ಮಂಗಳೂರು : ‘ದಿ ಡ್ಯಾಪರ್ ಎಕ್ಸ್ಪೋ’ ಪೇಂಟಿಂಗ್, ಚಿತ್ರಕಲೆ, ಮಂಡಲ, ಸ್ಟ್ರಿಂಗ್ ಆರ್ಟ್, ಛಾಯಾಚಿತ್ರಗಳ ಪ್ರದರ್ಶನದ ಉದ್ಘಾಟನೆಯು ಮಂಗಳೂರು ಎಂ.ಜಿ. ರೋಡ್ ನಲ್ಲಿರುವ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ದಿನಾಂಕ 17 ಜನವರಿ 2025ರಂದು 3-00 ಗಂಟೆಗೆ ನಡೆಯಲಿದೆ. 18 ಮತ್ತು 19 ಜನವರಿ 2025ರಂದು ಕಲಾ ಪ್ರದರ್ಶನವನ್ನು ಆಯೋಜಿಸಲಾಗಿದೆ.
ನಿವೃತ್ತ ಪ್ರಾಂಶುಪಾಲ ಪ್ರೊ. ಜಿ.ಎನ್. ಭಟ್ ಪ್ರದರ್ಶನ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಯಕ್ಷಗಾನ ಕಲಾವಿದ ಎಂ. ಪ್ರಭಾಕರ್ ಜೋಶಿ, ಜಾದೂಗಾರ ಪ್ರೊ. ಶಂಕರ್, ಕಲಾವಿದ ಗಣೇಶ್ ಸೋಮಯಾಜಿ ಭಾಗವಹಿಸುವರು. ಪ್ರದರ್ಶನವು ಬೆಳಿಗ್ಗೆ 10-00ರಿಂದ ಸಂಜೆ 7-30ರವರೆಗೆ ಇರಲಿದೆ ಎಂದು ಸಂಘಟಕರಾದ ಉದಯ್ ಕೃಷ್ಣ ಜಿ. ಮತ್ತು ಅವರ ಪುತ್ರಿ ನಿಯತಿ ಯು. ಭಟ್ ತಿಳಿಸಿದ್ದಾರೆ.

