ಪುತ್ತೂರು : ಸಂಘಟನೆ, ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸಾರ ಜೋಡುಮಾರ್ಗ, ರೋಟರಿ ಪುತ್ತೂರು ಎಲೈಟ್ ಮತ್ತು ನಿರತ ನಿರಂತ ಬಹುವಚನಂ ಇವುಗಳ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ‘ಅಟ್ಟಾಮುಟ್ಟಾ’ ಮಕ್ಕಳ ನಾಟಕೋತ್ಸವವನ್ನು ದಿನಾಂಕ 28 ನವೆಂಬರ್ 2024ರಿಂದ 30 ನವೆಂಬರ್ 2024ರವರೆಗೆ ಪ್ರತಿದಿನ ಸಂಜೆ 6-30 ಗಂಟೆಗೆ ಪುತ್ತೂರಿನ ಎಡ್ವರ್ಡ್ ಹಾಲ್ ಸುದಾನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 28 ನವೆಂಬರ್ 2024ರಂದು ಸಾಗರದ ಕಿನ್ನರ ಮೇಳ ತುಮರಿ ಇದರ ಕಲಾವಿದರು ನಿಧಿ ಎಸ್. ಶಾಸ್ತ್ರಿ ಇವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಅಭಿನಯಿಸುವ ಮಕ್ಕಳ ನಾಟಕ ‘ಇರುವೆ ಪುರಾಣ’. ಈ ನಾಟಕಕ್ಕೆ ದಿಗ್ವಿಜಯ ಹೆಗ್ಗೋಡು ಸಂಗೀತ, ಸಚಿನ್ ಕುಮಾರ್ ಎಸ್.ವಿ. ಇವರ ಸಹಾಯ ಹಾಗೂ ಕೆ.ಜಿ. ಕೃಷ್ಣ ಮೂರ್ತಿ ನಿರ್ಮಾಣ ಮಾಡಿರುತ್ತಾರೆ.
ದಿನಾಂಕ 29 ನವೆಂಬರ್ 2024ರಂದು ನಡೆನುಡಿ ಕೊಂಬೆಟ್ಟು ಶಾಲಾ ಮಕ್ಕಳ ನಾಟಕ ಸಾಂಗತ್ಯ ಅಭಿನಯಿಸುವ ‘ಕತ್ತೆ & ದೆವ್ವ’ ನಾಟಕಕ್ಕೆ ಐ.ಕೆ. ಬೊಳುವಾರು ಇವರು ರಂಗಪಠ್ಯ ಮತ್ತು ನಿರ್ದೇಶನ ಮಾಡಿರುತ್ತಾರೆ. ನಿರ್ಮಾಣ ಮತ್ತು ನಿರ್ವಹಣೆ ಪ್ರಶಾಂತ್ ಅನಂತಾಡಿ, ಕಲೆ ಮತ್ತು ರಂಗ ಪರಿಕರ ಜಗನ್ನಾಥ ಅರಿಯಡ್ಕ ಮತ್ತು ವಿಶೇಷ ರಂಗ ಸಹಾಯ ಸದಾನಂದ ಮೂಡಬಿದ್ರೆ ಇವರು ನೀಡಿರುತ್ತಾರೆ. ಬಳಿಕ ರೋಟರಿ ಪುತ್ತೂರು ಎಲೈಟ್ ಇದರ ಸದಸ್ಯರು ಮೌನೇಶ ವಿಶ್ವಕರ್ಮ ಇವರ ರಚನೆ ಮತ್ತು ನಿರ್ದೇಶನದಲ್ಲಿ ‘ಓ ಮುನ್ನಾ’ ಎಂಬ ನಾಟಕದ ಪ್ರದರ್ಶನ ನೀಡಲಿದ್ದಾರೆ.
ದಿನಾಂಕ 30 ನವೆಂಬರ್ 2024ರಂದು ಪುತ್ತೂರಿನ ಸುದಾನ ವಸತಿಯುತ ಶಾಲೆಯ ವಿದ್ಯಾರ್ಥಿಗಳು ಅಭಿನಯಿಸುವ ನಾಟಕ ‘ಬದುಕಿನ ಬೆಳಕು’. ಈ ನಾಟಕದ ಕಥೆ ಮತ್ತು ಪರಿಕಲ್ಪನೆ ಪೂಜಾ ಎಂ.ವಿ., ಸಂಭಾಷಣೆ ನಿರ್ದೇಶನ ಶಿವಗಿರಿ ಕಲ್ಲಡ್ಕ ಮತ್ತು ಮಾರ್ಗದರ್ಶನ ಶೋಭಾ ನಾಗರಾಜ್ ಇವರದ್ದು. ಗಂಟೆ 7-15ಕ್ಕೆ ಮಾಣಿ ಪೆರಾಜೆಯ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆ ಇಲ್ಲಿನ ವಿದ್ಯಾರ್ಥಿಗಳು ಮೌನೇಶ ವಿಶ್ವಕರ್ಮ ಇವರ ನಿರ್ದೇಶನದಲ್ಲಿ ‘ಯಂತ್ರಯಾನ’ ಎಂಬ ನಾಟಕ ಪ್ರದರ್ಶನ ನೀಡಲಿದ್ದಾರೆ. ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿಯಾದ ಸುಪ್ರಿಯಾ ಡಿ. ಇವರು ರಚಿಸಿರುವ ಹಾಗೂ ಬಾಲವಿಕಾಸ ಟ್ರಸ್ಟ್ ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ.ಇವರು ಪರಿಕಲ್ಪನೆ ಈ ನಾಟಕಕ್ಕೆ ಸುಧಾ ಎನ್. ರಾವ್, ಯಜ್ಞೇಶ್ವರಿ ಶೆಟ್ಟಿ ಮತ್ತು ರಶ್ಮಿ ಫೆರ್ನಾಂಡೀಸ್ ಸಹಕಾರ ನೀಡಿದ್ದಾರೆ.