ಮಂಗಳೂರು : ಲೇಖಕಿ ಡಾ. ಅರುಣಾ ನಾಗರಾಜ್ ಅವರು ರಚಿಸಿರುವ ‘ಅರಿಷಡ್ವೈರಿಗಳ ಗೊಂದಲಾಪುರದಾಚೆ’ ಎಂಬ ಚಿಂತನ ಸಂಕಲನವು ದಿನಾಂಕ 04-11-2023ರಂದು ದೀಪಾ ಕಂಫರ್ಟ್ಸ್ ಇಲ್ಲಿನ ಶೆಹನಾಯಿ ಹಾಲ್‌ನಲ್ಲಿ ಬಿಡುಗಡೆಗೊಂಡಿತು. ಕೃತಿ ಬಿಡುಗಡೆಗೊಳಿಸಿದ ಬೆಂಗಳೂರಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಿಕೆ ಡಾ. ಪ್ರಮಿಳಾ ಮಾಧವ್ ಮಾತನಾಡಿ, “ಈ ರೀತಿಯ ಕೃತಿಗಳು ಮತ್ತಷ್ಟು ಬೆಳಕಿಗೆ ಬರಬೇಕು” ಎಂದರು.
ಪಂಚಮಹಾಶಕ್ತಿ ಶ್ರೀ ಗಾಯತ್ರಿ ದೇವಿ ಸಿದ್ಧಿವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ್ ಕೃಷ್ಣ ಶೇಟ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಎಂ.ಆರ್.ಪಿ.ಎಲ್ ಇದರ ನಿವೃತ್ತ ಮಹಾ ಪ್ರಬಂಧಕಿ ವೀಣಾ ಟಿ. ಶೆಟ್ಟಿ ಅವರು “ಕೃತಿಯ ಶೀರ್ಷಿಕೆಯೇ ಅದರ ಅಂತರಾಳದ ಮಹತ್ವವನ್ನು ತಿಳಿಸುತ್ತದೆ” ಎಂದರು.
ಪತ್ರಕರ್ತೆ ಡಾ. ಮಾಲತಿ ಶೆಟ್ಟಿ ಮಾಣೂರು ಪ್ರಸ್ತಾವಿಸಿದರು. ಕೆ.ಎಂ.ಸಿ ವೈದ್ಯೆ ಡಾ. ಪ್ರಿಯಾಂಕಾ ಅರುಣ್ ಶಿರಾಲಿ ಅವರು ಪ್ರಚಲಿತ ಸಮಾಜಕ್ಕೆ ಇಂತಹ ಕೃತಿಗಳ ಅವಶ್ಯಕತೆಯನ್ನು ತಿಳಿಸಿದರು. ವಕೀಲೆ ಪುಷ್ಪಲತಾ ಯು.ಕೆ., ಸಿ.ಎ ಕಿರಣ್ ಶೇಟ್, ಪ್ರಶಾಂತ್ ಶೇಟ್ ಮಾತನಾಡಿದರು. ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯ ನಿವೃತ್ತ ಅಧೀಕ್ಷಕ ನಾಗರಾಜ್ ಶೇಟ್, ಮಂಜುನಾಥ್ ಶೇಟ್ ಎಂಟೆಕ್ ಸಹಕರಿಸಿ, ಸಿಂಧೂ ಮಂಜುನಾಥ್ ಬಿ.ಇ . ವಂದಿಸಿದರು.