾಗೂ ಸಾರ್ವಜನಿಕ ವಿಭಾಗದವರಿಗಾಗಿ ಕಥಾ ಸ್ಪರ್ಧೆಯನ್ನು ದಿನಾಂಕ 16 ನವಂಬರ್ 2024ರಂದು ಆಯೋಜಿಸಲಾಗಿದೆ.
ಎರಡೂ ಸ್ಪರ್ಧೆಗಳಲ್ಲಿ ವಿಜೇತರಾದ ತಲಾ ಐದು ಮಂದಿಗೆ ಆಕರ್ಷಕ ಬಹುಮಾನದೊಂದಿಗೆ ಸಮ್ಮೇಳನದಂದು ಗೋಷ್ಠಿಯಲ್ಲಿ ಕಥೆ ಹಾಗೂ ಕವನಗಳನ್ನು ವಾಚನ ಮಾಡುವ ಅವಕಾಶವೂ ಲಭಿಸಲಿದೆ.
ಕವನ ಹಾಗೂ ಕಥೆಗಳನ್ನು ದಿನಾಂಕ 25 ಅಕ್ಟೋಬರ್ ಒಳಗಾಗಿ ನೀಲಾನಂದ ನಾಯ್ಕ ಗೌರವ ಕಾರ್ಯದರ್ಶಿಗಳು(ಕ. ಸಾ. ಪ.) ಹಾಗೂ ಪ್ರಾಂಶುಪಾಲರು, ದಂಡತೀರ್ಥ ಪದವಿ ಪೂರ್ವ ಕಾಲೇಜು, ಉಳಿಯಾರಗೋಳಿ, ಕಾಪು – 574106 ಇಲ್ಲಿಗೆ ಕಳುಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ – 9845954853
Subscribe to Updates
Get the latest creative news from FooBar about art, design and business.
Previous Articleಕಡಬ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕರುಣಾಕರ ಗೋಗಟೆ ಆಯ್ಕೆ