ತೆಕ್ಕಟ್ಟೆ: ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದ (ರಿ.)ಕೊಮೆ, ತೆಕ್ಕಟ್ಟೆ ನೇತೃತ್ವದಲ್ಲಿ “ಸಿನ್ಸ್ 1999 ಶ್ವೇತಯಾನ-83 ” ಕಾರ್ಯಕ್ರಮದಡಿಯಲ್ಲಿ ‘ಅರ್ಥಾಂಕುರ-10’ ಕಾರ್ಯಕ್ರಮವು ದಿನಾಂಕ 08 ಡಿಸೆಂಬರ್ 2024ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಸಿದ್ಧ ಯಕ್ಷಗಾನ ಕಲಾವಿದ ಹಾಗೂ ಅರ್ಥದಾರಿಯಾದ ವಾಸುದೇವ ರಂಗ ಭಟ್ ಮಾತನಾಡಿ “ಯಕ್ಷಗಾನ ಅರ್ಥಧಾರಿಗಳನ್ನು ರಂಗದಲ್ಲಿ ಬೆಳೆಸುವ ಪರಿಪಾಠ ಹಿಂದಿನಿಂದಲೂ ಇತ್ತು. ಆದರೆ ಇತ್ತೀಚೆಗೆ ತೀರಾ ವಿರಳವಾಗಿದೆ. ಯಾವುದೇ ಪ್ರತಿಫಲಾಕ್ಷೆ ಇಲ್ಲದೇ ವಾರಕ್ಕೋ, ತಿಂಗಳಿಗೊಂದರಂತೋ ಆಯೋಜಿಸಿದ ಈ ಕಾರ್ಯಕ್ರಮ ಬಹಳ ಅರ್ಥಪೂರ್ಣವಾದದ್ದು. ಅನೇಕಾನೇಕ ಅರ್ಥದಾರಿಗಳು ಈ ರಂಗದಲ್ಲಿ ಮೇಲೇಳಲಿ, ಇನ್ನೂ ಪ್ರಸಿದ್ಧ ಅರ್ಥದಾರಿಗಳೂ ಈ ಕೂಟದಲ್ಲಿ ಭಾಗವಹಿಸಿ, ಉದಯೋನ್ಮುಖ ಕಲಾವಿದರೊಡನೆ ಹಿರಿಯ ಕಲಾವಿದರ ರಂಗ ತಾಲೀಮು ನಡೆಯಲಿ.” ಎಂದು ಹಾರೈಸಿದರು.
ಭಾಗವತ ಸುರೇಶ್ ಶೆಟ್ಟಿ ಶಂಕರನಾರಾಯಣ, ಡಾ. ಜಗದೀಶ್ ಶೆಟ್ಟಿ ಸಿದ್ಧಾಪುರ, ಸತೀಶ್ ಶೆಟ್ಟಿ ಮೂಡುಬಗೆ, ಉದ್ಯಮಿ ಗೋಪಾಲ ಪೂಜಾರಿ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಉಪನ್ಯಾಸಕ ರಾಘವೇಂದ್ರ ತುಂಗ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಯಕ್ಷಗಾನ ತಾಳಮದ್ದಳೆ ‘ಪಾದುಕಾ ಪ್ರದಾನ’ ಪ್ರಸ್ತುತಗೊಂಡಿತು.
Subscribe to Updates
Get the latest creative news from FooBar about art, design and business.
Previous Articleಮೈಸೂರಿನಲ್ಲಿ ‘ರಂಗರತ್ನ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ | ಡಿಸೆಂಬರ್ 12
Related Posts
Comments are closed.