ಉಡುಪಿ : ತುಳು ರಂಗ ಭೂಮಿ ಬೆಳವಣಿಗೆಗೆ ಶ್ರಮಿಸಿದವರಲ್ಲಿ ಒಬ್ಬರದಾದ ದಿ. ಕೆಮ್ತೂರು ದೊಡ್ಡಣ್ಣ ಶೆಟ್ಟಿ ಅವರ ನೆನಪಿನಲ್ಲಿ ತುಳುಕೂಟ ಉಡುಪಿ ವತಿಯಿಂದ ಕೆಮ್ತೂರು ದೊಡ್ಡಣ್ಣ ಶೆಟ್ಟಿ ಸ್ಮಾರಕ ತುಳು ನಾಟಕ ಸ್ಪರ್ಧೆಯನ್ನು ನಡೆಸಿಕೊಂಡು ಬರುತ್ತಿದೆ. 24ನೇ ವರ್ಷದ ಸ್ಪರ್ಧೆ 2026ರ ಜನವರಿಯಲ್ಲಿ ಉಡುಪಿಯಲ್ಲಿ ನಡೆಯಲಿದೆ.
ಈ ಸ್ಪರ್ಧೆಗೆ ತುಳು ಹವ್ಯಾಸಿ ನಾಟಕ ತಂಡಗಳಿಗೆ ಭಾಗವಹಿಸಲು ಅವಕಾಶವಿದ್ದು, ಪ್ರವೇಶ ಪತ್ರ ಸ್ವೀಕರಿಸಲು 09 ನವಂಬರ್ 2025 ಕೊನೆಯ ದಿನವಾಗಿದೆ. ಸ್ಪರ್ಧೆಗೆ ಗರಿಷ್ಠ 7 ನಾಟಕಗಳನ್ನು ಆಯ್ಕೆ ಮಾಡಲಾಗುವುದು.
ವಿಜೇತ ತಂಡಗಳಿಗೆ ಪ್ರಥಮ 20 ಸಾವಿರ, ದ್ವಿತೀಯ 15 ಸಾವಿರ ಹಾಗೂ ತೃತೀಯ 10 ಸಾವಿರ ನಗದು ಬಹುಮಾನ, ನಿರ್ದೇಶನ, ಸಂಗೀತ, ರಂಗವಿನ್ಯಾಸ, ಬೆಳಕು, ನಟ, ನಟಿ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಬಿ. ಪ್ರಭಾಕರ ಭಂಡಾರಿ -9880825626 ಇವರನ್ನು ಸಂಪರ್ಕಿಸಬಹುದು ಎಂದು ತುಳುಕೂಟ ಉಡುಪಿ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಕೆಮ್ತೂರು ದೊಡ್ಡಣ್ಣ ಶೆಟ್ಟಿ ಸ್ಮಾರಕ ತುಳು ನಾಟಕ ಸ್ಪರ್ಧೆಗೆ ತಂಡಗಳ ಆಹ್ವಾನ | ನವಂಬರ್ 09
No Comments1 Min Read
Previous Articleಮಂಗಳೂರಿನಲ್ಲಿ ಲೀಲಾವತಿ ಬೈಪಾಡಿತ್ತಾಯ ಸಂಸ್ಮರಣೆ