Author: roovari

ಕಮತಗಿ : ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ (ರಿ.) ಕಮತಗಿ ಹಾಗೂ ದಸರಾ ಉತ್ಸವ ಸಮಿತಿ ವತಿಯಿಂದ ‘ದಸರಾ ಉತ್ಸವ-2025’ ದಿನಾಂಕ 30 ಸೆಪ್ಟೆಂಬರ್ 2025ರಂದು ಬಾಗಲಕೋಟೆ ಜಿಲ್ಲೆಯ ಕಮತಗಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಕವಿಗಳು, ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಡುವುದಕ್ಕಾಗಿ ಆಯೋಜನೆ ಮಾಡುತ್ತಿದ್ದು, ಕಾರ್ಯಕ್ರಮದಲ್ಲಿ ಕವಿಗೋಷ್ಠಿ, ಗಜಲ್ ಗೋಷ್ಠಿ, ವಿಚಾರ ಸಂಕಿರಣ, ಜಾನಪದ ಕಲಾ ಪ್ರದರ್ಶನ, ಪುಸ್ತಕ ಬಿಡುಗಡೆ, ಯುವ ಬರಹಗಾರರ ಪುಸ್ತಕಗಳಿಗೆ ‘ಮೇಘಮೈತ್ರಿ ಪುಸ್ತಕ ಪ್ರಶಸ್ತಿ’ ಪ್ರದಾನ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆಗೈದ ಸಾಧಕರಿಗೆ ‘ದಸರಾ ಗೌರವ ಪುರಸ್ಕಾರ’ ನೀಡಿ ಗೌರವಿಸಲಾಗುವುದು. ವೇದಿಕೆಯಲ್ಲಿ ನಾಡಿನ ಗಣ್ಯರು ಭಾಗವಹಿಸಲಿದ್ದು, ತಾವುಗಳು ಈ ಉತ್ಸವದಲ್ಲಿ ಭಾಗವಹಿಸಲು ಇಚ್ಚಿಸುವವರು ತಮ್ಮ ಹೆಸರನ್ನು ಈ ಕೆಳಗಿನ ಮೊಬೈಲ್ ನಂಬರ್ ಗೆ ಕರೆಮಾಡಿ ನೊಂದಣಿ ಮಾಡಿಕೊಳ್ಳಬೇಕು. ಎಂ. ರಮೇಶ ಕಮತಗಿ : 9686782774 ವಿಶೇಷ ಸೂಚನೆ : *ಉತ್ಸವದಲ್ಲಿ ಭಾಗವಹಿಸುವ ಕವಿ-ಕಲಾವಿದರಿಗೆ ಊಟದ ವ್ಯವಸ್ಥೆ. *ಪ್ರಮಾಣ ಪತ್ರ ಮತ್ತು ನೆನಪಿನ ಕಾಣಿಕೆ ಹಾಗೂ ಒಂದು…

Read More

ಶಿವಮೊಗ್ಗ : ಪ್ರಯೋಗಶೀಲ ಯುವ ಕವಿ, ಎಲ್ಲರು ಪ್ರೀತಿಯಿಂದ ‘ನಂಕು’ ಎಂದೇ ಕರೆಯುವ ನಂದನ ಕುಪ್ಪಳಿ (32) ದಿನಾಂಕ 11 ಸೆಪ್ಟೆಂಬರ್ 2025ರಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಈಚೆಗೆ ಎಂ.ಎನ್.ಡಿ. ಕಾಯಿಲೆಗೆ ತುತ್ತಾಗಿ ದೈಹಿಕ ಸ್ವಾಧೀನ ಕಳೆದುಕೊಂಡಿದ್ದ ನಂದನ್ ಕುರಿತು ನೂರಾರು ಸಾಹಿತ್ಯ ಮನಸ್ಸುಗಳು ಮರುಗಿದ್ದವು. ಎದ್ದು ಓಡಾಡಲಾಗದ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿಯೂ ಕುಪ್ಪಳಿಯ ಹೇಮಾಂಗಣದಲ್ಲಿ ವರ್ಷಗಳ ಹಿಂದೆ ‘ಭಾವರೇಖೆ’ ಎಂಬ ಕವನ ಸಂಕಲವನ್ನು ಹೊರ ತಂದಿದ್ದರು. ಇನ್ನೇನು ಎರಡನೇಯ ಕೃತಿ ಹೊರತರುವ ಪ್ರಯತ್ನದಲ್ಲಿದ್ದರು. ಕುವೆಂಪು ಪ್ರಕೃತಿ ಆರಾಧನೆ, ಕಾರಂತರ ಪ್ರಕೃತಿ ಚರ್ಯಟನೆ, ತೇಜಸ್ವಿ ಪ್ರಕೃತಿಯ ಅನ್ವೇಷಣೆಗಳಿಂದ ಪ್ರಭಾವಿತರಾಗಿ ಇವರು ತಮ್ಮ ಬದುಕು, ಆಲೋಚನೆ, ಬರವಣಿಗೆ, ನಡೆಯಲ್ಲಿ ಅವುಗಳನ್ನು ಮೈಗೂಡಿಸಿಕೊಂಡಿದ್ದರು. ಕವಿತೆ, ಕತೆ, ಪ್ರಬಂಧಗಳ ರಚನೆಯಲ್ಲಿ ತೊಡಗಿರುವ ಇವರ ಬರವಣಿಗೆಯ ಪ್ರಧಾನ ಅಂಶ ಪ್ರಕೃತಿ ಪ್ರೇಮವೆ ಆಗಿದೆ. ಓದು, ಬರಹ, ಫೋಟೋಗ್ರಫಿ, ಚಾರಣ, ಅಧ್ಯಾಪನ, ಕೃಷಿ ಇವು ಇವರ ಆಸಕ್ತಿಯ ಕ್ಷೇತ್ರಗಳು. ಹೊಸನಗರ, ಶಿವಮೊಗ್ಗ, ತೀರ್ಥಹಳ್ಳಿಯ ಶಾಲೆಗಳಲ್ಲಿ ಕೆಲಕಾಲ ಶಿಕ್ಷಕರಾಗಿ, ಮೂಡಿಗೆರೆಯ ತೇಜಸ್ವಿ ಪ್ರತಿಷ್ಠಾನದ…

Read More

ಬೆಂಗಳೂರು : ಆಕೃತಿ ಪುಸ್ತಕ ಮತ್ತು ಜೀರುಂಡೆ ಪುಸ್ತಕ ಇವರ ಸಹಯೋಗದಲ್ಲಿ ಮೂರು ಪುಸ್ತಕಗಳ ಬಿಡುಗಡೆ ಸಮಾರಂಭವನ್ನು ದಿನಾಂಕ 14 ಸೆಪ್ಟೆಂಬರ್ 2025ರಂದು ಬೆಳಗ್ಗೆ 10-00 ಗಂಟೆಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಇವರು ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ, ಎಚ್.ಎಸ್. ಶ್ರೀಮತಿ ಇವರ ‘ಸ್ತ್ರೀವಾದೀ ಸಾಹಿತ್ಯ ವಿಮರ್ಶೆ’ ಹಾಗೂ ಕೆ.ವಿ. ನಾರಾಯಣ ಇವರ ‘ಹೊಸ ಓದುಗರಿಗೆ ಕುವೆಂಪು’ ಮತ್ತು ‘ಕನ್ನಡ ನುಡಿ ರಚನೆ – ಕೆಲವು ನೆಲೆಗಳು’ ಎಂಬ ಕೃತಿಗಳು ಲೋಕಾರ್ಪಣೆಗೊಳ್ಳಲಿದೆ. ಪುಸ್ತಕ ಪರಿಚಯವನ್ನು ಸಾಹಿತಿ ಓ.ಎಲ್. ನಾಗಭೂಷಣಸ್ವಾಮಿ, ನಾಟಕಕಾರರಾದ ಕೆ.ವೈ. ನಾರಾಯಣಸ್ವಾಮಿ ಮತ್ತು ಪ್ರಾಧ್ಯಾಪಕರಾದ ಶಶಿಕಲಾ ಎಚ್. ಇವರು ಮಾಡಲಿದ್ದಾರೆ.

Read More

ಮಂಗಳೂರು : ಮಣಿ ಕೃಷ್ಣಸ್ವಾಮಿ ಅಕಾಡೆಮಿ ವತಿಯಿಂದ ಪ್ರಸ್ತುತ ಪಡಿಸುವ ಗಾಯನ ಸಂಗೀತ ಕಾರ್ಯಾಗಾರವು ದಿನಾಂಕ 20, 21, 27 ಮತ್ತು 28 ಸೆಪ್ಟೆಂಬರ್ 2025ರಂದು (ಶನಿವಾರ ಮತ್ತು ಭಾನುವಾರ) ಸಂಜೆ 7-00 ಗಂಟೆಯಿಂದ 8-30ರವೆರೆಗೆ ಆನ್ ಲೈನ್ ನಲ್ಲಿ ನಡೆಯಲಿದೆ. ಸಂಗೀತ ಕಲಾ ಆಚಾರ್ಯ ವಿದುಷಿ ಗೀತಾ ರಾಜಾ ಇವರು ಕಾರ್ಯಾಗಾರವನ್ನು ನಡೆಸಿಕೊಡಲಿದ್ದು, ವಿವಿಧ ಸಂಯೋಜಕರ ಜಾವಳಿಗಳನ್ನು ಕಲಿಸಲಾಗುವುದು. ನೋಂದಾವಣೆ ಮತ್ತು ಹೆಚ್ಚಿನ ಮಾಹಿತಿಗಾಗಿ 74119 16098 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಬೆಂಗಳೂರು : ರಂಗಮಂಡಲ ಇದರ ವತಿಯಿಂದ ‘ಯಕ್ಷಯಾತ್ರೆ’ ಮೂಡಲಪಾಯ ಯಕ್ಷಗಾನ ರೆಪರ್ಟರಿ ಪ್ರಾರಂಭಗೊಳ್ಳಲಿದೆ. ಯಾವುದೇ ರಂಗ ಶಿಕ್ಷಣ ಕೇಂದ್ರಗಳಲ್ಲಿ ರಂಗ ತರಬೇತಿ ಹೊಂದಿರದ, ಅಭಿನಯಿಸಲು ಇಚ್ಚಿಸುವ 20ರಿಂದ 30 ವರ್ಷದೊಳಗಿನ ಕುಣಿತ, ಹಾಡುಗಾರಿಕೆ ಬಲ್ಲಂತಹ ನಟಿಸಲು ಆಸಕ್ತಿ ಇರುವ ಯುವಕ, ಯುವತಿಯರು ಈ ಯಕ್ಷಯಾತ್ರೆ ರೆಪರ್ಟರಿಗೆ ಸೇರಬಹುದು. * ಕನ್ನಡ ಭಾಷೆ ಬಲ್ಲವರಾಗಿರಬೇಕು. * ಹಿರಿಯ ಕಲಾವಿದರಿಂದ ಶಿಫಾರಸ್ಸು ಪತ್ರ ತರಬೇಕು. * ಆಧಾರ್ ಕಾರ್ಡ್ ಮತ್ತು ತಂದೆ ತಾಯಿಗಳ ಒಪ್ಪಿಗೆ ಪತ್ರ ಅಗತ್ಯವಿರುತ್ತದೆ * ಗುರುಕುಲ ಮಾದರಿಯ ಮೂಡಲಪಾಯ ಯಕ್ಷಗಾನ ಶಿಬಿರ ಮತ್ತು ಪ್ರದರ್ಶನಕ್ಕೆ ಆಯ್ಕೆಯಾದವರು ಪ್ರಸಂಗದ ತಾಲೀಮೂ ಸೇರಿ 4 ತಿಂಗಳವರೆಗೆ ಯಕ್ಷಯಾತ್ರೆಯೊಡನೆ ಇರಬೇಕಾಗುತ್ತದೆ. * ನೋಂದಾವಣೆಯ ಕೊನೆಯ ದಿನಾಂಕ 21 ಸೆಪ್ಟೆಂಬರ್ 2025. * ಕಲಾವಿದರ ಆಯ್ಕೆಯನ್ನು ಆನ್ಲೈನ್ ಆಡಿಶನ್ ಮುಖಾಂತರ ದಿನಾಂಕ 05 ನವೆಂಬರ್ 2025 ಭಾನುವಾರ ನಡೆಸಲಾಗುವುದು. * ನಿಮ್ಮ ಪ್ರತಿಭೆ ಹಾಗೂ ರಂಗ ಕಾಯಕವನ್ನು ಗಮನಿಸಿ ತಿಂಗಳ ಸಂಭಾವನೆ ನೀಡಲಾಗುವುದು ಆಸಕ್ತರು ಫೋನ್…

Read More

ಉಡುಪಿ : ಉಡುಪಿ ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಬ್ರಹ್ಮಾವರ ವಲಯದ ಕೆ.ಪಿ.ಎಸ್. ಕೊಕ್ಕರ್ಣೆ ಶಾಲೆಯ ವಿದ್ಯಾರ್ಥಿಗಳು ಅಭಿನಯಿಸಿದ ನಾಟಕ ಮೊದಲ ಸ್ಥಾನ ಗಳಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ. ದಿನಾಂಕ 10 ಸೆಪ್ಟೆಂಬರ್ 2025ರಂದು ನಡೆದ ಈ ಸ್ಪರ್ಧೆಯಲ್ಲಿ ರೋಹಿತ್ ಎಸ್. ಬೈಕಾಡಿ ಇವರ ನಿರ್ದೇಶನದಲ್ಲಿ ಅಭಿನಯಿಸಿದ ‘ಕ್ಯೂರಿ-US’ ನಾಟಕದ ರಚನೆ ವರದರಾಜ್ ಬಿರ್ತಿ ಮಾಡಿದ್ದು, ಸಂಗೀತ – ಶುಭಕರ್ ಪುತ್ತೂರು, ರಂಗಸಜ್ಜಿಕೆ – ಹರೀಶ್ ಮತ್ತು ಪ್ರಸಾಧನ – ಶ್ರೀಶ ತೆಕ್ಕಟ್ಟೆ ಇವರದು.

Read More

ಬೆಂಗಳೂರು : ದ್ರಾವಿಡ ಭಾಷಾ ಅನುವಾದಕರ ಸಂಘ (ಡಿ.ಬಿ.ಟಿ.ಎ.)ದ ವತಿಯಿಂದ ಕೊಡಮಾಡುವ ಪ್ರತಿಷ್ಠಿತ ಡಿ.ಬಿ.ಟಿ.ಎ. ಅನುವಾದ ಪ್ರಶಸ್ತಿಗೆ ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ಎ. ಮೋಹನ ಕುಂಟಾರ್ ಆಯ್ಕೆಯಾಗಿದ್ದಾರೆ ಎಂದು ಡಿಬಿಟಿಎ ಸಂಘದ ಅಧ್ಯಕ್ಷೆ ಡಾ. ಸುಷ್ಮಾ ಶಂಕರ್ ತಿಳಿಸಿದ್ದಾರೆ. ಜ್ಞಾನಪೀಠ ಪ್ರಶಸ್ತಿ ವಿಜೇತ ಮಲಯಾಳಂ ಸಾಹಿತಿ ತಕಳಿ ಶಿವಶಂಕರ ಪಿಳ್ಳೆ ಅವರ ಪ್ರಸಿದ್ಧ ಕಾದಂಬರಿ ‘ಚೆಮ್ಮೀನ್’ನ ಕನ್ನಡ ಅನುವಾದಕ್ಕೆ ಪ್ರಶಸ್ತಿ ಲಭಿಸಿದೆ. ಡಿ.ಬಿ.ಟಿ.ಎ. ವತಿಯಿಂದ ನೀಡುತ್ತಿರುವ ಈ ಪ್ರಶಸ್ತಿಯು ರೂ.11,111/- ನಗದು, ಪ್ರಶಸ್ತಿ ಪತ್ರ ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 26 ಸೆಪ್ಟೆಂಬರ್ 2025ರಂದು ನಯನ ಸಭಾಂಗಣದಲ್ಲಿ ಜರುಗಲಿದೆ.

Read More

ಮಂಗಳೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಪುತ್ತೂರು ಸಂಸ್ಥೆಯ 30ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ‘ಮೂಕಾಂಬಿಕಾ ಮೂವತ್ತರ ಮಾರ್ದನಿ’ ಶೀರ್ಷಿಕೆಯಲ್ಲಿ ಮಂಗಳೂರಿನ ಕಲಾಸೂರ್ಯ ನೃತ್ಯಾಲಯ ಪ್ರಸ್ತುತ ಪಡಿಸುವ ‘ಕಲಾಭವ -02’ ಪ್ರಸ್ತುತಿಯನ್ನು ದಿನಾಂಕ 13 ಸೆಪ್ಟೆಂಬರ್ 2025ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ಜೈಲ್ ರೋಡ್, ಮೊದಲನೇ ಮಹಡಿ ಸುಬ್ರಹ್ಮಣ್ಯ ಸದನದಲ್ಲಿ ಹಮ್ಮಿಕೊಳ್ಳಲಾಗಿದೆ. ಸುಬ್ರಹ್ಮಣ್ಯ ಸಭಾದ ಅಧ್ಯಕ್ಷರಾದ ಎ.ಪಿ. ಕೃಷ್ಣ ಇವರು ಅಭ್ಯಾಗತರಾಗಿ ಭಾಗವಹಿಸಲಿದ್ದು, ವಿದ್ವಾನ್ ಬಿ. ದೀಪಕ್ ಕುಮಾರ್ ಪುತ್ತೂರು ಇವರ ಶಿಷ್ಯೆ ಪ್ರಣಮ್ಯ ಪಾಲೆಚ್ಚಾರ್ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ.

Read More

ಉಡುಪಿ : ತುಳು ಕೂಟ ಉಡುಪಿ (ರಿ.) ಇದರ ಹೊಸ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದ್ದು, ದಿನಾಂಕ 11 ಸೆಪ್ಟೆಂಬರ್ 2025ರಂದು ನಡೆದ ಸಭೆಯಲ್ಲಿ ಪತ್ರಕರ್ತ ಜನಾರ್ದನ್ ಕೊಡವೂರು ಚುನಾವಣಾ ಅಧಿಕಾರಿಯ ನೆಲೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು. ಗೌರವ ಸಲಹೆಗಾರರಾಗಿ ಉಡುಪಿ ವಿಶ್ವನಾಥ ಶೆಣೈ, ಗೌರವಾಧ್ಯಕ್ಷರಾಗಿ ಭಾಸ್ಕರಾನಂದ ಕುಮಾರ್, ಅಧ್ಯಕ್ಷರಾಗಿ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಉಪಾಧ್ಯಕ್ಷರಾಗಿ ಭುವನಪ್ರಸಾದ್ ಹೆಗ್ಡೆ, ದಿವಾಕರ ಸನಿಲ್, ಶೋಭಾ ಶೆಟ್ಟಿ, ವಿ.ಕೆ. ಯಾದವ್, ಪ್ರಧಾನ ಕಾರ್ಯದರ್ಶಿಯಾಗಿ ಗಂಗಾಧರ್ ಕಿದಿಯೂರ್, ಜೊತೆ ಕಾರ್ಯದರ್ಶಿಯಾಗಿ ಜ್ಯೋತಿ ದೇವಾಡಿಗ, ಸಂತೋಷ್ ಕುಮಾರ್, ಮೋಹನ್ ಶೆಟ್ಟಿ ಮೂಡನಿಡಂಬೂರು, ಕೋಶಾಧಿಕಾರಿ ಚೈತನ್ಯ ಎಂ.ಜಿ., ಸಂಘಟನಾ ಕಾರ್ಯದರ್ಶಿಯಾಗಿ ಮನೋಹರ ಶೆಟ್ಟಿ ತೋನ್ಸೆ, ಉದಯ ಕುಮಾರ್ ತೆಂಕನಿಡಿಯೂರ್, ಶಿಲ್ಪಾ ಜೋಷಿ ಆಯ್ಕೆಯಾದರು. ತುಳು ಕೂಟದ ವಿವಿಧ ವಿಭಾಗಗಳಿಗೂ ಸಂಚಾಲಕರು ಹಾಗೂ ಪದಾಧಿಕಾರಿಗಳನ್ನು ನೇಮಿಸಲಾಯಿತು. ತುಳುಮಿನದನದ ಸಂಚಾಲಕರಾಗಿ ದಯಾನಂದ ಕೆ. ಕಪ್ಪೆಟ್ಟು, ಕೆಮ್ತೂರು ತುಳು ನಾಟಕ ಪರ್ಬದ ಸಂಚಾಲಕರಾಗಿ ಪ್ರಭಾಕರ ಭಂಡಾರಿ, ನಿಟ್ಟೂರು, ತುಳು ಭಾವಗೀತೆ ಸ್ಪರ್ಧೆಯ ಸಂಚಾಲಕರಾಗಿ…

Read More

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಸತ್ಯ ಸಾರಮಾನಿ ಯಕ್ಷಗಾನ ಕಲಾ ಮಂಡಳಿ ಮಿಜಾರ್ ಇವರ ಜಂಟಿ ಆಶ್ರಯದಲ್ಲಿ ತುಳು ಯಕ್ಷಗಾನ ಪ್ರದರ್ಶನವನ್ನು ದಿನಾಂಕ 14 ಸೆಪ್ಟೆಂಬರ್ 2025ರಂದು ಸಂಜೆ 6-00 ಗಂಟೆಗೆ ಮಂಗಳೂರಿನ ಉರ್ವಸ್ಟೋರ್ ತುಳು ಭವನದ ಸಿರಿ ಚಾವಡಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರಬುದ್ಧ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ತುಳು ನಾಡಿನ ಅವಳಿ ವೀರರ ಪಾಡ್ದನ ಸಾಹಿತ್ಯ ಆಧಾರಿತ ಅಮರ ಕಥೆ ‘ಕಾರ್ನಿಕದ ಕಾನದ ಕಟದೆರ್’ ಪ್ರಸಂಗದ ಯಕ್ಷಗಾನದ ಹಿಮ್ಮೇಳದಲ್ಲಿ ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ ಮತ್ತು ಚಂದ್ರಶೇಖರ ಕಕ್ಕೆಪದವು ಭಾಗವತರಾಗಿ, ಆನಂದ ಪಡ್ರೆ ಚಂಡೆಯಲ್ಲಿ, ಗುರುಪ್ರಸಾದ್ ಬೊಳಿಂಜಡ್ಕ ಮದ್ದಲೆಯಲ್ಲಿ ಮತ್ತು ರಾಮ ಬಿ. ಅರಳ ಚಕ್ರತಾಳದಲ್ಲಿ ಸಹಕರಿಸಲಿದ್ದಾರೆ.

Read More