Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಬೆಂಗಳೂರಿನ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಸುದರ್ಶನ ಗರ್ವಭಂಗ’ ಮತ್ತು ‘ಕುಶ ಲವ ಕಾಳಗ’ ಪ್ರದರ್ಶನ | ಮೇ 17

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕನ್ನಡ ಸಾಹಿತ್ಯ ಪರಿಷತ್ತಿನ ‘ಸುವರ್ಣ ಕರ್ನಾಟಕ ಪರಿಷತ್ತಿನ ಪುರಸ್ಕಾರ’ಕ್ಕೆ ಅರ್ಜಿ ಆಹ್ವಾನ
    Awards

    ಕನ್ನಡ ಸಾಹಿತ್ಯ ಪರಿಷತ್ತಿನ ‘ಸುವರ್ಣ ಕರ್ನಾಟಕ ಪರಿಷತ್ತಿನ ಪುರಸ್ಕಾರ’ಕ್ಕೆ ಅರ್ಜಿ ಆಹ್ವಾನ

    March 6, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕದ ಏಕೀಕರಣ ಮತ್ತು ನಾಮಕರಣದಲ್ಲಿ ಪ್ರಮುಖ ಪಾತ್ರವಹಿಸಿದೆ. ಪರಿಷತ್ತು ಹುಟ್ಟಿದ್ದೇ ಮೊದಲ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ. ಅಲ್ಲಿಂದ ಮುಂದೆ ಪ್ರತಿ ಅಖಿಲ ಭಾರತ ಸಮ್ಮೇಳನಗಳೂ ಈ ನಿಟ್ಟಿನಲ್ಲಿ ಇಟ್ಟ ದಿಟ್ಟ ಹೆಜ್ಜೆಗಳೇ ಆಗಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ನಾಮಕರಣದ ಸುವರ್ಣ ಸಂಭ್ರಮವನ್ನು ವರ್ಷಪೂರ್ತಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯ ಪ್ರವೃತ್ತವಾಗಿದೆ. ಕರ್ನಾಟಕ ಎಂಬ ಹೆಸರಿನ ಸುವರ್ಣ ಸಂಭ್ರಮದ ಈ ಸಂದರ್ಭದಲ್ಲಿ, ಐವತ್ತು ಮಹತ್ವದ ಪ್ರಶಸ್ತಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ನೀಡಲು ತಾತ್ವಿಕವಾಗಿ ನಿರ್ಧರಿಸಿದೆ.

    ಕನ್ನಡ-ಕನ್ನಡಿಗ-ಕರ್ನಾಟಕ ಇವುಗಳ ಹಿರಿಮೆಗೆ ಅದರಲ್ಲಿಯೂ ಮುಖ್ಯವಾಗಿ ಕರ್ನಾಟಕದ ಏಕೀಕರಣಕ್ಕೆ ಹಾಗೂ ನಾಮಕರಣಕ್ಕೆ ದುಡಿದ ಐವತ್ತು ವ್ಯಕ್ತಿ-ಸಂಘ ಸಂಸ್ಥೆಗಳನ್ನು ಗುರುತಿಸಿ ಈ ಪುರಸ್ಕಾರವನ್ನು ನೀಡಲಾಗುವುದು. ಈ ಕುರಿತ ಆಯ್ಕೆಗೆ ಸರ್ವೊಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದ್ದು, ಪಾರದರ್ಶಕವಾಗಿ ಆಯ್ಕೆ ಮಾಡಲಾಗುವುದು. ಈ ಪ್ರಶಸ್ತಿಗಳಿಗೆ ‘ಸುವರ್ಣ ಕರ್ನಾಟಕ ಪರಿಷತ್ತಿನ ಪುರಸ್ಕಾರ’ ಎಂದು ಹೆಸರಿಡಲು ತೀರ್ಮಾನಿಸಲಾಗಿದೆ.

    ‘ಕನ್ನಡದ ಮಠ’ ಎಂದೇ ಹೆಸರಾಗಿರುವ ಭಾಲ್ಕಿಮಠದಲ್ಲಿ ಏಪ್ರಿಲ್ ತಿಂಗಳಿನಲ್ಲಿ ನಡೆಯುವ ಜಾತ್ರೋತ್ಸವ ಸಮಾರಂಭದಲ್ಲಿ, ಈ ಪ್ರಶಸ್ತಿಗಳನ್ನು ಕನ್ನಡೋತ್ಸವದೊಂದಿಗೆ ವಿತರಣೆ ಮಾಡಲಾಗುವುದು. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಭಾಲ್ಕಿ ಮಠವಿದ್ದ ಕಾಲದಿಂದಲೂ, ಅಲ್ಲಿ ನಿರಂತರವಾಗಿ ಕನ್ನಡ ಸೇವೆ ನಡೆದುಕೊಂಡು ಬಂದಿದೆ. ನಿಜಾಮರ ಕಾಲದಲ್ಲಿ ಹೊರಗೆ ಉರ್ದು ಬೋರ್ಡ್ ಹಾಕಿ ಒಳಗೆ ಕನ್ನಡ ಪಾಠವನ್ನು ಮಾಡಿದ ಹೆಗ್ಗಳಿಕೆ ಡಾ. ಚನ್ನಬಸವೇಶ್ವರ ಪಟ್ಟದೇವರು ಅವರದ್ದು. ಈಗ ನಾಡೋಜ ಡಾ. ಬಸವಲಿಂಗ ಪಟ್ಟದವರೇ ಅದನ್ನು ಸಮರ್ಥವಾಗಿ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಇಲ್ಲಿ ಕನ್ನಡಪರ ಸೇವೆ ಸಲ್ಲಿಸಿದರನ್ನು ಸನ್ಮಾನಿಸುವುದು ಪರಿಷತ್ತಿನ ಆಶಯ.

    ಕನ್ನಡದ ಏಕೀಕರಣಕ್ಕೆ, ನಾಮಕರಣಕ್ಕೆ, ಮುಖ್ಯವಾಗಿ ಕನ್ನಡ-ಕರ್ನಾಟಕ-ಕನ್ನಡಿಗರ ಏಳಿಗೆಗೆ ಎಲೆಮರೆಯ ಕಾಯಂತೆ ಸೇವೆ ಸಲ್ಲಿಸಿ, ಬೆಳಕಿಗೆ ಬಾರದಂತಹ ಸಾಧಕರನ್ನು ಗುರುತಿಸುವುದು ಈ ಪುರಸ್ಕಾರದ ಉದ್ದೇಶ. ಕನ್ನಡ ಸೇವೆಯನ್ನು ಸಲ್ಲಿಸಿದ ವ್ಯಕ್ತಿ-ಸಂಘಗಳೇ ನೇರವಾಗಿ ಅರ್ಜಿಯನ್ನು ಸಲ್ಲಿಸಬಹುದು. ಒಂದು ವೇಳೆ ತಾವು ಕನ್ನಡದ ಸೇವೆಯನ್ನು ಸಲ್ಲಿಸಿದ್ದೇವೆ, ಅದಕ್ಕಾಗಿ ಪುರಸ್ಕಾರ ಪಡೆಯುವುದು ಸಮಂಜಸವಲ್ಲ ಎಂಬ ಭಾವನೆ ಹೊಂದಿ ಅರ್ಜಿ ಸಲ್ಲಿಸಲು ಮುಜುಗರ ಪಡುವವರು ಇದ್ದರೆ, ಅಂತಹವರ ಪರವಾಗಿ ಅವರ ಸೇವೆಯನ್ನು ನಿಕಟವಾಗಿ ಬಲ್ಲ ವ್ಯಕ್ತಿಗಳು/ಸಂಘ ಸಂಸ್ಥೆಗಳೂ ಕೂಡ ಅರ್ಜಿಯನ್ನು ಸಲ್ಲಿಸಬಹುದು. ಅರ್ಹರಿಗೆ ಪುರಸ್ಕಾರಗಳು ದೊರಕುವುದು ಇಲ್ಲಿ ಮುಖ್ಯ.

    ಅರ್ಜಿ ನಮೂನೆಯನ್ನು ಇದರೊಂದಿಗೆ ನೀಡಲಾಗಿದ್ದು, ಸೂಕ್ತ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ‘ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜ ಪೇಟೆ, ಬೆಂಗಳೂರು-18’ ಇಲ್ಲಿಗೆ ದಿನಾಂಕ 31-03-2024ನೆಯ ದಿನಾಂಕದೊಳಗೆ ಕಳುಹಿಸಬೇಕು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಸಾಂಸ್ಕೃತಿಕ ಮಹತ್ವದ ಈ ಮಾಹಿತಿಯನ್ನು ಸಮಸ್ತ ಕನ್ನಡಿಗರಿಗೆ ತಲುಪಿಸಲು ನೆರವಾಗಬೇಕೆಂದು ಕೋರಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleನಾಟಕ ವಿಮರ್ಶೆ | ‘ದಿನಕರ ಫೌಂಡೇಷನ್’ನಿಂದ ನಾಟಕ ‘ತಿರುಕರ ಪಿಡುಗು’
    Next Article ಸಾಹಿತಿ ಭೀಮರಾವ್ ವಾಷ್ಠರ್ ಇವರ ಜನ್ಮದಿನ ಸಂಭ್ರಮದಲ್ಲಿ ಕಡಲ ಕವಿಗೋಷ್ಠಿ ಮತ್ತು ಸಾಹಿತ್ಯ ಕೃತಿ ಬಿಡುಗಡೆ
    roovari

    Add Comment Cancel Reply


    Related Posts

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಮಾಣಿಕ್ಯ ಪ್ರಕಾಶನದ 2025ನೇ ಸಾಲಿನ ರಾಜ್ಯಮಟ್ಟದ ವಿವಿಧ ದತ್ತಿ ಪ್ರಶಸ್ತಿಗಳಿಗೆ ಕೃತಿಗಳ ಆಹ್ವಾನ

    May 10, 2025

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ‘ಗೌರಿ ಸುಂದರ್ ವಾರ್ಷಿಕ ಪ್ರಶಸ್ತಿ’ ಪ್ರದಾನ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭ | ಮೇ 11

    May 8, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.