Author: roovari

ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರ ವತಿಯಿಂದ ಮತ್ತು ನಾಟ್ಕ ಬೆಂಗಳೂರು ಇವರ ಸಹಕಾರದೊಂದಿಗೆ ‘ರಂಗಸಂವಾದ -06’ ಕಾರ್ಯಕ್ರಮವನ್ನು ದಿನಾಂಕ 05 ಜುಲೈ 2025ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆ, ಕನ್ನಡ ಭವನ, ಕರ್ನಾಟಕ ನಾಟಕ ಅಕಾಡೆಮಿ ಆವರಣದ ರಂಗಚಾವಡಿಯಲ್ಲಿ ಹಮ್ಮಿಕೊಳ್ಳಲಾಗಿದೆ. ರಾಜ್ಯ ಪ್ರಶಸ್ತಿ ವಿಜೇತ ಚಲನಚಿತ್ರ ಹಾಗೂ ರಂಗಭೂಮಿ ಕಲಾವಿದೆ ಶ್ರೀಮತಿ ಅಕ್ಷತಾ ಪಾಂಡವಪುರ ಇವರು ತಿಂಗಳ ಅತಿಥಿಯಾಗಿ ಭಾಗವಹಿಸಲಿದ್ದು, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಕೆ.ವಿ. ನಾಗರಾಜಮೂರ್ತಿ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

Read More

ಶ್ರೀಮತಿ ಆಶಾ ರಘು ಅವರ ‘ಮಾರ್ಕೋಲು’ ಒಂದು ವಿಶಿಷ್ಟ ಸ್ವರೂಪದ ಕಾದಂಬರಿ. ಇವರ ಕುಟುಂಬದಲ್ಲಿ ಒಬ್ಬರಾಗಿ ಬೆರೆತು ಹೋಗಿರುವ ಸಂಪಿಗೆ ಲಕ್ಷ್ಮಮ್ಮನವರು ವಿಧಿಯಮ್ಮನ ಜನಪದ ಕತೆಯನ್ನು ಹೇಳಿದ್ದನ್ನು ಸಾಹಿತ್ಯಾಸಕ್ತಿ ಬೆಳೆದ ಮೇಲೆ ಹೊಸ ಆಯಾಮದಲ್ಲಿ ಅರ್ಥ ಮಾಡಿಕೊಂಡ ಪ್ರತಿಭಾನ್ವೇಷಣೆಯ ಫಲವಾಗಿ ಈ ಕಾದಂಬರಿಯು ಮೂಡಿ ಬಂದಿದೆ. ಲಕ್ಷ್ಮಮ್ಮನವರು ಹೇಳಿದ್ದ ಕತೆಗೂ ಸೋಫೋಕ್ಲಿಸ್ಸಿನ ‘ಈಡಿಪಸ್ ರೆಕ್ಸ್’ ನಾಟಕದ ವಸ್ತುವಿಗೂ ಇರುವ ಸಾಮ್ಯತೆಯನ್ನು ಕಂಡುಕೊಂಡ ಲೇಖಕಿ ಕುತೂಹಲಿಯಾಗುತ್ತಾರೆ. ಸಿಗ್ಮಂಡ್ ಫ್ರಾಯ್ಡ್ ನಿರೂಪಿಸಿದ ‘ಈಡಿಪಸ್ ಕಾಂಪ್ಲೆಕ್ಸ್’ ಪರಿಕಲ್ಪನೆಯನ್ನು ವಿಧಿಯಮ್ಮನ ಕತೆ ಮತ್ತು ಸೋಫೋಕ್ಲಿಸ್ಸಿನ ನಾಟಕಗಳಲ್ಲಿ ಕಂಡ ಲೇಖಕಿ ಅಪಾರ ಅಧ್ಯಯನ ಮಾಡುತ್ತಾರೆ. ತಾಯಿಯೇ ಮಗನನ್ನು ಮದುವೆಯಾಗುವ ಪ್ರಸಂಗವು ಆ ಜಾನಪದ ಕತೆ ಮತ್ತು ನಾಟಕ ಎರಡರಲ್ಲೂ ಇದ್ದದ್ದು ವಿಸ್ಮಯಕಾರಿ ವಿಷಯವಾಗಿದ್ದು, ಆಶಾ ರಘು ಅವರು ಅದರ ಎಳೆ ಹಿಡಿದು ಅನೇಕ ಜನಪದ ಕತೆಗಳ ಅಧ್ಯಯನ ಮಾಡಿ, ತನ್ನೊಳಗೆ ತಂದುಕೊಂಡು ಸೃಜನಶೀಲ ಕೃತಿಯನ್ನು ಕಟ್ಟಿಕೊಟ್ಟಿದ್ದಾರೆ. ಅಧ್ಯಯನದ ಅರಿವನ್ನು ಅಂತರಂಗದ ಸಂವೇದನೆಯಾಗಿಸಿಕೊಳ್ಳುವುದು ಸುಲಭದ ಪ್ರಕ್ರಿಯೆಯಲ್ಲ. ಇದು ಚಿಂತನಶೀಲತೆ ಮತ್ತು ಸಂವೇದನಾಶೀಲತೆಗಳನ್ನು…

Read More

ಮಂಗಳೂರು : ಕಾಸರಗೋಡು ಜಿಲ್ಲೆಯ ಕವಿ, ಪತ್ರಕರ್ತ ವಿರಾಜ್ ಅಡೂರು ಇವರು ಬರೆದ ‘ನನಸಧಾಮ’ ಕವನವು ಮಂಗಳೂರು ಆಕಾಶವಾಣಿಯ ಭಾವಗಾನ ಕಾರ್ಯಕ್ರಮದಲ್ಲಿ ಪ್ರಸಾರವಾಗಲಿದೆ. ಮಾನವ ಜೀವನದ ಅನೇಕ ಕನಸುಗಳಿಗೆ ಜೀವ ತುಂಬುವ ಲೌಕಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಚಟುವಟಿಕೆಗಳನ್ನು ಈ ಕವನದಲ್ಲಿ ವಿಶ್ಲೇಷಿಸಲಾಗಿದೆ. ಸಂಕುಚಿತ ತತ್ವಗಳಿಂದ ವಿಶಾಲತ್ವದೆಡೆಗೆ ತೆರೆದುಕೊಳ್ಳುವ ಮೂಲಕ ಭಾವಜೀವಿಯಾದ ಮಾನವನು ತನ್ನ ಕನಸುಗಳಿಗೆ ರೆಕ್ಕೆ ಕಟ್ಟಿ ಹಾರುವ ಸಂಕಲ್ಪ ಮಾಡುತ್ತಾನೆ. ಗಗನ ವ್ಯಾಪ್ತಿಯಲ್ಲಿ ಅರಳಿಕೊಂಡು, ನನಸುಗಳನ್ನು ಬಾಚಿಕೊಳ್ಳುವ, ನಿರ್ಬಂಧಿತ ಕಟ್ಟುಪಾಡುಗಳನ್ನು ವಿರೋಧಿಸುವ ವರ್ತನೆಯು ಕವನದಲ್ಲಿ ಇದೆ. ಈ ರಚನೆಯು ಏಹಿಕ ಜಂಜಾಟಗಳಿಂದ ಮೀರಿದ ‘ನನಸಧಾಮ’ ಎಂಬ ನೆಮ್ಮದಿಯ ತಾಣದತ್ತ ಸಾಗುವ ಮಾರ್ಗಸೂಚಿಯಂತೆ ಇದೆ. ಈ ಕವನವು ಆಕಾಶವಾಣಿಯ ಭಾವಗಾನ ತಿಂಗಳ ಹಾಡು ವಿಭಾಗದಲ್ಲಿ ದಿನಾಂಕ 04 ಜುಲೈ 2025ರಿಂದ ಈ ತಿಂಗಳ ಪ್ರತೀ ಶುಕ್ರವಾರ ಬೆಳಗ್ಗೆ 9-00 ಗಂಟೆಗೆ ಖ್ಯಾತ ಕಲಾವಿದರ ಸಂಗೀತ ಸಂಯೋಜನೆಯಲ್ಲಿ ಪ್ರಸಾರವಾಗಲಿದೆ.

Read More

ಬಾನಲ್ಲಿ ಕಪ್ಪು ಮೇಘಗಳ ಸಂಚಲನ ಭುವಿಯಲ್ಲಿ ಮನ ಸೆಳೆವ ಮಯೂರ ನರ್ತನ ಅಂಬರದಿ ವರ್ಷ ಧಾರೆ ಸುರಿವ ಸೂಚನೆ ಮೇಘಗಳಿಗೆ ವರ್ಷಧಾರೆ ಸುರಿಸಲು ತವಕ ಮೇಘಗಳ ಘರ್ಷಣೆಯ ಸಂಕೇತ ಗುಡುಗು ಬರುವುದು ಭುವಿಗೆ ಮಿಂಚಿನಾ ಬೆಳಕು ಮಾರುತವು ಜೊತೆಗೂಡೆ ಅಲ್ಲೋಲ ಕಲ್ಲೋಲ ಗಿಡ ಮರಗಳೆಲ್ಲ ಭೂಮಿಗೆ ಶರಣು ಮಳೆಯು ಬರಲು ಭೂದೇವಿಗೆ ಸಂತಸ ಮೊದಲ ಮಳೆ ತಾಯಿ ಹಾಲ ಸಮಾನ ಮಳೆ ಕೊಡುವುದು ಪ್ರಕೃತಿಗೆ ಜೀವ ದಾನ ಅತಿಯಾದರೆ ಜನರ ಮಾರಣ ಹೋಮ ಮೋಡಗಳಿಗೆ ಬಾನಲ್ಲಿ ಚೆಲ್ಲಾಟ ಗಾಳಿಗೆ ಓಡಿ ಲೇಲುವ ಜಿಗಿದಾಟ ಮೋಡ ಕರಗಿ ಮಳೆ ಬೀಳುವ ನೋಟ ಮೇಘ ರಾಜನಿಗೆ ಸಂತೋಷದ ಕೂಟ ಸುರವ ಮಳೆಗೆ ಇಳೆಗೆ ಸಂತೋಷ ಮೇಘಗಳ ಘರ್ಷಣೆಗೆ ಜನರ ಆಕ್ರೋಷ ಎಲ್ಲಿ ನೋಡಿದರೂ ಭೂಮಿ ಜಲಮಯ ನೋಟವ ನೋಡಲು ನಯನ ಮನೋಹರ ವಿಮಲಾ ಭಾಗ್ವತ್, ಸಿರ್ಸಿ ಉತ್ತರ ಕನ್ನಡ

Read More

ಉಡುಪಿ : ಯಕ್ಷಗಾನ ಕಲಾರಂಗ (ರಿ.) ಇದರ ವತಿಯಿಂದ ಆಯೋಜಿಸಿರುವ ನಾಲ್ಕು ದಿನಗಳ ಸನಿವಾಸ ‘ಯಕ್ಷಗಾನ ಮಾರ್ಗದರ್ಶಿ ಶಿಬಿರ’ದ ಸಮಾರೋಪ ಸಮಾರಂಭವನ್ನು ದಿನಾಂಕ 04 ಜುಲೈ 2025ರಂದು ಅಪರಾಹ್ನ 4-00 ಗಂಟೆಗೆ ಉಡುಪಿಯ ಯಕ್ಷಗಾನ ಕಲಾರಂಗದ ಐ.ವೈ.ಸಿ. ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ವಿದ್ವಾಂಸರಾದ ಲಕ್ಷ್ಮೀಶ ತೋಳ್ಪಾಡಿ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ ಕರ್ಣಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅವಧಾನಿ ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಇವರು ಅಭಿನಂದನಾ ಭಾಷಣ ಮಾಡಲಿದ್ದು, ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಸ್ಮರಣಾರ್ಥ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಯನ್ನು ಶತಾವಧಾನಿ ಡಾ. ಆರ್. ಗಣೇಶ್ ಇವರಿಗೆ ಪ್ರದಾನ ಮಾಡಲಾಗುವುದು.

Read More

ಕಾಸರಗೋಡು : ಶ್ರೀ ರಾಮನಾಥ ಯಕ್ಷಗಾನ ತರಬೇತಿ ಕೇಂದ್ರ ಕೋಟೆ ಕಣಿ ಕಾಸರಗೋಡು ಇವರ ವತಿಯಿಂದ ‘ಯಕ್ಷಗಾನ ನಾಟ್ಯ ತರಬೇತಿ’ಯು ದಿನಾಂಕ 05 ಜುಲೈ 2025ರಂದು ಕಾಸರಗೋಡು ಕೋಟೆಕಣಿಯ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ಪ್ರಾರಂಭಗೊಳ್ಳಲಿದೆ. ಪ್ರತಿ ಶನಿವಾರ ಸಂಜೆ ಗಂಟೆ 6-00ರಿಂದ 7-30ರ ತನಕ ಈ ಯಕ್ಷಗಾನ ತರಗತಿಯು ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ 8891771459 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಕಾರ್ಕಳ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಬೆಂಗಳೂರು ಮತ್ತು ಕೆನರಾ ಬ್ಯಾಂಕ್ ಪ್ರಾಯೋಜಿತ ಸಿ.ಇ. ಕಾಮತ್ ಕರಕುಶಲ ತರಬೇತಿ ಸಂಸ್ಥೆಯ ಸಹಯೋಗದೊಂದಿಗೆ ಯುವ ಶಿಲ್ಪಿಗಳಿಗಾಗಿ ‘ಶಿಲ್ಪ ಶಾಸ್ತ್ರ, ರೇಖಾಚಿತ್ರ ಹಾಗೂ ಕಾಷ್ಠ ಶಿಲ್ಪ ಪ್ರಾತ್ಯಕ್ಷಿಕೆ ಕಾರ್ಯಾಗಾರ’ವನ್ನು ದಿನಾಂಕ 04 ಜುಲೈ 2025ರಂದು ಬೆಳಿಗ್ಗೆ 10-00 ಗಂಟೆಗೆ ಕಾರ್ಕಳ ಮಿಯ್ಯಾರು ಇಲ್ಲಿರುವ ಸಿ.ಇ. ಕಾಮತ್ ಕರಕುಶಲ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸದಸ್ಯರಾದ ವಿಶ್ವಕರ್ಮ ಆಚಾರ್ಯ ಇವರ ಉಪಸ್ಥಿತಿಯಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷರಾದ ಎಂ.ಸಿ. ರಮೇಶ್ ಇವರು ಈ ಕಾರ್ಯಾಗಾರವನ್ನು ಉದ್ಘಾಟನೆ ಮಾಡಲಿರುವರು. ಶಿಲ್ಪ ಕಲಾವಿದರಾದ ವಿಪಿನ್ ಭದೌರಿಯಾ ಇವರು ಸಂಪನ್ಮೂಲ ವ್ಯಕ್ತಿಯಾಗಿ ಈ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ.

Read More

ಫರಂಗಿಪೇಟೆ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಯಕ್ಷಧ್ರುವ – ಯಕ್ಷಶಿಕ್ಷಣ ಯಕ್ಷಗಾನ ಶಿಕ್ಷಣ ಅಭಿಯಾನ 2025-26ನೇ ಸಾಲಿನ ಯಕ್ಷಗಾನ ತರಗತಿಯು ದಿನಾಂಕ 30 ಜೂನ್ 2025ರಂದು ಅರ್ಕುಳ ಫರಂಗಿಪೇಟೆಯ ಶ್ರೀರಾಮ ವಿದ್ಯಾ ಸಂಸ್ಥೆಯಲ್ಲಿ ಆರಂಭಗೊಂಡಿತು. ಈ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಶ್ರೀರಾಮ ಶಾಲಾಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಎ. ವಜ್ರನಾಭ ಶೆಟ್ಟಿಯವರು ವಹಿಸಿದ್ದು, ಉದ್ಘಾಟನೆಯನ್ನು ಶ್ರೀರಾಮ ವಿದ್ಯಾ ಸಂಸ್ಥೆಯ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಎ.ಕೆ. ಜಯರಾಮ್ ಶೇಖರು ದೀಪ ಬೆಳಗಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಯಕ್ಷಧ್ರುವ ಪಟ್ಲ ಪೌಂಡೇಶನ್ ಸರಪಾಡಿ ಘಟಕದ ಸಂಚಾಲಕರಾದ ಶ್ರೀಯುತ ಸರಪಾಡಿ ಅಶೋಕ ಶೆಟ್ಟಿ ಭಾಗವಹಿಸಿ, ಶುಭ ಹಾರೈಸಿದರು. ವೇದಿಕೆಯಲ್ಲಿ ಶ್ರೀರಾಮ ವಿದ್ಯಾ ಸಂಸ್ಥೆಯ ಸಂಚಾಲಕರಾದ ಎ. ಗೋವಿಂದ ಶೆಣೈ, ಶಿವರಾಮ ದೋಟ, ದಿನೇಶ್ ಶೆಟ್ಟಿ ಕೊಟ್ಟಿಂಜ, ಯಕ್ಷ ಗುರು ಶ್ರೀರಕ್ಷಿತ್ ಶೆಟ್ಟಿ ಪಡ್ರೆ ಉಪಸ್ಥಿತರಿದ್ದರು. ಶಾಲಾ ಮುಖ್ಯಸ್ಥರಾದ ಶ್ರೀಯುತ ಕೆ.ಆರ್. ದೇವದಾಸ ಸ್ವಾಗತಿಸಿ, ಶಿಕ್ಷಕರಾದ ರಕ್ಷಿತ್ ಆಚಾರ್ಯ…

Read More

ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕರ್ಣಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ಇವರ ವತಿಯಿಂದ ‘ಸಂಗೀತ ನೃತ್ಯೋತ್ಸವ’ ಕಾರ್ಯಕ್ರಮವನ್ನು ದಿನಾಂಕ 04 ಜುಲೈ 2025ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಆಯೋಜಿಸಲಾಗಿದೆ. ಮಾನ್ಯ ಸಚಿವರಾದ ಶಿವರಾಜ ಎಸ್. ತಂಗಡಗಿ ಇವರು ಈ ಕಾರ್ಯಕ್ರಮದ ಉದ್ಘಾಟನೆ ಹಾಗೂ ‘ವಾರ್ಷಿಕ ಹೆಜ್ಜೆ – ಸಾಧನೆಯ ಗೆಜ್ಜೆ’ ಎಂಬ ಕೃತಿಯ ಅನಾವರಣ ಮಾಡಲಿದ್ದಾರೆ. ಕರ್ಣಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀಮತಿ ಶುಭ ಧನಂಜಯ ಇವರು ಅಧ್ಯಕ್ಷತೆ ವಹಿಸಲಿದ್ದು, ಡಾ. ಕೆ.ವಿ. ನಾಗರಾಜಮೂರ್ತಿ, ಡಾ. ಹಂಸಿನಿ ನಾಗೇಂದ್ರ, ವೈ.ಕೆ. ಮುದ್ದುಕೃಷ್ಣ ಮತ್ತು ಡಾ. ವಿದ್ಯಾರಾವ್ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ 5-00 ಗಂಟೆಗೆ ಬೆಂಗಳೂರು ವಿಶ್ವವಿದ್ಯಾಲಯ ವತಿಯಿಂದ ‘ಶಾಸ್ತ್ರೀಯ ಕರ್ಣಾಟಕ ಸಂಗೀತ’, ಗಮಕ ಕಲಾ ಪರಿಷತ್ತು ವತಿಯಿಂದ ‘ಗಮಕ ವಾಚನ’ ಮತ್ತು ಜೈನ್ ವಿಶ್ವವಿದ್ಯಾಲಯ ವತಿಯಿಂದ ‘ನೃತ್ಯ’ ಪ್ರದರ್ಶನಗೊಳ್ಳಲಿದೆ. ಸಭಾ ಕಾರ್ಯಕ್ರಮದ ಬಳಿಕ ಹಿರಿಯ…

Read More

ಸಿರಿಬಾಗಿಲು : ಸಿರಿಬಾಗಿಲು ಸಾಂಸ್ಕೃತಿಕವಾಗಿ ಮುಖ್ಯವಾದ ಯಕ್ಷಗಾನದ ಸ್ಮಾರಕವಿರುವ ಒಂದು ಕಲಾ ಕೇಂದ್ರ. ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಹುಬ್ಬಳ್ಳಿ ಇದರ ಐದನೇ ಸಮ್ಮೇಳನವು ದಿನಾಂಕ 29 ಜೂನ್ 2025ರಂದು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದ ಸಭಾಂಗಣದಲ್ಲಿ ದಿನಪೂರ್ತಿ ನಡೆಯಿತು. ಹಿರಿಯ ಚಿಂತಕರು ಸಾಹಿತ್ಯ ಪ್ರವರ್ತಕರು ಆದ ವಿ.ಬಿ. ಕುಳಮರ್ವ ಸರ್ವಾಧ್ಯಕ್ಷರಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ಉಡುಪಿಯ ವಾಗ್ಮಿ ವಿದ್ವಾನ್ ರಘುಪತಿ ಭಟ್ ವೇದಿಕೆಯಲ್ಲಿದ್ದರು. ಆಹ್ವಾನಿತರಾಗಿ ಕ.ಚು.ಸಾ. ಪರಿಷತ್ ಹುಬ್ಬಳ್ಳಿ ಇದರ ಸ್ಥಾಪಕ ಸಂಚಾಲಕರಾದ ಕೃಷ್ಣಮೂರ್ತಿ ಕುಲಕರ್ಣಿ, ಜಿಲ್ಲಾಧ್ಯಕ್ಷರಾದ ವೆಂಕಟ ಭಟ್ ಎಡನೀರು, ಯಕ್ಷಗಾನ ಭಾಗವತ ಮತ್ತು ಪ್ರತಿಷ್ಠಾನದ ಅಧ್ಯಕ್ಷರಾದ ರಾಮಕೃಷ್ಣ ಮಯ್ಯ ಇವರ ಗೌರವ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮವನ್ನು ಗಡಿನಾಡು ಕಾಸರಗೋಡಿನ ಹಿರಿಯ ಸಾಹಿತಿ ಮತ್ತು ಸಂಶೋಧಕ ರಾಧಾಕೃಷ್ಣ ಕೆ. ಉಳಿಯತಡ್ಕ ಇವರು ದೀಪ ಪ್ರಜ್ವಲನೆಯ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗಣಪತಿ ಭಟ್ಟ ವರ್ಗಾಸರ ಅವರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಿತು. ಉತ್ತರ ಕನ್ನಡದ ವಸಂತ ನಾಯಕ…

Read More