Author: roovari

ಬ್ರಹ್ಮಾವರ : ಮಂದಾರ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ (ರಿ.) ಬೈಕಾಡಿ, ಬ್ರಹ್ಮಾವರ ಉಡುಪಿ ಇದರ ವತಿಯಿಂದ ‘ಮಂದಾರ ರಂಗೋತ್ಸವ 2025’ ಸಮಾರಂಭವನ್ನು ದಿನಾಂಕ 04 ಏಪ್ರಿಲ್ 2025ರಿಂದ 06 ಏಪ್ರಿಲ್ 2025ರವರೆಗೆ ಪ್ರತಿದಿನ ಸಂಜೆ 7-00 ಗಂಟೆಗೆ ಬ್ರಹ್ಮಾವರದ ಹೋಲಿ ಫ್ಯಾಮಿಲಿ ಚರ್ಚ್ ಆವರಣದಲ್ಲಿರುವ ನಿರ್ಮಲ ಆಂಗ್ಲ ಮಾಧ್ಯಮ ಶಾಲಾ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 04 ಏಪ್ರಿಲ್ 2025ರಂದು ಅರುಣ್ ಲಾಲ್ ಕೇರಳ ಇವನ ರಂಗಪಠ್ಯ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮಂಗಳೂರಿನ ಅಸ್ತಿತ್ವ (ರಿ.) ತಂಡದವರಿಂದ ‘ಮತ್ತಾಯ’, ದಿನಾಂಕ 05 ಏಪ್ರಿಲ್ 2025ರಂದು ರಂಜಿತ್ ಶೆಟ್ಟಿ ಕುಕ್ಕುಡೆ ಇವರ ನಿರ್ದೇಶನದಲ್ಲಿ ತೆಕ್ಕಟ್ಟೆಯ ಧಮನಿ ಟ್ರಸ್ಟ್ (ರಿ.) ತಂಡದವರಿಂದ ‘ಸೂರ್ಯ ಬಂದ’ ಮತ್ತು ದಿನಾಂಕ 06 ಏಪ್ರಿಲ್ 2025ರಂದು ರೋಹಿತ್ ಎಸ್. ಬೈಕಾಡಿ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಬೈಕಾಡಿಯ ಮಂದಾರ (ರಿ.) ತಂಡದವರಿಂದ ‘ಬೆತ್ತಲಾಟ’ ನಾಟಕಗಳು ಪ್ರದರ್ಶನಗೊಳ್ಳಲಿದೆ.

Read More

ಉಡುಪಿ: ಮೇ ತಿಂಗಳಲ್ಲಿ ನಡೆಯುವ ಉಡುಪಿ ತಾಲೂಕು 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ವಿಶ್ರಾಂತ ಪ್ರಾಚಾರ್ಯ, ಯಕ್ಷಗಾನ ಕಲಾವಿದ, ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷರಾದ ಪ್ರೊ. ಎಂ. ಎಲ್. ಸಾಮಗ ಆಯ್ಕೆಯಾಗಿದ್ದಾರೆ. ಕೊಡವೂರು ಶಂಕನಾರಾಯಣ ದೇವಸ್ಥಾನದ ಸಭಾಂಗಣದಲ್ಲಿ ಕ. ಸಾ. ಪ. ಉಡುಪಿ ತಾಲೂಕು ಘಟಕದ ಅಧ್ಯಕ್ಷರಾದ ರವಿರಾಜ್ ಎಚ್‌.ಪಿ. ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಸಮ್ಮೇಳನ 2ದಿನ ನಡೆಯಲಿದೆ ಎಂದು ಕ. ಸಾ. ಪ. ಉಡುಪಿ ತಾಲೂಕು ಘಟಕದ ಗೌರವ ಕಾರ್ಯದರ್ಶಿಗಳಾದ ಜನಾರ್ದನ ಕೊಡವೂರು ಮತ್ತು ರಂಜನಿ ವಸಂತ್ ತಿಳಿಸಿದ್ದಾರೆ.

Read More

ಕಾಸರಗೋಡು : ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ ), ಕಾಸರಗೋಡು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ, ‘ಅಮ್ಮ’ ಇವೆಂಟ್ ಮ್ಯಾನೇಜ್ಮೆಂಟ್ ಕನ್ನಡ ಗ್ರಾಮ ಪಾರೆಕಟ್ಟೆ, ವಿ. ಕೆ. ಎಂ. ಕಲಾವಿದರು (ರಿ.) ಬೆಂಗಳೂರು, ಸಹಯೋಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಬೆಂಗಳೂರು, ಸಹಕಾರಲ್ಲಿ ಕರ್ನಾಟಕ ಗಡಿನಾಡ ಉತ್ಸವ, ವಿಶ್ವ ರಂಗಭೂಮಿ ದಿನಾಚರಣೆ – 2025, ಕಾಸರಗೋಡು ಕನ್ನಡ ನಾಟಕೋತ್ಸವ, ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನ ಹಾಗೂ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ರಜತ ಮಹೋತ್ಸವ ಕಾರ್ಯಕ್ರಮವು ದಿನಾಂಕ 27 ಮಾರ್ಚ್ 2025 ರಂದು ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿಯ ಸಂಸ್ಥಾಪಕ ಪ್ರಧಾನ ಸಂಚಾಲಕರಾದ ಡಾಕ್ಟರ್ ಎಂ. ಜಿ. ಆರ್. ಅರಸ್ ಮಾತನಾಡಿ “ಕಾಸರಗೋಡು ಕನ್ನಡ ಗ್ರಾಮದ ಸ್ಥಾಪನೆಯು ವಿಶ್ವದಲ್ಲೇ ಪ್ರಥಮ. ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ 2000ದಲ್ಲಿ ಸ್ಥಾಪನೆಗೊಂಡು…

Read More

ಪುತ್ತೂರು : ಪುತ್ತೂರಿನ ನಾಟ್ಯರಂಗ ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಪ್ರಸ್ತುತಪಡಿಸಿದ ‘ವಾಚಿಕಾಭಿನಯ’ ಪ್ರಸ್ತುತಿಯು ದಿನಾಂಕ 27 ಮಾರ್ಚ್ 2025ರಂದು ನಡೆಯಿತು. ಈ ಕಾರ್ಯಕ್ರಮವನ್ನು ತಾಳವಾದ್ಯ ನುಡಿಸುವುದರ ಮೂಲಕ ಉದ್ಘಾಟಿಸಿ ವಿವೇಕಾನಂದ ಕನ್ನಡ ಶಾಲೆಯ ಮುಖ್ಯ ಗುರುಗಳಾದ ಹಾಗೂ ನಾಟ್ಯರಂಗದ ಪೋಷಕರಾದ ಆಶಾ ಬೆಳ್ಳಾರೆ “ಮಕ್ಕಳ ಕಲ್ಪನಾ ಶಕ್ತಿ, ಕುತೂಹಲ, ಸೂಕ್ಷ್ಮತೆಯ ಭಾವ ವಿಕಾಸದಲ್ಲಿ ಕಥಾ ವಾಚನದ ಪಾತ್ರ ಬಹಳ ಪ್ರಮುಖವಾಗಿದೆ. ಈ ದಿಶೆಯಿಂದ ರಂಗಭೂಮಿ ಕಾರ್ಯ ನಿರ್ವಹಿಸುತ್ತಿದ್ದು, ಎಳವೆಯಿಂದಲೇ ಈ ಬಗ್ಗೆ ಆಸಕ್ತಿ ಮೂಡಿಸಿಕೊಳ್ಳಬೇಕು” ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸುಕನ್ಯ ಕನಾರಳ್ಳಿ ಕನ್ನಡಕ್ಕೆ ಅನುವಾದಿಸಿದ ಕಮಲಾದಾಸ್ ಅವರ ಮಲಯಾಳ ಕಥೆ ‘ಬೇಸಿಗೆ ರಜಾಕಾಲ’ ಹಾಗೂ ರಘುನಾಥ ಚಹ ಅವರ ‘ಸುಂಯ್ ದುಬಕ್ ಟುಪಕ್’ ಕಥೆಗಳನ್ನು ವಾಚಿಕಾಭಿನಯದಲ್ಲಿ ಪ್ರಸ್ತುತಪಡಿಸಿದವರು ನಾಟ್ಯ ರಂಗ ನಿರ್ದೇಶಕರೂ, ಶಾಸ್ತ್ರೀಯ ಹಾಗೂ ರಂಗಭೂಮಿ ಕಲಾವಿದರಾದ ವಿದುಷಿ ಮಂಜುಳ ಸುಬ್ರಹ್ಮಣ್ಯ ಮತ್ತು ವಿನಿತಾ ಶೆಟ್ಟಿ ಇವರು. ಪ್ರಸ್ತುತಿಯ ಅನಂತರ ನಡೆದ ಸಂವಾದದಲ್ಲಿ ನಾಟ್ಯರಂಗದ ಪೋಷಕರು ಮತ್ತು ಮಕ್ಕಳು…

Read More

ಮೈಸೂರು : ಮೈಸೂರಿನ ಶ್ರೀಗುರು ಕಲಾ ಶಾಲೆ ಅರ್ಪಿಸುವ ‘ಪುಟಾಣಿ ಪರ್ ಪಂಚ’ ಮಕ್ಕಳ ಬೇಸಿಗೆ ಶಿಬಿರ -2025ವನ್ನು ದಿನಾಂಕ 10 ಏಪ್ರಿಲ್ 2025ರಿಂದ 01 ಮೇ 2025ರವರೆಗೆ ಮೈಸೂರು ಕುವೆಂಪು ನಗರದ ವಾಸವಿ ವಿದ್ಯಾನಿಕೇತನದಲ್ಲಿ ಆಯೋಜಿಸಲಾಗಿದೆ. 4ರಿಂದ 14 ವರ್ಷ ವಯಸ್ಸಿನ ಮಕ್ಕಳು ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 4-00 ಗಂಟೆ ತನಕ ನಡೆಯಲಿರುವ ಈ ಶಿಬಿರದ ಪ್ರವೇಶಾತಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ 9980794690.

Read More

ಮೂಡಬಿದಿರೆ : ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದಲ್ಲಿ ‘ವಿಶ್ವರಂಗಭೂಮಿ ದಿನಾಚರಣೆ’ ಅಂಗವಾಗಿ ‘ರಂಗಗೀತೆ- ಉಪನ್ಯಾಸ- ಸನ್ಮಾನ- ನಾಟಕ’ ಕಾರ್ಯಕ್ರಮವು ದಿನಾಂಕ 28 ಮಾರ್ಚ್ 2025ರ ಶುಕ್ರವಾರದಂದು ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ “ರಂಗ ಚಟುವಟಿಕೆಯೇ ನನ್ನ ಬದುಕಿನ ಯಶಸ್ಸಿನ ಸೂತ್ರ. ಸಮಾಜ ಮತ್ತು ಬದುಕಿಗೆ ರಂಗಭೂಮಿ ಕೊಡುಗೆ ಅಪಾರ. ಪಠ್ಯಕ್ಕಿಂತ ರಂಗ ಚಟುವಟಿಕೆಗಳ ನೆನಪು ನನಗೆ ಇಂದಿಗೂ ಚಿರಸ್ಥಾಯಿಯಾಗಿದೆ. ‘ಭೋಜ ಶೆಟ್ಟಿ ನಮ್ಮ ಸಮಕಾಲೀನರು. ರಂಗದಲ್ಲಿ ಅವರ ಒಡನಾಟವೇ ಸುಂದರ. ಲಂಕೇಶ್ ಬರೆದ ‘ಪೋಲಿಸರಿದ್ದಾರೆ ಎಚ್ಚರಿಕೆ’ ನಾಟಕದ ‘ರುದ್ರಮೂರ್ತಿ’ ಪಾತ್ರ ಸೇರಿದಂತೆ ತಾವು ನಿರ್ವಹಿಸಿದ ‘ಗುಂಡ’, ‘ತುಘಲಕ್’, ‘ಬಯ್ಯಮಲ್ಲಿಗೆ’ ನಾಟಕದಲ್ಲಿ ತಾವು ನಿರ್ವಹಿಸಿದ ‘ವಿದೂಷಕ’ ಪಾತ್ರ ಸೇರಿದಂತೆ ಎಲ್ಲ ಪಾತ್ರಗಳನ್ನು ತೃಪ್ತ ಭಾವದಿಂದ ನಿರ್ವಹಿಸಿದ್ದೇನೆ. ವಿಠಲ್ ಮಾಸ್ಟರ್ ಮೂಲಕ ಭರತ ನಾಟ್ಯ ಕಲಿತು ದೇಶ- ವಿದೇಶಗಳಲ್ಲಿ ಪ್ರದರ್ಶನ ನೀಡಿದ್ದೇನೆ. ‘ಮೂಕಾನಭಿಯ, ಮ್ಯಾಜಿಕ್ ಕಲಿತು ಪ್ರಯೋಗಿಸಿದ…

Read More

ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ರಂಗವಾಹಿನಿ (ರಿ.) ಚಾಮರಾಜನಗರ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ದಿನಾಂಕ 27 ಮಾರ್ಚ್ 2025ರಂದು ಡಾ. ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ‘ವಿಶ್ವ ರಂಗಭೂಮಿ ದಿನಾಚರಣೆ’ಯ ಅಂಗವಾಗಿ ಏರ್ಪಡಿಸಿದ್ದ ‘ಅನ್ನ’ ಚಲನಚಿತ್ರದ ಕಥೆಗಾರರು ಹಾಗೂ ‘ಬೆಲ್ಲದ ದೋಣಿ’ ನಾಟಕ ಕೃತಿಯ ಕರ್ತೃಗಳಾದ ಹನೂರು ಚೆನ್ನಪ್ಪನವರ ಸ್ವರಚಿತ ನಾಟಕ ಅಮೋಘವಾಗಿ ಮೂಡಿಬಂದಿತು. ‘ಬೆಲ್ಲದ ದೋಣಿ’ ನಾಟಕ ಬಡ ಮಧ್ಯಮ ವರ್ಗದ ಶೋಷಿತ ಕುಟುಂಬವು ಸಾಲದ ಸುಳಿಯಲ್ಲಿ ಸಿಲುಕಿ ಹೇಗೆ ಸಾಲದ ಒತ್ತಡದಿಂದ ಹೊರಬರಲಾಗದೆ ತಡಬಡಿಸುತ್ತದೆ ಎಂಬುದು ಮನಮುಟ್ಟುವಂತೆ ಕಟ್ಟಿಕೊಡುತ್ತದೆ. ಸಮಾಜದಲ್ಲಿ ಶೋಷಿತರು ಎಷ್ಟೇ ಉನ್ನತ ಸ್ಥಾನಕ್ಕೆ  ಏರಿದರೂ ಅವರನ್ನು ಜಾತಿಯ ಸಂಕುಚಿತ ಮನೋಭಾವದಿಂದ ನೋಡುವ ಪರಿ ಬದಲಾಗುವುದಿಲ್ಲ ಎಂಬುದನ್ನು ಕುಟುಂಬದ ಯಜಮಾನ ತಾನು ಎಷ್ಟೇ ಬಡ್ಡಿಗೆ ಸಾಲ ಮಾಡಿಕೊಂಡಿದ್ದರೂ ಶಿವಣ್ಣ ಎಂಬ ವ್ಯಕ್ತಿಯಿಂದ ಐದು ಸಾವಿರ ಬಡ್ಡಿಗೆ ಸಾಲ ಮಾಡಿ ಅಯ್ಯಪ್ಪನ ಮಾಲೆ ಧರಿಸಿಕೊಂಡು ಭಯ ಭಕ್ತಿಯಿಂದ ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ಹೋಗುವ ಸಿದ್ದತೆ ಮಾಡಿಕೊಂಡಿರುತ್ತಾನೆ.…

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ಪಾಕ್ಷಿಕ ತಾಳಮದ್ದಳೆಯ ಪ್ರಯುಕ್ತ ‘ಕರ್ಣಾವಸಾನ’ ಎಂಬ ಆಖ್ಯಾನವು ದಿನಾಂಕ 29 ಮಾರ್ಚ್ 2025ರಂದು ಶ್ರೀ ಆಂಜನೇಯ ಮಂತ್ರಾಲಯದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಯಲ್.ಯನ್. ಭಟ್, ಸತೀಶ್ ಇರ್ದೆ, ಆನಂದ ಸವಣೂರು ಭಾಗವತರುಗಳಾಗಿ ಚೆಂಡೆ ಮದ್ದಳೆಯಲ್ಲಿ ಅಚ್ಯುತ ಪಾಂಗಣ್ಣಾಯ ಕೋಡಿಬೈಲು ಮತ್ತು ಮಾಸ್ಟರ್ ಅನಿಶ್ ಕೃಷ್ಣ ಪುಣಚ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀಕೃಷ್ಣ (ಭಾಸ್ಕರ್ ಬಾರ್ಯ), ಕರ್ಣ (ಗುಂಡ್ಯಡ್ಕ ಈಶ್ವರ ಭಟ್), ಅರ್ಜುನ (ಗುಡ್ಡಪ್ಪ ಬಲ್ಯ), ವೃದ್ಧ ವಿಪ್ರ‌ (ಮಾಂಬಾಡಿ ವೇಣುಗೋಪಾಲ ಭಟ್‌) ಸಹಕರಿಸಿದರು. ಟಿ. ರಂಗನಾಥ ರಾವ್ ಸ್ವಾಗತಿಸಿ, ವಂದಿಸಿದರು. ಹರ್ಷ ಎ.ಯಸ್. ಪುಣಚ ಸಹಕರಿಸಿದರು.

Read More

ಮಂಗಳೂರು : ಕುಳಾಯಿ ಹೊಸಬೆಟ್ಟು ಇಲ್ಲಿರುವ ಶ್ರೀ ಶಾರದಾ ನಾಟ್ಯಾಲಯದ ವತಿಯಿಂದ ‘ತ್ರಿದಶ ನಾಟ್ಯ ಕಲೋತ್ಸವ’ ಕಾರ್ಯಕ್ರಮವನ್ನು ದಿನಾಂಕ 05 ಏಪ್ರಿಲ್ 2025ರಂದು ಸಂಜೆ 5-00 ಗಂಟೆಗೆ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ನೃತ್ಯ ವೈವಿಧ್ಯ, ತುಳು ನಾಟಕ ಪ್ರದರ್ಶನ ಹಾಗೂ ಸನ್ಮಾನ ಕಾರ್ಯಕ್ರಮಗಳು ನಡೆಯಲಿದೆ. ಮಂಗಳೂರಿನ ಸನಾತನ ನಾಟ್ಯಾಲಯದ ವಿದುಷಿ ಶಾರದಾಮಣಿ ಶೇಖರ್ ಇವರು ನಟರಾಜ ದೀಪ ಪ್ರಜ್ವಲನೆ ಮಾಡಿ ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಗೋವಿಂದದಾಸ ಪದವಿ ಪೂರ್ವ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕರಾದ ಪ್ರೊ. ರಮೇಶ್ ಭಟ್ ಎಸ್.ಜಿ. ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ. ಸ್ಪರ್ಶ ಕಲಾ ತಂಡದ ನವರಸ ಕಲಾವಿದರು ಸುರತ್ಕಲ್ ಇವರಿಂದ ವಿನೋದ್ ಶೆಟ್ಟಿ ಕೃಷ್ಣಾಪುರ ಇವರ ನಿರ್ದೇಶನದಲ್ಲಿ ‘ಎನ್ನಂದಿನ’ ತುಳು ಕುತೂಹಲಕಾರಿ ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ. ಕಲಾಗುರ್ಕಾರೆ ರಮೇಶ್ ಭಟ್ ಎಸ್.ಜಿ. ನಿರ್ಮಾಣ, ಅರುಣ್ ವಿ. ಸುರತ್ಕಲ್ ಸಮಗ್ರ ನಿರ್ವಹಣೆ, ತುಳುವ ಬೊಲ್ಪು…

Read More

ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ದಶಮ ಸಂಭ್ರಮದ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭ ನಗರದ ಪುರಭವನದಲ್ಲಿ ದಿನಾಂಕ 28 ಮಾರ್ಚ್ 2025ರಂದು ಜರುಗಿತು. ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪಟ್ಲ ಫೌಂಡೇಶನ್ ಟ್ರಸ್ಟಿನ ಗೌರವಾಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ ಮಾತನಾಡಿ “ನಾನು ಯಕ್ಷಧ್ರುವ ಪಟ್ಲ ಫೌಂಡೇಶನ್, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮತ್ತಿತರ ಸಂಘಟನೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ನಾಡಿದ್ದು ನಡೆಯಲಿರುವ ಯಕ್ಷಧ್ರುವ ಪಟ್ಲ ದಶಮ ಸಂಭ್ರಮ ಕಾರ್ಯಕ್ರಮ ದೊಡ್ಡ ಯಶಸ್ಸು ಕಾಣಲಿದೆ. ಯಕ್ಷಗಾನ ಕ್ಷೇತ್ರ ಇಂದು ಪಟ್ಲ ಸತೀಶ್ ಶೆಟ್ಟಿ ಅವರಿಂದ ನಾಡಿನೆಲ್ಲೆಡೆ ಬೆಳಗುತ್ತಿದೆ. ಇದು ಬಹಳ ಸಂತಸದ ವಿಚಾರ. ಒಂದು ಸಂಸ್ಥೆ ನಡೆಸುವುದು ಸುಲಭದ ಮಾತಲ್ಲ. ಇಷ್ಟು ಜನರನ್ನು ಸೇರಿಸಿಕೊಂಡು ಜೊತೆಗೆ ಕೊಂಡೊಯ್ಯುವುದು ಬಹಳ ಕಷ್ಟಕರವಾದುದು. ಯಕ್ಷಗಾನದ ಮೇಲಿನ ಭಕ್ತಿ ಶ್ರದ್ಧೆಯಿಂದ ನಾವೆಲ್ಲರೂ ಜೊತೆಯಾಗಿದ್ದೇವೆ. ಕಷ್ಟದಲ್ಲಿರುವ ಕಲಾವಿದರಿಗೆ ನೆರವಾಗುತ್ತಿರುವ ಇಂತಹ ಸಂಘಟನೆ ಇನ್ನಷ್ಟು ಬೆಳಗಲಿ” ಎಂದು ಶುಭ ಹಾರೈಸಿದರು. ಪಟ್ಲ…

Read More