Author: roovari

ಧಾರವಾಡ : ಸಾಹಿತ್ಯ ಗಂಗಾ ಧಾರವಾಡ ಸಂಸ್ಥೆಯು ಕನ್ನಡದ ಕೆಲವು ಉತ್ಸಾಹಿ ಪ್ರಕಾಶಕರ ನೆರವಿನೊಂದಿಗೆ ಕನ್ನಡದಲ್ಲಿ ಜನಪ್ರಿಯ ವೈಜ್ಞಾನಿಕ ಕೃತಿಗಳನ್ನು ಬರೆಯಬಲ್ಲ ಉದಯೋನ್ಮುಖ ಬರಹಗಾರರ ಕೃತಿಗಳನ್ನು ಪ್ರಕಟಿಸುವ ಯೋಜನೆ ಹಾಕಿಕೊಂಡಿದೆ. ವಿಜ್ಞಾನದಲ್ಲಿ ಪದವಿ ಪಡೆದ ಮತ್ತು ಇತ್ತೀಚೆಗೆ ಬರೆಯಲಾರಂಭಿಸಿರುವ ಯುವ ಮತ್ತು ಮಧ್ಯವಯಸ್ಕ ಬರಹಗಾರರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಆಯ್ಕೆಯಾದ ಪುಸ್ತಕಗಳು 2025ರ ಆರಂಭದಲ್ಲಿ ಪ್ರಕಟವಾಗಲಿವೆ. ನಿಯಮಗಳು : 1) ವಿಜ್ಞಾನದ ಯಾವುದೇ ಪ್ರಕಾರದಲ್ಲಿ ಲೇಖನ, ಪ್ರಬಂಧ ಮತ್ತು ಕಥೆಗಳನ್ನು ಬರೆಯಬಹುದು. 2) ಬರಹಗಳು ಸಾಮಾನ್ಯ ಓದುಗರಿಗೆ ಅರ್ಥವಾಗುವಂತೆ ಸರಳ ಮತ್ತು ಜನಪ್ರಿಯ ಶೈಲಿಯಲ್ಲಿರಬೇಕು. 3) ಸ್ವತಂತ್ರ, ಅನುವಾದ, ಅನುಸೃಷ್ಟಿ ಮತ್ತು ರೂಪಾಂತರ ಮಾಡಿದ ಗುಣಮಟ್ಟದ ಲೇಖನಗಳಿಗೂ ಅವಕಾಶವಿದೆ. 4) ಕೃತಿಯಲ್ಲಿ ಕನಿಷ್ಠ 20 ಲೇಖನಗಳು, ಗರಿಷ್ಠ 30 ಲೇಖನಗಳಿರಬೇಕು. 5) ಕೃತಿಯಲ್ಲಿ ಕನಿಷ್ಠ 25000, ಗರಿಷ್ಠ 35000 ಪದಗಳಿರಬೇಕು. 6) ತಪ್ಪಿಲ್ಲದಂತೆ ಟೈಪಿಸಿದ ಸಾಫ್ಟ್ ಕಾಪಿಯನ್ನು ಕಳಿಸಬೇಕು. ಕೈ ಬರಹದ ಹಸ್ತಪ್ರತಿ ಸ್ವೀಕರಿಸಲಾಗುವುದಿಲ್ಲ. 7) ಒಬ್ಬ ಬರಹಗಾರರು ಒಂದು ಕೃತಿಯನ್ನು…

Read More

ಕುಮಟಾ : ಯಕ್ಷಗಾನ ಸಂಶೋಧನಾ ಕೇಂದ್ರ (ರಿ.) ಮಣಕಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ‘ಶ್ರಾವಣ ಯಕ್ಷ ಸಂಭ್ರಮ’ವನ್ನು ದಿನಾಂಕ 10 ಆಗಸ್ಟ್ 2024ರಂದು ಸಂಜೆ 4-00 ಗಂಟೆಗೆ ಕುಮಟಾ ಮೂರೂರು ರಸ್ತೆಯಲ್ಲಿರುವ ಹವ್ಯಕ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಶಾಸಕರಾದ ಶ್ರೀ ದಿನಕರ ಕೆ. ಶೆಟ್ಟಿ ಇವರು ಉದ್ಘಾಟಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ರವಿ ನಾಯಕ ಇವರು ಅತಿಥಿಯಾಗಿ ಭಾಗವಹಿಸಲಿರುವರು. ಕನ್ಯಾನ ವೆಂಕಟ್ರಮಣ ಭಟ್ಟ ವಿರಚಿತ ‘ಭಸ್ಮಾಸುರ ಮೋಹಿನಿ’ ಯಕ್ಷಗಾನ ಪ್ರದರ್ಶನದ ಹಿಮ್ಮೇಳದಲ್ಲಿ ಭಾಗವತರು ಶ್ರೀ ರಾಮಕೃಷ್ಣ ಹಿಲ್ಲೂರು, ಮದ್ದಲೆಯಲ್ಲಿ ಶ್ರೀ ಪರಮೇಶ್ವರ ಭಂಡಾರಿ ಕರ್ಕಿ ಮತ್ತು ಚಂಡೆಯಲ್ಲಿ ಶ್ರೀ ಗಜಾನನ ಹೆಗಡೆ ಸಾಂತೂರು ಹಾಗೂ ಮುಮ್ಮೇಳದಲ್ಲಿ ಶ್ರೀ ರಾಮಚಂದ್ರ ಹೆಗಡೆ ಕೊಂಡದಕುಳಿ, ಶ್ರೀ ನರಸಿಂಹ ಚಿಟ್ಟಾಣಿ, ಶ್ರೀ ವಿಘ್ನೇಶ್ವರ ಹಾವಗೋಡಿ, ಶ್ರೀ ಸುಬ್ರಹ್ಮಣ್ಯ ಮೂರೂರು, ಶ್ರೀ ಶಂಕರ ಹೆಗಡೆ ನೀಲಕೋಡು ಮತ್ತು ಶ್ರೀಧರ ಹೆಗಡೆ ಚಪ್ಪರಮನೆ ಇವರುಗಳು ಸಹಕರಿಸಲಿದ್ದಾರೆ.

Read More

ಮಂಗಳೂರು : ಕಾಸರಗೋಡು ಜಿಲ್ಲೆಯೂ ಸೇರಿದಂತೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳ ಸಾಹಿತ್ಯ ಸಂಗಮ ಸಂಸ್ಥೆಯ ಆಶ್ರಯದಲ್ಲಿ ಪ್ರತಿ ವರ್ಷವೂ ಆಯೋಜಿಸುತ್ತಾ ಬಂದಿರುವ ಮಕ್ಕಳ ಸಾಹಿತ್ಯಿಕ, ಸಾಂಸ್ಕೃತಿಕ ಹಬ್ಬ ಮಕ್ಕಳ ಧ್ವನಿ 2023-24ನೇ ಸಾಲಿನ ‘ಮಕ್ಕಳ ಧ್ವನಿ ಸಾಹಿತ್ಯ ಸಮ್ಮೇಳನ’ವನ್ನು 2024ನೇ ಸೆಪ್ಟೆಂಬರ್ ತಿಂಗಳ 2ನೇ ವಾರದಲ್ಲಿ ಸುರತ್ಕಲ್ಲಿನ ವಿದ್ಯಾದಾಯಿನಿ ಪ್ರೌಢಶಾಲೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಇದರ ಅಂಗವಾಗಿ ಕಾರ್ಡ್ ಕಥೆ ಹಾಗೂ ಕವನ ಗೋಷ್ಠಿಯನ್ನು ಆಯೋಜಿಸಲಾಗಿದೆ. ಈ ಸಮ್ಮೇಳನದ ಗೋಷ್ಠಿಗಾಗಿ ಪ್ರಾಥಮಿಕದಿಂದ ಪ್ಲಸ್ ಟು ಅಥವಾ ಪದವಿ ಪೂರ್ವ ತರಗತಿಯ ತನಕದ ಆಸಕ್ತ ವಿದ್ಯಾರ್ಥಿಗಳಿಂದ ಸ್ವತಂತ್ರ, ಸ್ವರಚಿತ ಕಥೆ ಹಾಗೂ ಕವನಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಸ್ವರಚಿತ ಬರಹಗಳನ್ನು ಪ್ರೊ. ರಮೇಶ್ ಭಟ್ ಎಸ್.ಜಿ., ಕಾರ್ಯದರ್ಶಿ, ಮಕ್ಕಳ ಸಾಹಿತ್ಯಸಂಗಮ, ಶ್ರೀನಿಕೇತನ, 1-194(1), ಎನ್.ಎಂ.ಪಿ.ಟಿ. ಕಾಲನಿಯ ಹಿಂಭಾಗ, ಕಡಂಬೋಡಿ, ಹೊಸಬೆಟ್ಟು, ಕುಳಾಯಿ ಅಂಚೆ, ಸುರತ್ಕಲ್ – 575019 ವಿಳಾಸಕ್ಕೆ 20 ಆಗಸ್ಟ್ 2024ರ ಮೊದಲು…

Read More

ಕುಂಬಳೆ: ಕಣಿಪುರ ಮಿತ್ರ ಬಳಗ ಮತ್ತು ಕುಂಬಳೆ ಶ್ರೀಧರ ರಾವ್ ಅಭಿಮಾನಿ ಬಳಗದ ವತಿಯಿಂದ ಇತ್ತೀಚೆಗೆ ನಿಧನರಾದ ಕುಂಬಳೆ ಶ್ರೀಧರ ರಾವ್‌ ಇವರಿಗೆ ನುಡಿನಮನ ಹಾಗೂ ತಾಳಮದ್ದಳೆ ಕಾರ್ಯಕ್ರಮವು  28 ಜುಲೈ 2024ರಂದು ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ, ಅಂಕಣಕಾರ, ಕಲಾವಿದ ನಾ. ಕಾರಂತ ಪೆರಾಜೆ “ತೆಂಕುತಿಟ್ಟಿನ ಹಿರಿ ಪರಂಪರೆಯ ಮೇರು ಕಲಾವಿದರ ಸಾಲಿನಲ್ಲಿ ದಿ. ಕುಂಬಳೆ ಶ್ರೀಧರ ರಾವ್ ಇವರು ಗರತಿ ಪಾತ್ರಗಳಲ್ಲಿ ಅಚ್ಚೊತ್ತಿ, ಮಾದರಿ ಪಾತ್ರಗಳನ್ನು ಸೃಜಿಸಿದ ಸೃಷ್ಟಿಶೀಲ ಕಲಾವಿದ. ಶೇಣಿ, ಸಾಮಗ ಸಹಿತ ಗತ ಪರಂಪರೆಯ ಮೇರು ಕಲಾವಿದರ ಜೊತೆ ರಂಗದಲ್ಲಿ ಅಷ್ಟೇ ಸಮರ್ಥವಾಗಿ ಮೆರೆದು ಎಲ್ಲರ ಪ್ರೀತಿಗೆ ಪಾತ್ರರಾದವರು. ಅವರ ಕಲಾ ಬದುಕಿನ ಆಳ ಅಗಲ ಅತ್ಯಂತ ವಿಸ್ತಾರವಾದುದು.” ಎಂದು ಹೇಳಿದರು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ ಮಾತನಾಡಿ “ನಮ್ಮ ನೆಲಕ್ಕೆ ಕೀರ್ತಿ ತಂದ ಕಲಾವಿದರನ್ನು ಸ್ಮರಿಸುವುದು ನಮ್ಮ…

Read More

 ಮಂಗಳೂರು: ವಿಶ್ವ ಬಂಟ ಪ್ರತಿಷ್ಠಾನವು ಡಾ. ಡಿ. ಕೆ. ಚೌಟ ದತ್ತಿನಿಧಿಯಿಂದ ನೀಡುವ ‘ಯಕ್ಷಗಾನ ಪ್ರಶಸ್ತಿ’ಗೆ 2024ನೇ ಸಾಲಿನಲ್ಲಿ ಬಡಗು ತಿಟ್ಟಿನ ಹಿರಿಯ ಯಕ್ಷಗಾನ ಹಾಸ್ಯ ಕಲಾವಿದ ಹಳ್ಳಾಡಿ ಜಯರಾಮ ಶೆಟ್ಟಿ ಆಯ್ಕೆಯಾಗಿದ್ದಾರೆ. ಪ್ರೊ. ಜಿ. ಆರ್. ರೈ, ಪಳ್ಳಿ ಕಿಶನ್ ಹೆಗ್ಡೆ ಮತ್ತು ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಅವರ ಹೆಸರನ್ನು ಶಿಫಾರಸು ಮಾಡಿದೆ. ಪ್ರಶಸ್ತಿಯು ರೂ.25,000/- ನಗದು ಹಾಗೂ ಫಲಕವನ್ನೊಳಗೊಂಡಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ಲೆಕ್ಕ ಪರಿಶೋಧಕ (ಸಿ. ಎ.) ವೈ. ಸುಧೀರ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ. ಹಳ್ಳಾಡಿ ಜಯರಾಮ ಶೆಟ್ಟಿ: ಕುಂದಾಪುರ ತಾಲೂಕಿನ ಹಳ್ಳಾಡಿಯ ಅಣ್ಣಪ್ಪ ಶೆಟ್ಟಿ ಹಾಗೂ ಅಕ್ಕಮ್ಮ ದಂಪತಿಗೆ 1955ರಲ್ಲಿ ಜನಿಸಿದ ಜಯರಾಮ ಶೆಟ್ಟಿ ಬಡಗು ತಿಟ್ಟಿನಲ್ಲಿ ಮುಂಚೂಣಿಯಲ್ಲಿರುವ ಹಿರಿಯ ಹಾಸ್ಯ ಕಲಾವಿದ. ಕಮಲಶಿಲೆ, ಮಂದರ್ತಿ, ಪೆರ್ಡೂರು, ಅಮೃತೇಶ್ವರಿ, ಸಾಲಿಗ್ರಾಮವಲ್ಲದೆ ತೆಂಕಿನ ಕುಂಬಳೆ ಮತ್ತು ಮೂಲ್ಕಿ ಮೇಳಗಳಲ್ಲಿ ಒಟ್ಟು 55 ವರ್ಷಗಳ ತಿರುಗಾಟ ಮಾಡಿದ್ದಾರೆ. ಸಾಲಿಗ್ರಾಮ ಮೇಳವೊಂದರಲ್ಲೇ 25…

Read More

ಕೊಣಾಜೆ: ಮಂಗಳೂರು ವಿ. ವಿ.ಯಲ್ಲಿನ ಡಾ. ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಇದರ ವತಿಯಿಂದ ಕಲಾವಿದರ ಯಕ್ಷಪಯಣದ ಸ್ವಗತ ಯಕ್ಷಾಯಣ- ದಾಖಲೀಕರಣ ಸರಣಿಯ 5ರ ಕಾರ್ಯಕ್ರಮವು 30 ಜುಲೈ 2024ರ ಮಂಗಳವಾರದಂದು ನಡೆಯಿತು. ಕಾರ್ಯಕ್ರಮದಲ್ಲಿ ತಮ್ಮ ಯಕ್ಷ ಪಯಣದ ಅನುಭವ ಕಥನವನ್ನು ಹಂಚಿಕೊಂಡ ಯಕ್ಷಗಾನ ರಂಗದ ಹಿರಿಯ ಹಿಮ್ಮೇಳ ಕಲಾವಿದರು ಹಾಗೂ ಯಕ್ಷಗಾನ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್ “ಯಕ್ಷಗಾನ ಸಂಪ್ರದಾಯ ಬದ್ದವಾಗಿ ಮುನ್ನಡೆಯಬೇಕಾದರೆ ಯಕ್ಷಗಾನ ಪರಂಪರೆಯ ಜ್ಞಾನ, ಅರಿವನ್ನು ಸಮರ್ಥವಾಗಿ ಮುಂದಿನ ತಲೆಮಾರಿಗೆ ತಲುಪಿಸುವವರು ಹಾಗೂ ವಿವರಿಸುವವರು ಮುಖ್ಯವಾಗುತ್ತಾರೆ. ಯಕ್ಷಗಾನದಲ್ಲಿ ಅನುಭವದಿಂದಲೇ ಬಹುತೇಕ ಶಿಕ್ಷಣ ಸಿಗುತ್ತದೆ. ನಮ್ಮಲ್ಲಿನ ಬಹುತೇಕ ಕಲಾವಿದರು ರಂಗದಲ್ಲಿ ಮತ್ತು ಹಿರಿಯ ಕಲಾವಿದರ ಮಾರ್ಗದರ್ಶನದಿಂದಲೇ ರೂಪುಗೊಂಡವರು. ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರವು ಈ ನಿಟ್ಟಿನಲ್ಲಿ ಹಿರಿಯ ಕಲಾವಿದರ ಅನುಭವ ಕಥನವನ್ನು ದಾಖಲಿಸುವ ಕಾರ್ಯ ಶ್ಲಾಘನೀಯ ಹಾಗೂ ಇದರಿಂದ ಮುಂದಿನ ಯುವ ಪೀಳಿಗೆಗೆ ಅನುಕೂಲವಾಗಲಿದೆ. ಹಿಮ್ಮೇಳ ಕಲಿಯುವವರಿಗೆ ಯಕ್ಷಗಾನದ…

Read More

ಬಂಟ್ವಾಳ : ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ದ.ಕ ಸಮಿತಿಯು ಸೀನಿಯರ್ ಚೇಂಬರ್ ಸಹಯೋಗದಲ್ಲಿ ಆಯೋಜಿಸಿದ ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮಿಲನದ ಸಮಾರೋಪ ಸಮಾರಂಭ ಹಾಗೂ ಕವಿಗೋಷ್ಠಿಯು 04 ಆಗಸ್ಟ್ 2024ರಂದು ಬಂಟ್ವಾಳ ಜೋಡುಮಾರ್ಗದ ಸ್ಪರ್ಶ ಕಲಾಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಮಂಗಳೂರಿನ ಮಂಗಳಾ ಆಸ್ಪತ್ರೆ ಹಾಗೂ ಕಣಚೂರು ಆಯುರ್ವೇದ ಆಸ್ಪತ್ರೆಯ ಮುಖ್ಯ ವೈದ್ಯ ಹಾಗೂ ಬರಹಗಾರರಾದ ಡಾ. ಸುರೇಶ ನೆಗಳಗುಳಿ ಮಾತನಾಡಿ “ಪರರಿಂದ ಬರೆಯಿಸಿ ಹೆಸರಿಗಾಗಿ ಸಾಹಿತಿಯಾದರೆ ರಸಹೀನ ಕಬ್ಬಿನಂತೆ.” ಎಂದರು. ಚುಟುಕು ಸಾಹಿತ್ಯದ ಸ್ವಾರಸ್ಯದ ಬಗ್ಗೆ ತಿಳಿಸಿಕೊಟ್ಟ ಇವರು ಒಂದೇ ವಿಷಯವನ್ನು ಹೇಗೆ ಬಗೆ ಬಗೆಯ ಸಾಹಿತ್ಯ ಪ್ರಕಾರದಲ್ಲಿ ಬರೆಯಬಹುದು ಎನ್ನುತ್ತಾ ಚುಟುಕು, ರುಬಾಯಿ, ಮುಕ್ತಕ, ತನಗ, ಹಾಯ್ಕು, ಟಂಕಾ ಹಾಗೂ ಹನಿಗವನವಾಗಿ ಒಂದೇ ವಸ್ತುವನ್ನು ವಾಚಿಸಿ ತೋರಿಸಿದರು. ಚುಟುಕು ವಾಚಿಸಿದ ಸುಮಾರು ನಲುವತ್ತಕ್ಕೂ ಅಧಿಕ ವಾಚಕರನ್ನು ಹೆಸರಿಸಿ ಶ್ಲಾಘಿಸಿದರು. ಪರಿಷತ್ತಿನ ದ. ಕ. ಜಿಲ್ಲಾಧ್ಯಕ್ಷ ಜಯಾನಂದ ಪೆರಾಜೆಯವರ ಸರ್ವಾಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ  ವಿ. ಬಿ.…

Read More

ಉಡುಪಿ : ಹಿರಿಯ ಪತ್ರಕರ್ತ, ದೂರದರ್ಶನ ಉಡುಪಿ ಜಿಲ್ಲಾ ವರದಿಗಾರ ಹಾಗೂ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಜಯಕರ ಸುವರ್ಣ ದಿನಾಂಕ 5 ಆಗಸ್ಟ್ 2024ರಂದು ರಾತ್ರಿ ಹೃದಯಾಘಾತದಿಂದ ಕಲ್ಯಾಡಿಯಲ್ಲಿರುವ ಸ್ವಗೃಹದಲ್ಲಿ ನಿಧನರಾದರು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, 2014-17ನೇ ಸಾಲಿನಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಇವರು, ಪ್ರಸ್ತುತ ಸಂಘದ ರಜತ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಉಪಾಧ್ಯಕ್ಷ, ಕರ್ನಾಟಕ ಫೋಟೋಗ್ರಾಫರ್ಸ್ ಅಸೋಸಿಯೇಶನ್‌ ಉಡುಪಿ ಜಿಲ್ಲಾ ಪ್ರತಿನಿಧಿಯಾಗಿರುವ ಇವರು, ಎಸ್.ಕೆ.ಪಿ.ಎ. ಉಡುಪಿ ವಲಯದ ಮಾಜಿ ಅಧ್ಯಕ್ಷರಾಗಿಯೂ, ಉಡುಪಿ ಶ್ರೀಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಸ್ಥಾಪಕ ವಿಶ್ವಸ್ಥರಾಗಿ, ಮಲ್ಪೆ ನಾರಾಯಣ ಗುರು ಸೇವಾದಳ ಅಧ್ಯಕ್ಷರಾಗಿ, ಕಲ್ಮಾಡಿ ಶ್ರೀಬ್ರಹ್ಮಬೈದರ್ಕಳ ಗರಡಿ ಆಡಳಿತ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

Read More

ಮಂಗಳೂರು : ಭ್ರಾಮರಿ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ಇದರ ವತಿಯಿಂದ ಏಳನೇ ವರ್ಷದ ‘ಭ್ರಾಮರಿ ಯಕ್ಷ ವೈಭವ 2024’, ಯಕ್ಷ ಛಾಯಾಚಿತ್ರ ಪ್ರದರ್ಶನ, ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ದಿನಾಂಕ 03 ಆಗಸ್ಟ್ 2024ರಂದು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದವು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಜಾನಪದ ವಿ.ವಿ. ವಿಶ್ರಾಂತ ಕುಲಪತಿ ಪ್ರೊ. ಕೆ. ಚಿನ್ನಪ್ಪ ಗೌಡ ಇವರು “ಯಕ್ಷಗಾನದಲ್ಲಿ ಗಾನ ವೈಭವ, ನಾಟ್ಯ ವೈಭವ ಪ್ರಧಾನವಾಗದೇ ಪರಂಪರೆ ಉಳಿಯಬೇಕು. ಈ ನಿಟ್ಟಿನಲ್ಲಿ ಎಲ್ಲಾ ಮೇಳದ ಕಲಾವಿದರು ಕನಿಷ್ಠ ವರ್ಷಕ್ಕೊಮ್ಮೆಯಾದರೂ ಸಮಾವೇಶ ನಡೆಸಿ, ಯಕ್ಷಗಾನದ ಪರಂಪರೆ ಉಳಿಸುವ ನಿಟ್ಟಿನಲ್ಲಿ ವಿಚಾರ ವಿಮರ್ಶೆ ನಡೆಸಬೇಕು. ಯಕ್ಷಗಾನ ಕಲಾವಿದರು ಕೇವಲ ಕಲಾವಿದರಲ್ಲ, ಅವರು ಯಕ್ಷಗಾನದ ವಿದ್ವಾಂಸರೂ ಆಗಿದ್ದಾರೆ. ಆಯಾ ವರ್ಷದ ತಿರುಗಾಟದ ಬಗ್ಗೆ ವಿಮರ್ಶೆ ನಡೆದಾಗ ಎಲ್ಲಿ ತಪ್ಪಿದ್ದೇವೆ ಎಂಬುದು ತಿಳಿಯುತ್ತದೆ. ಕಲಾವಿದರು ಪ್ರದರ್ಶನಕ್ಕೆ ಮುನ್ನ ಪರಸ್ಪರ ಸಮಾಲೋಚನೆ ನಡೆಸಿ, ಪರಂಪರೆ ಗಟ್ಟಿಗೊಳಿಸಬೇಕು. ಸಮಾಜಕ್ಕೆ ನೈತಿಕತೆಯನ್ನು ಕಟ್ಟಿಕೊಡುವ ಏಣಿಯಾದ ಯಕ್ಷಗಾನದ ಸಂಕೀರ್ಣ ಪರಂಪರೆ…

Read More

ಬೆಂಗಳೂರು : ನಿರ್ಮಾಣ್ ಯಕ್ಷ ಬಳಗ (ರಿ.) ಅರ್ಪಿಸುವ ತಿಂಗಳ ತಿರುಳು ಸರಣಿಯ 19ನೇ ತಾಳಮದ್ದಳೆಯು ಯಕ್ಷಗಾನ ಕಲಾ ಪೋಷಕ ದಿ. ಲಕ್ಷ್ಮೀನಾರಾಯಣಯ್ಯ ಹಲ್ಕೋಡು ಇವರ ಸ್ಮರಣಾರ್ಥ ನಡೆಯಲಿದ್ದು, ಕವಿ ಶ್ರೀಧರ ಡಿ.ಎಸ್. ವಿರಚಿತ ‘ಜನಮೇಜಯ’ ಪ್ರಸಂಗದ ತಾಳಮದ್ದಳೆಯು ದಿನಾಂಕ 10 ಆಗಸ್ಟ್ 2024ರಂದು ಬೆಂಗಳೂರಿನ ಅನ್ನಪೂರ್ಣ ನಿಲಯದಲ್ಲಿ ಪ್ರಸ್ತುತಗೊಳ್ಳಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಬಾಲಕೃಷ್ಣ ಹಿಳ್ಳೋಡಿ ಮತ್ತು ಶ್ರೀ ಗಜಾನನ ಹೆಗಡೆ ಕಲ್ಲಬ್ಬೆ, ಮದ್ದಳೆಯಲ್ಲಿ ಶ್ರೀ ನರಸಿಂಹ ಹೆಗಡೆ ಮೂರೂರು ಮತ್ತು ಶ್ರೀ ಚಿನ್ಮಯ್ ಅಂಬಾರಗೋಡ್ಲು ಹಾಗೂ ಚೆಂಡೆಯಲ್ಲಿ ಶ್ರೀ ಆಗ್ನೇಯ ಭಟ್ ಕ್ಯಾಸನೂರು ಮತ್ತು ಕುಮಾರಿ ಭಾವನ ಹಗೆಡೆ ಮಳಗೀಮನೆ, ಮುಮ್ಮೇಳದಲ್ಲಿ ಶ್ರೀ ರವಿ ಐತುಮನೆ, ಶ್ರೀ ಆದಿತ್ಯ ಸಿ. ಹಲ್ಕೋಡ್, ಶ್ರೀ ಚಂದನ್ ಕಲಾಹಂಸ, ಶ್ರೀ ಮಿತ್ರ ಮಧ್ಯಸ್ಥ ಸಾಗರ ಮತ್ತು ಶ್ರೀ ಅಕ್ಷಯ್ ಹೆಗಡೆ ಹಾರೆಕೊಪ್ಪ ಇವರುಗಳು ಸಹಕರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀಧರ ಡಿ.ಎಸ್. ಇವರು ಸಂಸ್ಮರಣಾ ನುಡಿಗಳನ್ನಾಡಲಿದ್ದಾರೆ.

Read More