ಮಂಗಳೂರು : ನಾವೀನ್ಯತೆ (ಇನೋವೇಶನ್) ತಾರ್ಕಿಕ (ಸ್ಕಾಲ ಸ್ಟಿಕ್) ಕ್ರೀಡೆ, ಕಲೆ, ಸಾಂಸ್ಕೃತಿಕ ಮತ್ತು ಸಂಗೀತ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆಗೈದ ಮಕ್ಕಳಿಗೆ ಜಿಲ್ಲಾಮಟ್ಟದ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
5 ರಿಂದ 18 ವರ್ಷದೊಳಗಿನವರು ತಮ್ಮ ಸಾಧನೆಯನ್ನು ದೃಢೀಕರಿಸುವ ದಾಖಲೆಗಳೊಂದಿಗೆ ದಿನಾಂಕ 31 ಆಗಸ್ಟ್ 2025ರೊಳಗೆ ಅರ್ಜಿ ಸಲ್ಲಿಸಬೇಕು. ಜನನ-ಪ್ರಮಾಣ ಪತ್ರವನ್ನು ಪತ್ರಾಂಕಿತ ಅಧಿಕಾರಿಯಿಂದ ದೃಢೀಕರಿಸಲ್ಪಟ್ಟಿರಬೇಕು. ಈ ಹಿಂದಿನ ವರ್ಷಗಳಲ್ಲಿ ಜಿಲ್ಲಾಮಟ್ಟದ ಪ್ರಶಸ್ತಿ ಪಡೆದಮಕ್ಕಳಿಗೆ ಅವಕಾಶವಿಲ್ಲ. ಮಾಹಿತಿ ಅಥವಾ ಅರ್ಜಿ ನಮೂನೆಯನ್ನು ಬಿಜೈ ನಲ್ಲಿರುವ ಜಿಲ್ಲಾ ಸ್ತ್ರೀಶಕ್ತಿ ಭವನದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾ ಖೆಯ ಉಪನಿರ್ದೇಶಕರ ಕಚೇರಿ ಯಿಂದ ಪಡೆಯಬಹುದು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Previous Articleಚಿನ್ಮಯ ವಿದ್ಯಾಲಯದಲ್ಲಿ ‘ಚಿನ್ಮಯ ಫೆಸ್ಟ್’ಗೆ ಚಾಲನೆ
Next Article ಎಡನೀರು ಮಠದಲ್ಲಿ ಬಡಗು ತಿಟ್ಟು ಯಕ್ಷಗಾನ ನಾಟ್ಯ ವಾಚ್ಯ ವೈಭವ