ಮೂಡಬಿದಿರೆ : ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.)ದ 2025-26ನೇ ಸಾಲಿನ ಆಳ್ವಾಸ್ ಸಾಂಸ್ಕೃತಿಕ ತಂಡಗಳ ಭರತನಾಟ್ಯ ನೃತ್ಯಕ್ಕೆ ಕಲಾವಿದರು ಬೇಕಾಗಿದ್ದು, ಆಸಕ್ತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಭರತನಾಟ್ಯ ಅಥವಾ ಯಾವುದೇ ಇತರ ಶಾಸ್ತ್ರೀಯ ನೃತ್ಯದಲ್ಲಿ ಜೂನಿಯರ್, ಸೀನಿಯರ್/ವಿದ್ವತ್ ಪೂರೈಸಿ, 18 ರಿಂದ 25 ವರ್ಷ ವಯೋಮಿತಿಯ ಆಸಕ್ತರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಕಲಾವಿದರಿಗೆ ಉಚಿತ ಊಟ, ಉಪಹಾರ, ವಸತಿ ವ್ಯವಸ್ಥೆಯ ಜೊತೆಗೆ ತಿಂಗಳ ವೇತನ ನೀಡಲಾಗುವುದು. ಅರ್ಜಿ ಸಲ್ಲಿಸಲು ಜುಲೈ 01 ಕೊನೆಯ ದಿನವಾಗಿದೆ.
ಆಸಕ್ತರು ತಮ್ಮ ಇತ್ತೀಚಿನ ಭಾವಚಿತ್ರ, ನೃತ್ಯ ಪ್ರದರ್ಶನದ ಫೋಟೊ ಹಾಗೂ ತಮ್ಮ ಅನುಭವದ ಸ್ವವಿವರಗಳನ್ನು ಈ ಕೆಳಗಿನ ವಿಳಾಸಕ್ಕೆ ಕೂಡಲೇ ಕಳುಹಿಸಿ.
ಡಾ. ಎಂ. ಮೋಹನ ಆಳ್ವ, ಅಧ್ಯಕ್ಷರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.), ಮೂಡಬಿದಿರೆ – 574227
ಹೆಚ್ಚಿನ ಮಾಹಿತಿಗಾಗಿ : +91 8971161797, [email protected]

