Subscribe to Updates
Get the latest creative news from FooBar about art, design and business.
Author: roovari
‘ದಾಸರೆಂದರೆ ಪುರಂದರ ದಾಸರಯ್ಯ’ ಎಂಬ ಸುವಿಖ್ಯಾತಿ ಪಡೆದ ದಾಸಶ್ರೇಷ್ಠ ಪುರಂದರ ದಾಸರು ಸುಮಾರು ಐದು ಲಕ್ಷದವರೆಗೂ ಕೀರ್ತನೆಗಳನ್ನು ರಚಿಸಿದ್ದು, ‘ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವಂತೆ ಅವರು ರಚಿಸದೇ ಇರುವ ವಿಷಯವಿಲ್ಲ. ನಮ್ಮ ಸುತ್ತಮುತ್ತಲ ಬದುಕಿನ ಪ್ರತಿಯೊಂದು ಸಂಗತಿಗಳ ಬಗ್ಗೆಯೂ ವಸ್ತುನಿಷ್ಠವಾಗಿ, ಅರ್ಥಪೂರ್ಣವಾಗಿ ವಿಶ್ಲೇಷಣಾತ್ಮಕವಾಗಿ ನಿರೂಪಿಸಿದ್ದಾರೆ. ಹಾಗೆಯೇ ಲೋಕದ ಅಂಕು-ಡೊಂಕು, ಡಾಂಭಿಕತೆಗಳ ಬಗ್ಗೆ, ವಿಪರ್ಯಾಸಗಳ ಬಗ್ಗೆ ಬಹು ಮಾರ್ಮಿಕವಾಗಿ ವಿಡಂಬಿಸಿ, ಜನರ ಕಣ್ತೆರೆಸುವ ಪ್ರಯತ್ನಿಸಿದ್ದಾರೆ. ಅವರ ಸ್ವಂತ ಜೀವನವೇ ಬದುಕಿನ ತಾತ್ವಿಕ ತಿಳುವಳಿಕೆಗೊಂದು ಉತ್ತಮ ಮಾದರಿ. ಅದು ಅಷ್ಟೇ ಹೃದಯಂಗಮವಾದ ಒಂದು ಕಥಾನಕ. ಲೌಕಿಕ ಮೋಹ-ವಿರಕ್ತಿಗಳಿಗೊಂದು ಪ್ರಾತ್ಯಕ್ಷಿಕ ನಿದರ್ಶನ. ಹೀಗಾಗಿ ಅವರು ಲೋಕಾನುಭವದ ಹಿನ್ನಲೆಯಲ್ಲಿ ರಚಿಸಿರುವ ಗೀತೆಗಳಲ್ಲಿ ಎಲ್ಲ ರಸ-ಭಾವ-ಗಂಧಗಳೂ ಮೇಳೈವಿಸಿವೆ. ಪುರಂದರದಾಸರು ತಮ್ಮ ಅನೇಕ ಕೃತಿಗಳಲ್ಲಿ ನಿದರ್ಶನದ ಕಥೆಗಳನ್ನು ಮುಂದಿಡುತ್ತಾ ರಸಾನುಭವದ ಪರಾಕಾಷ್ಠೆಯನ್ನು ನವರಸಗಳ ಝೇಂಕಾರದಲ್ಲಿ ಹೊರಹೊಮ್ಮಿಸುವರು. ಅವರ ಪದಗಳಲ್ಲಿ ತುಂಬಿದ ರಸಜೇನು ಹೃದಯಸ್ಪರ್ಶಿ. ಅಂಥ ಬಹು ಸೂಕ್ತವಾದ ಅರ್ಥಪೂರ್ಣ ಕೃತಿಗಳನ್ನು ಆರಿಸಿಕೊಂಡು, ಅದನ್ನು ಸಮರಸ ಮಾಲೆಯಲ್ಲಿ ಹದನಾಗಿ ಹೆಣೆದು, ತಮ್ಮ…
ಮಂಗಳೂರು : ಮಾಂಡ್ ಸೊಭಾಣ್ ಮತ್ತು ಕಲಾಂಗಣ್ ವತಿಯಿಂದ ನೆಲ್ಲು ಪೆರ್ಮನ್ನೂರು ಇವರ ನಿರ್ದೇಶನದಲ್ಲಿ ‘ಎಸ್.ಬಿ.ಜಿ. ಟ್ರಾವೆಲ್ಸ್ ರೂಟ್ ನಂ.2’ ಕೊಂಕಣಿ ಹಾಸ್ಯ ನಾಟಕ ಪ್ರದರ್ಶನವನ್ನು ದಿನಾಂಕ 06 ಏಪ್ರಿಲ್ 2025ರಂದು ಸಂಜೆ ಘಂಟೆ 6-30ಕ್ಕೆ ಶಕ್ತಿನಗರದ ಕಲಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ನಾಟಕವನ್ನು ಜೆ.ಪಿ. ತುಮಿನಾಡು ಇವರು ರಚಿಸಿದ್ದು, ರವೀಣ್ ಮಾರ್ಟಿಸ್ ಸಂಗೀತ ನೀಡಿರುತ್ತಾರೆ.
ಚನ್ನರಾಯಪಟ್ಟಣ : ಸಾಮಾನ್ಯವಾಗಿ ವಿಶ್ವ ರಂಗಭೂಮಿ ದಿನಾಚರಣೆಯ ಪ್ರಯುಕ್ತ ವೇದಿಕೆಯ ಕಾರ್ಯಕ್ರಮ, ನಾಟಕ ಮಾಡುವುದು, ರಂಗಭೂಮಿ ಕುರಿತು ಉಪನ್ಯಾಸ ಹೀಗೆ ಕಾರ್ಯಕ್ರಮ ಸಂಯೋಜನೆ ವಾಡಿಕೆ. ಆದರೆ ನಮ್ಮ ರಂಗ ಲೋಕದಲ್ಲಿ ದಿನಾಂಕ 27 ಮಾರ್ಚ್ 2025ರಂದು ಈ ಬಾರಿ ವಿಶ್ವ ರಂಗಭೂಮಿ ದಿನಾಚರಣೆಯನ್ನು ಬಹಳ ವಿಶೇಷವಾಗಿ ಆಚರಣೆ ಮಾಡಿದೆವು. ವೇದಿಕೆಯ ಮೇಲೆ ನಾಟಕಗಳಿಗೆ ತಯಾರಿಸಿದ ರಂಗ ಪರಿಕರಗಳು, ವಸ್ತ್ರಗಳು ಒಂದು ಕಡೆ, ಮತ್ತೊಂದು ಕಡೆ ನಮ್ಮ ಪೌರಾಣಿಕ ಸಮವಸ್ತ್ರಗಳು, ರಂಗ ಪರಿಕರಗಳನ್ನು ಪ್ರದರ್ಶನಕ್ಕಿಟ್ಟಿದ್ದು, ನಂತರ ಎಲ್ಲಾ ಕಲಾವಿದರು ಒಂದು ಪಾತ್ರಾಭಿನಯ ಆಯ್ಕೆ ಮಾಡಿಕೊಂಡು, ಎರಡೂ ವಿಭಾಗದ ಸಮವಸ್ತ್ರಗಳು, ರಂಗ ಪರಿಕರಗಳನ್ನು ಆಯ್ಕೆ ಮಾಡಿ ಪ್ರದರ್ಶಿಸುವುದು. ಪ್ರದರ್ಶನ ನೀಡಿದ ಒಂದು ಪಾತ್ರ ಎರಡೂ ವಿಭಾಗದ ಸಮವಸ್ತ್ರಗಳಿಂದ ತಮಗೆ ಆದ ಅನುಭವ ಏನು ಎಂಬುದರ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಳ್ಳಬೇಕು ಎಂಬುದು ಕಾರ್ಯಕ್ರಮದ ಉದ್ದೇಶ. ಎಲ್ಲಾ ಕಲಾವಿದರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಅಭಿನಯದಲ್ಲಿ ಒಂದು ವಸ್ತ್ರವಿನ್ಯಾಸ ಹೇಗೆ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ, ಜೊತೆಗೆ ಕಲಾವಿದನ ಮೇಲೆ…
ಪುತ್ತೂರು: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಪುತ್ತೂರು ವತಿಯಿಂದ ಪ್ರತಿವರ್ಷ ಕೊಡ ಮಾಡುವ ‘ಸ್ವರ್ಣ ಸಾಧನಾ’ ಪ್ರಶಸ್ತಿಗೆ ಈ ಬಾರಿ ಯಕ್ಷ ಗಾನ ಅರ್ಥಧಾರಿ, ಸಂಶೋಧಕ, ಸಂಸ್ಕೃತಿ ಚಿಂತಕ, ಡಾ. ಎಂ. ಪ್ರಭಾಕರ ಜೋಶಿ ಇವರನ್ನು ಆಯ್ಕೆ ಮಾಡಲಾಗಿದೆ. ನಿವೃತ್ತ ನೌಕರರ ಸಂಘದ ಸ್ವರ್ಣ ಮಹೋತ್ಸವ ನೆನಪಿಗಾಗಿ ನಾನಾ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡಿದ ಜಿಲ್ಲೆಯ ಸಾಧಕರನ್ನು ಗುರುತಿಸಿ ಕಳೆದ 3 ವರ್ಷಗಳಿಂದ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಯನ್ನು 1 ಮೇ 2025ರಂದು ಪುತ್ತೂರು ಜೈನಭವನ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನಿಸಲಾಗುವುದು.
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಮುಖ ದತ್ತಿಗಳಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ, ಕುವೆಂಪು ಸಿರಿಗನ್ನಡ ದತ್ತಿ, ನಾಗಡಿಕೆರೆ-ಕಿಟ್ಟಪ್ಪ ಗೌಡ ರುಕ್ಮಿಣಿ ತೀರ್ಥಹಳ್ಳಿ ದತ್ತಿ, ಮಾಹಿತಿ ಹಕ್ಕು ತಜ್ಞ ಜೆ.ಎಂ. ರಾಜಶೇಖರ ದತ್ತಿ ಹಾಗೂ ಶ್ರೀಮತಿ ನಿಂಗಮ್ಮ ಹುಚ್ಚೇಗೌಡ ಕೋಡಿಹೊಸಹಳ್ಳಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 28 ಮಾರ್ಚ್ 2025ರಂದು ನಡೆಯಿತು. ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ “ಕನ್ನಡ ಭಾಷೆಗೆ ತನ್ನದೇ ಆದ ಪರಂಪರೆ ಮತ್ತು ಇತಿಹಾಸವಿದೆ. ಹಾಗೆ ಕಾಲಕಾಲಕ್ಕೆ ಸಂಕಷ್ಟಗಳೂ ಎದುರಾಗಿವೆ, ಅಂತಹ ಸಂದರ್ಭದಲ್ಲಿ ಕನ್ನಡಪರ ಹೋರಾಟಗಳು ಅದನ್ನು ಗಟ್ಟಿಗೊಳಿಸಿವೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ದತ್ತಿಗಳು ಬೆನ್ನೆಲುಬಿದ್ದ ಹಾಗೆ. ಇದನ್ನು ಸ್ಥಾಪಿಸಿದ ಮಹನೀಯರು ಮತ್ತು ಅವರ ರೂಪಿಸಿದ ಉನ್ನತ ಆಶಯಗಳು ನಾಡು-ನುಡಿಗೆ ದುಡಿದವರನ್ನು ಗುರುತಿಸುವ ಮಹತ್ವದ ಕಾರ್ಯಕ್ಕೆ ನೆರವು ನೀಡುತ್ತಿವೆ. ಇವತ್ತು ಪ್ರದಾನವಾಗುತ್ತಿರುವ ದತ್ತಿ…
ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ (ಇಂಟಾಕ್)ನ ಮಂಗಳೂರು ಶಾಖೆಯು ಪ್ರಸ್ತುತ ಪಡಿಸುವ ‘ನಾಟ್ಯ ಚಾರಿ’ ವಿದುಷಿ ಅಯನ ಪೆರ್ಲ ಇವರಿಂದ ಭರತನಾಟ್ಯ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಯನ್ನು ದಿನಾಂಕ 04 ಏಪ್ರಿಲ್ 2025ರಂದು ಕೊಡಿಯಾಲ್ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಮುರಳೀಧರ ಶೆಟ್ಟಿ ಇವರು ದೀಪ ಪ್ರಜ್ವಲನೆ ಮಾಡಿ ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಧರ್ಮದರ್ಶಿ ಹರಿಕೃಷ್ಣ ಪುನರೂರು ಮತ್ತು ವಿದುಷಿ ಶಾರದಾಮಣಿ ಶೇಖರ್ ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ತುಳು ಪರಿಷತ್ ಕುಡ್ಲ ಸಹಭಾಗಿತ್ವದಲ್ಲಿ 2ನೇ ವಿದ್ಯಾರ್ಥಿ ತುಳು ಸಮ್ಮೇಳನವು ದಿನಾಂಕ 26 ಮಾರ್ಚ್ 2025ರಂದು ಮಂಗಳೂರು ಪುರಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಧಾನ ಸಭೆಯ ಸ್ಪೀಕರ್ ಯು. ಟಿ. ಖಾದರ್ ಮಾತನಾಡಿ “ಗ್ರಾಮ ಪಂಚಾಯತ್ ಮಟ್ಟದಲ್ಲಿ ವರ್ಷದಲ್ಲಿ ಒಂದು ತುಳು ಕಾರ್ಯಕ್ರಮ ಪಂಚಾಯತ್ ಅಧಿಕೃತ ಕಾರ್ಯಕ್ರಮವಾಗಿ ನಡೆಯಬೇಕು. ಸಂಬಂಧಪಟ್ಟವರ ಜತೆ ಈ ಕುರಿತು ಚರ್ಚಿಸಿ ಗ್ರಾ. ಪಂ. ಅನುದಾನದಲ್ಲೇ ಕಾರ್ಯಕ್ರಮ ಆಯೋಜಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲಾಗುವುದು. ನಾಟಕ ಯಕ್ಷಗಾನ ಮತ್ತಿತರ ಕಲೆಗಳ ಮೂಲಕ ತುಳು ಭಾಷೆ ಎಲ್ಲ ಕಡೆ ವ್ಯಾಪಿಸಿದೆ. ವಿದ್ಯಾರ್ಥಿಗಳು ಈ ಭಾಷೆಯ ರಾಯಭಾರಿಗಳಾಗಬೇಕು. ಇದರಿಂದ ಭಾಷೆ ಬೆಳೆಯುವ ಜತೆಗೆ ಇನ್ನಷ್ಟು ಅಭಿವೃದ್ಧಿಯಾಗಲು ಸಹಾಯವಾಗುತ್ತದೆ” ಎಂದರು. ಸಮ್ಮೇಳನವನ್ನು ಉದ್ಘಾಟಿಸಿದ ಐಕಳ ಪೊಂಪೈ ಕಾಲೇಜಿನ ಪದವಿ ವಿದ್ಯಾರ್ಥಿನಿಯಾದ ಸನ್ನಿಧಿ ಮಾತನಾಡಿ “ತುಳು ಮಾತನಾಡಲು ಹಿಂಜರಿಕೆ ಬೇಡ. ತುಳುವರೇ ತುಳು ಮಾತನಾಡದಿದ್ದರೆ ಈ ಭಾಷೆಯನ್ನು ಉಳಿಸುವವರು ಯಾರು? ತುಳು ಭಾಷೆಯ ಬಗ್ಗೆ ನಮ್ಮಲ್ಲಿ…
ಮೈಸೂರು : ನಟನ ರಂಗಶಾಲೆಯ ವತಿಯಿಂದ 2024-25ನೇ ಸಾಲಿನ ವಾರಾಂತ್ಯ ರಂಗಶಾಲೆಯ ಮಕ್ಕಳ ಅಭ್ಯಾಸಿ ಪ್ರಯೋಗದ ಪ್ರಯುಕ್ತ ‘ಮಕ್ಕಳ ಮಹಾಭಾರತ’ ನಾಟಕ ಪ್ರದರ್ಶನವನ್ನು ದಿನಾಂಕ 30 ಮಾರ್ಚ್ 2025ರಂದು ಸಂಜೆ 6-30 ಗಂಟೆಗೆ ಮೈಸೂರಿನ ರಾಮಕೃಷ್ಣ ನಗರ, ನಟನ ರಂಗಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ನಾಟಕವು ಡಾ. ಪಿ.ಕೆ. ರಾಜಶೇಖರರವರ ಜನಪದ ಮಹಾಭಾರತ ಆಧಾರಿತವಾಗಿದ್ದು, ಇದರ ರಚನೆಯನ್ನು ರಂಗಾಯಣ ರಾಮನಾಥ ಇವರು ಮಾಡಿದ್ದು ಹಾಗೂ ಡಿ.ಸಿ. ಸುದರ್ಶನ್ ಇವರು ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 7259537777, 9480468327 ಮತ್ತು 9845595505 ಸಂಪರ್ಕಿಸಿರಿ.
ಉಡುಪಿ : ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಯಕ್ಷ ಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಮತ್ತು ಯಕ್ಷಗಾನ ಕಲಾರಂಗ (ರಿ.) ಇವರು ಜಂಟಿಯಾಗಿ ಆಯೋಜಿಸಿದ ಒಂದು ವಾರದ ‘ಯಕ್ಷ ಶಿಕ್ಷಣ ಸನಿವಾಸ ಶಿಬಿರ’ದ ಸಮಾರೋಪ ಸಮಾರಂಭವು ದಿನಾಂಕ 28 ಮಾರ್ಚ್ 2025ರಂದು ಜರಗಿತು. ಈ ಸಮಾರಂಭದಲ್ಲಿ ಭಾಗವಹಿಸಿದ ಉಡುಪಿ ವಿದ್ಯಾಂಗ ಉಪನಿರ್ದೇಶಕರಾದ ಗಣಪತಿ ಕೆ. ಯವರು ಶುಭಾಶಂಸನೆಯ ಮಾತುಗಳನ್ನಾಡಿ “ಕೇವಲ ಪಠ್ಯ ಶಿಕ್ಷಣಕ್ಕಷ್ಟೇ ನಿಮ್ಮ ಮಕ್ಕಳನ್ನು ಸೀಮಿತಗೊಳಿಸದೆ ಇಂತಹ ಶಿಬಿರಗಳಲ್ಲಿ ಭಾಗವಹಿಸುವಂತೆ ಮಾಡಿ ಅವರ ಆತ್ಮವಿಶ್ವಾಸ, ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವಂತೆ” ಪಾಲಕರಿಗೆ ಕರೆಕೊಟ್ಟರು. ಪ್ರಮಾಣಪತ್ರ ವಿತರಿಸಿ ಮಾತನಾಡಿದ ಗೀತಾನಂದ ಫೌಂಡೇಶನ್ ಮಣೂರು ಇದರ ವರಿಷ್ಠರಾದ ಆನಂದ ಸಿ. ಕುಂದರ್ “ಯಕ್ಷಗಾನ ಕಲಾರಂಗ ಕಲೆ, ಸಮಾಜಪರ ಕೆಲಸಗಳನ್ನು ಮಾಡುತ್ತಾ ಸಾರ್ವಜನಿಕರ ವಿಶ್ವಾಸವನ್ನು ಗಳಿಸಿದ ಪ್ರತಿಷ್ಠಿತ ಸಂಸ್ಥೆ” ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಟ್ರಸ್ಟಿನ ಅಧ್ಯಕ್ಷರೂ ಆದ ಉಡುಪಿ ಶಾಸಕ ಶ್ರೀ ಯಶ್ಪಾ ಲ್ ಎ. ಸುವರ್ಣ ವಹಿಸಿದ್ದರು. ಬೈಂದೂರು ಶಾಸಕರಾದ ಗುರುರಾಜ ಗಂಟಿಹೊಳೆಯವರು…
ಕಟಪಾಡಿ : ವನಸುಮ ವೇದಿಕೆ (ರಿ.) ಕಟಪಾಡಿ ಇದರ ವತಿಯಿಂದ ‘ವನಸುಮ ರಂಗೋತ್ಸವ 2025’ ಕಾರ್ಯಕ್ರಮವನ್ನು ದಿನಾಂಕ 05 ಮತ್ತು 06 ಏಪ್ರಿಲ್ 2025ರಂದು ಪ್ರತಿದಿನ ಸಂಜೆ 6-30 ಗಂಟೆಗೆ ಕಟಪಾಡಿ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆ ರಂಗ ಮಂದಿರದಲ್ಲಿ ಆಯೋಜಿಸಲಾಗಿದೆ. ದಿನಾಂಕ 05 ಏಪ್ರಿಲ್ 2025ರಂದು ಸುರಭಿ (ರಿ.) ಬೈಂದೂರು ತಂಡದವರಿಂದ ಗಣೇಶ್ ಮಂದಾರ್ತಿ ಇವರ ನಿರ್ದೇಶನದಲ್ಲಿ ಡಾ. ಶಿವರಾಮ ಕಾರಂತ ರಚನೆಯ ‘ಚೋಮನ ದುಡಿ’ ಮತ್ತು ದಿನಾಂಕ 06 ಏಪ್ರಿಲ್ 2025ರಂದು ಭೂಮಿಕಾ (ರಿ.) ಹಾರಾಡಿ ತಂಡದವರಿಂದ ಬಿ.ಎಸ್. ರಾಮ್ ಶೆಟ್ಟಿ ಹಾರಾಡಿ ಇವರ ನಿರ್ದೇಶನದಲ್ಲಿ ಶಶಿರಾಜ್ ಕಾವೂರು ರಚನೆಯ ‘ಬರ್ಬರೀಕಾ’ ನಾಟಕ ಪ್ರದರ್ಶನ ನಡೆಯಲಿದೆ. ಇದೇ ಸಂದರ್ಭದಲ್ಲಿ ಬಾಸುಮ ಕೊಡಗು ವಿರಚಿತ ‘ನಡುರಾತ್ರಿಯ ಸ್ವಾತಂತ್ರ್ಯ ಕವನ ಸಂಕಲನ ಬಿಡುಗಡೆಗೊಳ್ಳಲಿದೆ.