Subscribe to Updates
Get the latest creative news from FooBar about art, design and business.
Author: roovari
ಮೈಸೂರು : ಎನ್.ಇ.ಎಸ್. ಹವ್ಯಾಸಿ ರಂಗತಂಡ ಶಿವಮೊಗ್ಗ ಅರ್ಪಿಸುವ ರಾಷ್ಟ್ರದ ಖ್ಯಾತ ಬರಹಗಾರ ಆ್ಯಂಟನ್ ಚೆಕಾವ್ ರವರ ಸಣ್ಣ ಕಥೆಗಳನ್ನು ಆಧರಿಸಿದ ಡಾ. ಹೇಮಾಪಟ್ಟಣ ಶೆಟ್ಟಿ ವಿರಚಿತ ನಾಟಕ ‘ಚೆಕಾವ್ ಟು ಶಾಂಪೇನ್’ ಇದರ ಪ್ರದರ್ಶನವನ್ನು ದಿನಾಂಕ 27 ಜುಲೈ 2025ರಂದು ಸಂಜೆ 6-30 ಗಂಟೆಗೆ ಮೈಸೂರಿನ ನಟನ ರಂಗಶಾಲೆಯಲ್ಲಿ ಆಯೋಜಿಸಲಾಗಿದೆ. ಡಾ. ಎನ್. ಕೆ. ಚಿದಾನಂದ ಸೊರಬ ಇವರು ನಿರ್ದೇಶನ ಮತ್ತು ರಂಗವಿನ್ಯಾಸ ಮಾಡಿದ್ದು, ಲಕ್ಷ್ಮಿ ಭದ್ರಾವತಿ ಪ್ರಸಾದನ ಮತ್ತು ವಸ್ತ್ರವಿನ್ಯಾಸ, ಹರಿಗೆ ಗೋಪಾಲ್ ಸ್ವಾಮಿ ಇವರು ಪರಿಕರ ಮತ್ತು ಬೆಳಕಿನ ವಿನ್ಯಾಸ ಹಾಗೂ ವಿನ್ಯಾಸ್ ಎನ್. ವೀಚಿ ಸಂಗೀತ ನಿರ್ವಹಣೆ ಮಾಡಿರುತ್ತಾರೆ.
ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ ಇದರ ಸಂಯುಕ್ತ ಆಶ್ರಯದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು : ಉಪನ್ಯಾಸ ಮಾಲೆ – 3ರಲ್ಲಿ ಡಾ. ಶಿವರಾಮ ಕಾರಂತ ಇವರ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ 25 ಜುಲೈ 2025ರಂದು ಬೆಳ್ತಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷರಾದ ಡಿ. ಯದುಪತಿ ಗೌಡ ಇವರ ಅಧ್ಯಕ್ಷತೆಯಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ರಾಜೇಶ್ ಬಿ. ಇವರು ಉಪನ್ಯಾಸ ನೀಡಲಿದ್ದಾರೆ. ಬೆಳ್ತಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುಕುಮಾರ್ ಜೈನ್ ಇವರು ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಸಾಹಿತಿಯಾಗಿ, ಉತ್ತಮ ವಾಗ್ಮಿಯಾಗಿ, ಪತ್ರಿಕೋದ್ಯಮಿಯಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣಕ್ಕೆ ದುಡಿದ ಒಬ್ಬ ಪ್ರಮುಖ ವ್ಯಕ್ತಿಯಾಗಿ, ಹೀಗೆ ಸಮಾಜದ ವಿವಿಧ ಮುಖಗಳಲ್ಲಿ ಸೇವೆ ಸಲ್ಲಿಸಿದವರು ಮುದವೀಡು ಕೃಷ್ಣರಾಯರು. 1874 ಜುಲೈ 24ರಂದು ಹನುಮಂತ ರಾವ್ ಮತ್ತು ಗಂಗಾಬಾಯಿ ಅವರ ಪುತ್ರನಾಗಿ ಬಾಗಲಕೋಟೆಯಲ್ಲಿ ಕೃಷ್ಣರಾಯರು ಜನಿಸಿದರು. ಇವರ ಹಿರಿಯರು ಆಂಧ್ರಪ್ರದೇಶದ ಕಡಪ ಜಿಲ್ಲೆಗೆ ಸೇರಿದ ಮುದವೀಡು ಎಂಬ ಗ್ರಾಮದಿಂದ ಬಂದವರು. ಆದಕಾರಣ ಇವರ ಹೆಸರಿನೊಂದಿಗೆ ಮುದವೀಡು ಹಾಸುಹೊಕ್ಕಾಗಿದೆ. ಬಾಲ್ಯದಲ್ಲಿ ತಂದೆ ತಾಯಿಯರ ಪ್ರೀತಿಯಿಂದ ವಂಚಿತರಾದ ಮುದವೀಡು ಕೃಷ್ಣರಾಯರು ಚಿಕ್ಕಮ್ಮನ ಆಶ್ರಯದಲ್ಲಿ ಬೆಳೆದರು. ಇವರ ಆರಂಭದ ವಿದ್ಯಾಭ್ಯಾಸ ಕಾರವಾರದಲ್ಲಿ ಮತ್ತು ಮೆಟ್ರಿಕ್ ವಿದ್ಯಾಭ್ಯಾಸ ಧಾರವಾಡದಲ್ಲಿ ನಡೆಯಿತು. ಭಾರತದ ಸ್ವಾತಂತ್ರ್ಯಕ್ಕಾಗಿ ಆಂದೋಲನ ನಡೆಯುತ್ತಿದ್ದ ಸಮಯವದು. ಇದರಿಂದ ಪ್ರಭಾವಿತರಾದ ಕೃಷ್ಣರಾಯರು ವಿದ್ಯಾಭ್ಯಾಸವನ್ನು ಬದಿಗಿಟ್ಟು ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಲೋಕಮಾನ್ಯ ತಿಲಕರಿಂದ ಪ್ರೇರಣೆಗೊಂಡು ಅವರ ಅನುಯಾಯಿಯಾಗಿ ಗಣೇಶೋತ್ಸವದಲ್ಲಿ ಮತ್ತು 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿಯೂ ಸಕ್ರಿಯ ಕಾರ್ಯಕರ್ತರಾಗಿ ದುಡಿದರು. ಪಾನನವಿರೋಧ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕೆ ಎರಡು ವರ್ಷ ಕಾರಾಗೃಹ…
ತುಮಕೂರು : ಬಂಡಾಯ ಸಾಹಿತ್ಯ ಸಂಘಟನೆ ತುಮಕೂರು ಜಿಲ್ಲೆ ಇದರ ವತಿಯಿಂದ ‘ಸಾಹಿತ್ಯ ಸಂವಾದ’ ಚಳವಳಿಯ ಸಂಗಾತಿಯಾಗಿ ಕನ್ನಡ ಸಾಹಿತ್ಯ ವಿಷಯದ ಕುರಿತು ರಾಜ್ಯಮಟ್ಟದ ಕಾರ್ಯಕ್ರಮವನ್ನು ದಿನಾಂಕ 27 ಜುಲೈ 2025ರಂದು ಬೆಳಗ್ಗೆ 10-15 ಗಂಟೆಗೆ ತುಮಕೂರಿನ ರವೀಂದ್ರ ಕಲಾನಿಕೇತನದಲ್ಲಿ ಆಯೋಜಿಸಲಾಗಿದೆ. ಹರಿಕಥಾ ವಿದ್ವಾನ್ ಡಾ. ಲಕ್ಷ್ಮಣ ದಾಸ್ ಇವರು ಕಾವ್ಯ ಗಾಯನದ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ದೊರೈರಾಜ್ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರೊ. ಬರಗೂರು ರಾಮಚಂದ್ರಪ್ಪ ಇವರು ದಿಕ್ಸೂಚಿ ನುಡಿಗಳನ್ನಾಡಲಿದ್ದು, ಡಾ. ಕರೀಗೌಡ ಬೀಚನಹಳ್ಳಿ ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಗೋಷ್ಠಿ 1ರಲ್ಲಿ ‘ಕನ್ನಡ ಸಾಹಿತ್ಯ ಮತ್ತು ದಲಿತ ಚಳವಳಿಯ ಆಶಯಗಳು’ ಎಂಬ ವಿಷಯದ ಬಗ್ಗೆ ಡಾ. ಬಿ.ಎಂ. ಪುಟ್ಟಯ್ಯ, ಗೋಷ್ಠಿ 2ರಲ್ಲಿ ‘ಕನ್ನಡ ಸಾಹಿತ್ಯ ಮತ್ತು ಮಹಿಳಾ ಚಳವಳಿಯ ವಿಕಾಸ’ ಎಂಬ ವಿಷಯದ ಬಗ್ಗೆ ಡಾ. ಎನ್. ಗಾಯತ್ರಿ, ಗೋಷ್ಠಿ 3ರಲ್ಲಿ ‘ಕನ್ನಡ ಸಾಹಿತ್ಯ ಮತ್ತು ಕನ್ನಡ ಪರ ಚಳವಳಿಯ ಚಾರಿತ್ರೀಕತೆ’ ಎಂಬ ವಿಷಯದ ಬಗ್ಗೆ ಡಾ.…
ಉಪ್ಪಿನಕುದ್ರು : ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಇದರ ವತಿಯಿಂದ 2025ರ ವಿನೂತನ ಕಾರ್ಯಕ್ರಮ ಸರಣಿಯ ಜುಲೈ ತಿಂಗಳ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ 10ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಬಾಲ ಪುರಸ್ಕಾರ ಪ್ರಶಸ್ತಿ ವಿಜೇತೆ ಕುಮಾರಿ ಮನ್ವಿತಾ ಎಸ್. ಉಪ್ಪಿನಕುದ್ರು ಇವರಿಂದ ‘ವೈವಿಧ್ಯಮಯ ಕಾರ್ಯಕ್ರಮ’ವನ್ನು ದಿನಾಂಕ 27 ಜೂನ್ 2025ರಂದು ಸಂಜೆ ಗಂಟೆ 4-00ರಿಂದ ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ತೆಕ್ಕಟ್ಟೆ : ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ ಇದರ ಆಶ್ರಯದಲ್ಲಿ ಪ್ರಸಾದ್ ಕುಮಾರ್ ಮೊಗೆಬೆಟ್ಟು ವಿರಚಿತ ಡಾ. ಜಗದೀಶ್ ಶೆಟ್ಟಿ ಸಿದ್ಧಾಪುರ ಸಾರಥ್ಯದಲ್ಲಿ ಅರ್ಥಾಂಕುರ -13 ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಪ್ರಯುಕ್ತ ಕುಂದಾಪ್ರ ಕನ್ನಡದಲ್ಲಿ ‘ತಾಳಮದ್ದಲೆ’ ಕಾರ್ಯಕ್ರಮವನ್ನು ದಿನಾಂಕ 27 ಜುಲೈ 2025ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರಸಾದ್ ಕುಮಾರ್ ಮೊಗೆಬೆಟ್ಟು ವಿರಚಿತ ‘ರಾಜಿ ರಂಗ’ ತಾಳಮದ್ದಲೆಯ ಹಿಮ್ಮೇಳದಲ್ಲಿ ಪ್ರಸಾದ್ ಕುಮಾರ್ ಮೊಗೆಬೆಟ್ಟು, ರಾಹುಲ್ ಕುಂದರ್ ಕೋಡಿ ಮತ್ತು ರಾಹುಲ್ ಅಮೀನ್ ಕೊಮೆ ಹಾಗೂ ಹಿಮ್ಮೇಳದಲ್ಲಿ ಡಾ. ಜಗದೀಶ್ ಶೆಟ್ಟಿ, ಸತೀಶ್ ಶೆಟ್ಟಿ ಮೂಡುಬಗೆ, ರಾಘವೇಂದ್ರ ತುಂಗ ಕೋಟ, ಶಂಕರ ನಾರಾಯಣ ಉಪಾಧ್ಯಾಯ ಕೊರ್ಗಿ, ಸುಧಾ ಮಣೂರು ಮತ್ತು ನಾಗರತ್ನ ಹೇರ್ಳೆ ಸಹಕರಿಸಲಿದ್ದಾರೆ.
ಮೈಸೂರು : ತರಂಗಂ ಟ್ರಸ್ಟ್ (ರಿ.) ತಲಕಾಡು, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇದರ ವತಿಯಿಂದ ‘ತರಂಗಂ ನಾಟಕೋತ್ಸವ 2025’ವನ್ನು ದಿನಾಂಕ 26ರಿಂದ 28 ಜುಲೈ 2025ರವರೆಗೆ ಸಂಜೆ 6-30 ಗಂಟೆಗೆ ಮೈಸೂರಿನ ಕಿರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 26 ಜುಲೈ 2025ರಂದು ಮೈಸೂರಿನ ‘ನಟನ ರಂಗಶಾಲೆ’ಯ ತಂಡದವರಿಂದ ಮಂಡ್ಯ ರಮೇಶ್ ಇವರ ನಿರ್ದೇಶನದಲ್ಲಿ ‘ಕಟ್ಟೆ ಪುರಾಣ’, ದಿನಾಂಕ 27 ಜುಲೈ 2025ರಂದು ಮೈಸೂರಿನ ‘ಸಂಚಲನ’ ತಂಡದವರಿಂದ ದೀಪಕ್ ಮೈಸೂರು ಇವರ ನಿರ್ದೇಶನದಲ್ಲಿ ‘ಹರಕೆಯ ಕುರಿ’ ಮತ್ತು ದಿನಾಂಕ 28 ಜುಲೈ 2025ರಂದು ಹಾಸನದ ವಿಶ್ವಪಥ ಚಾರಿಟಬಲ್ ಟ್ರಸ್ಟ್ (ರಿ.) ತಂಡದವರಿಂದ ಪ್ರದೀಪ್ ಹಾಸನ ಇವರ ನಿರ್ದೇಶನದಲ್ಲಿ ‘ಪೊಲೀಸರಿದ್ದಾರೆ ಎಚ್ಚರಿಕೆ’ ನಾಟಕ ಪ್ರದರ್ಶನ ನಡೆಯಲಿದೆ.
ಕಾಂತಾವರ : ಯಕ್ಷದೇಗುಲ ಸಂಸ್ಥೆಯ ವಾರ್ಷಿಕ ಯಕ್ಷೋಲ್ಲಾಸ ಸಮಾರಂಭವು ದಿನಾಂಕ 20 ಜುಲೈ 2025ರಂದು ಶ್ರೀ ಕ್ಷೇತ್ರ ಕಾಂತಾವರದಲ್ಲಿ ಜರಗಿತು. ನಿರಂತರ ಹನ್ನೆರಡು ತಾಸಿನ ಯಕ್ಷೋಲ್ಲಾಸ ಸಮಾರಂಭವನ್ನು ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ಬಾರಾಡಿ ಬೀಡು ಸಂಜಯ್ ಬಲ್ಲಾಳ್ ಇವರು ಉದ್ಘಾಟಿಸಿದರು. ನಂತರ ನಡೆದ ಸಮಾರಂಭದಲ್ಲಿ ತೆಂಕುತಿಟ್ಟಿನ ಇಬ್ಬರು ಹಿರಿಯ ಕಲಾವಿದರಾದ ಬಿ.ಸಿ. ರೋಡು ಶಿವರಾಮ ಜೋಗಿಯವರಿಗೆ ‘ಬಾಯಾರು ಪ್ರಕಾಶ್ಚಂದ್ರ ರಾವ್ ಸಂಸ್ಮರಣಾ ಪ್ರಶಸ್ತಿ’, ಗುಂಡಿಮಜಲು ಗೋಪಾಲ ಭಟ್ಟರಿಗೆ ‘ಪುತ್ತೂರು ಶ್ರೀಧರ ಭಂಡಾರಿ ಸಂಸ್ಮರಣಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ನಿವೃತ್ತ ಅಧ್ಯಾಪಕ ಪಶುಪತಿ ಶಾಸ್ರೀಯವರು ಸಂಸ್ಮರಣೆ ಮತ್ತು ಅಭಿನಂದನಾ ಭಾಷಣ ಮಾಡಿದರು. ಪ್ರಧಾನ ಅತಿಥಿ ಕಾರ್ಕಳದ ಪ್ರೊ. ಕೃಷ್ಣ ಭಟ್ಟರು ಮಾತನಾಡಿ ಪುರಾತನ ಕಲೆಗಳೆಲ್ಲ ಇಂತಹ ಹಳ್ಳಿ ಪ್ರದೇಶದ ಸಂಘಟನೆಗಳಿಂದಲೇ ಉಳಿಯುವುದು, ಬೆಳೆಯುವುದು ಎಂದು ಹೇಳುತ್ತ ಸಂಸ್ಥೆಯ ಇಪ್ಪತ್ಮೂರು ವರ್ಷಗಳ ಯಕ್ಷಗಾನ ಚಟುವಟಿಕೆಗಳನ್ನು ಶ್ಲಾಘಿಸಿದರು. ನಿವೃತ್ತ ಅಧ್ಯಾಪಕ ವಿಠಲ ಶೆಟ್ಟಿ ಬೇಲಾಡಿಯವರು ಶುಭಾಶಂಸನೆ ಗೈದರು. ಕಾರ್ಕಳದ ಉದ್ಯಮಿ ವಿಜಯ ಶೆಟ್ಟಿ…
ಉಡುಪಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಮತ್ತು ರಥಬೀದಿ ಗೆಳೆಯರು (ರಿ.) ಉಡುಪಿ ಇದರ ವತಿಯಿಂದ ‘ನಿರಂಜನರ ನೂರರ ನೆನಪು’ ಕಾರ್ಯಕ್ರಮವನ್ನು ದಿನಾಂಕ 27 ಜುಲೈ 2025ರಂದು ಬೆಳಿಗ್ಗೆ 09-30 ಗಂಟೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಹಿರಿಯ ಸಾಹಿತಿ ಎಸ್.ಜಿ. ಸಿದ್ಧರಾಮಯ್ಯ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್.ಎನ್. ಮುಕುಂದ ರಾಜ್ ಇವರು ಅಧ್ಯಕ್ಷತೆ ವಹಿಸಲಿರುವರು. 11-45 ಗಂಟೆಗೆ ವಿಚಾರಗೋಷ್ಠಿ 01ರಲ್ಲಿ ‘ಪ್ರಗತಿಶೀಲ ಸಾಹಿತ್ಯದ ಹಿನ್ನೆಲೆಯಲ್ಲಿ ನಿರಂಜನರ ಬರಹಗಳು’ ಎಂಬ ವಿಷಯದ ಬಗ್ಗೆ ಹಿರಿಯ ಸಾಹಿತಿ ಡಾ. ಕೆ. ಕೇಶವ ಶರ್ಮ ಇವರು ವಿಚಾರ ಮಂಡನೆ ಹಾಗೂ ಬರಹಗಾರ ನವೀನ್ ಕುಮಾರ್ ಹಾಸನ ಇವರು ಪ್ರತಿ ಸ್ಪಂದನೆ ಮಾಡಲಿದ್ದಾರೆ. ಮಧ್ಯಾಹ್ನ 1-00 ಗಂಟೆಗೆ ನಡೆಯಲಿರುವ ವಿಚಾರಗೋಷ್ಠಿ 02ರಲ್ಲಿ ‘ನಿರಂಜನರ ಕಿರಿಯರ ವಿಶ್ವಕೋಶ ಮತ್ತು ವಿಶ್ವ ಕಥಾಕೋಶದ ಕಾಯಕ’ ಎಂಬ ವಿಷಯದ ಬಗ್ಗೆ…
ಇಳಕಲ್ : ಬೀದಿ ನಾಟಕ ಅಕಾಡೆಮಿ, ರಂಗ ಪರಿಮಳ ಹಾಗೂ ಸ್ನೇಹರಂಗದ ಸಹಯೋಗದಲ್ಲಿ ರಂಗಕರ್ಮಿ ಸಿ.ಜಿ. ಕೃಷ್ಣಸ್ವಾಮಿ (ಸಿ. ಜಿ. ಕೆ. ) ಸ್ಮರಣೆಯ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 22 ಜುಲೈ 2025ರಂದು ಇಳಕಲ್ ಇಲ್ಲಿನ ಸುವರ್ಣ ರಂಗಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ ಗುರುಮಹಾಂತ ಶ್ರೀಗಳು ಮಾತನಾಡಿ “ಮನರಂಜನೆಯೊಂದಿಗೆ ಮನಸ್ಸನ್ನು ಪ್ರಭಾವಿಸುವ ರಂಗಭೂಮಿಯು ಬದುಕಿನ ಕನ್ನಡಿಯಾಗಿದೆ. ಕಲೆಯ ಹಲವು ಸಾಧ್ಯತೆಗಳು ಇಲ್ಲಿ ಅನಾವರಣಗೊಳ್ಳುತ್ತವೆ. ಮೊಬೈಲ್, ಟಿವಿ ಹಾಗೂ ಸಿನಿಮಾದಿಂದಾಗಿ ರಂಗಭೂಮಿಯ ವೈಭವ ಸ್ವಲ್ಪ ಕಡಿಮೆಯಾಗಿದೆ. ಜೀವಂತ ಹಾಗೂ ವಾಸ್ತವವನ್ನು ಮಾತ್ರ ತೋರಿಸುವ ರಂಗಭೂಮಿಯಲ್ಲಿ ನೈಜ ಕಲಾವಂತಿಕೆ ಇರುತ್ತದೆ. ರಂಗಭೂಮಿ ಹಿನ್ನಲೆಯ ಸಿನೆಮಾ ನಟರು ಅಚ್ಚಳಿಯದ ಛಾಪು ಮೂಡಿಸಿದ್ದಾರೆ. ಪ್ರೇಕ್ಷಕರು ನಾಟಕ ನೋಡುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಬೇಕು” ಎಂದು ಹೇಳಿದರು. ಎಲೆ ಮರೆಯ ಕಾಯಿಯಂತಿದ್ದು ರಂಗಭೂಮಿಯಲ್ಲಿ ಸಾಧನೆ ಮಾಡಿದ ಹಿರಿಯ ಕಲಾವಿದೆ ಸುಗುಣಾತಾಯಿ ಸಪ್ಪಂಡಿ, ಬಿಬಿಜಾನ್ ಕಂದಗಲ್ಲ ಹಾಗೂ ತಬಲಾ ವಾದಕ ಅಮರೇಶ ಹಡಪದ ಇವರಿಗೆ ಸಿಜೆಕೆ ಪ್ರಶಸ್ತಿ…