ಮಂಗಳೂರು : ತುಳು ಕೂಟ (ರಿ) ಕುಡ್ಲದ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ನೀಡುತ್ತಿರುವ ‘ರತ್ನವರ್ಮ ಹೆಗ್ಗಡೆ ಪ್ರಶಸ್ತಿ – 2023’ಕ್ಕೆ ಅಪ್ರಕಟಿತ ತುಳು ನಾಟಕ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ.
ಎ-4 ಹಾಳೆಯಲ್ಲಿ 60-70 ಪುಟಗಳಿಗೆ ಮೀರದಂತೆ 2023ರಲ್ಲಿ ರಚಿಸಿದ ತುಳು ಕೃತಿಗಳು ಮಾತ್ರ ಸ್ವೀಕಾರಾರ್ಹ. 2024ರ ಮಕರ ಸಂಕ್ರಾಂತಿ ತನಕ ಕೃತಿಯ ರಂಗ ಪ್ರದರ್ಶನ, ಪ್ರಕಟಣೆ ಕೂಡದು.
1976 ರಿಂದ ಈ ಪ್ರಶಸ್ತಿಯನ್ನು ಪ್ರತೀ ವರ್ಷ ನೀಡಲಾಗುತ್ತಿದೆ. ಕಳೆದ 46 ವರ್ಷಗಳಲ್ಲಿ ಹತ್ತು ಬಾರಿ ಪ್ರಶಸ್ತಿ ಪಡೆದವರ ಕೃತಿಯನ್ನು ಸ್ವೀಕರಿಸುವುದಿಲ್ಲ. ಸತತ ಮೂರು ವರ್ಷ ಪ್ರಶಸ್ತಿ ವಿಜೇತರ ಕೃತಿಯನ್ನು ಮಾನ್ಯ ಮಾಡುವುದಿಲ್ಲ. ಇತರ ಪುರಸ್ಕಾರಕ್ಕೆ ಆಯ್ಕೆಯಾದ / ಭಾಷಾಂತರ ಗೊಂಡ / ಆಧಾರಿತ ಕೃತಿಗಳನ್ನು ನಿರಾಕರಣೆ ಮಾಡಲಾಗುವುದು.
ಪೌರಾಣಿಕ, ಸಾಮಾಜಿಕ, ಚಾರಿತ್ರಿಕ, ಜಾನಪದ ಕಥಾನಕದ ಕೃತಿಗಳನ್ನು ಪರಿಗಣಿಸಲಾಗುವುದು. ಎಲ್ಲಿಯೂ ಲೇಖಕನ ಹೆಸರು ನಮೂದಿಸಬಾರದು. ಸ್ವ _ವಿವರ ಗಳನ್ನು ಪ್ರತ್ಯೇಕ ಹಾಳೆಯಲ್ಲಿ ನಮೂದಿಸಿ ಕಳಿಸ ಬೇಕು. ವಿಳಾಸ, ಮೊಬೈಲ್ ಸಂಖ್ಯೆ ಸಹಿತ ಸ್ವತಂತ್ರ ಕೃತಿ ಎಂದು ಸ್ವಯಂ ಘೋಷಿತ ಪ್ರಮಾಣ ಪತ್ರ ನೀಡಬೇಕು.
2024ನೇ ಜನವರಿ 10ರ ಒಳಗೆ ತಮ್ಮ ಕೃತಿಯನ್ನು ಮರೋಳಿ ಬಿ. ದಾಮೋದರ ನಿಸರ್ಗ, ನಿಸರ್ಗ ಹೌಸ್, ಮರೋಳಿ, ಮಂಗಳೂರು -575005 ಈ ವಿಳಾಸಕ್ಕೆ ಕಳುಹಿಸಿ ಕೊಡಬೇಕೆಂದು ಕೂಟದ ಪ್ರಧಾನ ಕಾರ್ಯದರ್ಶಿ ವಾರ್ಕಾಡಿ ರವಿ ಅಲೆವೂರಾಯ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ – 9481163531
Subscribe to Updates
Get the latest creative news from FooBar about art, design and business.
ರತ್ನವರ್ಮ ಹೆಗ್ಗಡೆ ಪ್ರಶಸ್ತಿಗೆ ಅಪ್ರಕಟಿತ ತುಳು ನಾಟಕ ಹಸ್ತಪ್ರತಿ ಆಹ್ವಾನ | 2024ರ ಜನವರಿ 10 ಕೊನೆಯ ದಿನ
No Comments1 Min Read
Previous Articleಪರಿಚಯ ಲೇಖನ | “ಯಕ್ಷ ಕಲಾಕನ್ನಿಕೆ” – ಭಾರತಿ ಸುದರ್ಶನ್