ಧಾರವಾಡ : ಇಂದೋರಿನ ಸಾಹಿತ್ಯಾಲಯ್ ಮತ್ತು ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಗಳ ಸಹಯೋಗದಲ್ಲಿ ರಾಷ್ಟ್ರಮಟ್ಟದ ಸಂಶೋಧನ ಲೇಖನ ಸ್ಪರ್ಧೆ ಏರ್ಪಡಿಸಲಾಗಿದ್ದು, ಅತಿಹೆಚ್ಚು ಅಂಕ ಪಡೆದ ಮೊದಲ ಐದು ಪ್ರಬಂಧಗಳಿಗೆ ತಲಾ 10000 ರೂ. ನಗದು ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು.
ಸಂಶೋಧನ ಲೇಖನದ ವಿಷಯ :
- ಭಾರತೀಯ ಶಿಲ್ಪಕಲೆ ಮತ್ತು ಚಿತ್ರಕಲೆಯಲ್ಲಿ ಶೃಂಗಾರದ ಚಿತ್ರಣ
- ಮಧ್ಯಕಾಲೀನ ಭಾರತದ ಭಕ್ತಿ ಸಾಹಿತ್ಯ
- ಭಾರತದ ತಾಂತ್ರಿಕ ಪಂಥಗಳು ಅಂದು-ಇಂದು
ನಿಯಮಗಳು:
- ಈ ಸ್ಪರ್ಧೆಗೆ ಮುಕ್ತ ಪ್ರವೇಶವಿದ್ದು ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ.
- 60 ವರ್ಷದೊಳಗಿನವರು ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
- ಲೇಖನ ಕನಿಷ್ಠ 1000 ಪದ ಮತ್ತು ಗರಿಷ್ಠ 5000 ಪದಗಳ ಮಿತಿಯಲ್ಲಿರಬೇಕು.
- ಲೇಖನ ಸಿದ್ಧಪಡಿಸಲು ನೆರವಾದ ಆಕರ ಗ್ರಂಥಗಳ ಉಲ್ಲೇಖ ಮಾಡುವುದು ಕಡ್ಡಾಯ.
- ಲೇಖನಗಳನ್ನು ತಪ್ಪಿಲ್ಲದಂತೆ ಟೈಪಿಸಿ ಪಿ. ಡಿ. ಎಫ್. ರೂಪದಲ್ಲಿ ಕಳಿಸಬೇಕು. ಲೇಖಕರ ಪರಿಚಯ, ಪೂರ್ಣ ವಿಳಾಸ ಮತ್ತು ಇತ್ತೀಚಿನ ಒಂದು ಭಾವಚಿತ್ರವನ್ನು ಲೇಖನದ ಜೊತೆ ಕಳಿಸಬೇಕು.
- ಲೇಖನಗಳನ್ನು +919110687473 ಈ ವಾಟ್ಸಪ್ ನಂಬರಿಗೆ ಕಳಿಸಬೇಕು.
- ಲೇಖನಗಳನ್ನು ಕಳಿಸಲು ಕೊನೆಯ ದಿನಾಂಕ ನವೆಂಬರ್ 15, 2025.
- ಫಲಿತಾಂಶ ಪ್ರಕಟವಾಗುವ ದಿನಾಂಕ ಡಿಸೆಂಬರ್ 01, 2025
ಹೆಚ್ಚಿನ ಮಾಹಿತಿಗಾಗಿ ವಿಕಾಸ ಹೊಸಮನಿ – 9110687473, ಸುಭಾಷ್ ಪಟ್ಟಾಜೆ – 9645081966