ಬೆಂಗಳೂರು : ಸ್ಪಷ್ಟ ಥಿಯೇಟರ್ ಪ್ರಸ್ತುತ ಪಡಿಸುವ ಗಗನ್ ಪ್ರಸಾದ್ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಆಷಾಢದ ಒಂದು ದಿನ’ ನಾಟಕ ಪ್ರದರ್ಶನವನ್ನು ದಿನಾಂಕ 01 ನವೆಂಬರ್ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರು ಬಸವನಗುಡಿ ಎನ್.ಆರ್. ಕಾಲೋನಿಯಲ್ಲಿರುವ ಡಾ. ಸಿ. ಅಶ್ವಥ್ ಕಲಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಡಾ. ಬೇಲೂರು ರಘುನಂದನ್ ಸಂಗೀತ ಸಾಹಿತ್ಯ ನೀಡಿದ್ದು, ಶರತ್ ಮಂಜಿತ್ತಾಯ ಸಂಗೀತ ನಿರ್ದೇಶನ ಹಾಗೂ ಭರತಾಂಜಲಿ ನಾಟ್ಯ ಶಾಲೆಯ ವಿ. ಭುವನ ಪ್ರಸಾದ್ ನೃತ್ಯ ಸಂಯೋಜನೆ ಮಾಡಿರುತ್ತಾರೆ.

