Author: roovari

ನಾವೆಲ್ಲ ಯಾವ ವಯಸ್ಸಿನಲ್ಲಿ, ಎಂತಹ ಕತೆ, ಕಾದಂಬರಿಗಳನ್ನು ಓದಬೇಕು? ಓದಿ ಏನು ಮಾಡಬೇಕು? ಎಂಬುದನ್ನು ವಿಕಾಸ ಹೊಸಮನಿ ಎಂಬ ಯುವ ಬರಹಗಾರರು ತೋರಿಸಿಕೊಟ್ಟಿದ್ದಾರೆ. ಅವರ ‘ಗಾಳಿ ಹೆಜ್ಜೆ ಹಿಡಿದ ಸುಗಂಧ’, ‘ವೀತರಾಗ’, ‘ಮಿಂಚಿನ ಬಳ್ಳಿ’, ‘ಹೃದಯದ ಹಾದಿ’ ಎಂಬ ಗಟ್ಟಿ ಕೃತಿಗಳಲ್ಲಿ ವಿಮರ್ಶೆಯ ಓಘವಿದ್ದರೆ, ‘ಮಂದಹಾಸ’ ಎಂಬ ಸಂಪಾದಿತ ಕೃತಿಯಲ್ಲಿ ಸಮಕಾಲೀನ ಬರಹಗಾರರ ಲಲಿತ ಪ್ರಬಂಧಗಳ ಕಂಪು ತುಂಬಿ ತುಳುಕಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಅವರ ಓದಿನ ಸಾರ್ಥಕ್ಯವನ್ನು ‘ಜೀವ ಸಂವಾದ’ ಎಂಬ ಕೃತಿಯಲ್ಲಿ ಕಾಣುತ್ತೇವೆ. ಕಳೆದ 50 ವರ್ಷಗಳಲ್ಲಿ (1973 -2023) ಕನ್ನಡದ ಕಾದಂಬರಿಯ ಬೆಳೆಯನ್ನು ಸುಮಾರು ನೂರಕ್ಕೂ ಹೆಚ್ಚು ಕೃತಿಗಳ ಕಥೆ ಮತ್ತು ಇತಿಮಿತಿಗಳನ್ನು ಟ್ರೇಲರಿನಂತೆ ಕೊಟ್ಟಿದ್ದಾರೆ. ಕಥಾಸಾರ, ಹೋಲಿಕೆ, ವಿಶ್ಲೇಷಣೆ, ವಿಮರ್ಶಾತ್ಮಕ ಒಳನೋಟ, ಆಯಾ ಕಾದಂಬರಿಗಳಿಂದಾದ ಪ್ರೇರಣೆಗಳ ಬಗ್ಗೆ ಅಧಿಕೃತವಾಗಿ ಬರೆದಿದ್ದಾರೆ. ಆರಂಭದ ಮಾತುಗಳು ಹೀಗಿವೆ. “70ರ ದಶಕದ ಹೊತ್ತಿಗೆ ಕನ್ನಡ ಕಾದಂಬರಿ ಪ್ರಬುದ್ಧಾವಸ್ಥೆಯನ್ನು ತಲುಪಿತ್ತು. ಕಥಾವಸ್ತು, ತಂತ್ರ, ಭಾಷೆ, ಶೈಲಿ, ನಿರೂಪಣೆ ಮತ್ತು ನಾವೀನ್ಯತೆ ಸೇರಿದಂತೆ…

Read More

ಪಾದರಸದಂತೆ ಚಟುವಟಿಕೆಯ ಗಾಂಧಿವಾದಿ, ಕನ್ನಡದ ಶಕ್ತಿ ಸಿದ್ದವನಹಳ್ಳಿ ಕೃಷ್ಣಶರ್ಮರು ಒಬ್ಬ ಅಪರೂಪದ ಸಾಹಿತಿ. ಉತ್ತಮ ವಾಗ್ಮಿ, ಸ್ವಾತಂತ್ರ್ಯ ಹೋರಾಟಗಾರ, ಗಾಂಧೀ ವಿಚಾರವಾದಿ, ಸಹಕಾರಿ ಕ್ಷೇತ್ರದ ಹರಿಕಾರ ಮಾತ್ರವಲ್ಲದೆ ಶ್ರೇಷ್ಠ ಪತ್ರಕರ್ತರಾಗಿ ಕನ್ನಡ ನಾಡು ನುಡಿಯ ಬಗ್ಗೆ ಅಪೂರ್ವ ಸೇವೆ ಸಲ್ಲಿಸಿದ ಒಬ್ಬ ಮೇರು ವ್ಯಕ್ತಿ. ಚಿತ್ರದುರ್ಗ ಜಿಲ್ಲೆಯ ಸಿದ್ದವನಹಳ್ಳಿಯಲ್ಲಿ 1904 ಜುಲೈ 04ರಂದು ರಂಗಾಚಾರ್ ಮತ್ತು ಶೇಷಮ್ಮ ದಂಪತಿಗಳ ಸುಪುತ್ರನಾಗಿ ಜನಿಸಿದರು. ಮೈಸೂರು ಪರಕಾಲ ಮಠದ ಸ್ವಾಮಿಗಳಾಗಿದ್ದ ಪ್ರಕಾಂಡ ಪಂಡಿತ ಶ್ರೀ ಶ್ರೀನಿವಾಸ ಬ್ರಹ್ಮತಂತ್ರ ಪರಕಾಲ ಯತೀಂದ್ರರು ಮೈಸೂರು ಮಹಾರಾಜರಿಗೆ ರಾಜಗುರುಗಳಾಗಿದ್ದರು. ಕೃಷ್ಣಶರ್ಮರು ಇವರ ವಂಶಸ್ಥರು. ಆದ್ದರಿಂದಲೇ ಸಂಸ್ಕಾರ ಹಾಗೂ ವಿದ್ವತ್ತು ಇವರಿಗೆ ರಕ್ತಗತವಾಗಿ ಬಂದಿದ್ದವು. ಹುಟ್ಟೂರಿನಲ್ಲಿಯೇ ಬಾಲ್ಯದ ವಿದ್ಯಾಭ್ಯಾಸವನ್ನು ಪೂರೈಸಿದ ಶರ್ಮರು ಶಾಲೆಯ ಉಪಾಧ್ಯಾಯ ಸೂರಪ್ಪನವರು ಸಂಜೆಯ ವೇಳೆಗೆ ಓದುತ್ತಿದ್ದ ಮಹಾಭಾರತ ವಾಚನಕ್ಕೆ ಮಾರುಹೋದರು. ಚಿತ್ರದುರ್ಗದಲ್ಲಿ ಮಾಧ್ಯಮಿಕ ಶಾಲೆಗೆ ಸೇರಿದಾಗ ಕನ್ನಡ ಮತ್ತು ಸಂಸ್ಕೃತ ಎರಡು ಭಾಷೆಗಳಲ್ಲಿ ಪಾಂಡಿತ್ಯವನ್ನು ಪಡೆದ ಗರಣಿ ರಂಗಾಚಾರ್ಯರ ಪ್ರೋತ್ಸಾಹ ಕೃಷ್ಣಶರ್ಮರಿಗೆ ದೊರೆತಾಗ ಕನ್ನಡದ ಬಗ್ಗೆ…

Read More

ಬೆಂಗಳೂರು : ರಂಗ ಸಂಸ್ಥಾನ ಬೆಂಗಳೂರು ಗಾಯಕರಿಗಾಗಿ ರಾಜ್ಯ ಮಟ್ಟದ ಆನ್ಲೈನ್ ಹಿಂದೂಸ್ತಾನಿ ಸಂಗೀತ ಸ್ಪರ್ಧೆ ಏರ್ಪಡಿಸಿದ್ದು, ಆಸಕ್ತ 16 ರಿಂದ 30 ವರ್ಷದೊಳಗಿನ ಅಭ್ಯರ್ಥಿಗಳು ಭಾಗವಹಿಸಬಹುದು. ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು 06 ರಿಂದ 07 ನಿಮಿಷಗಳ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಹಾಡನ್ನು ವಾದ್ಯಜೊತೆಗೂಡಿ ಅಥವಾ ಬರೀ ಹಾಡುಗಾರಿಕೆಯ ವಿಡಿಯೋ ಮಾಡಿ 9110879907 ಈ ಸಂಖ್ಯೆಗೆ ವಾಟ್ಸ್ಆಪ್ ಮಾಡಬಹುದಾಗಿದೆ. ಸ್ಪರ್ಧೆಯ ಪ್ರವೇಶ ಶುಲ್ಕ ರೂಪಾಯಿ 300 ಆಗಿದ್ದು, 03 ಆಗಸ್ಟ್ 2025 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ 9110879907 ಸಂಖ್ಯೆಯನ್ನು ಸಂಪರ್ಕಿಸಬಹುದು.

Read More

ಕೊಪ್ಪಳ : ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಪ್ಪಳ ನಗರಸಭೆ ಮತ್ತು ಬಸವಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಡಾ. ಫ. ಗು. ಹಳಕಟ್ಟಿ ಜನ್ಮದಿನ ‘ವಚನ ಸಂರಕ್ಷಣಾ ದಿನಾಚರಣೆ’ಯು ದಿನಾಂಕ 02 ಜುಲೈ 2025ರ ಬುಧವಾರದಂದು ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಮಾತನಾಡಿ “ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯಗಳಿಗೆ ಬಹಳ ವಿಶೇಷ ಸ್ಥಾನವಿದ್ದು, ಡಾ. ಫ.ಗು. ಹಳಕಟ್ಟಿಯವರು ವಚನಗಳ ರಕ್ಷಣೆಗೆ ಶ್ರಮಿಸಿದವರಾಗಿದ್ದರು. ಇಂದಿನ ಜನ ಸಮುದಾಯಕ್ಕೆ ನಟ, ನಟಿಯರು ಆದರ್ಶ ವ್ಯಕ್ತಿಗಳಾಗಿದ್ದಾರೆ. ಆದರೆ, ನಿಜವಾಗಲು ಆದರ್ಶವಾಗಬೇಕಿರುವುದು ಡಾ. ಫ. ಗು. ಹಳಕಟ್ಟಿ ಅವರಂತಹ ಮಹನೀಯರು. ಹಳಕಟ್ಟಿಯವರು ವಚನಗಳ ಸಂಗ್ರಹಣೆ ಮಾಡದೇ ಹೋಗಿದ್ದರೆ, ನಮಗೆ ವಚನ ಸಾಹಿತ್ಯ ಸಿಗಲು ಸಾಧ್ಯವಾಗುತ್ತಿರಲಿಲ್ಲ. ಇಂತಹ ಮಹಾನ್ ವ್ಯಕ್ತಿಯ ಜಯಂತಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ನಮ್ಮ ಭಾರತದ ಸಂವಿಧಾನದಲ್ಲಿರುವ ಎಲ್ಲಾ ಆಶಯಗಳನ್ನು ಬಸವಾದಿ ಶರಣರು 12ನೇ ಶತಮಾನದಲ್ಲಿಯೇ ಹೇಳಿದ್ದರು.…

Read More

ಕೋಲ್ಕತಾ : ಸಮ ಕಲ್ಚರಲ್ ಟ್ರಸ್ಟ್ ಪ್ರಸ್ತುತ ಪಡಿಸುವ ಶ್ರೀ ಸುಪ್ರಿಯೊ ಮಲ್ಲಿಕ್ ಮತ್ತು ಶ್ರೀಮತಿ ರತ್ನ ಮೈತ್ರ ಇವರ ಸ್ಮರಣಾರ್ಥ ‘ಸಮ’ ಸಂಗೀತ ಕಛೇರಿಯನ್ನು ದಿನಾಂಕ 06 ಜುಲೈ 2025ರಂದು ಕೋಲ್ಕತಾ ಇಲ್ಲಿರುವ ಸತ್ಯಜಿತ್ ರಾಯ್ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ.

Read More

ಮೂಲ್ಕಿ: ಕಿನ್ನಿಗೋಳಿಯ ದಿವಂಗತ ಕೊ. ಅ. ಉಡುಪ ಅವರ ಸಂಸ್ಮರಣಾರ್ಥ ಪ್ರತಿ ವರ್ಷ ನೀಡಲಾಗುವ ಕೊ.ಅ. ಉಡುಪ ಪ್ರಶಸ್ತಿಗೆ ಈ ಬಾರಿ ಸಾಹಿತಿ ಡಾ. ಬಿ. ಪ್ರಭಾಕರ ಶಿಶಿಲ ಆಯ್ಕೆಯಾಗಿದ್ದಾರೆ. ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೆ.ಭುವನಾಭಿರಾಮ ಉಡುಪ ತಿಳಿಸಿದ್ದಾರೆ. ಪ್ರಶಸ್ತಿಯು ರೂಪಾಯಿ 10 ಸಾವಿರ ನಗದು ಹಾಗೂ ಗೌರವ ಫಲಕ ಹೊಂದಿದೆ. 24 ಜುಲೈ 2025ರಂದು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಜರುಗಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅರ್ಥಶಾಸ್ತ್ರದ ಕನ್ನಡೀಕರಣದಲ್ಲಿ ರಾಜ್ಯ ಮಟ್ಟದಲ್ಲಿ ಹೆಸರಾಗಿರುವ ಶಿಶಿಲರು ಇದುವರೆಗೆ 165 ಅರ್ಥಶಾಸ್ತ್ರ ಕನ್ನಡ ಕೃತಿ, 10 ಅರ್ಥಶಾಸ್ತೆ ಕೃತಿ ಇಂಗ್ಲೀಷ್‌ನಲ್ಲಿ ರಚಿಸಿದ್ದಾರೆ. ಕನ್ನಡದಲ್ಲಿ 52 ಸೃಜನಶೀಲ ಕೃತಿ, ತುಳುವಿನಲ್ಲಿ 4 ಕೃತಿ ರಚಿಸಿರುವ ಇವರು ಕನ್ನಡದಲ್ಲಿ 10 ಕಾದಂಬರಿ ಮತ್ತು 10 ಸಣ್ಣ ಕಥಾ ಸಂಕಲನ ರಚಿಸಿದ್ದಾರೆ. ಇವರ ಆತ್ಮಕಥನ ‘ಬೊಗಸೆ ತುಂಬಾ ಕನಸು’ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿದ್ದು, ನಾಲ್ಕು ಆವೃತ್ತಿಗಳನ್ನು ಕಂಡಿದೆ. ಯುರೋಪ್ ಸುತ್ತಿ ಇವರು ರಚಿಸಿದ…

Read More

ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಮತ್ತು ಫಣಿಗಿರಿ ಪ್ರತಿಷ್ಠಾನ ಶಿರೂರು ಬೈಂದೂರು ತಾಲೂಕು ಇದರ ಸಹಯೋಗದೊಂದಿಗೆ ಯಕ್ಷಗಾನ ಪ್ರಸಂಗ ರಚನೆ ಕಮ್ಮಟ ಮತ್ತು ಫಣಿಗಿರಿ ಪ್ರಶಸ್ತಿ ಪ್ರದಾನ -2025 ಕಾರ್ಯಕ್ರಮವನ್ನು ದಿನಾಂಕ 06 ಜುಲೈ 2025ರಂದು ಬೆಳಗ್ಗೆ ಗಂಟೆ 9-30ಕ್ಕೆ ಕಾಸರಗೋಡು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಉದ್ಘಾಟನೆ ಮಾಡಲಿದ್ದು, ಹಿರಿಯ ಪ್ರಸಂಗಕರ್ತ ಶೇಡಿಗುಮ್ಮೆ ವಾಸುದೇವ ಭಟ್ ಇವರಿಗೆ ‘ಫಣಿಗಿರಿ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವ ಶ್ರೀಧರ ಡಿ.ಯಸ್. ಕಿನ್ನಿಗೋಳಿ ಮತ್ತು ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಇವರಿಂದ ಪ್ರಸಂಗ ಕರ್ತರಿಗೆ ಯಕ್ಷಗಾನ ಪ್ರಸಂಗ ರಚನೆಯ ಮಾರ್ಗದರ್ಶನ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ ಭಾಗವಹಿಸಲಿರುವರು 9448344380 ಸಂಖ್ಯೆಯನ್ನು ಸಂಪರ್ಕಿಸಿರಿ. ಯಕ್ಷಗಾನ ಪ್ರಸಂಗ ರಚನಾ ಶಿಬಿರಗಳ ಅವಶ್ಯಕತೆ ಶಾಸ್ತ್ರಬದ್ಧ ವಿನ್ಯಾಸದ ಅಗತ್ಯತೆ : ಇಂದಿನ ಯಕ್ಷಗಾನ ಪ್ರಪಂಚದಲ್ಲಿ ನವೀನತೆ ಮತ್ತು ಪ್ರಾಕೃತಿಕತೆಯ ಸಮನ್ವಯವನ್ನು…

Read More

ಬೆಂಗಳೂರು : ಯಕ್ಷಗಾನದ ಭಾಗವತರಾಗಿ ತಮ್ಮ ಸೇವೆ ಸಲ್ಲಿಸುತ್ತಿರುವ ಹಾಲಾಡಿ ರಾಘವೇಂದ್ರ ಮಯ್ಯ ಇವರು 2025ರ ಸಾಲಿನ ಕಾಳಿಂಗ ನಾವಡ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಯಕ್ಷಗಾನ, ನಾಟಕವಲ್ಲದೆ ಹಲವಾರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಬೆಂಗಳೂರಿನ ಕಲಾಕದಂಬ ಆರ್ಟ್ ಸೆಂಟರ್ ಸಂಸ್ಥೆಯು ಯಕ್ಷಗಾನದ ಕಂಚಿನ ಕಂಠದ ಭಾಗವತರೆಂದೇ ಪ್ರಸಿದ್ಧರಾದ ಕರಾವಳಿಯ ಗಾನಕೋಗಿಲೆ ಖ್ಯಾತಿಯ ಭಾಗವತ ಕಾಳಿಂಗ ನಾವಡರ ನೆನಪಿನಲ್ಲಿ ಪ್ರತಿ ವರ್ಷ ಯಕ್ಷಗಾನ ಕ್ಷೇತ್ರದಲ್ಲಿನ ಪ್ರತಿಭಾನ್ವಿತರೋರ್ವರಿಗೆ ಕಾಳಿಂಗ ನಾವಡ ಪ್ರಶಸ್ತಿಯನ್ನು ನೀಡುತಿದೆ. ಪ್ರಶಸ್ತಿಯನ್ನು ದಿನಾಂಕ 12 ಅಕ್ಟೋಬರ್ 2025 ರಂದು ಸಂಜೆ ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು ಇಪ್ಪತೈದು ಸಾವಿರ ನಗದು, ಬೆಳ್ಳಿ ಫಲಕ, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ಒಳಗೊಂಡಿರುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

Read More

ಬೆಂಗಳೂರು : ಕಲ್ಪವೃಕ್ಷ ಟ್ರಸ್ಟ್ (ರಿ.) ಇದರ ಸಹಕಾರದೊಂದಿಗೆ ಅಂತರಂಗ ಬಹಿರಂಗ ತಂಡ ಪ್ರಸ್ತುತ ಪಡಿಸುವ ‘ಅನುಗ್ರಹ’ ಪೌರಾಣಿಕ ನಾಟಕದ ಪ್ರದರ್ಶನವನ್ನು ದಿನಾಂಕ 06 ಜುಲೈ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಬಸವನಗುಡಿಯ ವಾಡಿಯಾ ಸಭಾಂಗಣ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್)ದಲ್ಲಿ ಆಯೋಜಿಲಾಗಿದೆ. ಈ ನಾಟಕವನ್ನು ಎಚ್.ಎನ್. ರಾಮಕೃಷ್ಣಪ್ಪ ರಚಿಸಿದ್ದು, ಬಾಷ್ ರಾಘವೇಂದ್ರ ನಿರ್ದೇಶನ ಮಾಡಿದ್ದಾರೆ. ಬುಕ್ ಮೈ ಶೋನಲ್ಲಿ ಟಿಕೆಟ್ ಲಭ್ಯವಿದ್ದು, ನೇರ ಬುಕ್ಕಿಂಗ್‌ಗಾಗಿ 8660547776 ಸಂಖ್ಯೆಯನ್ನು ಸಂಪರ್ಕಿಸಬಹುದು. ಅಂತರಂಗ ಬಹಿರಂಗ ತಂಡದ 7ನೇ ನಿರ್ಮಾಣ ‘ಅನುಗ್ರಹ’ ನಾಟಕ. ಈ ಹಿಂದೆ ಸಾಮಾಜಿಕ ನಾಟಕಗಳನ್ನು ನಿರ್ಮಿಸಿ ಪ್ರೇಕ್ಷಕರ ಅಪಾರ ಮೆಚ್ಚುಗೆ ಪಡೆದಿದ್ದ ತಂಡ, ಮೊದಲ ಬಾರಿಗೆ ಪೌರಾಣಿಕ ನಾಟಕವನ್ನು ಪ್ರಸ್ತುತಪಡಿಸುತ್ತಿದೆ. ಈ ನಾಟಕವು ಏಕಲವ್ಯನ ಜೀವನಾಧಾರಿತವಾಗಿದೆ. ರಚನೆಕಾರರು ಈ ನಾಟಕದಲ್ಲಿ ನಾವು ಇಲ್ಲಿಯವರೆವಿಗೂ ಕೇಳಿರುವ ಏಕಲವ್ಯನ ಕಥೆಗಿಂತ ಭಿನ್ನವಾದ ಆಯಾಮವನ್ನು ನೀಡಿದ್ದಾರೆ. ಅದು “ಯಾವುದೇ ಗುರುವು ತನ್ನ ಶಿಷ್ಯರಿಗೆ ವಿದ್ಯೆ ಕರುಣಿಸಿದ ನಂತರ ಶಿಷ್ಯರಲ್ಲಿ ಎಂದೂ ವಿದ್ಯೆಗೇ…

Read More

ಪತ್ರಕರ್ತ, ಲೇಖಕ ಶಿವಾನಂದ ಕರ್ಕಿಯವರು ಸಿಂಗಾಪುರ, ಮಲೇಷಿಯಾ, ಥೈಲ್ಯಾಂಡ್ ನ ತಮ್ಮ ಪ್ರವಾಸಾನುಭವಗಳನ್ನು ಪ್ರಮುಖವಾಗಿ ಹೇಳಲು ಹೊರಟಿರುವ ಈ ಕೃತಿಯ ಶೀರ್ಷಿಕೆ ‘ಗಿರಗಿಟ್ಲೆ’ ಎಂದಿರುವುದೇ ಇದರ ವೈಶಿಷ್ಟ್ಯತೆಗೊಂದು ನಿದರ್ಶನ. ಶೀರ್ಷಿಕೆಯ ಅಡಿಸಾಲು ‘ವಿದೇಶದಲ್ಲೂ ನಾವು ಹೀಗೆ’. ಹಿಂಬದಿ ರಕ್ಷಾಪುಟದಲ್ಲಿ ಹಲವು ದಶಕಗಳ ಹಿಂದೆ ಮಕ್ಕಳಾಟಕ್ಕಾಗಿ ಹಲಸಿನೆಲೆಯಿಂದ ಮಾಡುತ್ತಿದ್ದ ಗಿರಗಿಟ್ಲೆಯ ಚಿತ್ರವೂ ಇದೆ. ವಿದೇಶ ಪ್ರವಾಸಾನಂತರ ಪ್ರವಾಸಾನುಭವಗಳ ಗುಂಗು ತಲೆತುಂಬ ಗಿರಕಿ ಹೊಡೆಯುತ್ತಿದ್ದುದನ್ನು ಲೇಖಕರು ಗಿರಗಿಟ್ಲೆಗೆ ಹೋಲಿಸಿದ್ದಾರೆ. ಚಿಂತಕ ಜಿ.ಎಸ್. ರಾಜೇಂದ್ರರ ಮುನ್ನುಡಿ ಹೊಂದಿರುವ ನೂರಾಎಂಟು ಪುಟಗಳ ಈ ಕೃತಿ ‘ಧ್ವನಿ ಪ್ರಕಾಶನ’ದ ಪ್ರಕಟಣೆ. ಕೊರೋನಾ ಕರಾಳತೆಯ ಫಲಾನುಭವಿಯಾಗಿ ಪಾರ್ಶ್ವವಾಯುವಿಗೆ ತುತ್ತಾಗಿ ವೈದ್ಯರಿಂದ ನಲವತ್ತೆಂಟು ಗಂಟೆ ಏನೂ ಹೇಳಲಾಗದು ಎಂದೂ, ಪ್ರಜ್ಞೆ ಬಂದರೂ ಉಸಿರಾಡುವ ಜೀವಚ್ಛವದಂತಿರಬೇಕಾಗುತ್ತದೆ ಎಂದೂ ಹೇಳಿಸಿಕೊಂಡು, ವೈದ್ಯರ ಊಹೆ ಹುಸಿಯಾಗಿಸಿ ಮರುಹುಟ್ಚು ಪಡೆದ ಕರ್ಕಿಯವರು ಮತ್ತೆ ಬೈಪಾಸ್ ಸರ್ಜರಿಗೆ ಒಳಗಾಗುತ್ತಾರೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಆಘಾತಗಳ‌ ಮೇಲೆ ಆಘಾತಗಳನ್ನೆದುರಿಸಿಯೂ ತಮ್ಮ ಮನೋಬಲದಿಂದಲೇ ಇವೆಲ್ಲಕ್ಕೂ ಸೆಡ್ಡು ಹೊಡೆದು ನವ ಜೀವನಕ್ಕೆ ಮುಖ ಮಾಡಿ…

Read More