Subscribe to Updates

    Get the latest creative news from FooBar about art, design and business.

    What's Hot

    ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ ಪ್ರಕಟ

    February 16, 2026

    ಮಕ್ಕಳ ಬಹುಭಾಷಾ ಕವಿಗೋಷ್ಠಿ ಮತ್ತು ಕವಿತೆ ಹುಟ್ಟುವ ಗುಟ್ಟು ಕಾರ್ಯಾಗಾರ | ಫೆಬ್ರವರಿ 22

    February 16, 2026

    ಶ್ರೀ ಶಾರದಾ ಭಜನಾ ಮಂದಿರದಲ್ಲಿ ಗಮಕ ವಾಚನ ವ್ಯಾಖ್ಯಾನ ಸಮಾರೋಪ

    February 16, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಏರ್ಯ ಬೀಡಿನಲ್ಲಿ ಸಾಹಿತ್ಯ ಸಂಭ್ರಮ
    Literature

    ಏರ್ಯ ಬೀಡಿನಲ್ಲಿ ಸಾಹಿತ್ಯ ಸಂಭ್ರಮ

    March 25, 2023Updated:August 19, 20231 Comment1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    23 ಮಾರ್ಚ್ 2023: ಸಾಹಿತಿ, ಸಂಘಟಕ, ಸ್ವಾತಂತ್ರ್ಯ ಹೋರಾಟಗಾರ ಏರ್ಯ ಲಕ್ಷ್ಮೀನಾರಾಯಣ ಆಳ್ವರು ದಕ್ಷಿಣ ಕನ್ನಡ ಜಿಲ್ಲೆಯ ಮೊಡಂಕಾಪು ಎಂಬ ಊರಿನ ಸಮೀಪವಿರುವ ಏರ್ಯ ಎಂಬಲ್ಲಿ ಮಾವಂತೂರು ಸುಬ್ಬಯ್ಯ ಆಳ್ವ ಮತ್ತು ಸೋಮಕ್ಕ ದಂಪತಿಗಳ ಸುಪುತ್ರನಾಗಿ 19-03-1926ರಂದು ಜನಿಸಿದರು. ತುಳು ಮತ್ತು ಕನ್ನಡ ಭಾಷೆಗಳಲ್ಲಿ ಸಾಹಿತ್ಯ ಕೃಷಿ ಮಾಡಿದ ಧೀಮಂತ. ಇವರ ಕೃತಿಗಳಲ್ಲಿ ಮುಖ್ಯವಾದವುಗಳನ್ನು ಮಥಿಸುವ ಮತ್ತು ಏರ್ಯರ ಕವನಗಳನ್ನು ಹಾಡುವ “ಏರ್ಯ ಸಾಹಿತ್ಯ ಸಂಭ್ರಮ” ಏರ್ಯ ಬೀಡಿನಲ್ಲಿ ದಿನಾಂಕ 02-04-2023ರಂದು ಭಾನುವಾರ ಏರ್ಯ ಆಳ್ವ ಫೌಂಡೇಷನ್ ಆಶ್ರಯದಲ್ಲಿ ನಡೆಯಲಿದೆ.

    ಪೂರ್ವಾಹ್ನ 9ರಿಂದ 10 ಗಂಟೆವರೆಗೆ ಉಪಹಾರ. 10ರಿಂದ 10-30 ಡಾ. ಬಿ. ಎ. ವಿವೇಕ ರೈಯವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. 10-30ರಿಂದ 1-00 ಗಂಟೆವರೆಗೆ ಏರ್ಯರ ಮುಖ್ಯ ಕೃತಿಗಳ ವಿಶ್ಲೇಷಣೆ ನಡೆಯಲಿದೆ. ಡಾ. ತಾಳ್ತಜೆ ವಸಂತ ಕುಮಾರ್, ಡಾ. ನಾ.ದಾಮೋದರ ಶೆಟ್ಟಿ, ಪ್ರೊ. ಪಿ.ಕೃಷ್ಣ ಮೂರ್ತಿ, ಡಾ. ಯು.ಮಹೇಶ್ವರಿ, ಡಾ. ತುಕಾರಾಮ್ ಪೂಜಾರಿ, ಡಾ. ಸತ್ಯನಾರಾಯಣ ಮಲ್ಲಿಪಟ್ಟಣ, ಡಾ. ಆರ್.ನರಸಿಂಹ ಮೂರ್ತಿ, ಡಾ. ಅರುಣ ಕುಮಾರ್ ಎಸ್.ಆರ್. ಇವರುಗಳು ಕ್ರಮವಾಗಿ – ಸ್ನೇಹ ಸೇತು, ರಾಮಶ್ವಮೇಧದ ರಸ ತರಂಗಗಳು, ಮುಳಿಯ ತಿಮ್ಮಪ್ಪಯ್ಯ ಹಾಗೂ ಪತ್ರಗಳು ಚಿತ್ರಿಸಿದ ಸೇಡಿಯಾಪು, ಮೊದಲ ಮಳೆ, ಹಿಂದೂ ಹೆಜ್ಜೆ, ಸಂಚಯ, ನೂರರ ನೆನಪು, ಮಂಗಳ ತಿಮರು ಈ ಕೃತಿಗಳ ವಿಶೇಷಣೆಗೆ ನಡೆಸಲಿದ್ದಾರೆ. ಇದರ ಜೊತೆಗೆ ಗಾಯನ ಕಾರ್ಯಕ್ರಮವನ್ನು ಶ್ರೀ ಕಿಶೋರ್ ಪೆರ್ಲ ನೀಡಲಿದ್ದಾರೆ. ಏರ್ಯ ಬಾಲಕೃಷ್ಣ ಹೆಗ್ಡೆ ಸಮಾರೋಪ ಭಾಷಣ ಮಾಡುವುದರೊಂದಿಗೆ ಅಂದಿನ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತದೆ. ಈ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ ಮಹಾಬಲೇಶ್ವರ ಹೆಬ್ಬಾರ ಮತ್ತು ಕೇಶವ ಎಚ್.

    • ದಾಮೋದರ ಮಾಸ್ಟರ್
      9481103386

    Share. Facebook Twitter Pinterest LinkedIn Tumblr WhatsApp Email
    Previous Articleಮಾರ್ಚ್ 27ರಂದು ಉಡುಪಿಯಲ್ಲಿ ರಂಗಭೂಮಿ ದಿನಾಚರಣೆ
    Next Article ಮಂಜೇಶ್ವರ ಗಿಳಿವಿಂಡಿನಲ್ಲಿ ಜನ್ಮದಿನೋತ್ಸವ
    roovari

    1 Comment

    1. Na Damodaran shetty on March 25, 2023 1:54 pm

      ಧನ್ಯವಾದಗಳು‌

      Reply

    Add Comment Cancel Reply


    Related Posts

    ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ ಪ್ರಕಟ

    February 16, 2026

    ಮಕ್ಕಳ ಬಹುಭಾಷಾ ಕವಿಗೋಷ್ಠಿ ಮತ್ತು ಕವಿತೆ ಹುಟ್ಟುವ ಗುಟ್ಟು ಕಾರ್ಯಾಗಾರ | ಫೆಬ್ರವರಿ 22

    February 16, 2026

    ಕವಿ ಸುಬ್ರಾಯ ಚೊಕ್ಕಾಡಿಯವರಿಗೆ ಪ್ರೊ. ಎಸ್‌.ವಿ. ಪರಮೇಶ್ವರ ಭಟ್ಟ ಪ್ರಶಸ್ತಿ ಪ್ರದಾನ

    February 16, 2026

    ಡಾ. ನಿತ್ಯಾನಂದ ಬಿ. ಶೆಟ್ಟಿ ಇವರ ‘ಅಳವು ಅರಿಯದ ಭಾಷೆ’ ಪುಸ್ತಕ ಲೋಕಾರ್ಪಣೆ

    February 16, 2026

    1 Comment

    1. Na Damodaran shetty on March 25, 2023 1:54 pm

      ಧನ್ಯವಾದಗಳು‌

      Reply

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.