Author: roovari

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಸಿಂಗಾರ ಸುರತ್ಕಲ್ ಮತ್ತು ಚೇಳ್ಯಾರು ಸರಕಾರಿ ಪದವಿ ಪೂರ್ವ ಕಾಲೇಜು ಇವುಗಳ ಸಹಭಾಗಿತ್ವದಲ್ಲಿ ‘ನಲ್ಮೆ ಬಲ್ಮೆ’ ವಿದ್ಯಾರ್ಥಿಗಳಿಗೆ ಮೂರು ದಿನಗಳ ರಂಗ ಕಾರ್ಯಾಗಾರವನ್ನು ದಿನಾಂಕ 24 ಸೆಪ್ಟೆಂಬರ್ 2025ರಿಂದ 26 ಸೆಪ್ಟೆಂಬರ್ 2025ರ ತನಕ ನಡೆಯಲಿದೆ. ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ ಗಟ್ಟಿಯವರ ಅಧ್ಯಕ್ಷತೆಯಲ್ಲಿ ಹಿರಿಯ ರಂಗ ನಟಿ ಗೀತಾ ಸುರತ್ಕಲ್ ಇವರು ಈ ಕಾರ್ಯಾಗಾರ ಉದ್ಘಾಟಿಸಲಿದ್ದಾರೆ. ಚೇಳ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಾನಂದ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವೆಂಕಟೇಶ್ ಶೆಟ್ಟಿ, ಸಮಿತಿಯ ಸದಸ್ಯ ಪುಷ್ಪರಾಜ್ ಶೆಟ್ಟಿ, ರಂಗ ನಿರ್ದೇಶಕ ಜಗನ್ ಪವಾರ್ ಬೇಕಲ್ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Read More

ಪುತ್ತೂರು: ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ, ಮಹಾವಿದ್ಯಾಲಯ(ಸ್ವಾಯತ್ತ) ಇಲ್ಲಿ ಸಂಸ್ಕೃತ ವಿಭಾಗ, ಸಂಸ್ಕೃತ ಸಂಘ, ವಿವೇಕಾನಂದ ಸಂಶೋಧನಾ ಕೇಂದ್ರ, ಸೌರಭ ಪ್ರಸಾರಾಂಗ ಹಾಗೂ ಐಕ್ಯೂಎಸಿಯ ಸಹಯೋಗದಲ್ಲಿ ನಡೆದ ಭಾರತೀಯ ಜೀವನ ದರ್ಶನ ಪ್ರವಚನ ಮಾಲಿಕೆಯ ಮೂರನೆಯ ಹಾಗೂ ನಾಲ್ಕನೆಯ ಸರಣಿ ಕಾರ್ಯಕ್ರಮ ದಿನಾಂಕ 19 ಸೆಪ್ಟೆಂಬರ್ 2025ರಂದು ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ವೇದಾಂತ ವಿಭಾಗದ ಸಹ ಪ್ರಾಧ್ಯಾಪಕ ಡಾ. ವಿಶ್ವನಾಥ ಹೆಗಡೆ ಸುಂಕಸಾಳ ಮಾತನಾಡಿ “ಭಾರತೀಯ ಎಲ್ಲಾ ಶಾಸ್ತ ಗ್ರಂಥಗಳಲ್ಲೂ ಮನಸ್ಸಿನ ಬಗ್ಗೆ ವಿಸ್ತಾರವಾದ ವಿಚಾರಗಳಿವೆ. ಈ ಶಾಸ್ತ್ರಗಳೆಲ್ಲವೂ ನಮ್ಮನ್ನು ನಾವು ತಿಳಿದುಕೊಳ್ಳುವುದಕ್ಕಾಗಿ ಇರುವುದಾಗಿದೆ. ಅಂದಿನ ಋಷಿಮುನಿಗಳು ಹಾಗೂ ವಿಜ್ಞಾನಿಗಳು ಒಂದೊಂದು ಅಧ್ಯಯನ ವಿಭಾಗವನ್ನು ಬೇರೆಬೇರೆಯಾಗಿ ಕಾಣದೇ ಒಂದಾಗಿ ಕಾಣುತ್ತಿದ್ದರು. ಹಾಗೆ ಇಂದಿನ ಆಧುನಿಕ ಸಿದ್ಧಾಂತಗಳಲ್ಲಿರುವ ವಿಷಯವನ್ನೂ ಒಳಗೊಂಡಂತೆ ಅದಕ್ಕೂ ಹೆಚ್ಚಿನ ವಿಷಯಗಳು ನಮ್ಮ ಕೃತಿಗಳಲ್ಲಿವೆ. ವಿದೇಶೀಯರೂ ನಮ್ಮಲ್ಲಿನ ಜ್ಞಾನವನ್ನು ಅವರು ಬಳಸುತ್ತಿರಬೇಕಾದರೆ ಭಾರತೀಯರಾದ ನಾವು ಈ ಶಾಸ್ತ್ರಗ್ರಂಥಗಳು, ಜ್ಞಾನ ಪರಂಪರೆ ಇತ್ಯಾದಿಗಳನ್ನು…

Read More

ಚನ್ನಗಿರಿ : ರಂಗ ಮಿಡಿತ (ರಿ.) ಗೊಪ್ಪೇನಹಳ್ಳಿ ಮತ್ತು ಚಂದಗಿರಿ ನರ್ಸರಿ ಶಾಲೆ ಚನ್ನಗಿರಿ ಆಯೋಜಿಸುತ್ತಿರುವ ‘ಗೊಂಬೆಗಳ ಜೊತೆಯಲಿ’ ಮಕ್ಕಳ ಕಲೆ, ಕಲ್ಪನೆ ಮತ್ತು ಕ್ರಿಯೆಗೊಂದು ಉತ್ಸವವನ್ನು ದಿನಾಂಕ 26 ಸೆಪ್ಟೆಂಬರ್ 2025ರಂದು ಮಧ್ಯಾಹ್ನ 1-30 ಗಂಟೆಗೆ ಚನ್ನಗಿರಿಯ ಚಂದಗಿರಿ ನರ್ಸರಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಅರುಣ ಬಿ.ಟಿ. ಗೊಪ್ಪೇನಹಳ್ಳಿಯವರ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮಕ್ಕಳ ಕಥೆ ಹಾಡುಗಳ ಗೊಂಬೆಯಾಟ, ಸೂತ್ರದ ಗೊಂಬೆ, ಕಡ್ಡಿ ಗೊಂಬೆ, ಬೆರಳು ಗೊಂಬೆ, ನೆರಳು ಗೊಂಬೆ ಇವುಗಳ ರೋಚಕ ಪರಿಚಯ, ಪೋಷಕರೊಂದಿಗೆ ಗೊಂಬೆ ತಯಾರಿ, ಮಕ್ಕಳಿಗೆ ಗೊಂಬೆಯಾಟ ಅನುಭವ. ಹೆಸರು ನೋಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ 9481986116 ಮತ್ತು 9448895493 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಬೆಂಗಳೂರು : ಡಾ. ವೇಮಗಲ್ ನಾರಾಯಣಸ್ವಾಮಿ ಸಾಂಸ್ಕೃತಿಕ ಮತ್ತು ಸೇವಾ ಪ್ರತಿಷ್ಠಾನ (ರಿ.) ಇದರ ವತಿಯಿಂದ ನಾಟಕ ಪ್ರದರ್ಶನವನ್ನು ದಿನಾಂಕ 23 ಸೆಪ್ಟೆಂಬರ್ 2025ರಂದು ಸಂಜೆ 3-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಹಿರಿಯ ರಂಗಕರ್ಮಿ ಸಿ. ಬಸವಲಿಂಗಯ್ಯ ಇವರು ಚಾಲನೆ ನೀಡಲಿದ್ದು, ದ್ರಾವಿಡ ವಿಶ್ವವಿದ್ಯಾಲಯದ ಡೀನ್ ಎಂ.ಎನ್. ವೆಂಕಟೇಶ್ ಇವರಿಂದ ಪ್ರಾಸ್ತಾವಿಕ ನುಡಿ ಹಾಗೂ ಕರ್ಣಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಪ್ರೊ. ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಗುಂಡೇಲು ರವೀಂದ್ರ, ವಿನಾಯಕ ನಾಟಕ ಮಂಡಳಿ, ಬೈರೆಡ್ಡಿ ಪಲ್ಲಿ, ಟಿ.ಎನ್. ಕುಪ್ಪಂ, ಚಿತ್ತೂರು ಜಿಲ್ಲೆ ಆಂಧ್ರಪ್ರದೇಶ ತಂಡದಿಂದ ‘ನಲ್ಲತಂಗ’ ಮತ್ತು ‘ಸಾಸುವೆ ಚಿನ್ನಮ್ಮ’ ಎಂಬ ಎರಡು ನಾಟಕಗಳ ಪ್ರದರ್ಶನ ನಡೆಯಲಿದೆ.

Read More

ಕಾಸರಗೋಡು : ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ – ಕಾಸರಗೋಡು ಕನ್ನಡ ಗ್ರಾಮೋತ್ಸವದ ಪೋಸ್ಟರ್ ದಿನಾಂಕ 21 ಸೆಪ್ಟೆಂಬರ್ 2024ರಂದು ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಇವರಿಂದ ಬಿಡುಗಡೆಗೊಂಡಿತು. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಕನ್ನಡ ಗ್ರಾಮ ಕಾಸರಗೋಡು ಇದರ 35ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಕಾಸರಗೋಡು ಕನ್ನಡ ಗ್ರಾಮದ ಸಂಸ್ಥಾಪಕ ಶಿವರಾಮ ಕಾಸರಗೋಡು 60ನೇ ವರ್ಷದ ಜನ್ಮದಿನಾಚರಣೆ ಮತ್ತು ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಡೆಯುವ ಕಾಸರಗೋಡು ಕನ್ನಡ ಗ್ರಾಮೋತ್ಸವ-2025 ಒಂದು ದಿನ ಕಾರ್ಯಕ್ರಮವು ಕಾಸರಗೋಡು ಕನ್ನಡ ಗ್ರಾಮದಲ್ಲಿ ದಿನಾಂಕ 04 ನವೆಂಬರ್ 2025ರಂದು ಬೆಳಗ್ಗೆ 11-00 ಗಂಟೆಗೆ ಕೇರಳ-ಕರ್ನಾಟಕ ಸಾಹಿತ್ಯ, ಸಾಂಸ್ಕೃತಿಕ ಉತ್ಸವದೊಂದಿಗೆ ಆಚರಿಸಲಾಗುವುದು. ಕಾಸರಗೋಡು ಕನ್ನಡ ಗ್ರಾಮದಲ್ಲಿ ಸೂರ್ಯೋದಯದಿಂದ ಸುಪ್ರಭಾತ ಗಾಯನದೊಂದಿಗೆ, ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಭುವನೇಶ್ವರಿಯ ಛಾಯಾಚಿತ್ರದ ಅನಾವರಣದೊಂದಿಗೆ ಕನ್ನಡಮ್ಮನ ಕನ್ನಡ ಗ್ರಾಮದಲ್ಲಿ ಶಿವರಾಮ ಕಾಸರಗೋಡು ಅವರ 60ನೇ ಜನ್ಮದಿನೋತ್ಸವ ಷಷ್ಟಬ್ಧಿ ಸಂಭ್ರಮದ, ಧಾರ್ಮಿಕ ಸಂಪ್ರದಾಯದ ಪೂಜೆ ಪುರಸ್ಕಾರದ…

Read More

ಬೇಳ : ಕೇರಳ ರಾಜ್ಯ- ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ದಿನಾಂಕ 20 ಸೆಪ್ಟೆಂಬರ್ 2025ರಂದು ಬೇಳ ಸಂತ ಬರ್ತಲೋಮೆಯ ಹಿರಿಯ ಬುನಾದಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಮಾರ್ಗದರ್ಶನ ಅಭಿಯಾನದ 6ನೇ ಶಿಬಿರ ನಡೆಯಿತು. ಈ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಬೇಳ ಸಂತ ಬರ್ತಲೋಮೆಯ ಹಿರಿಯ ಬುನಾದಿ ಶಾಲೆಯ ಸಂಚಾಲಕಿ ಸಿಸ್ಟರ್ ಮಾರ್ಸೆಲಿನ್ ಬ್ರಾಗ್ಸ್ “ಇಂದಿನ ವೇಗದ ಜಗತ್ತಿಗೆ ಚುಟುಕು ಸಾಹಿತ್ಯದ ಅಗತ್ಯ ಇದೆ. ಇಂತಹಾ ಶಿಬಿರಗಳಲ್ಲಿ ಮಕ್ಕಳು ಆಸಕ್ತಿಯಿಂದ ಭಾಗವಹಿಸಬೇಕು. ಕಾಸರಗೋಡಿನ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಈ ಅಭಿಯಾನ ಯೋಜನೆಯು ಶ್ಲಾಘನೀಯ” ಎಂದು ಹೇಳಿದರು. ಬೇಳ ಸಂತ ಬರ್ತಲೋಮೆಯ ಹಿರಿಯ ಬುನಾದಿ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಎಲಿಜಬೆತ್ ಪಿ.ಎ. ಅಧ್ಯಕ್ಷತೆ ವಹಿಸಿ ಮಾತನಾಡಿ “ಚುಟುಕದಂತಹಾ ಚಿಕ್ಕ ಚಿಕ್ಕ ಕವಿತೆಗಳನ್ನು ಬರೆದು ಮಕ್ಕಳು ಬೆಳೆಯಬೇಕು. ನಿರಂತರ ಬರವಣಿಗೆ ಮತ್ತು ಅಧ್ಯಯನದಿಂದ ಉತ್ತಮ ಬರಹಗಳನ್ನು ರಚಿಸಬಹುದು” ಎಂದು ಹೇಳಿದರು. ಕನ್ನಡ ಚುಟುಕು ಸಾಹಿತ್ಯ…

Read More

ಬೆಂಗಳೂರು : ಜಾಗೃತಿ ಟ್ರಸ್ಟ್ (ರಿ.) ಬೆಂಗಳೂರು ಇದರ ವತಿಯಿಂದ ಹಾಗೂ ಕನ್ನಡ ಮಟ್ಟಿ ಸಂಸ್ಕೃತಿ ಇಲಾಖೆ ಇವರ ಸಹಕಾರದೊಂದಿಗೆ ‘ನವದುರ್ಗಾ ವೈಭವ’ ಸಾಂಸ್ಕೃತಿಕ ಕಾರ್ಯಕ್ರಮ, ಕವಿಗೋಷ್ಠಿ ಮತ್ತು ಪ್ರಶಸ್ತಿ ವಿತರಣೆ ಸಮಾರಂಭವನ್ನು ದಿನಾಂಕ 26 ಸೆಪ್ಟೆಂಬರ್ 2025ರಂದು ಬೆಳಗ್ಗೆ 9-30 ಗಂಟೆಗೆ ಬೆಂಗಳೂರಿನ ಚಾಮರಾಜ ಪೇಟೆಯಲ್ಲಿರುವ ಅಕ್ಕಮಹಾದೇವಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 9-30 ಗಂಟೆಗೆ ಇಂಡಿಯನ್ ಪ್ರೈಮರಿ ಹಾಗೂ ಹೈಸ್ಕೂಲ್ ಮಕ್ಕಳಿಂದ ಭಕ್ತಿಗೀತೆ ಮತ್ತು ನವದುರ್ಗಾ ನೃತ್ಯ ಪ್ರದರ್ಶನಗೊಳ್ಳಲಿದ್ದು, ಕರ್ಣಾಟಕ ಗಡಿನಾಡು ಅಭಿವೃದ್ಧಿ ಪ್ರಾಧಿಕಾರ ಇದರ ಮಾಜಿ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಸಾಹಿತಿಗಳಾದ ಡಾ. ಕೆ.ಜಿ. ಲಕ್ಷ್ಮೀನಾರಾಯಣ್ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕರಿಗೆ ‘ಕಿತ್ತೂರು ರಾಣಿ ಚೆನ್ನಮ್ಮ ಸೇವಾರತ್ನ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.

Read More

ಮಡಿಕೇರಿ : ಅಲ್ಲಾರಂಡ ರಂಗಚಾವಡಿ ಮತ್ತು ಮಡಿಕೇರಿ ಕೊಡವ ಸಮಾಜದ ವತಿಯಿಂದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಯ 158ನೇ ಜನ್ಮ ದಿನವನ್ನು ದಿನಾಂಕ 21 ಸೆಪ್ಟೆಂಬರ್ 2025ರಂದು ಆಚರಿಸಲಾಗುತ್ತದೆಂದು ಚಾವಡಿಯ ಅಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಅಂದು ಬೆಳಿಗ್ಗೆ 10-30 ಗಂಟೆಗೆ ಕೊಡವ ಸಮಾಜದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಅಪ್ಪಚ್ಚ ಕವಿ ಕಲಾ ಭವನ ನಿರ್ಮಾಣ ಸಮಿತಿ ಅಧ್ಯಕ್ಷ ಅಪ್ಪನೆರವಂಡ ಮನೋಜ್ ಮಂದಪ್ಪ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಅಲ್ಲಾರಂಡ ರಂಗಚಾವಡಿ ಅಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ ಪಾಲ್ಗೊಳ್ಳಲಿದ್ದಾರೆ. ಸಾಕ್ಷ್ಯ ಚಿತ್ರ ಪ್ರದರ್ಶನ : ಕಾರ್ಯಕ್ರಮದಲ್ಲಿ ತನ್ನ ನಿರ್ದೇಶನ ಮತ್ತು ನಿರ್ಮಾಣದ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿಗೆ ಸಂಬಂಧಿಸಿದ ಸಾಕ್ಷ್ಯ ಚಿತ್ರದ ಪ್ರದರ್ಶನವನ್ನು ಏರ್ಪಡಿಸಲಾಗಿದೆಯೆಂದು ಅಲ್ಲಾರಂಡ ವಿರಲ ನಂಜಪ್ಪ ತಿಳಿಸಿದರು. ಸಾಕ್ಷ್ಯ ಚಿತ್ರ 30 ನಿಮಿಷದ್ದಾಗಿದ್ದು, ಪ್ರದರ್ಶನವನ್ನು ಕೊಡವ ಸಿನಿಮಾ ನಿರ್ಮಾಪಕಿ, ಸಹ ನಿರ್ದೇಶಕಿ…

Read More

ಯಕ್ಷಗಾನವು ಪುರಾಣ-ಇತಿಹಾಸಗಳ ಆಧಾರದ ಮೇಲೆ ನಿಂತಿರುವ ಭಾರತೀಯ ರಂಗವಿದ್ಯೆಯ ನವಚೇತನ. ತಾಳ, ಲಯ, ಭಾವ, ವಾಚಿಕ, ಗತಿಭಂಗಿ ಈ ಎಲ್ಲಾ ಅಂಶಗಳ ಸಮಗ್ರ ಸಮನ್ವಯವಾಗಿರುವ ಈ ಕಲೆ, ಕಲಾವಿದರ ವೈಯಕ್ತಿಕ ಶಿಸ್ತು ಮತ್ತು ಸಾಧನೆಯಿಂದಲೇ ಜೀವಂತವಾಗಿರುತ್ತದೆ. ಇಂತಹ ತಾಳ-ಲಯಗಳ ಸೌಂದರ್ಯದಲ್ಲಿ ತನ್ನದೇ ಆದ ಚಿಹ್ನೆ ಮೂಡಿಸಿದ ಕಲಾವಿದರಲ್ಲೊಬ್ಬರು ಬಾಯಾರು ರಮೇಶ ಭಟ್ಟ. ದೈವಿಕ ಪಾತ್ರಗಳ ಸೌಂದರ್ಯ : ಸ್ತ್ರೀಪಾತ್ರಗಳಲ್ಲಿ, ವಿಶೇಷವಾಗಿ ದೇವಿಯ ಪಾತ್ರದಲ್ಲಿ ಅವರು ತಂದುಕೊಟ್ಟ ಗೌರವ ಅತ್ಯಂತ ಶ್ರದ್ಧಾರ್ಹ. ದೇವಿ ಎಂದರೆ ಭಕ್ತಿ, ಗಂಭೀರತೆ, ದೈವಿಕ ಭಾವ. ‘ಮಾತೃರೂಪೇಣ ಸಂಸ್ಥಿತಾ, ಶಕ್ತಿ ಸ್ವರೂಪಿಣೀ’ ಎಂದು ದೇವಿಯನ್ನು ವರ್ಣಿಸುವ ಶ್ರುತಿವಾಕ್ಯದಂತೆಯೇ, ರಮೇಶ ಭಟ್ಟರು ದೇವಿಯ ಪಾತ್ರವನ್ನು ಭಕ್ತಿಯಾಧಾರಿತ ತಪೋಮೂರ್ತಿಯಂತೆ ನಿರ್ವಹಿಸಿದ್ದಾರೆ. ಅತಿರೇಕವಿಲ್ಲದ ಕುಣಿತ, ಮುಖಭಾವಗಳಲ್ಲಿ ಹೊಳೆಯುವ ಆಂತರಿಕ ಶಕ್ತಿ, ಪಾತ್ರಕ್ಕೆ ಹೊಂದುವ ಮಿತವಾದ ವಾಚಿಕಾಭಿನಯ ಇವುಗಳಿಂದ ಅವರ ದೇವಿಪಾತ್ರ ಯಕ್ಷಗಾನದ ದೈವಿಕತೆಯನ್ನು ನೆನೆಪಿಸುತ್ತಿದೆ. ಕಡಂದೇಲು ಪುರುಷೋತ್ತಮ ಭಟ್ಟರ ದಿವ್ಯ ಪರಂಪರೆಯ ನಂತರ, ದೇವಿಯ ಪಾತ್ರಕ್ಕೆ ಶ್ರದ್ಧೆಯ ಬೆಳಕು, ಪ್ರಸ್ತುತಿಯ ಲಾವಣ್ಯ, ಪರಮ…

Read More

ಸಿದ್ಧಕಟ್ಟೆ : ಯಕ್ಷಮಿತ್ರರು ಶ್ರೀ ಕ್ಷೇತ್ರ ಪೂಂಜ ಸಿದ್ಧಕಟ್ಟೆ ಇದರ ಆಶ್ರಯದಲ್ಲಿ 8ನೇ ವಾರ್ಷಿಕೋತ್ಸವ ಪ್ರಯುಕ್ತ ಸಿದ್ಧಕಟ್ಟೆ ಫಲ್ಗುಣಿ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ದಿನಾಂಕ 14 ಸೆಪ್ಟೆಂಬರ್ 2025ರಂದು ಬಣ್ಣದ ವೇಷದಾರಿ ದಿ. ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ಇವರ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಹಾಗೂ ತಾಳಮದ್ದಳೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಮರಣೆ ನಡೆಸಿ ಮಾತನಾಡಿದ ಹಿರಿಯ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ “ಸದಾಶಿವ ಶೆಟ್ಟಿಗಾರ್ ಇವರು ಯಕ್ಷಗಾನ ಕ್ಷೇತ್ರದಲ್ಲಿ ಮರೆಯಲಾಗದ ಮಹಾನ್ ದೈತ್ಯ ಪ್ರತಿಭೆ. ಬಣ್ಣದ ಮಾಲಿಂಗರ ಗರಡಿಯಲ್ಲಿ ಪಳಗಿದ ಅವರ ಬಣ್ಣಗಾರಿಕೆ, ಸ್ಪಷ್ಟ ಮಾತುಗಳಿಂದ ತನ್ನದೇ ಛಾಪನ್ನು ಮೂಡಿಸಿದ್ದರು. ಮುಂದಿನ ಜನಾಂಗ ಅವರ ಪರಂಪರೆಯನ್ನು ಉಳಿಸಬೇಕಾಗಿದೆ” ಎಂದು ಹೇಳಿದರು. ಶ್ರೀ ಕ್ಷೇತ್ರ ಪೂಂಜ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಸುದರ್ಶನ್ ಶೆಟ್ಟಿ ಹಕ್ಕೇರಿ ಕಾರ್ಯಕ್ರಮ ಉದ್ಘಾಟಿಸಿದರು. ಸಿದ್ಧಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಕರಿಂಕಿಜೆ ಅಧ್ಯಕ್ಷತೆ ವಹಿಸಿದ್ದರು. ಹವ್ಯಾಸಿ ಯಕ್ಷಗಾನ ಕಲಾವಿದ ರಮೇಶ್ ಶೆಟ್ಟಿ ಪೆರಿಂಜೆ…

Read More