ಮಂಗಳೂರು : ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ ಆಯೋಜಿಸುವ 2023- 24ರ ಸಾಲಿನ ದತ್ತಿ ಪ್ರಶಸ್ತಿ ಮತ್ತು ಬಹುಮಾನಗಳಿಗೆ ಲೇಖಕಿಯರ ಕೃತಿಗಳನ್ನು ಆಹ್ವಾನಿಸಲಾಗಿದೆ.
ಡಾ. ಸಾರಾ ಅಬೂಬಕ್ಕರ್ ದತ್ತಿ ಪ್ರಶಸ್ತಿ: ಸಂಘದ ಸದಸ್ಯೆಯಾಗಿದ್ದ ವೈಚಾರಿಕ ಮನೋಧರ್ಮದ ಸಂವೇದನಾಶೀಲ ಲೇಖಕಿ ನಾಡೋಜ ಡಾ. ಸಾರಾ ಅಬೂಬಕ್ಕರ್ ಅವರ ಹೆಸರಿನಲ್ಲಿ ಪ್ರತಿ ವರ್ಷ ಕೊಡುವ ಸಾಹಿತ್ಯ ಪ್ರಶಸ್ತಿಗೆ ‘ಪ್ರವಾಸ ಕಥನ’ ಆರಿಸಲಾಗಿದೆ. 2021, 2022, 2023ನೇ ಸಾಲಿನಲ್ಲಿ ಪ್ರಕಟವಾದ ಲೇಖಕಿಯರ ಪ್ರವಾಸ ಕಥನದ ಮೂರು ಪ್ರತಿಗಳನ್ನು ದಿನಾಂಕ 15-11-2023ರೊಳಗೆ ತಲುಪುವಂತೆ ಸಂಘದ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕು. ಪುಸ್ತಕದ ಜತೆಗೆ ವೈಯಕ್ತಿಕ ಮಾಹಿತಿ ಹಾಗೂ ಸಂಪರ್ಕ ಸಂಖ್ಯೆಯಿರುವ ಪ್ರವೇಶ ಪತ್ರವನ್ನು ಲಗತ್ತಿಸಿರಬೇಕು.
ಚಂದ್ರಭಾಗಿ ರೈ ದತ್ತಿ ಬಹುಮಾನ : ಕರಾವಳಿಯ ಮೊದಲ ತಲೆಮಾರಿನ ಹಿರಿಯ ಲೇಖಕಿ, ಸಂಘದ ಸದಸ್ಯೆಯಾಗಿದ್ದ ಚಂದ್ರಭಾಗಿ ರೈ ಅವರ ಹೆಸರಿನಲ್ಲಿ ಕೊಡುವ ಬಹುಮಾನಕ್ಕೆ 50 ವರ್ಷದ ಒಳಗಿನ ಲೇಖಕಿಯರ ಕನಿಷ್ಠ 40 ಸ್ವರಚಿತ ಕವನಗಳಿರುವ ಅಪ್ರಕಟಿತ ಸಂಕಲನದ ಡಿಟಿಪಿ ಮಾಡಿದ ಹಸ್ತಪ್ರತಿಯನ್ನು ದಿನಾಂಕ 07-11-2023ರ ಒಳಗೆ ಅಂಚೆ ಮೂಲಕ ಸಂಘದ ವಿಳಾಸಕ್ಕೆ ಕಳುಹಿಸಬೇಕು. ಪ್ರತಿ ಕವನಗಳಲ್ಲಿ ಕನಿಷ್ಠ 12 ಸಾಲುಗಳಾದರೂ ಇದ್ದು, ಚುಟುಕು, ಹನಿಗವನಗಳು ಇರಬಾರದು. ಪ್ರಶಸ್ತಿಗೆ ಆಯ್ಕೆಯಾದ ಸಂಕಲನವನ್ನು ಪ್ರಕಟಿಸುವಾಗ ಮುಖಪುಟದಲ್ಲಿ ‘ಚಂದ್ರಭಾಗಿ ರೈ ದತ್ತಿ ಬಹುಮಾನ ಪುರಸ್ಕೃತ’ ಎಂದು ಕಡ್ಡಾಯವಾಗಿ ಮುದ್ರಿಸಬೇಕು. ಹೆಸರು ಮತ್ತು ವಿಳಾಸ ಪ್ರತ್ಯೇಕವಿರಲಿ.
ಹೆಚ್ಚಿನ ಮಾಹಿತಿಗಾಗಿ : 9482043030, 9742538833 ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು.
ವಿಳಾಸ: ಡಾ.ಜ್ಯೋತಿ ಚೇಳ್ಯಾರು, ಅಧ್ಯಕ್ಷರು, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ, ‘ಸಾಹಿತ್ಯಸದನ’, ಅಂಚೆ ಕಚೇರಿ ಬಳಿ, ಉರ್ವಸ್ಟೋರ್, ಮಂಗಳೂರು 575006.