Author: roovari

ಬೆಂಗಳೂರು : ಹಿರಿಯ ಕಥೆಗಾರ ಡಾ. ರಾಜಶೇಖರ ನೀರಮನ್ವಿಯವರು ದಿನಾಂಕ 08 ಆಗಸ್ಟ್ 2024ರಂದು ನಿಧನರಾದರು ಅವರಿಗೆ 83ನೆಯ ವಯಸ್ಸಾಗಿತ್ತು. ನೀರಮಾನ್ವಿಯರು ಬರೆದಿದ್ದು ಕಡಿಮೆಯಾದರೂ ಅದರ ಗುಣಮಟ್ಟ ಬಹಳ ಹೆಚ್ಚಿನದು. ಅವರ ‘ಹಂಗಿನರಮನೆಯೊಳಗೆ’ ಮತ್ತು ‘ಕರ್ಪೂರದ ಕಾಯಕದಲ್ಲಿ’ ಸಂಕಲನದ ಕಥಾ ಸಂಕಲನದ ಕಥೆಗಳನ್ನು ಕನ್ನಡಿಗರು ಸದಾ ಸ್ಮರಿಸುತ್ತಾರೆ. ರಾಯಚೂರು ಜಿಲ್ಲೆಯ ನೀರಮಾನ್ವಿಯಲ್ಲಿ ಜನಿಸಿದ ರಾಜಶೇಖರ ನೀರಮಾನ್ವಿಯವರು ಮೂಲತ: ಭೂವಿಜ್ಞಾನದ ವಿದ್ಯಾರ್ಥಿ. ಈ ಕ್ಷೇತ್ರದಲ್ಲಿ ಕೂಡ ಅವರ ಸಾದನೆ ಮಹತ್ವದ್ದು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಭೂ ವಿಜ್ಞಾನದಲ್ಲಿ ಸ್ನಾತಕೊತ್ತರ ಪದವಿಯನ್ನು ಹಾಗೂ ‘ಆರ್ಥಿಕ ಭೂವಿಜ್ಞಾನ’ ವಿಷಯದಲ್ಲಿ ಡಾಕ್ಟರೇಟ್ ಪಡೆದಿದ್ದ ಇವರು ನೀರಮಾನ್ವಿ ಮತ್ತು ಬಳ್ಳಾರಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ‘ಪ್ರತೀಕ’ ಎಂಬ ಸಾಹಿತ್ಯ ಪತ್ರಿಕೆಯನ್ನೂ ಕೂಡ ಹೊರ ತಂದಿದ್ದು, ಉತ್ತರ ಕರ್ನಾಟಕದ ಅದರಲ್ಲಿಯೂ ಮುಖ್ಯವಾಗಿ ರಾಯಚೂರು ಜಿಲ್ಲೆಯ ಬರಹಗಾರರನ್ನು ಪ್ರೋತ್ಸಾಹಿಸಿದ್ದರು.

Read More

ಸುರತ್ಕಲ್ : ಪರಮಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಧರ್ಮಾಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಇವರ ಶುಭಾಶೀರ್ವಾದದೊಂದಿಗೆ ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಇದರ ವತಿಯಿಂದ ಸುರತ್ಕಲ್ ನಾಗರಿಕ ಸಲಹಾ ಸಮಿತಿ ಸಂಸ್ಥೆಯ ಸಹಕಾರದೊಂದಿಗೆ ಶ್ರೀ ವಿಶ್ವೇಶತೀರ್ಥ ಸಭಾಂಗಣದ ಉದ್ಘಾಟನಾ ಸಮಾರಂಭ ಮತ್ತು ‘ಮಂಜುನಾದ’ ಯೋಜನೆಗೆ ಎರಡು ವರ್ಷಗಳಾಗುತ್ತಿರುವ ಸಂಭ್ರಮದ ಪ್ರಯುಕ್ತ ‘ಸಂಗೀತ ಕಛೇರಿ’ಯು ದಿನಾಂಕ 14-08-2024ರಂದು ಸಂಜೆ ಗಂಟೆ 5-00ಕ್ಕೆ ಸುರತ್ಕಲ್ಲಿನ ಅನುಪಲ್ಲವಿಯಲ್ಲಿ ನಡೆಯಲಿದೆ. ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಗೌರವಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇವರ ಗೌರವ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿವನ ಟ್ರಸ್ಟಿನ ಕಾರ್ಯದರ್ಶಿ ಶ್ರೀ ಬಿ. ಸೀತಾರಾಮ ತೋಳ್ಪಡಿತ್ತಾಯ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿರುವರು. ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ಕೃತಿಗಳ ರಚನೆ, ರಾಗ ಸಂಯೋಜನೆ ಹಾಗೂ ಸಂಗೀತ ಕಚೇರಿಯಲ್ಲಿ ಕಾರ್ಕಳದ ಆತ್ರೇಯೀ ಕೃಷ್ಣ ಇವರ ಹಾಡುಗಾರಿಕೆಗೆ ಕಾರ್ಕಳದ ಮಹಾತೀ ಕೆ. ವಯಲಿನ್, ಮೈಸೂರಿನ ನಂದನ್ ಕಶ್ಯಪ್ ಮೃದಂಗ ಮತ್ತು ಇನ್ನಂಜೆ…

Read More

ತೆಕ್ಕಟ್ಟೆ: ದಿಮ್ಸಾಲ್ ಫಿಲ್ಮ್ಸ್ ಹಾಗೂ ಧಮನಿ ಟ್ರಸ್ಟ್ ಸಹಕಾರದೊಂದಿಗೆ ‘ಸಿನ್ಸ್ 1999 ಶ್ವೇತಯಾನ-49’ರ ಕಾರ್ಯಕ್ರಮ ಗೋಪಾಡಿಯ ಗ್ರಾಮಸ್ಥರ ನೆರವಿನಿಂದ 7 ಆಗಸ್ಟ್ 2024ರಂದು ಗೋಪಾಡಿಯ ಕಾಂತೇಶ್ವರ ದೇಗುಲದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಯಕ್ಷಗಾನ ಕಲಾವಿದರಾದ ಗೋಪಾಡಿ ಶ್ರೀಪತಿ ಉಪಾಧ್ಯ “ಸಂಸ್ಥೆಯ ಬೆಳ್ಳಿ ಹಬ್ಬದ ಸಲುವಾಗಿ ಹಮ್ಮಿಕೊಂಡ ಶ್ವೇತಯಾನದ 108 ಕಾರ್ಯಕ್ರಮಗಳ ಸಂಕಲ್ಪದ 49ನೇ ಕಾರ್ಯಕ್ರಮವನ್ನು ಗೋಪಾಡಿಯಲ್ಲಿ ಮಿತ್ರರನ್ನೊಡಗೂಡಿಕೊಂಡು ಆಯೋಜಿಸಿದ್ದೇವೆ. ಶರವೇಗದಲ್ಲಿ ಕಾರ್ಯಕ್ರಮ ಸಂಯೋಜಿಸುವ ಮೂಲಕ ಯಶಸ್ವಿ ಕಲಾವೃಂದ ಈಗಾಗಲೇ ಗೆದ್ದಿದೆ. ಒಂದೆರಡು ಕಾರ್ಯಕ್ರಮ ಆಯೋಜನೆ ಮಾಡುವುದೇ ಬಹಳ ಕಷ್ಟ. ಇಂತಹ ಸಂದರ್ಭದಲ್ಲಿ ಕಿಂಚಿತ್ ಮೊತ್ತವನ್ನು ಪಡೆದು ಅದ್ದೂರಿಯ ಕಾರ್ಯಕ್ರಮ ಕೊಟ್ಟು ನಿರ್ಗಮಿಸುವ ಸಂಸ್ಥೆಯನ್ನು ಮೆಚ್ಚಲೇ ಬೇಕು. ಅಸಾಮಾನ್ಯ ಯಕ್ಷ ಕಲೆಯನ್ನು ಮಕ್ಕಳು ಹಾಗೂ ಅತಿಥಿ ಕಲಾವಿದರನ್ನು ಕೂಡಿಕೊಂಡು ಪ್ರಾಯೋಜಕರ ಪರಿಸರದಲ್ಲೇ ಆಯೋಜಿಸಿ ಸಂಸ್ಥೆ ಸಮಾಜ ಸ್ನೇಹಿಯಾಗಿದೆ. ಇಂತಹ ಕಲೆಯನ್ನು ಹಾಗೂ ಸಂಸ್ಥೆಯನ್ನು ನಮ್ಮಂತಹ ಕಲಾಸಕ್ತರು ಪ್ರೋತ್ಸಾಹಿಸಲೇಬೇಕಾದದ್ದು ಪ್ರಜ್ಞಾವಂತ ಕಲಾಭಿಮಾನಿಗಳ ಕರ್ತವ್ಯ.” ಎಂದರು.  ಐರೋಡಿ ಆರ್. ರವಿರಾಜ್ ಮಾತನಾಡಿ “ಮಕ್ಕಳನ್ನು…

Read More

ವಿಜಯಪುರ : ಬೆಂಗಳೂರಿನ ಶ್ರೀ ವಾಗ್ದೇವಿ ಗಮಕ ಕಲಾ ಪ್ರತಿಷ್ಠಾನ ವತಿಯಿಂದ ಗಮಕ ಕ್ಷೇತ್ರದ ಸಾಧಕರಿಗೆ ಕೊಡಮಾಡುವ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವು 21 ಜುಲೈ 2024ರಂದು ಬೆಂಗಳೂರಿನ ರಾಜಾಜಿನಗರದಲ್ಲಿರುವ ಕುಮಾರವ್ಯಾಸ ಮಂಟಪದಲ್ಲಿ ನಡೆಯಿತು. ಪ್ರತಿಷ್ಠಾನದ ಅಧ್ಯಕ್ಷರಾದ  ಶ್ರೀ ಕೆ. ಪಿ. ಪುತ್ತುರಾಯ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿದ್ವಾನ್ ಕಬ್ಬಿನಾಲೆ ವಸಂತ ಭಾರಧ್ವಾಜ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಕುಮಾರವ್ಯಾಸ ಪ್ರಶಸ್ತಿ ವಿಜೇತ ಹಾಗೂ ಕನ್ನಡ ಸಹೃದಯ ಪ್ರತಿಷ್ಠಾನದ ಶ್ರೀಮತಿ ಕಮಲಮ್ಮ ವಿಠ್ಠಲರಾವ್, ಕುಮಾರವ್ಯಾಸ ಮಂಟಪದ ಉಪಾಧ್ಯಕ್ಷ ಶ್ರೀ ವೆಂಕಟೇಶ್ವರಲು ನಾಯಡು, ಈ ಸಾಲಿನ ‘ಯುವ ಪ್ರಶಸ್ತಿ’ಗೆ ಆಯ್ಕೆಯಾದ ಗಮಕಿ ಕುಮಾರಿ ಆಶ್ರಿತಾ ಎಸ್. ಬೆಂಗಳೂರು, ‘ಉತ್ತಮ ಗಮಕ ಶಿಕ್ಷಕಿ ಪ್ರಶಸ್ತಿ’ಗೆ ಆಯ್ಕೆಯಾದ ಬೇಲೂರಿನ ನವರತ್ನಾ ಎಸ್. ವಟಿ ಹಾಗೂ ‘ಶ್ರೀ ವಾಗ್ದೇವಿ ಪ್ರಶಸ್ತಿ’ಗೆ ಆಯ್ಕೆಯಾದ  ವಿಜಯಪುರದ  ಶ್ರೀ ಕಲ್ಯಾಣರಾವ್ ದೇಶಪಾಂಡೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ವಿದ್ವಾನ್ ಕಬ್ಬಿನಾಲೆ ವಸಂತ್ ಭಾರಧ್ವಾಜ್ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ…

Read More

ಕೋಟ : ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ, ಡಾ. ಶಿವರಾಮ ಕಾರಂತ ಪ್ರತಿಷ್ಠಾನ(ರಿ.) ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಕುಂದಾಪ್ರ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಹಾಗೂ ಯು-ಚಾನೆಲ್ ಆಶ್ರಯದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಅಂಗವಾಗಿ ಕುಂದಾಪ್ರ ಕನ್ನಡ ಉತ್ಸಾವ ‘ಹೊಸ ಹೂಂಗು ಕೋಲೆ…’ ಕಾರ್ಯಕ್ರಮವು 04 ಆಗಸ್ಟ್ 2024ರಂದು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕಿನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಗತಿಪರ ಕೃಷಿಕ ಶ್ರೀ ಜಯರಾಮ್ ಶೆಟ್ಟಿ ಮಾತನಾಡಿ “ಕುಂದಾಪ್ರ ಭಾಷೆ ಕೇವಲ ಮಾತನಾಡುವ ಭಾಷೆಯಾಗಿ ಉಳಿಯದೇ ಜನರ ಭಾವನೆಯ ನಾಡಿಮಿಡಿತವಾಗಿದೆ. ಯಾವುದೇ ಸಂದರ್ಭದಲ್ಲಿ ಹಿಂಜರಿಕೆ ಪಡೆಯದೇ ಕುಂದಾಪ್ರ ಭಾಷೆಯನ್ನು ಬಳಸಬೇಕು. ಇಲ್ಲಿನ ಸಂಸ್ಕೃತಿಯ ವೈವಿಧ್ಯತೆಯ ಅನಾವರಣಕ್ಕೆ ವಿಶ್ವ ಕುಂದಾಪ್ರ ದಿನಚರಣೆ ಸಾಕ್ಷಿಯಾಗುತ್ತಿರುವುದು ಸಂತಸದ ವಿಷಯ.” ಎಂದು ಹೇಳಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಕೆ. ಸತೀಶ್ ಕುಂದರ್, ಸಾಂಸ್ಕೃತಿಕ ಚಿಂತಕ ಶ್ರೀ ಪ್ರದೀಪ್ ಬಸ್ರೂರು, ಚಿತ್ರಕಲಾ…

Read More

ಬೆಂಗಳೂರು : ಬುಕ್ ಬ್ರಹ್ಮ ಸಂಸ್ಥೆಯು ಕೋರಮಂಗಲದ ಸೈಂಟ್ ಜಾನ್ಸ್ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ’ಕ್ಕೆ ದಿನಾಂಕ 09 ಆಗಸ್ಟ್ 2024ರಂದು ಚಾಲನೆ ದೊರೆಯಲಿದೆ. ಕನ್ನಡದ ಸಾಹಿತಿಗಳೊಂದಿಗೆ ಹೊರ ರಾಜ್ಯಗಳು ಹಾಗೂ ವಿದೇಶಿ ಬರಹಗಾರರೂ ಈ ಸಾಹಿತ್ಯ ಹಬ್ಬದಲ್ಲಿ ಪಾಲ್ಗೊಳ್ಳಲಿದ್ದಾರೆ. ದಿನಾಂಕ 09 ಆಗಸ್ಟ್ 2024ರಿಂದ 11 ಆಗಸ್ಟ್ 2024ರವರೆಗೆ ಮೂರೂ ದಿನ ಬೆಳಿಗ್ಗೆ 9-00ರಿಂದ ರಾತ್ರಿ 8-00 ಗಂಟೆಯವರೆಗೆ ಕಾರ್ಯಕ್ರಮಗಳು ನಡೆಯಲಿವೆ. ಸಾಹಿತ್ಯ ಗೋಷ್ಠಿಗಳ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ. 300 ಬರಹಗಾರರು ಈ ಉತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ, ಮಾತ್ರವಲ್ಲದೆ, ಕೆಲ ವಿದೇಶಿ ಬರಹಗಾರರು ಭಾಗವಹಿಸುತ್ತಾರೆ. ಕನ್ನಡ, ತಮಿಳು, ಮಲಯಾಳಂ, ತೆಲುಗು ಮತ್ತು ಇಂಗ್ಲೀಷ್ ಭಾಷೆಯ 50ಕ್ಕೂ ಅಧಿಕ ಪುಸ್ತಕ ಮಳಿಗೆಗಳು ಉತ್ಸವದಲ್ಲಿ ಇರಲಿವೆ. ದಕ್ಷಿಣದ ಐದು ರಾಜ್ಯಗಳಿಂದ ನೂರಕ್ಕೂ ಅಧಿಕ ಪ್ರಕಾಶಕರು ಭಾಗವಹಿಸಲಿದ್ದು, ಉತ್ಸವದಲ್ಲಿ ಪ್ರಕಾಶಕರ ಸಮಾವೇಶವೂ ನಡೆಯಲಿದೆ. ಇದೇ ಸಂದರ್ಭದಲ್ಲಿ ಭಾರತೀಯ ಭಾಷೆಗಳಲ್ಲಿ ಸಾಹಿತ್ಯ ಸೃಷ್ಟಿಸಿ, ಮಹತ್ವದ ಕೊಡುಗೆ ನೀಡಿದ ಸಾಹಿತಿಗಳಿಗೆ…

Read More

ಬೆಂಗಳೂರು : ನಟನ ರಂಗಶಾಲೆಯ ವತಿಯಿಂದ ದಿನಾಂಕ 09 ಆಗಸ್ಟ್ 2024, 15 ಆಗಸ್ಟ್ 2024 ಮತ್ತು 22 ಆಗಸ್ಟ್ 2024ರಂದು ಪ್ರತಿದಿನ ಸಂಜೆ 6-30 ಗಂಟೆಗೆ ಬೆಂಗಳೂರಿನಲ್ಲಿ ನಟನದ ನಾಟಕ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದೆ. ದಿನಾಂಕ 09 ಆಗಸ್ಟ್ 2024ರಂದು ಕೋರಮಂಗಲದ ಸೈಂಟ್ ಜಾನ್ಸ್ ಆಡಿಟೋರಿಯಂನಲ್ಲಿ ಡಾ. ಶ್ರೀಪಾದ ಭಟ್ ಇವರ ನಿರ್ದೇಶನದಲ್ಲಿ ಬುಕ್ ಬ್ರಹ್ಮ ಲಿಟ್ ಫೆಸ್ಟ್ 2024 ಸಲುವಾಗಿ ಆಯೋಜಿಸಿರುವ ‘ಕನ್ನಡ ಕಾವ್ಯ ಕಣಜ’ ನಾಟಕ, ದಿನಾಂಕ 15 ಆಗಸ್ಟ್ 2024ರಂದು ಜಯನಗರದ ಸರದೇವ ಕಣ್ಣಿನ ಆಸ್ಪತ್ರೆಯ ಕಲಾ ಕಾಂಪೌಂಡ್ ಇಲ್ಲಿ ಡಾ. ಶ್ರೀಪಾದ ಭಟ್ ಇವರ ನಿರ್ದೇಶನದಲ್ಲಿ ಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿರುವ ‘ಕಣಿವೆಯ ಹಾಡು’ ನಾಟಕ ಮತ್ತು ದಿನಾಂಕ 22 ಆಗಸ್ಟ್ 2024ರಂದು ಮಲ್ಲತ್ತಳ್ಳಿ ಕಲಾ ಗ್ರಾಮದಲ್ಲಿ ಮಂಡ್ಯ ರಮೇಶ್ ಇವರ ನಿರ್ದೇಶನದಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ವತಿಯಿಂದ ಆಯೋಜಿಸಿರುವ ‘ಸ್ಥಾವರವೂ ಜಂಗಮ’ ನಾಟಕಗಳು ಪ್ರದರ್ಶನಗೊಳ್ಳಲಿದೆ.

Read More

ಬೆಂಗಳೂರು : ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ (ರಿ.) ಬೆಂಗಳೂರು ಇದರ ವತಿಯಿಂದ ಬೆಂಗಳೂರಿನ ಕೆ.ಆರ್. ರೋಡ್, ಗಾಯನ ಸಮಾಜದ ಸಭಾಂಗಣದಲ್ಲಿ ದಿನಾಂಕ 03 ಆಗಸ್ಟ್ 2024ರಂದು ‘ಆಚಾರ್ಯರ ಜನ್ಮಾರಾಧನೆ 88’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ವಾಂಸ ಪ್ರೊ. ಪಾದೇಕಲ್ಲು ವಿಷ್ಣು ಭಟ್ಟ ಇವರು ಮಾತನಾಡಿ “ಯಾವುದೇ ವಿಷಯವಾಗಲಿ ಸತ್ಯವಾಗಿ ಕಂಡದ್ದನ್ನು ಯಾರ ಮುಲಾಜು ಇಲ್ಲದೇ ಹೇಳುವಂತಹ ಗುಣವನ್ನು ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರು ರೂಢಿಸಿಕೊಂಡಿದ್ದರು. ಗೋವಿಂದಾಚಾರ್ಯರು ಉದಯವಾಣಿ ಪತ್ರಿಕೆಯಲ್ಲಿ ಬರೆಯುತ್ತಿದ್ದ ‘ಕಿಷ್ಕಂದ ಕಾಂಡ’ ಎಂಬ ಅಂಕಣವನ್ನು ನಾನು ಪ್ರೌಢಶಾಲೆಯಲ್ಲಿ ಇದ್ದಾಗ ಮಕ್ಕಳೆಲ್ಲಾ ಅತ್ಯಂತ ಕುತೂಹಲದಿಂದ ಓದುತ್ತಿದ್ದೆವು. ಸರಳವಾಗಿ, ಸ್ಪಷ್ಟವಾಗಿ ಮಕ್ಕಳಿಗೂ ಅರ್ಥವಾಗುವ ರೀತಿಯಲ್ಲಿ ಬರೆಯುತ್ತಿದ್ದರು. ಜತೆಗೆ ಯಾವುದೇ ವಿಶೇಷ ದಿನ ಅಥವಾ ಹಬ್ಬಗಳ ಸಂದರ್ಭದಲ್ಲಿ ವಿಶೇಷಗಳ ಲೇಖನಗಳು ಅವರಲ್ಲಿ ಸದಾ ಸಿದ್ಧವಾಗಿರುತ್ತಿದ್ದವು. ಬನ್ನಂಜೆಯವರು 44 ವರ್ಷಗಳ ಕಾಲ ಈ ಉತ್ಸವದಲ್ಲಿ ಉಪನ್ಯಾಸ ಮಾಡಿದ್ದಾರೆ. ರಾಮಾಯಣ, ಮಹಾಭಾರತ ಅವರಿಗೆ ಕಂಠಸ್ಥವಾಗಿತ್ತು. ಅವರು ಸಾಂಪ್ರದಾಯಿಕರನ್ನು ಹಾಗೂ ಆಧುನೀಕತೆಯರನ್ನೂ ಟೀಕಿಸುತ್ತಿದ್ದರು. ಆದರೂ ಇವರಿಬ್ಬರಿಗೂ…

Read More

ಮಂಗಳೂರು : ಯಕ್ಷಗಾನ ಕಲಾವಿದ ರಕ್ಷಿತ್ ಶೆಟ್ಟಿ ಪಡ್ರೆ ಇವರ ಶಿಷ್ಯವೃಂದದ ಯಕ್ಷ ಸಿದ್ದಿ ಸಂಭ್ರಮದ ಪ್ರಯುಕ್ತ ಸಿದ್ಧಿ ದಶಯಾನ ಕಾರ್ಯಕ್ರಮವು ದಿನಾಂಕ 10 ಆಗಸ್ಟ್ 2024 ಮತ್ತು 11 ಆಗಸ್ಟ್ 2024ರಂದು ಮಂಗಳೂರಿನ ಉರ್ವಸ್ಟೋರ್ ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ಆಯೋಜಿಸಲಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ತರಗತಿ ನಡೆಸುತ್ತಿರುವ ರಕ್ಷಿತ್ ಶೆಟ್ಟಿ ಪಡ್ರೆಯವರ ಯಕ್ಷ ಶಿಕ್ಷಣ ಕಾರ್ಯಕ್ಕೆ ಹತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ ದಶಮಾನೋತ್ಸವ ಅಂಗವಾಗಿ ವಿವಿಧೆಡೆಯ ಶಿಷ್ಯವೃಂದ ಒಗ್ಗೂಡಿಸಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಒಂದೇ ವೇದಿಕೆಯಲ್ಲಿ 300ಕ್ಕೂ ಅಧಿಕ ಶಿಷ್ಯರು ಭಾಗವಹಿಸಲಿದ್ದಾರೆ. ದಿನಾಂಕ 10 ಆಗಸ್ಟ್ 2024ರಂದು ಬೆಳಗ್ಗೆ 9-00 ಗಂಟೆಗೆ ಚೌಕಿಪೂಜೆ, ಪೂರ್ವರಂಗ ನಡೆಯಲಿದೆ. ಬೆಳಗ್ಗೆ 10-00 ಗಂಟೆಗೆ ಯಕ್ಷಗಾನ ವಿದ್ವಾಂಸ ಶ್ರೀ ವಾಸುದೇವ ರಂಗಾ ಭಟ್ಟ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅಧ್ಯಕ್ಷತೆ ವಹಿಸುವರು. ಬೆಳಗ್ಗೆ 10.30ರಿಂದ ‘ದೇವಸೇನಾನಿ’, ‘ಪಾವನ ಪಕ್ಷಿ’, ‘ದಾಶರಥಿ ದರ್ಶನ’, ಧರ್ಮ ದಂಡನೆ’ ಎಂಬ ಪ್ರಸಂಗದ ಯಕ್ಷಗಾನ…

Read More

ಧಾರವಾಡ : ಸಾಹಿತ್ಯ ಗಂಗಾ ಧಾರವಾಡ ಸಂಸ್ಥೆಯು ಕನ್ನಡದ ಕೆಲವು ಉತ್ಸಾಹಿ ಪ್ರಕಾಶಕರ ನೆರವಿನೊಂದಿಗೆ ಕನ್ನಡದಲ್ಲಿ ಜನಪ್ರಿಯ ವೈಜ್ಞಾನಿಕ ಕೃತಿಗಳನ್ನು ಬರೆಯಬಲ್ಲ ಉದಯೋನ್ಮುಖ ಬರಹಗಾರರ ಕೃತಿಗಳನ್ನು ಪ್ರಕಟಿಸುವ ಯೋಜನೆ ಹಾಕಿಕೊಂಡಿದೆ. ವಿಜ್ಞಾನದಲ್ಲಿ ಪದವಿ ಪಡೆದ ಮತ್ತು ಇತ್ತೀಚೆಗೆ ಬರೆಯಲಾರಂಭಿಸಿರುವ ಯುವ ಮತ್ತು ಮಧ್ಯವಯಸ್ಕ ಬರಹಗಾರರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಆಯ್ಕೆಯಾದ ಪುಸ್ತಕಗಳು 2025ರ ಆರಂಭದಲ್ಲಿ ಪ್ರಕಟವಾಗಲಿವೆ. ನಿಯಮಗಳು : 1) ವಿಜ್ಞಾನದ ಯಾವುದೇ ಪ್ರಕಾರದಲ್ಲಿ ಲೇಖನ, ಪ್ರಬಂಧ ಮತ್ತು ಕಥೆಗಳನ್ನು ಬರೆಯಬಹುದು. 2) ಬರಹಗಳು ಸಾಮಾನ್ಯ ಓದುಗರಿಗೆ ಅರ್ಥವಾಗುವಂತೆ ಸರಳ ಮತ್ತು ಜನಪ್ರಿಯ ಶೈಲಿಯಲ್ಲಿರಬೇಕು. 3) ಸ್ವತಂತ್ರ, ಅನುವಾದ, ಅನುಸೃಷ್ಟಿ ಮತ್ತು ರೂಪಾಂತರ ಮಾಡಿದ ಗುಣಮಟ್ಟದ ಲೇಖನಗಳಿಗೂ ಅವಕಾಶವಿದೆ. 4) ಕೃತಿಯಲ್ಲಿ ಕನಿಷ್ಠ 20 ಲೇಖನಗಳು, ಗರಿಷ್ಠ 30 ಲೇಖನಗಳಿರಬೇಕು. 5) ಕೃತಿಯಲ್ಲಿ ಕನಿಷ್ಠ 25000, ಗರಿಷ್ಠ 35000 ಪದಗಳಿರಬೇಕು. 6) ತಪ್ಪಿಲ್ಲದಂತೆ ಟೈಪಿಸಿದ ಸಾಫ್ಟ್ ಕಾಪಿಯನ್ನು ಕಳಿಸಬೇಕು. ಕೈ ಬರಹದ ಹಸ್ತಪ್ರತಿ ಸ್ವೀಕರಿಸಲಾಗುವುದಿಲ್ಲ. 7) ಒಬ್ಬ ಬರಹಗಾರರು ಒಂದು ಕೃತಿಯನ್ನು…

Read More