Author: roovari

ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಇದರ ವತಿಯಿಂದ ಶ್ರೀ ವಿಶ್ವೇಶತೀರ್ಥ ಸಭಾಂಗಣದ ಉದ್ಘಾಟನಾ ಸಮಾರಂಭವನ್ನು ದಿನಾಂಕ 13 ಸೆಪ್ಟೆಂಬರ್ 2025ರಂದು ಸುರತ್ಕಲ್ ನಾಗಬನ ರೋಡ್ ಇಲ್ಲಿರುವ ಅನುಪಲ್ಲವಿಯಲ್ಲಿ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ವಿದ್ವಾನ್ ಡಿ. ಅನ್ನು ದೇವಾಡಿಗ, ಬಿ. ಸೀತಾರಾಮ ತೊಳ್ಪಾತ್ತಾಯ ಮತ್ತು ಕುಮಾರಿ ರೆಮೋನಾ ಎವೆಟ್ ಪಿರೇರಾ ಇವರನ್ನು ಸನ್ಮಾನಿಸಲಾಗುವುದು. ಬಳಿಕ ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ದಿವ್ಯಾಶ್ರೀ ಇವರ ಹಾಡುಗಾರಿಕೆಗೆ ತನ್ಮಯಿ ಉಪ್ಪಂಗಳ ಇವರು ವಯೋಲಿನ್, ಪನ್ನಗ ಶರ್ಮನ್ ಮೃದಂಗ ಮತ್ತು ಸುಜಾತಾ ಎಸ್. ಭಟ್ ತಂಬೂರದಲ್ಲಿ ಸಹಕರಿಸಲಿದ್ದಾರೆ.

Read More

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಹಾಗೂ ಹಾಸನ ಜಿಲ್ಲಾ ಘಟಕದ ಸಹಯೋಗದೊಂದಿಗೆ ಹಾಸನದಲ್ಲಿ ನಡೆದ ಅರಿವಿನ ಪಯಣ ಕಾರ್ಯಕ್ರಮದಲ್ಲಿ ಅಧ್ಯಯನ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳು ಮಾದಕದ್ರವ್ಯ ವ್ಯಸನಗಳಿಂದ ಆಗುವ ಅನಾಹುತಗಳು ಕುರಿತು ಅರಿವು ಮೂಡಿಸುವ ಒಂದು ಕಿರು ನಾಟಕ ಪ್ರದರ್ಶನ ನೀಡಿದರು. ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ಎಂಬ ಭೂತ ಸದ್ದಿಲ್ಲದೆ ಯುವ ಪೀಳಿಗೆಯನ್ನು ಹೇಗೆ ವ್ಯಾಪಿಸಿದೆ ? ಇದರಿಂದ ಆಗುತ್ತಿರುವ ಅನಾಹುತಗಳೇನು ? ಇದರಿಂದ ಎಷ್ಟು ಕುಟುಂಬಗಳು ಸಂಕಷ್ಟಕ್ಕೆ ದೂಡಲ್ಪಟ್ಟಿವೆ ? ಎಂಬುದನ್ನ ನಾವು ದಿನನಿತ್ಯ ಕೇಳುತ್ತಿದ್ದೇವೆ. ಆದರೆ ಈ ಯುವ ಪೀಳಿಗೆ ಯಾಕೆ ಇಂತಹ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ ? ಇದಕ್ಕೆ ಕಾರಣ ಏನು ? ಹುಡುಕುತ್ತ ಹೊರಟಾಗ ನಮಗೆ ಸಿಕ್ಕ ಅಂಕಿ ಅಂಶಗಳು ಮೂರು ತರಹದ ಗುಂಪುಗಳು ಸಿಗುತ್ತದೆ. ಅದರಲ್ಲಿ ಮೊದಲನೆಯ ಗುಂಪು ಅದು ಏನು ? ಹೇಗಿರುತ್ತದೆ ನೋಡೋಣ ಎಂಬ ಕುತೂಹಲಕ್ಕೆ ಹೋಗುವವರು. ಎರಡನೆಯ ಗುಂಪು ಅತಿಯಾದ ಶ್ರೀಮಂತಿಕೆ, ಮತ್ತೊಂದು ಅತಿಯಾದ ಬಡತನ. ಈ ಮೂರು…

Read More

ಕಾಸರಗೋಡು : ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು(ರಿ) ನೇತೃತ್ವದಲ್ಲಿ ಆಯೋಜಿಸುವ ಖ್ಯಾತ ಸಾಹಿತಿ, ನಿವೃತ್ತ ಮುಖ್ಯೋಪಾಧ್ಯಾಯ ವೈ. ಸತ್ಯನಾರಾಯಣ ಇವರ ‘ಆಕಾಶದಿಂದ ಪಾತಾಳಕ್ಕೆ’ ಕಥಾ ಸಂಕಲನದ  ಲೋಕಾರ್ಪಣಾ ಸಮಾರಂಭವು ದಿನಾಂಕ 13 ಸೆಪ್ಟೆಂಬರ್ 2025ರ ಶನಿವಾರದಂದು ಕಾಸರಗೋಡಿನ ಕರೆಂದಕ್ಕಾಡಿನಲ್ಲಿರುವ ‘ಪದ್ಮಗಿರಿ ಕಲಾ ಕುಟೀರ’ದಲ್ಲಿ ಅಪರಾಹ್ನ ಘಂಟೆ 3:00ಕ್ಕೆ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತು ಗಡಿನಾಡ ಘಟಕದ ಅಧ್ಯಕ್ಷರಾದ ಡಾ.  ಕೆ. ಜಯಪ್ರಕಾಶ ನಾರಾಯಣ ತೊಟ್ಟಿತ್ತೋಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರು ಹಾಗೂ ರಂಗಕರ್ಮಿಗಳಾದ ಕಾಸರಗೋಡು ಚಿನ್ನಾ ಕೃತಿ ಲೋಕಾರ್ಪಣೆಗೊಳಿಸಲಿದ್ದಾರೆ. ಖ್ಯಾತ ಸಾಹಿತಿಗಳಾದ ಡಾ. ಪ್ರಮೀಳಾ ಮಾಧವ್ ಪುಸ್ತಕದ ಕುರಿತು ಮಾತನಾಡಲಿದ್ದು, ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಲೇಖಕರಾದ ವೈ. ಸತ್ಯನಾರಾಯಣ, ಕಾಸರಗೋಡು ಕನ್ನಡ ಲೇಖಕರ ಬಳಗದ ಕಾರ್ಯಾಧ್ಯಕ್ಷರು ಹಾಗೂ ಸಾಹಿತಿಗಳಾದ ಪ್ರೊ. ಪಿ. ಎನ್. ಮೂಡಿತ್ತಾಯ, ಕನ್ನಡ ಪ್ರಾಧ್ಯಾಪಕರು ಹಾಗೂ ಲೇಖಕರಾದ ಡಾ. ಟಿ. ಎ. ಎನ್. ಖಂಡಿಗೆ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ…

Read More

ಬೆಂಗಳೂರು : ಕಪ್ಪಣ್ಣ ಅಂಗಳ ಇದರ ವತಿಯಿಂದ 97ನೇ ಶಾಸ್ತ್ರೀಯ ಮಾಸಿಕ ಸಂಗೀತ ಕಛೇರಿ ‘ಆಲಾಪ್’ ಕಾರ್ಯಕ್ರಮವನ್ನು ದಿನಾಂಕ 13 ಸೆಪ್ಟೆಂಬರ್ 2025ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ಜೆ.ಪಿ. ನಗರದ ಕಪ್ಪಣ್ಣ ಅಂಗಳದಲ್ಲಿ ಆಯೋಜಿಸಲಾಗಿದೆ. ಈ ಹಿಂದೂಸ್ಥಾನಿ ವಾದ್ಯ ಸಂಗೀತ ಕಾರ್ಯಕ್ರಮದಲ್ಲಿ ಶ್ರೀರಕ್ಷಾ ಶಾನ್ ಭೋಗ್ ಇವರ ಹಾರ್ಮೋನಿಯಂ ವಾದನಕ್ಕೆ ಶ್ರೀರಶ್ಮಿ ಶಾನ್ ಭೋಗ್ ತಬಲಾ ಸಾಥ್ ನೀಡಲಿದ್ದಾರೆ. ‘ಆಲಾಪ್’ ಸರಣಿ ಸ್ವರ ಮಾಲಿಕೆಯ 97ನೇ ಕಾರ್ಯಕ್ರಮ ಇದಾಗಿದ್ದು, ಕಳೆದ 10 ವರ್ಷಗಳಿಂದ ಈ ಕಾರ್ಯಕ್ರಮ ನಡೆದುಕೊಂಡು ಬಂದಿದೆ. ಉದಯೋನ್ಮುಖ ಕಲಾವಿದರಿಗಾಗಿಯೇ ಆಯೋಜಿಸುವ ಈ ಸರಣಿಯಲ್ಲಿ ಒಂದು ತಿಂಗಳು ಹಿಂದೂಸ್ಥಾನಿ ಹಾಗೂ ಒಂದು ತಿಂಗಳು ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಗಳು ನಡೆಯುತ್ತಿದೆ. ಶ್ರೀ ನಿವಾಸ್ ಜಿ. ಕಪ್ಪಣ್ಣ ಹಾಗೂ ಲಲಿತ ಕಪ್ಪಣ್ಣ ದಂಪತಿಗಳು ತಮ್ಮ ಮನೆಯ ಅಂಗಳದಲ್ಲಿಯೇ ಸುಸಜ್ಜಿತವಾದ ಸಭಾಂಗಣವನ್ನು ನಿರ್ಮಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿಯೇ ಮುಡಿಪಾಗಿಟ್ಟಿದ್ದಾರೆ. ಕಪ್ಪಣ್ಣ ಅವರ ಪುತ್ರಿ ಹಾಗೂ ಕಪ್ಪಣ್ಣ ಅಂಗಳದ ನಿರ್ದೇಶಕಿಯಾದ ಸ್ನೇಹ ಕಪ್ಪಣ್ಣರವರು ಈ…

Read More

ಪುತ್ತೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ (ಕನ್ನಡ ಮತ್ತು ಸಂಸ್ಕೃತಿ ಇಲಾಖೆ) ಇವರು ಜಿ. ಎಸ್. ಟಿ. ಮಹಿಳಾ ಮಂಡಳಿ, ಪುತ್ತೂರು ಇವರ ಸಹಯೋಗದೊಂದಿಗೆ ಆಯೋಜಿಸುವ ಕೊಂಕಣಿ ರಂಗ ತರಂಗ ಮತ್ತು ಸಾಹಿತ್ಯ ಸಂಭ್ರಮ-3 ಕಾರ್ಯಕ್ರಮವು ದಿನಾಂಕ 14 ಸೆಪ್ಟೆಂಬರ್ 2025ರ ಭಾನುವಾರದಂದು ಅಪರಾಹ್ನ ಘಂಟೆ 3.00ಕ್ಕೆ ಪುತ್ತೂರು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಸುಕ್ರತೀಂದ್ರ ಕಲಾಮಂದಿರದಲ್ಲಿ ನಡೆಯಲಿದೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಧರ್ಮದರ್ಶಿ ವ್ಯವಸ್ಥಾಪಕರಾದ ಡಾ. ಅಶೋಕ್ ಪ್ರಭು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕುಡಾಲ ದೇಶಸ್ಥ ಗೌಡ ಬ್ರಾಹ್ಮಣ ಸಮಾಜದ ಮುಖಂಡರಾದ ಡಾ. ವೈ. ಉಮಾನಾಥ ಶೆಣೈ, ಗೌರವ ಅತಿಥಿಗಳಾಗಿ ಜಿ. ಎಸ್. ಬಿ. ಮಹಿಳಾ ಮಂಡಳಿಯ ಅಧ್ಯಕ್ಷ್ಯೆಯಾದ ಶ್ರೀಮತಿ ಎಮ್. ವಿದ್ಯಾ ಭಟ್ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಪುತ್ತೂರಿನ ಹಿರಿಯ ಸಾಹಿತಿಯಾದ ಶ್ರೀ ಉಲ್ಲಾಸ್ ಕೆ. ಪೈ…

Read More

ಸಾಣೇಹಳ್ಳಿ : ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ 2025-26ನೆಯ ಸಾಲಿನ ವಿದ್ಯಾರ್ಥಿಗಳು ಪ್ರಸ್ತುತ ಪಡಿಸುವ ಅಭ್ಯಾಸ ಮಾಲಿಕೆಯ ಯಕ್ಷಗಾನ ಪ್ರಯೋಗ ದಿನಾಂಕ 12 ಸೆಪ್ಟೆಂಬರ್ 2025ರಂದು ಸಂಜೆ 7-00 ಗಂಟೆಗೆ ಸಾಣೇಹಳ್ಳಿಯ ಎಸ್.ಎಸ್. ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಹಟ್ಟಿಯಂಗಡಿ ರಾಮ ಭಟ್ಟ ರಚಿತ ‘ಅತಿಕಾಯ ಮತ್ತು ಇಂದ್ರಜಿತು ಕಾಳಗ’ ಪ್ರಸಂಗವನ್ನು ಭಾರ್ಗವ ಕೆ.ಎನ್. ಇವರ ನಿರ್ದೇಶನದಲ್ಲಿ ಪ್ರಸ್ತುತ ಪಡಿಸಲಿದ್ದು, ಕುಶ ಎಂ.ಆರ್. ಇವರು ಮದ್ದಲೆ, ನಾಗಭೂಷಣ ಕೆ.ಎಸ್. ಇವರು ಚಂಡೆಯಲ್ಲಿ, ಶೈಲೇಶ್ ತೀರ್ಥಹಳ್ಳಿ ಯಕ್ಷಗಾನ ಹೆಜ್ಜೆಗಾರಿಕೆಯಲ್ಲಿ ಹಾಗೂ ಶ್ರೀ ಮಹಾ ಗಣಪತಿ ಶ್ರೀ ವೀರಾಂಜನೇಯ ಯಕ್ಷಗಾನ ಮಂಡಲಿ ಕೇಡಲಸರ ಪ್ರಸಾಧನದಲ್ಲಿ ಸಹಕರಿಸಲಿದ್ದಾರೆ.

Read More

ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಇವರು ಕಥೊಲಿಕ್ ಸಭಾ ಮಂಗಳೂರು (ರಿ.) ಸುರತ್ಕಲ್ ಘಟಕದ ಸಹಯೋಗದೊಂದಿಗೆ ಆಯೋಜಿಸುವ ವೊವಿಯೊ ವೇರ್ಸ್ ಬಾಳ್ ಗಿತಾಂ ಕಾರ್ಯಾಗಾರವು (ಮದುವೆ ಸೋಭಾಣೆ ಮತ್ತು ಶಿಶು ಗೀತೆಗಳು) ದಿನಾಂಕ 14 ಸೆಪ್ಟೆಂಬರ್ 2025ರ ಭಾನುವಾರದಂದು ಬೆಳಗ್ಗೆ ಘಂಟೆ 9.30ಕ್ಕೆ ಸುರತ್ಕಲ್ಲಿನ ಸೆಕ್ರೆಡ್ ಹಾರ್ಟ್ ಸಭಾಭವನದಲ್ಲಿ ನಡೆಯಲಿದೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಸೆಕ್ರೆಡ್ ಹಾರ್ಟ್ ಚರ್ಚ್ ಸುರತ್ಕಲ್ ಇಲ್ಲಿನ ಧರ್ಮಗುರುಗಳಾದ ಆ. ವಂ. ಅಸ್ಟಿನ್ ಪೀಟರ್ ಪೆರಿಸ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಂ. ಆರ್. ಪಿ. ಎಲ್. ಇದರ ಗ್ರೂಪ್ ಜನರಲ್ ಮೆನೇಜರ್ ಆದ ಶ್ರೀ ಕೃಷ್ಣಾ ಹೆಗ್ಡೆ, ಕೆಥೋಲಿಕ್ ಸಭಾ ಸುರತ್ಕಲ್ ಘಟಕದ ಅಧ್ಯಕ್ಷರಾದ ಶ್ರೀ ಒಲ್ವಿನ ಡಿ’ಸೋಜ, ಕೆಥೋಲಿಕ್ ಸಭಾ ಸುರತ್ಕಲ್ ವಲಯದ ಅಧ್ಯಕ್ಷರಾದ ಶ್ರೀ ಲಾರೆನ್ಸ್ ಡಿ’ಸೋಜ ಹಾಗೂ ಸುರತ್ಕಲ್ ಚರ್ಚ್ ಇದರ ಉಪಾಧ್ಯಕ್ಷರಾದ ಶ್ರೀ ರಸ್ಸೆಲ್…

Read More

ಬೆಂಗಳೂರು : ರಂಗ ತಂಡ ಸಂಚಲನ ಮೈಸೂರು (ರಿ.) ಮೈಸೂರು ಅಭಿನಯಿಸುವ ‘ಎರಡೆರಡ್ಲಾ ಐದು’ ಕನ್ನಡ ಹಾಸ್ಯ ನಾಟಕ ಪ್ರದರ್ಶನವನ್ನು ದಿನಾಂಕ 14 ಸೆಪ್ಟೆಂಬರ್ 2025ರಂದು ಮಧ್ಯಾಹ್ನ ಗಂಟೆ 3-30 ಹಾಗೂ ಸಂಜೆ 7-00ಕ್ಕೆ ಬೆಂಗಳೂರಿನ ಜೆಪಿ ನಗರದ ವ್ಯೋಮ ಆರ್ಟ್ ಥಿಯೇಟರ್ ಅಂಡ್ ಸ್ಟುಡಿಯೋನಲ್ಲಿ ಆಯೋಜಿಸಲಾಗಿದೆ. ಈ ನಾಟಕವನ್ನು ಏಕೆ ನೋಡಬೇಕು ? * ಮೋಸ ಮಾಡದೆ, ಲಂಚವನ್ನು ತೆಗೆದುಕೊಳ್ಳದೇ ಪ್ರಾಮಾಣಿಕತೆಯಿಂದ ದುಡಿದರೆ ಒಂದಲ್ಲ ಒಂದು ದಿನ ಅದರ ಫಲ ಸಿಕ್ಕೆ ಸಿಗುತ್ತದೆ. * ಕಷ್ಟಗಳು ಬಂದಾಗ ಮಾತ್ರ ಸಂಬಂಧಗಳು ಗಟ್ಟಿಯಾಗಿ ಒಬ್ಬರಿಗೊಬ್ಬರು ಸಹಕಾರಿಯಾಗಿ ನಿಲ್ಲಲು ಸಾಧ್ಯವಾಗುತ್ತದೆ. * ಶಾಂತಿ ಅನ್ನುವುದು ಹೊರಗಡೆ ಸಿಗುವ ವಸ್ತು ಅಲ್ಲ. ಅದು ಆಂತರಿಕ ಅನ್ನುವುದು ಈ ನಾಟಕದಲ್ಲಿ ಗೊತ್ತಾಗುತ್ತದೆ. * ಪ್ರೇಮ ಪ್ರೀತಿ ಅನ್ನುವುದು ಕೇವಲ ಆಕರ್ಷಣೆಯಲ್ಲ. ಅದು ಆತ್ಮಕ್ಕೆ ಸಂಬಂಧಪಟ್ಟದ್ದು. ಈ ನಾಟಕವನ್ನು ಹೇಗೆ ಕಟ್ಟಿದ್ದು, ಯಾರು ಕಟ್ಟಿದ್ದು? * ಕೇವಲ 12 ದಿನಗಳಲ್ಲಿ ಈ ನಾಟಕವನ್ನು ಕಟ್ಟಿದ ಶ್ರೇಯಸ್ಸು, ಸಂಚಲನ…

Read More

ಮಂಗಳೂರು : ಅಂತಾರಾಷ್ಟ್ರೀಯ ಕಲಾವಿದ, ಯಕ್ಷಗಾನ ಹಾಗೂ ರಂಗಭೂಮಿಯ ಕಲಾವಿದ ದಿ. ಪಿ.ವಿ. ಪರಮೇಶ್ ಇವರ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ದಿನಾಂಕ 15 ಸೆಪ್ಟೆಂಬರ್ 2025ನೇ ಸೋಮವಾರ ಬೆಳಿಗ್ಗೆ 10-30ಕ್ಕೆ ಶ್ರೀ ಕೃಷ್ಣ ಜನ್ಮಮಹೋತ್ಸವ ಸಮಿತಿ (ರಿ.) ಕದ್ರಿ ಇವರ ವೇದಿಕೆ ಮತ್ತು ಸಹಯೋಗದೊಂದಿಗೆ ಕದ್ರಿ ದೇವಸ್ಥಾನದಲ್ಲಿ ನಡೆಯಲಿದೆ. ಯಕ್ಷಗಾನದಲ್ಲಿ ನಾನಾ ಭಾಷೆಗಳಲ್ಲಿ ಮನೋಜ್ಞವಾಗಿ ನಟಿಸಬಲ್ಲ ಸಹೃದಯೀ ಕಲಾವಿದ ಪಿ. ನಾಗೇಶ ಕಾರಂತ ಇವರಿಗೆ ಪರಮೇಶ್ ರವರ ನೆನಪಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ಈ ಕಾರ್ಯಕ್ರಮವನ್ನು ಸರಯೂ ತಂಡ ನಿರ್ವಹಿಸಲಿದ್ದು, ಪ್ರಶಸ್ತಿ ಪ್ರದಾನದ ಬಳಿಕ ಸರಯೂ ಬಾಲ ಯಕ್ಷ ವೃಂದ (ರಿ.) ಮಕ್ಕಳ ಮೇಳದಿಂದ ‘ಶ್ರೀಕೃಷ್ಣ ಕಾರುಣ್ಯ’ ಎಂಬ ಯಕ್ಷಗಾನ ಬಯಲಾಟವೂ ನಡೆಯಲಿದೆ ಎಂದು ಸರಯೂ ತಂಡದ ಗೌರವ ಸಂಚಾಲಕರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಹಾಗೂ ನಿರ್ದೇಶಕ ವರ್ಕಾಡಿ ರವಿ ಅಲೆವೂರಾಯ ತಿಳಿಸಿದ್ದಾರೆ.

Read More

ಮಂಗಳೂರು : ಪರರ ಸೇವೆ ದೇವರ ಸೇವೆ ಎಂಬ ಧ್ಯೇಯವನ್ನು ತನ್ನದಾಗಿಸಿಕೊಂಡು ಬಾಳನ್ನು ಸಾಗಿಸಿದ್ದ ಶ್ರೀಮತಿ ದಿ. ಗಾಯತ್ರಿ ನಾಗೇಶ್ ರಾಮಕ್ಷತ್ರಿಯ ಸಮಾಜದ ಅಭಿಮಾನದ ಪುತ್ರಿ. ಬಹುಮುಖ ಪ್ರತಿಭೆಯ ಗಾಯತ್ರಿ ಇವರ ವೈಕುಂಠ ಸಮಾರಾಧನೆ ಕ್ರಿಯೆಯ ದಿನದಂದು ಮಂಗಳೂರು ಶರವು ದೇವಸ್ಥಾನದ ಸಮೀಪವಿರುವ ಬಾಳಂಭಟ್ ರಾಧಾಕೃಷ್ಣ ಸಭಾಂಗಣದಲ್ಲಿ ಮರೆಯಲಾಗದವರು ವ್ಯಕ್ತಿ ಚಿತ್ರಣ ಕೃತಿ ಕನ್ನಡ ಭವನ ಪ್ರಕಾಶನ ಕಾಸರಗೋಡು, ಇದರ ಸಂಸ್ಥಾಪಕ ಅಧ್ಯಕ್ಷರು ಸಂಚಾಲಕರು ಆಗಿರುವಂತಹ ಡಾ. ವಾಮನ್ ರಾವ್ ಬೇಕಲ್ ಇವರ ನೇತೃತ್ವದಲ್ಲಿ ಕೃತಿ ಬಿಡುಗಡೆ ಸಮಾರಂಭವನ್ನು ರಾಮಕ್ಷತ್ರಿಯ ಮಹಿಳಾ ಯಕ್ಷವೃಂದ ಜೆಪ್ಪು ಮಂಗಳೂರು ಇವರ ಸ0ಯುಕ್ತ ಆಶ್ರಯದಲ್ಲಿ ದಿನಾಂಕ 09 ಸೆಪ್ಟೆಂಬರ್ 2025ರಂದು ಆಯೋಜಿಸಲಾಯಿತು. ಈ ಕೃತಿಯನ್ನು ಬರೆದವರು ಕಾಸರಗೋಡು ಕನ್ನಡ ಭವನ ಪ್ರಕಾಶನದ ಸಂಸ್ಥಾಪಕಿ ಶ್ರೀಮತಿ ಸಂಧ್ಯಾ ರಾಣಿ ಟೀಚರ್, ಕೃತಿಯನ್ನು ಡಾ. ಶಿವಾನಂದ ಬೇಕಲ್ ಲೋಕಾರ್ಪಣೆಗೊಳಿಸಿದರು. ಅಂದಿನ ಸಭೆಯ ಅಧ್ಯಕ್ಷತೆಯನ್ನು ರಾಮಕ್ಷತ್ರಿಯ ಸೇವಾ ಸಂಘ ಮಂಗಳೂರು ಜಪ್ಪು ಅಧ್ಯಕ್ಷರಾದ ಮುರಳಿಧರ ಸಿ.ಎಚ್. ವಹಿಸಿದ್ದರು. ಕನ್ನಡ ಭವನ…

Read More