ಮಣಿಪಾಲ : ಡಾ. ಟಿಎಂಎ ಪೈ ಫೌಂಡೇಶನ್ ವತಿಯಿಂದ 2022ನೇ ಸಾಲಿನ ಡಾ. ಟಿ.ಎಂ.ಎ. ಪೈ ಅತ್ಯುತ್ತಮ ಕೊಂಕಣಿ ಪುಸ್ತಕ ಪುರಸ್ಕಾರಕ್ಕಾಗಿ ಕೊಂಕಣಿ ಪುಸ್ತಕಗಳನ್ನು ಆಹ್ವಾನಿಸಲಾಗಿದೆ.
ದಿನಾಂಕ 01-01-2019ರಿಂದ 31-12-2021ರ ಮಧ್ಯೆ ಪ್ರಕಟಿತ ದೇವನಾಗರಿ, ಕನ್ನಡ, ಮಲಯಾಳಂ, ರೋಮನ್ ಲಿಪಿಯ ಪುಸ್ತಕಗಳು ಪ್ರಶಸ್ತಿಗೆ ಅರ್ಹ. 4 ಪ್ರತಿಗಳನ್ನು ದಿನಾಂಕ 31-10-2023ರೊಳಗೆ ಅಧ್ಯಕ್ಷರು, ಡಾ. ಟಿ.ಎಂ.ಎ. ಪೈ ಫೌಂಡೇಶನ್, ಸಿಂಡಿಕೇಟ್ ಹೌಸ್, ಮಣಿಪಾಲ-576104 ಇಲ್ಲಿಗೆ ಕಳುಹಿಸಿ, www.drtmapaifoundation.com ಸಂಪರ್ಕಿಸಬಹುದು.