ಮಡಿಕೇರಿ : ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ 2023-24ನೇ ಸಾಲಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮಗಳ ಯೋಜನೆ ಮತ್ತು ಸೇವೆಗಳ ಕುರಿತು ಜನ ಜಾಗೃತಿ ಮೂಡಿಸಲು ಕೊಡಗು ಜಿಲ್ಲೆಯಲ್ಲಿನ ಜಾನಪದ ಕಲಾ ತಂಡ (ಬೀದಿ ನಾಟಕ)ಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪ್ರತಿ ಬೀದಿ ನಾಟಕ ಜಾನಪದ ಕಲಾ ತಂಡದಲ್ಲಿ 8 ಜನ (ಸ್ಥಳೀಯ ಕಲಾವಿದರು) ಸದಸ್ಯರು ಇರಬೇಕು. ಇವರಲ್ಲಿ 2 ಮಹಿಳಾ ಕಲಾವಿದರಿರಬೇಕು. ಇಲಾಖೆಯ ಯೋಜನೆಗಳ ಬಗ್ಗೆ ಬೀದಿ ನಾಟಕ ಪ್ರದರ್ಶನದ ಅನುಭವವಿರಬೇಕು.
ಆಸಕ್ತ ಜಾನಪದ ಕಲಾತಂಡಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಐ.ಇ.ಸಿ. ವಿಭಾಗ, ಮಡಿಕೇರಿ, ಕೊಡಗು ಜಿಲ್ಲೆ ಇಲ್ಲಿ ಕಚೇರಿ ವೇಳೆಯಲ್ಲಿ ಅರ್ಜಿಯನ್ನು ಪಡೆದುಕೊಂಡು ಸೆಪ್ಟೆಂಬರ್ 21ರೊಳಗೆ ಸಲ್ಲಿಸಬೇಕು.