ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸರಣಿ ಕಾರ್ಯಕ್ರಮ ನೃತ್ಯಾಂತರಂಗ 119ನೇ ಸರಣಿಯಲ್ಲಿ ಸಂಸ್ಥೆಯ ಕಲಾವಿದರಾದ ಅಕ್ಷತಾ ಕೆ., ಅಪೂರ್ವ ಗೌರಿ ದೇವಸ್ಯ, ಶಮಾ ಚಂದುಕೂಡ್ಲು, ವಿಭಾಶ್ರೀ ವಿ. ಗೌಡ, ಪ್ರಣಮ್ಯ ಪಾಲೆಚ್ಚಾರು ಮತ್ತು ವಿಷ್ಣುಪ್ರಿಯ ಇವರಿಂದ ಭರತನಾಟ್ಯ ಕಾರ್ಯಕ್ರಮವು ದಿನಾಂಕ 04 ಜನವರಿ 2025ರಂದು ಪುತ್ತೂರಿನ ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ನಡೆಯಿತು.
ಅಭ್ಯಾಗತರಾದ ವಿಭಾ ಫ್ಯಾಷನ್ ನ ಮಾಲಕರಾದ ಹಾಗೂ ಶ್ರಿ ಮಹಾಲಿಂಗೇಶ್ವರ ದೇವಸ್ಥಾನದ ಧಾರ್ಮಿಕ ಸಮಿತಿಯ ನಿಕಟಪೂರ್ವ ಸದಸ್ಯರಾದ ಶ್ರೀಮತಿ ವೀಣಾ ಬಿ.ಕೆ. ಇವರು ಮೆಚ್ಚುಗೆ ವ್ಯಕ್ತಪಡಿಸಿದರು. ಭರತನಾಟ್ಯ ಕಲಾವಿದರೆಲ್ಲ ವಿದ್ವಾನ್ ದೀಪಕ್ ಕುಮಾರರಲ್ಲಿ ತರಬೇತು ಪಡೆಯುತ್ತಿದ್ದಾರೆ. ಸಭಾಕಲಾಪದಲ್ಲಿ ಕು. ಆದ್ಯ ಕೆ. ನಿರೂಪಣೆಯಲ್ಲಿ, ನಿಶಿ ವಿಷಯ ಮಂಡನೆಯಲ್ಲಿ, ಅಕ್ಷರಿ ಪಂಚಾಂಗ ವಾಚನದಲ್ಲಿ, ಭಾರ್ಗವಿ ಶೆಣೈ ಅಭ್ಯಾಗತರ ಪರಿಚಯ, ಕು. ಅದಿತ್ಯ, ಅಭಿನವ್ ರಾಜ್, ಅಭಿನವ್, ಹೃಷಿಕೇಶ್, ಪ್ರಚೇತ್ – ಪ್ರಾರ್ಥನೆ ಹಾಡಿದರೆ, ಪ್ರೀತಿಕಲಾ ಮತ್ತು ಗಿರೀಶ್ ಕುಮಾರ್ ಓಂಕಾರ ನಾದ ಹಾಗೂ ಶಂಖನಾದಗೈದರು.