ಮಂಗಳೂರು : ಯುವ ವೇದಿಕೆ ಟ್ರಸ್ಟ್ ( ರಿ ) ಉರ್ವ ಮಾರ್ಕೆಟ್, ಮಂಗಳೂರು, ಮತ್ತು ದ್ರಾವಿಡ ಬ್ರಾಹ್ಮಣರ ಅಸೋಸಿಯೇಷನ್ ( ರಿ ) ಯುವ ವೇದಿಕೆ ಗೋಕುಲ ಅಶೋಕ ನಗರ ಮಂಗಳೂರು ಜಂಟಿ ಆಶ್ರಯದಲ್ಲಿ ‘ಆಷಾಢ ಶ್ರಾವ್ಯ’ ಕಾರ್ಯಕ್ರಮವು ದಿನಾಂಕ 20 ಜುಲೈ 2025ರಂದು ಮಂಗಳೂರಿನ ಅಶೋಕ ನಗರದಲ್ಲಿರುವ ಗೋಕುಲ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಸಮಾರಂಭದಲ್ಲಿ ಹಿರಿಯ ಯಕ್ಷಗಾನ ತಾಳಮದ್ದಳೆ ಅರ್ಥದಾರಿ ವಿಟ್ಲ ಶಂಭು ಶರ್ಮ ಇವರಿಗೆ ಗೌರವಾರ್ಪಣೆ ಮಾಡಲಾಯಿತು. ಮಾಣಿ ಮೋಹನ ಪೈ ಅಭಿನಂದನಾ ಭಾಷಣ ಮಾಡಿದರು. ವೇದಿಕೆಯಲ್ಲಿ ಪಿ. ಸೂರ್ಯನಾರಾಯಣ ರಾವ್, ವೀಣಾ ಕೃಷ್ಣ ಮೂರ್ತಿ ರಾವ್, ಸಿ. ಸುರೇಶ್ ರಾವ್, ಪಿ. ಪ್ರವೀಣ್ ರಾವ್, ಪಿ. ಸುರೇಶ್ ರಾವ್, ಬಿ. ವೆಂಕಟೇಶ್ ರಾವ್, ಕಿರಣ್, ಎಚ್., ಮಾಣಿ ಮೋಹನ್ ಪೈ, ಆನಂದ್ ರಾವ್, ಗಿರೀಶ್ ನಾವಡ, , ಕುಮಾರಿ ಶ್ರೀ ರಕ್ಷ, ಶ್ರೀ ಮತಿ ವರಲಕ್ಷ್ಮೀ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ‘ರಾವಣ ವಧೆ’ ಯಕ್ಷಗಾನ ತಾಳಮದ್ದಳೆ ನಡೆಯಿತು.