ಮೈಸೂರು : ಶ್ರೀ ದುರ್ಗಾ ನೃತ್ಯಾ ಅಕಾಡೆಮಿ ಚಾರಿಟೇಬಲ್ ಟ್ರಸ್ಟ್ (ರಿ.) ಮೈಸೂರು ಪ್ರಸ್ತುತ ಪಡಿಸುವ ‘ಅರ್ಪಣಂ’ ನೃತ್ಯ ಕಾರ್ಯಕ್ರಮವನ್ನು ದಿನಾಂಕ 16 ಮತ್ತು 17 ಆಗಸ್ಟ್ 2025ರಂದು ಮೈಸೂರಿನ ರಾಮಕೃಷ್ಣ ನಗರದ ರಾಮ ಗೋವಿಂದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 16 ಆಗಸ್ಟ್ 2025ರಂದು 5-00 ಗಂಟೆಗೆ ವಿದುಷಿ ಶ್ರೀವಿದ್ಯಾ ರಾವ್ ಇವರ ಶಿಷ್ಯರಾದ ಶ್ರೀ ದುರ್ಗಾ ನೃತ್ಯಾ ಅಕಾಡೆಮಿಯ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಲಿದೆ. 7-00 ಗಂಟೆಗೆ ಮಂಜು ವಿ. ನಾಯರ್ ಮತ್ತು ಜಗದೀಶ್ವರ ಸುಕುಮಾರ್ ಇವರಿಂದ ‘ನೇಯಂ’ ಪ್ರಸ್ತುತಗೊಳ್ಳಲಿದೆ.
ದಿನಾಂಕ 17 ಆಗಸ್ಟ್ 2025ರಂದು ‘ನಾಟ್ಯ ದಾಸೋಹಂ’ ಭರತನಾಟ್ಯ ಮೂಲಕ ಹರಿದಾಸ ಸಾಹಿತ್ಯದ ಪರಿಶೋಧನೆಯಲ್ಲಿ ಕರ್ನಾಟಕ ಕಲಾಶ್ರೀ ಶಾರದಾಮಣಿ ಶೇಖರ್, ಕರ್ನಾಟಕ ಕಲಾಶ್ರೀ ರಾಜಶ್ರೀ ಶೆಣೈ, ವಿದ್ಯಾಶ್ರೀ ರಾಧಾಕೃಷ್ಣ, ಮಂಜುಳ ಸುಬ್ರಹ್ಮಣ್ಯ, ಉನ್ನತ್ ಜೈನ್, ಡಾ. ಸಾಗರ್ ಟಿ.ಎಸ್., ಮಂಜರಿಚಂದ್ರ ಪುಷ್ಪರಾಜ್ ಮತ್ತು ರಾಧಿಕಾ ಶೆಟ್ಟಿ ಇವರುಗಳು ನೃತ್ಯ ಪ್ರದರ್ಶನ ನೀಡಲಿದ್ದಾರೆ.