ಉಡುಪಿ : ಸ್ವರ ಸಾಮ್ರಾಟ್ ವಿದ್ವಾನ್ ಅಭಿರಾಮ ಭರತವಂಶಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಕರ್ನಾಟಕ ಇದರ ವತಿಯಿಂದ ಶ್ರೀ ಮದ್ವ ಪುರಂದರ ಕನಕ ವಾದಿರಾಜ ತ್ಯಾಗರಾಜ ಭಾಗವತರ ‘ಆರಾಧನಾ ಮಹೋತ್ಸವ’ವನ್ನು ದಿನಾಂಕ 01 ಫೆಬ್ರುವರಿ 2026ರಂದು ಉಡುಪಿ ಗುಂಡಿಬೈಲು ಇಲ್ಲಿರುವ ಶ್ರೀ ಅಭಿರಾಮಧಾಮ ಸಂಕೀರ್ತನ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ ಗಂಟೆ 09030ಕ್ಕೆ ದೀಪಪ್ರಜ್ವಲನೆ ಬಳಿಕ ಪಿಳ್ಳಾರಿ ಗೀತೆಗಳು, ಕರ್ನಾಟಕ ಶಾಸ್ತ್ರೀಯ ಸಂಗೀತದ ತ್ರಿಮೂರ್ತಿಗಳಲ್ಲೊಬ್ಬರಾದ ಮಹಾನ್ ವಾಗ್ಗೇಯಕಾರರಾದ ಶ್ರೀ ತ್ಯಾಗರಾಜ ಭಾಗವತರ ಪಂಚರತ್ನ ಕೀರ್ತನೆಗಳು, ದಾಸವರೇಣ್ಯ ಶ್ರೀಪುರಂದರದಾಸರ ಕೃತಿಗಳು, ಯಮಧರ್ಮರಾಯನ ಅವತಾರ ತಾಳಿದ್ದ ಶ್ರೀಕನಕದಾಸರ ಕೃತಿಗಳು, ನೂರಿಪ್ಪತ್ತು ವರುಷಗಳ ಕಾಲ ಉಡುಪಿಯ ಶ್ರೀಕೃಷ್ಣನ ಪೂಜಿಸಿ, ಒಲಿಸಿಕೊಂಡ ಕನ್ನಡ ಕವಿಕುಲತಿಲಕ ಶ್ರೀವಾದಿರಾಜಗುರುಸಾರ್ವಭೌಮರ ಕೃತಿಗಳು, ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ದ್ವಾದಶ ಸ್ತೋತ್ರಗಳ ವಿದ್ಯುಕ್ತ ಗೋಷ್ಠಿ – ಗಾಯನ ಸಮರ್ಪಣೆ ನಡೆಯಲಿದೆ.


