Subscribe to Updates
Get the latest creative news from FooBar about art, design and business.
Author: roovari
ಕೋಲಾರ : ಪಿಟೀಲು ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕಲಾಶ್ರೀ ಪ್ರಶಸ್ತಿ ಪುರಸ್ಕೃತರಾದ ಕೋಲಾರ ನಗರದ ನಾದಸ್ವರ ವಿದ್ವಾನ್ ಆರ್. ಶ್ರೀರಾಮುಲು ದಿನಾಂಕ 04 ಜುಲೈ 2025ರಂದು ಅವರ ಸ್ವಗೃಹದಲ್ಲಿ ನಿಧನರಾದರು. ಇವರಿಗೆ 88 ವರ್ಷ ವಯಸ್ಸಾಗಿತ್ತು. ಬಾಲ್ಯದಲ್ಲೇ ನಾದಸ್ವರದ ಬಗ್ಗೆ ಆಸಕ್ತಿ ಹೊಂದಿದ್ದ ಇವರು ಕೋಲಾರ ಕೃಷ್ಣಮೂರ್ತಿ, ರಾಮರಾಯಲು, ಟಿ.ಆರ್. ಗಂಗಾಧರ೦, ಕುಂಭಕೋಣಂ ಸ್ವಾಮಿ ಅಯ್ಯರ್ ಮುಂತಾದ ಗುರುಗು ಮಾರ್ಗದರ್ಶದಲ್ಲಿ ಸಂಗೀತ ಶಿಕ್ಷಣ ಪಡೆದರು. ಆ ನಂತರ ಸಭೆ-ಸಮಾರಂಭ-ಶುಭಕಾರ್ಯಗಳಲ್ಲಿ ನಾದಸ್ವರ ನುಡಿಸಿದರು. ಕರ್ನಾಟಕದಾದ್ಯಂತ ಮಾತ್ರವಲ್ಲದೆ, ಕಾಣಿದಾಕಂ, ಚಿತ್ತೂರು ಮುಂತಾದ ಹಲವಾರು ಹೊರರಾಜ್ಯಗಳಲ್ಲೂ ನಾದಸ್ವರ ಕಛೇರಿ ನೀಡಿದ ಹೆಗ್ಗಳಿಕೆ ಹೊಂದಿದ್ದರು. ಇವರು ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕರ್ನಾಟಕ ಕಲಾಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು..
ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ವತಿಯಿಂದ ಯಕ್ಷಧ್ರುವ-ಯಕ್ಷಶಿಕ್ಷಣ ನಾಟ್ಯ ಅಭ್ಯಾಸವು ಯಕ್ಷಧ್ರುವ ಪಟ್ಲ ಫೌಂಡೇಶನ್ ಕಟೀಲು ಎಕ್ಕಾರು ಘಟಕದ ನೇತೃತ್ವದಲ್ಲಿ ದಿನಾಂಕ 04 ಜುಲೈ 2025ರಂದು ಬಡಗ ಎಕ್ಕಾರಿನ ಸರಕಾರಿ ಪ್ರೌಢ ಶಾಲೆಯಲ್ಲಿ ಉದ್ಘಾಟನೆಗೊಂಡಿತು. ಈ ಯಕ್ಷಶಿಕ್ಷಣ ತರಗತಿಯನ್ನು ಉದ್ಘಾಟನೆಗೈದ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.) ಕಟೀಲು ಎಕ್ಕಾರು ಘಟಕದ ಅಧ್ಯಕ್ಷರಾದ ಶ್ರೀ ಗಿರೀಶ್ ಶೆಟ್ಟಿ ಇವರು ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ಕಾರ್ಯ ಚಟುವಟಿಕೆಗಳ ಬಗ್ಗೆ ಮಾತನಾಡುತ್ತಾ “ಯಕ್ಷ ಶಿಕ್ಷಣವು ವಿದ್ಯಾರ್ಥಿಗಳಿಗೆ ಮೊಳಕೆಯಿಂದಲೇ ಲಭ್ಯವಾದರೆ ಅದು ಹೆಮ್ಮರವಾಗಿ ಬಹುಕಾಲ ಉಳಿಯುತ್ತದೆ. ಲಕ್ಷಾಂತರ ಜನರು ಯಕ್ಷಗಾನ ಕಲೆಯ ಅಭಿಮಾನಿಗಳು, ಅದರ ಸೇವೆಯ ಆರಾಧಕರು, ಯಕ್ಷಗಾನದಲ್ಲಿ ಅರ್ಥಗಾರಿಕೆ ಮಾತುಗಾರಿಕೆ ಮೊದಲಾದ ನೀತಿ ನಿಯಮಗಳಿವೆ. ಶಿಕ್ಷಣ ರಂಗದಲ್ಲಿ ನೀಡುವ ಶಿಸ್ತಿನ ಜೊತೆಗೆ ಯಕ್ಷಗಾನವು ದೈಹಿಕ ವ್ಯಾಯಾಮವನ್ನು ಹೆಚ್ಚಿಸುತ್ತದೆ. ಇದರಿಂದ ಕಲಿಕೆಯಲ್ಲಿ ಏಕಾಗ್ರತೆ ಶಿಸ್ತು ಸ್ಮರಣೆ ಹೆಚ್ಚಾಗುತ್ತದೆ. ಅನೇಕ ಕಲಾವಿದರು ಶಿಕ್ಷಣ ಸಂಸ್ಥೆಗಳು ಇದರಿಂದ ಸಹಾಯವನ್ನು ಪಡೆದುಕೊಂಡು ಅಭಿವೃದ್ಧಿ…
Any kind of injustice done to others makes us feel restless. Any kind of violence done on others makes us feel stifled. Any kind of threat to life given on to innocent people makes us furious. But what will be our condition if we hear the story of a biased act culminating in wreckless shooting, killing and bloodshed ? No doubt it will make us feel tongue-tied and numb. However, this was the same predicament in which the Kashmiri Hindu aboriginals had been caught before their exodus from their much beloved motherland Kashmir. The book ‘And the Valley Remained Silent’…
ಉಡುಪಿ : ಉಡುಪಿಯ ಯುವ ಛಾಯಾಚಿತ್ರ ಕಲಾವಿದ, ನಿದೀಶ್ ಕುಮಾರ್ ಇವರಿಗೆ ಅಂತಾರಾಷ್ಟ್ರೀಯಮಟ್ಟದ ಗೋಲ್ಡ್ ಮೆಡಲ್ ಪ್ರಾಪ್ತವಾಗಿದೆ. ಬಾಂಗ್ಲಾ ದೇಶದ ಚಿತ್ರಚಿಂತಾ ಫೋಟೋಗ್ರಾಫರ್ಸ್ ಸರ್ಕಲ್ ಆಯೋಜಿಸಿದ್ದ ‘ಮೂಡ್ಆಫ್ ಮಾನ್ ಸೂನ್’ ವಿಭಾಗದಲ್ಲಿ ಇವರ ಛಾಯಾಚಿತ್ರ ಪತಾಶಸ್ತಿಗಳಿಸಿದೆ. ಉಡುಪಿಯ ಪರ್ಕಳದಲ್ಲಿ ಶ್ರೀನಿಧಿ ಸ್ಟುಡಿಯೋ ಸ್ಥಾಪಿಸಿ, ಕಳೆದ 23 ವರ್ಷಗಳಿಂದ ಛಾಯಾಚಿತ್ರ ಕಲಾವಿದರಾಗಿ ದುಡಿಯುತ್ತಿದ್ದಾರೆ. ಇದು ಇವರಿಗೆ ಸಂದ 49ನೇ ಪ್ರಶಸ್ತಿಯಾಗಿದೆ.
ಸುಳ್ಯ : ರಂಗಮಯೂರಿ ಕಲಾಶಾಲೆ (ರಿ.) ಸುಳ್ಯ ಇದರ ವತಿಯಿಂದ ಡ್ಯಾನ್ಸ್, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ಡ್ರಾಯಿಂಗ್, ಯಕ್ಷಗಾನ ಮತ್ತು ನಾಟಕ ತರಬೇತಿಯ ಹೊಸ ಬ್ಯಾಚ್ ಗಳು ಪ್ರಾರಂಭಗೊಂಡಿವೆ. ಈ ಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಶಸ್ತಿಗಳನ್ನು ಗಳಿಸಿದ್ದು, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ತರಬೇತಿಗೊಳಿಸುವ ಹೆಮ್ಮೆಯ ಸಂಸ್ಥೆ ಇದಾಗಿದೆ. ಹೆಚ್ಚಿನ ಮಾಹಿತಿಗಾಗಿ 9611355496 ಮತ್ತು 6363783983 ಸಂಖ್ಯೆಯನ್ನು ಸಂಪರ್ಕಿಸಿರಿ.
ಮಂಗಳೂರು : ಅಮೃತ ಪ್ರಕಾಶ ಪತ್ರಿಕೆ ಮಂಗಳೂರು ಹಾಗೂ ಕೆನರಾ ಪದವಿ ಪೂರ್ವ ಕಾಲೇಜ್ ಜಂಟಿ ಆಶ್ರಯದಲ್ಲಿ 108ನೇ ಸಾಹಿತ್ಯ ಅಭಿರುಚಿ ಕಾರ್ಯಕ್ರಮವು ದಿನಾಂಕ 04 ಜುಲೈ 2025ರಂದು ಮಂಗಳೂರಿನ ಕೆನರಾ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಕೆನರಾ ಪದವಿ ಪೂರ್ವ ಕಾಲೇಜಿನ ಡೀನ್ ಗೋಪಾಲಕೃಷ್ಣ ಶೆಟ್ಟಿ ಕೆ.ಎಂ. ಇವರು ವಹಿಸಿದ್ದು, ಈ ಸಂದರ್ಭದಲ್ಲಿ ಸಾಹಿತ್ಯ ಸಂಘದ ಉದ್ಘಾಟನೆಯು ನಡೆಯಿತು. ಸಾಹಿತ್ಯ ಅಭಿರುಚಿ ಕಾರ್ಯಕ್ರಮಕ್ಕೆ ಮುಖ್ಯ ಸಂಪನ್ಮೂಲ ಅತಿಥಿಯಾಗಿ ವಿಜಯ ಕರ್ನಾಟಕ ಮಂಗಳೂರು ಆವೃತ್ತಿಯ ಸ್ಥಾನೀಯ ಸಂಪಾದಕರಾದ ಬಿ. ರವೀಂದ್ರ ಶೆಟ್ಟಿ ಹಾಗೂ ಪ್ರಶಸ್ತಿ ವಿಜೇತ ಶಿಕ್ಷಕಿ, ಲೇಖಕಿ ಸುಧಾ ನಾಗೇಶ್ ಉತ್ತಮ ಮಾರ್ಗದರ್ಶನ ಹಾಗೂ ಮಾಹಿತಿ ನೀಡಿದರು. ಕೆನರಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಲತಾ ಮಹೇಶ್ವರಿ ಕೆ.ಬಿ., ಸಾಹಿತ್ಯ ಸಂಘದ ಮುಖ್ಯಸ್ಥರಾದ ಮಧುಕೇಶ್ವರ ಶಾಸ್ತ್ರಿ ಹಾಗೂ ವಕೀಲರ ಸಂಘದ ಅಧ್ಯಕ್ಷರಾದ ರಾಘವೇಂದ್ರ ಎಚ್.ವಿ. ಗೌರವ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸುರೇಖಾ…
ಉಡುಪಿ : ಯಕ್ಷಗಾನ ಕಲಾರಂಗ (ರಿ.) ಇದರ ವತಿಯಿಂದ ಆಯೋಜಿಸಿರುವ ನಾಲ್ಕು ದಿನಗಳ ಸನಿವಾಸ ‘ಯಕ್ಷಗಾನ ಮಾರ್ಗದರ್ಶಿ ಶಿಬಿರ’ದ ಸಮಾರೋಪ ಸಮಾರಂಭವು ದಿನಾಂಕ 04 ಜುಲೈ 2025ರಂದು ಉಡುಪಿಯ ಯಕ್ಷಗಾನ ಕಲಾರಂಗದ ಐ.ವೈ.ಸಿ. ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಲಕ್ಷ್ಮೀಶ ತೋಳ್ಪಾಡಿ ವಹಿಸಿದ್ದು, ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಅಭಿನಂದನಾ ಭಾಷಣ ಮಾಡಿದರು. ಶತಾವಧಾನಿ ಡಾ. ಆರ್. ಗಣೇಶರಿಗೆ ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಸ್ಮರಣೆಯಲ್ಲಿ ವಿದ್ವಾಂಸರಿಗೆ ನೀಡಲಾಗುವ ರೂ.60,000/- ನಗದನ್ನೊಳಗೊಂಡ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಿದರು. ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪವನ್ನು ಇದೇ ಸಂದರ್ಭದಲ್ಲಿ ನೆರವೇರಿಸಲ್ಪಟ್ಟಿತು. ಪವನ್ ಕಿರಣ್ಕೆರೆ, ಶಿಬಿರದ ಬಗ್ಗೆ ಮಾತನಾಡಿದರು. ಶಿಬಿರಾರ್ತಿಗಳ ಪರವಾಗಿ ಶಶಿಕಾಂತ್ ಶೆಟ್ಟಿ, ಸುನಿಲ್ ಹೊಲ್ನಾಡು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಎಲ್ಲ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ…
ಮಂಗಳೂರು : ಮಕ್ಕಳಿಗೆ ಯಕ್ಷಗಾನ ಕಲಿಸುವ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಮಹತ್ವಾಕಾಂಕ್ಷೆಯ ನಿಟ್ಟಿನಲ್ಲಿ ಯಕ್ಷಧ್ರುವ- ಯಕ್ಷಶಿಕ್ಷಣವು ಮುಲ್ಲಕಾಡು ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ದಿನಾಂಕ 04 ಜುಲೈ 2025ರಂದು ಉದ್ಘಾಟನೆಗೊಂಡಿತು. ಮೂರನೇ ವರ್ಷದ ಯಕ್ಷ ಶಿಕ್ಷಣವನ್ನು ಮಂಗಳೂರು ಪಟ್ಲ ಪೌಂಡೇಶನ್ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕೃಷ್ಣ ಶೆಟ್ಟಿ ತಾರೆಮಾರ್ ದೀಪ ಬೆಳಗಿಸಿ ಉದ್ಘಾಟಿಸಿ “ಯಕ್ಷಗಾನವು ಪಠ್ಯದ ಒಂದು ಅಧ್ಯಾಯವಾಗಿ ಮಕ್ಕಳಿಗೆ ಭೋದನೆಯಾಗಬೇಕು” ಎಂದು ಆಗ್ರಹಿಸಿದರು. ಯಕ್ಷಶಿಕ್ಷಣದ ಪ್ರಧಾನ ಸಂಚಾಲಕ, ರುವಾರಿ ಪಣಂಬೂರು ಶ್ರೀ ವಾಸುದೇವ ಐತಾಳ್ ಪ್ರಸ್ತಾವನೆಗೈದು, “ಯಕ್ಷಗಾನ ಮಕ್ಕಳ ಮಾನಸಿಕ ದೃಡತೆಯೊಂದಿಗೆ ಏಕಾಗ್ರತೆ ಹೆಚ್ಚಿಸಿ ಮಕ್ಕಳು ಉತ್ತಮ ಅಂಕ ಪಡೆಯಲು ಸಹಕಾರಿಯಾಗುತ್ತದೆ. ಮುಲ್ಲಕಾಡು ಶಾಲೆಯಲ್ಲಿ ಯಕ್ಷ ಶಿಕ್ಷಣ ಪಡೆದು ಶಾಲಾ ವ್ಯಾಸಂಗದಲ್ಲಿ ಉನ್ನತ ಶ್ರೇಣಿಯನ್ನು ಪಡೆದ ಬಾಲಕಿ ಕುಮಾರಿ ಸುಜಾತ ಮಾದರಿ” ಎಂದು ತಿಳಿಸಿದರು. ಸಭೆಯ ಅಧ್ಯಕ್ಷೆ ಹಾಗೂ ಶಾಲಾ ಎಸ್.ಡಿ.ಸಿ. ಅಧ್ಯಕ್ಷೆ ಶ್ರೀಮತಿ ಗೀತಾ ಶೆಟ್ಟಿ ಮಾತನಾಡಿ ಯಕ್ಷ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ ಸಹಕರಿಸುತ್ತಿರುವ ಶಾಲಾ…
ಬೆಂಗಳೂರು : ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ.) ಸಿದ್ಧನಹಳ್ಳಿ ಹಾಗೂ ಜೇನುಗೂಡು ಕಲಾ ಬಳಗ ಕೆಂಗೇರಿ ಇದರ ವತಿಯಿಂದ ಸಾಹಿತಿ ಶ್ರೀ ರಾಂ.ಕೆ. ಹನುಮಂತಯ್ಯ ಪುಸ್ತಕ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ, ಯುವ ಸಾಹಿತಿ ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ ಇವರ ಪುಸ್ತಕ ಲೋಕಾರ್ಪಣೆ ಮತ್ತು ಕವಿಗೋಷ್ಠಿ ಕಾರ್ಯಕ್ರಮವನ್ನು ದಿನಾಂಕ 06 ಜುಲೈ 2025ರಂದು ಬೆಳಗ್ಗೆ 10-30 ಗಂಟೆಗೆ ಬೆಂಗಳೂರಿನ ಶೇಷಾದ್ರಿಪುರಂ ಎರಡನೇ ಮಹಡಿಯಲ್ಲಿರುವ ಶೇಷಾದ್ರಿಪುರಂ ಶಿಕ್ಷಣ ದತ್ತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಖ್ಯಾತ ಸಂಸ್ಕೃತಿ ಚಿಂತಕರಾದ ಡಾ. ಬಂಜಗೆರೆ ಜಯಪ್ರಕಾಶ್ ಇವರು ಯುವ ಸಾಹಿತಿ ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ ಇವರ ‘ದ ಕಂಪ್ಯಾರಿಟಿವ್ ಸ್ಟಡಿ ಆಫ್ ಡ್ರಮಾಟಿಕ್ ಥಿಯರೀಸ್ ಇನ್ ಟಿ.ಎಸ್. ಎಲಿಯಟ್ಸ್ ಪ್ಲೇಸ್’ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಕರ್ಣಾಟಕ ಗಾಂಧಿ ಸ್ಮಾರಕ ನಿಧಿ ಇವರ ಅಧ್ಯಕ್ಷರಾದ ನಾಡೋಜ ಡಾ. ವೂಡೇ ಪಿ. ಕೃಷ್ಣ ಇವರು 2023-24ರ ಸಾಲಿನ ಸಾಹಿತಿ ಶ್ರೀ ರಾಂ.ಕೆ. ಹನುಮಂತಯ್ಯ ದತ್ತಿ ಪುಸ್ತಕ ಪ್ರಶಸ್ತಿಯನ್ನು ಶ್ರೀಮತಿ…
ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯು ಪುತ್ತೂರಿನಲ್ಲಿ ಪ್ರಾರಂಭವಾಗಿ ಮೂವತ್ತು ವರ್ಷಗಳು ಆಗುತ್ತಿರುವ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳು ಯೋಜಿತಗೊಂಡವೆ. ಸಾಂಸ್ಕೃತಿಕ ಕಾರ್ಯಕ್ರಮಗಳು ‘ಮೂಕಾಂಬಿಕಾ ಮೂವತ್ತರ ಮಾರ್ದನಿ’ ಎಂಬ ಶೀರ್ಷಿಕೆಯೊಂದಿಗೆ ಪ್ರಸ್ತುತಗೊಳ್ಳಲಿರುವುದು. ದಿನಾಂಕ 22 ಜೂನ್ 2025ರಂದು ಪ್ರಾರಂಭದ ಉದ್ಘಾಟನಾ ಕಾರ್ಯಕ್ರಮವಾಗಿ ನೃತ್ಯಾಂತರಂಗ 130ನೇ ಸರಣಿ ಆಯೋಜಿಸಿ ಸಂಸ್ಥೆಯ ನಿರ್ದೇಶಕರು ವಿದ್ವಾನ್ ದೀಪಕ್ ಕುಮಾರ್ ಮತ್ತು ಅವರ ಪತ್ನಿ ವಿದುಷಿ ಪ್ರೀತಿಕಲಾರವರು ಮಹಾಲಿಂಗೇಶ್ವರ ದೇವರ ಕುರಿತಾದ ವಿದುಷಿ ಸುಮಂಗಲಾ ರತ್ನಾಕರ ಮಂಗಳೂರು ಇವರು ಬರೆದ ಪದವರ್ಣವನ್ನು ಪ್ರಸ್ತುತಪಡಿಸಿದರು. ವಿದ್ವಾಂಸರಾದ ಕಶೆಕೋಡಿ ಸೂರ್ಯನಾರಾಯಣ ಭಟ್ ಮತ್ತು ಅವರ ಪತ್ನಿ ಶ್ರೀಮತಿ ಸುಧಾ ಎಸ್. ಭಟ್ ಕಶೆಕೋಡಿ ಇವರು ಅಭ್ಯಾಗತರಾಗಿ ಶುಭ ಹಾರೈಸಿದರು. ಕುಮಾರಿ ಮಂದಿರ ಕಜೆ ನಿರೂಪಣೆ ಮಾಡಿ, ಕುಮಾರಿ ಮಾತಂಗಿ ಪ್ರಾರ್ಥನೆ, ಕುಮಾರಿ ಲಾಸ್ಯ ಸಂತೋಷ್ ಪರಿಚಯ ಮತ್ತು ವವಿದುಷಿ ಅಕ್ಷತಾ ಕೆ. ವಿಷಯ ಮಂಡನೆ ಮಾಡಿದರು.