Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಬೆಂಗಳೂರಿನ ಸ್ವರ್ಣ ಭಾರತಿ ಫೌಂಡೇಶನ್ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಕೊಡಮಾಡುವ ‘ಮಹಿಳಾ ರತ್ನ 2025’ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 23 ಮಾರ್ಚ್ 2025ರಂದು ಬೆಂಗಳೂರಿನ ಈಸ್ಟ್‌ಕಲ್ಬರಲ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು. ಸಮಾರಂಭದಲ್ಲಿ ಕೊಡಗು ಜಿಲ್ಲೆ ಸೋಮವಾರಪೇಟೆಯ ಬರಹಗಾರ್ತಿ ಗೀತಾಂಜಲಿ ಇವರ ಸಾಹಿತ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ‘ಮಹಿಳಾ ರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭ ಬೆಂಗಳೂರು ಸಹಾಯಕ ಪೊಲೀಸ್ ಕಮಿಷನರ್ ರಂಗಪ್ಪ, ಪತ್ರಕರ್ತೆ ಸುಕನ್ಯಾ, ಸ್ವರ್ಣ ಭಾರತ್ ಪೌಂಡೇಶನ್ ಇದರ ಅಧ್ಯಕ್ಷೆ ಡಾ. ರಜನಿ ಸಂತೋಷ್ ಸೇರಿ ದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಉಡುಪಿ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ದಿನಾಂಕ 23 ಮಾರ್ಚ್ 2025ರಂದು ಗೋವಿಂದ ಪೈ ಸಂಶೋಧನ ಸಂಪುಟ ಪರಿಷ್ಕೃತ ದ್ವಿತೀಯ ಮುದ್ರಣ ಭಾಗ-2ರ ಅನಾವರಣ ಹಾಗೂ ‘ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ 2024ನೇ ಸಾಲಿನ ‘ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ’ ಸ್ವೀಕರಿಸಿದ ಸಾಹಿತಿ ಡಾ. ಹಂ.ಪ. ನಾಗರಾಜಯ್ಯ ಇವರು ಮಾತನಾಡಿ ‘ರಾಷ್ಟ್ರಕವಿ ಗೋವಿಂದ ಪೈ ಅವರ ಸಂಶೋಧನಾ ಬರಹಗಳು ಮತ್ತು ಸೃಜನಾತ್ಮಕ ಸಾಹಿತ್ಯ ಭಂಡಾರವು ಅಧ್ಯಯನಶೀಲರಿಗೆ ಪ್ರೇರಣೆಯಾಗಿದೆ. ಗೋವಿಂದ ಪೈ ಬರೆದ ದ್ರಾವಿಡ ಲಯದ ಹಾಡುಗಳು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮೈಲುಗಲ್ಲು. ಸಂಶೋಧನೆಯ ಜೊತೆಗೆ ಕಾವ್ಯದ ಸರ್ವ ಸ್ವಾರಸ್ಯವನ್ನು ಕಟ್ಟಿಕೊಟ್ಟಿರುವ ಅವರು ತಪಸ್ವಿಯಂತೆ ಬದುಕಿದವರು. ಅವರ ಹೆಸರಿನ ಪ್ರಶಸ್ತಿ ಸ್ವೀಕರಿಸಿರುವುದು ಧನ್ಯತಾ ಭಾವ ಮೂಡಿಸಿದೆ” ಎಂದರು.…
ಮಂಗಳೂರು : ಗಾನ ನೃತ್ಯ ಅಕಾಡೆಮಿ (ರಿ.) ಮಂಗಳೂರು ಪ್ರಸ್ತುತ ಪಡಿಸುವ ‘ಪ್ರೇರಣಾ -4’ ಗುರು ವಿದ್ಯಾಶ್ರೀ ರಾಧಾಕೃಷ್ಣ ಇವರ ಶಿಷ್ಯೆಯಿಂದ ಭರತನಾಟ್ಯ ಕಾರ್ಯಕ್ರಮವನ್ನು ದಿನಾಂಕ 29 ಮಾರ್ಚ್ 2025ರಂದು ಸಂಜೆ 6-00 ಗಂಟೆಗೆ ಸೇಂಟ್ ಅಲೋಶಿಯಸ್ ಕಾಲೇಜಿನ ಎಲ್.ಸಿ.ಆರ್.ಐ. ಹಾಲಿನಲ್ಲಿ ಆಯೋಜಿಸಲಾಗಿದೆ. ಸುರತ್ಕಲ್ಲಿನ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿಯ ನಿರ್ದೇಶಕರಾದ ವಿದ್ವಾನ್ ಚಂದ್ರಶೇಖರ ನಾವಡ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಕುಮಾರಿಯರಾದ ಮೈತ್ರೀಯಿ ನಾವಡ, ದಿಶಾ ಗಿರೀಶ್ ಮತ್ತು ತ್ವಿಷಾ ಶೆಟ್ಟಿ ಇವರ ನೃತ್ಯ ಕಾರ್ಯಕ್ರಮಕ್ಕೆ ಗುರು ವಿದ್ಯಾಶ್ರೀ ರಾಧಾಕೃಷ್ಣ ಇವರು ನಿರ್ದೇಶನ ಮತ್ತು ಹಾಡುಗಾರಿಕೆ, ಅನಂತ ಕೃಷ್ಣ ಸಿ.ವಿ. ನಟುವಾಂಗ, ಉಡುಪಿಯ ವಿದ್ವಾನ್ ಬಾಲಚಂದ್ರ ಭಾಗವತ್ ಮೃದಂಗ ಹಾಗೂ ಬೆಂಗಳೂರಿನ ವಿದ್ವಾನ್ ನಿತೀಶ್ ಅಮ್ಮಣ್ಣಾಯ ಕೊಳಲಿನಲ್ಲಿ ಸಾಥ್ ನೀಡಲಿದ್ದಾರೆ.
ಸುರತ್ಕಲ್ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಕೇಂದ್ರೀಯ ಘಟಕ ಮಂಗಳೂರು ಇದರ 8ನೇ ವಾರ್ಷಿಕೋತ್ಸವ ಸಮಾರಂಭವು ದಿನಾಂಕ 15 ಮಾರ್ಚ್ 2025ರಂದು ಸುರತ್ಕಲ್ ಬಂಟರ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಶಕುಂತಳಾ ರಮಾನಂದ ಭಟ್, ಚಂದ್ರಕಲಾ ಬಾಲಕೃಷ್ಣ ಶೆಟ್ಟಿ, ಭಾರತಿ ಗಂಗಾಧರ್, ಮಮತ ಹೆಗ್ಡೆ, ಸತ್ಯವತಿ ಡಿ. ಶೆಟ್ಟಿ ದೀಪ ಪ್ರಜ್ವಲನೆಗೈದರು. ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ ಹಿರಿಯ ನೃತ್ಯ ವಿದುಷಿ, ವಿಮರ್ಶಕಿ ಪ್ರತಿಭಾ ಎಲ್. ಸಾಮಗ ಮಾತನಾಡಿ “ಪ್ರಸಕ್ತ ಕಾಲಘಟ್ಟದಲ್ಲಿ ಮಹಿಳೆಯರೂ ಕೂಡಾ ಯಕ್ಷಗಾನದಲ್ಲಿ ಮುಂಚೂಣಿಯಲ್ಲಿದ್ದು ಕಲಾಸೇವೆಗೈಯುತ್ತಿದ್ದಾರೆ. ಅದರಲ್ಲೂ ಮಕ್ಕಳು ಯಕ್ಷಗಾನದತ್ತ ಆಕರ್ಷಿತರಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಮಕ್ಕಳನ್ನು ಯಕ್ಷಗಾನದಲ್ಲಿ ತೊಡಗಿಸಿಕೊಳ್ಳುವಂತೆ ಮಹಿಳಾ ಕೇಂದ್ರ ಸಮಿತಿ ಶ್ರಮ ಪಟ್ಟಿದೆ. ನೇಪಥ್ಯಕ್ಕೆ ಸರಿದ ಮತ್ತು ಸಾಧನೆಗೈದ ಮಹಿಳಾ ಕಲಾವಿದರನ್ನು ಗುರುತಿಸಿ ಗೌರವಿಸುವುದು ಶ್ಲಾಘನೀಯ” ಎಂದರು. ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪದ್ಮಪ್ರಸಾದ್ ಜೈನ್, ದೀಪಕ್ ಶೆಟ್ಟಿ ಲಿಂಗಮಾರುಗುತ್ತು, ವಿದ್ಯಾ ರಾಕೇಶ್, ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರ, ಸುಜಾತ ಧನಂಜಯ…
ಶಿವಮೊಗ್ಗ : ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ ಶಿವಮೊಗ್ಗ ಮತ್ತು ಡಿ. ದೇವರಾಜು ಅರಸು ಮೆಟ್ರಿಕ್ ನಂತರ ವಿದ್ಯಾರ್ಥಿನಿ ನಿಲಯ ಶಿವಮೊಗ್ಗ ಇವರ ವತಿಯಿಂದ ‘ದತ್ತಿ ನಿಧಿ ಕಾರ್ಯಕ್ರಮ’ವನ್ನು ದಿನಾಂಕ 27 ಮಾರ್ಚ್ 2025ರಂದು ಶಿವಮೊಗ್ಗದ ಡಿ. ದೇವರಾಜು ಅರಸು ಮೆಟ್ರಿಕ್ ನಂತರ ವಿದ್ಯಾರ್ಥಿನಿ ನಿಲಯದಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರೀ ರಾಮಭಟ್ಟ ಮತ್ತು ಶ್ರೀಮತಿ ದೇವಕಮ್ಮ ದತ್ತಿ ಹಾಗೂ ಶ್ರೀ ಆನಂದಪುರಂ ಜಗದ್ಗುರು ಗುರುಬಸವ ಮಹಾಸ್ವಾಮಿಗಳ ದತ್ತಿ ಉಪನ್ಯಾಸ ನಡೆಯಲಿದೆ. ಈ ಕಾರ್ಯಕ್ರಮವನ್ನು ಖ್ಯಾತ ವೈದ್ಯರಾದ ಡಾ. ಪಿ. ನಾರಾಯಣ ಇವರು ಉದ್ಘಾಟನೆ ಮಾಡಲಿದ್ದು, ‘ಆರೋಗ್ಯ ಮತ್ತು ಸಾಹಿತ್ಯ’ ಎಂಬ ವಿಷಯದ ಬಗ್ಗೆ ಶಿವಮೊಗ್ಗದ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಡಿ. ಮಂಜುನಾಥ ಮತ್ತು ‘ಕೆಳದಿ ಸಂಸ್ಥಾನದ ಆಡಳಿತ ಮಹತ್ವ’ ಎಂಬ ವಿಷಯದ ಬಗ್ಗೆ ವಿಶ್ರಾಂತ ಸಹ ಪ್ರಾಧ್ಯಾಪಕರಾದ ಡಾ. ಕೆ.ಜಿ. ವೆಂಕಟೇಶ್ ಇವರು ವಿಷಯ ಮಂಡನೆ ಮಾಡಲಿರುವರು.
ಬೆಂಗಳೂರು : ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಜನಪದರು ಸಾಂಸ್ಕೃತಿಕ ವೇದಿಕೆ (ರಿ.) ಇವರು ಅಭಿನಯಿಸುವ ರಾಮಕೃಷ್ಣ ಬೆಳ್ತೂರು ಇವರ ನಿರ್ದೇಶನದಲ್ಲಿ ‘ತಿರುಕರಾಜ’ ನಾಟಕ ಪ್ರದರ್ಶನವನ್ನು ದಿನಾಂಕ 27 ಮಾರ್ಚ್ 2025ರಂದು ಬೆಂಗಳೂರಿನ ನಿಂಬೆಕಾಯಿಪುರದ ಶ್ರೀ ಅಭಯಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿರುವ ಜನಪದರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ತೆಕ್ಕಟ್ಟೆ: ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಹಾಗೂ ಅರೆಹೊಳೆ ಪ್ರತಿಷ್ಠಾನದ ಸಹಕಾರದೊಂದಿಗೆ ಧಮನಿ (ರಿ.) ತೆಕ್ಕಟ್ಟೆ ಸಂಸ್ಥೆಯ ಪ್ರಥಮ ವಾರ್ಷಿಕೋತ್ಸವವು ದಿನಾಂಕ 23 ಮಾರ್ಚ್ 2025ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಅರೆಹೊಳೆ ಪ್ರತಿಷ್ಠಾನದ ಸದಾಶಿವ ರಾವ್ ಅರೆಹೊಳೆ ಮಾತನಾಡಿ “ಕೇವಲ ಮಕ್ಕಳ ರಂಗಭೂಮಿಯ ಬಗೆಗೆ ಧ್ವನಿ ಎತ್ತಿದ ಸಂಸ್ಥೆ ಧಮನಿ (ರಿ.) ತೆಕ್ಕಟ್ಟೆ. ಭವಿಷ್ಯವನ್ನು ಆಳುವ ಮಕ್ಕಳನ್ನು ರಂಗಭೂಮಿಯ ಚಟುವಟಿಕೆಗಳಿಂದ ಶ್ರೀಮಂತಗೊಳಿಸಿದರೆ ಉಜ್ವಲ ಭವಿಷ್ಯ ಸಾಧ್ಯ. ಆಗಾಗ ಮಕ್ಕಳನ್ನು ಒಂದುಗೂಡಿಸುತ್ತ ಕೆಲಸ ಮಾಡುತ್ತಿರುವುದು ಸಣ್ಣ ವಿಚಾರವಲ್ಲ. ಸಾಹಸದ ಕೆಲಸಕ್ಕೆ ಸದಾ ಸಿದ್ಧವಾಗುತ್ತಿರುವ ಈ ಸಂಸ್ಥೆಯು ಉತ್ತರೋತ್ತರ ಶ್ರೇಯಸ್ಸು ಹೊಂದಲಿ” ಎಂದು ಹಾರೈಸಿದರು. ರಂಗ ನಿರ್ದೇಶಕ ಸದಾನಂದ ಬೈಂದೂರು ಮಾತನಾಡಿ ನಿರಂತರ ರಂಗ ಚಟುವಟಿಕೆಯಿಂದ ತೆಕ್ಕಟ್ಟೆ ಪರಿಸರವನ್ನು ಸಾಂಸ್ಕೃತಿಕವಾಗಿ ಬೆಳಗಿಸುತ್ತಿರುವ ಸಂಸ್ಥೆಯೊಂದಿಗೆ ಧಮನಿ ಟ್ರಸ್ಟ್ ಹೊಸ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಂಗಭೂಮಿ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡಿ ಜನ್ಮ ತಾಳಿದೆ. ಪ್ರತೀ ದಿನವೂ ಮಕ್ಕಳ ರಂಗ ಕಲೆಯ ಬಗೆಗೆ…
ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಶ್ರೀ ಸರ್ವೇಜನಾಃ ಆರ್ಟ್ಸ್ ಮತ್ತು ಕಲ್ಚರಲ್ ಟ್ರಸ್ಟ್ (ರಿ.) ಇದರ ಸಹಭಾಗಿತ್ವದಲ್ಲಿ 8ನೇ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಮಹೋತ್ಸವ ಅಂಗವಾಗಿ ನಾಡಿಗಾಗಿ, ನಾಡಿನ ಏಳಿಗೆಗಾಗಿ ಗಣನೀಯ ಸೇವೆ ಸಲ್ಲಿಸಿದ ಪತ್ರಿಕೋದ್ಯಮ, ಸಾಹಿತ್ಯ, ಸಂಘಟನೆ, ಸಮಾಜಸೇವೆಗಾಗಿ ಮಾಜಿ ಮುಖ್ಯಮಂತ್ರಿ ವಿಧಾನಸೌಧ ನಿರ್ಮಾತ್ ದಿವಂಗತ ಶ್ರೀ ಕೆಂಗಲ್ ಹನುಮಂತಯ್ಯ ಸದ್ಭಾವನ ರಾಷ್ಟ್ರ ಪ್ರಶಸ್ತಿಯನ್ನು ಅಮೃತ ಪ್ರಕಾಶ ಪತ್ರಿಕೆ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಇವರಿಗೆ ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ದಿನಾಂಕ 24 ಮಾರ್ಚ್ 2025ರಂದು ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಖ್ಯಾತ ಗಾಯಕ ಶಶಿಧರ ಕೋಟೆ ಪ್ರಶಸ್ತಿ ಪ್ರದಾನ ಮಾಡಿದರು. ಮುಖ್ಯ ಅತಿಥಿಗಳಾಗಿ ಚಲನ ಚಿತ್ರನಟ ಶಿವಕುಮಾರ ಆರಾಧ್ಯ, ಹೊಸಮಠ ಮಹಾಸ್ವಾಮಿಗಳಾದ ಬಸವ ಶಾಂತಲಿಂಗ ಮಹಾಸ್ವಾಮಿಗಳು, ಡಾ. ಪುತ್ತೂರಾಯ, ಡಾ. ಕೆಂಚನೂರು ಶಂಕರ್, ಲಷೀತಾ ಗಂಗಾವತಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಶ್ರೀಕೃಷ್ಣದೇವರಾಯ ಕಲಾಮಂದಿರದ ರಂಗದ ಮೇಲೆ ಭಕ್ತಿ-ತಾದಾತ್ಮ್ಯತೆಗಳಿಂದ ಮೈಮರೆತು ನರ್ತಿಸುತ್ತಿದ್ದ ಕಲಾವಿದೆ ಕೀರ್ತನಾ ಶಶಿಕುಮಾರ್ ಎರಡು ಗಂಟೆಗಳ ಕಾಲ ನೆರೆದ ಸಮಸ್ತ ಕಲಾರಸಿಕರ ಗಮನವನ್ನು ತನ್ನತ್ತ ಸೆಳೆದಿಟ್ಟುಕೊಂಡಿದ್ದು ವಿಶೇಷ. ನೃತ್ಯಕ್ಕೆ ಹೇಳಿ ಮಾಡಿಸಿದ ಮಾಟವಾದ ಅಂಗಸೌಷ್ಟವ, ಭಾವಪೂರ್ಣ ಅಭಿವ್ಯಕ್ತಿ ಸೂಸುವ ಹಸನ್ಮುಖ, ಬೊಗಸೆಕಂಗಳ ಚೆಲುವಿನ ಕಲಾವಿದೆ, ನಿಷ್ಠೆ- ಪರಿಶ್ರಮಗಳಿಂದ ಕಲಿತ ತನ್ನ ಸೊಬಗಿನ ನೃತ್ಯಧಾರೆಯೊಂದಿಗೆ ಅಪೂರ್ವ ಭಂಗಿಗಳನ್ನು ಕಲಾತ್ಮಕವಾಗಿ ಪ್ರದರ್ಶಿಸಿದಳು. ಬೆಂಗಳೂರಿನ ‘ಉಷ್ಶಸ್ ಫೌಂಡೇಶನ್’ ನೃತ್ಯಸಂಸ್ಥೆಯ ನೃತ್ಯಗುರು ಕಲೈಮಾಮಣಿ ಡಾ. ಸಂಗೀತಾ ಕಬಿಲನ್ ಇವರ ಶಿಷ್ಯೆ ಕೀರ್ತನಾ ಶಶಿಕುಮಾರ್ ವಿದ್ಯುಕ್ತವಾಗಿ ನಡೆದ ಅವಳ ರಂಗಪ್ರವೇಶದಲ್ಲಿ ಸಾಕಾರಗೊಳಿಸಿದ ಎಲ್ಲ ಕೃತಿಗಳೂ ದೈವೀಕ ಪ್ರಭೆಯಿಂದ ಬೆಳಗಿದವು. ಪ್ರಥಮ ಪ್ರಸ್ತುತಿಯಾಗಿ ತ್ಯಾಗರಾಜರು ರಚಿಸಿದ ‘ನಂದನಮು ರಘುನಂದನ’- (ಷಹನ ರಾಗ-ಆದಿತಾಳ)ನನ್ನು ಗಾಯಕ ರೋಹಿತ್ ಭಟ್ಟರು ಮಾರ್ದವ ರಾಗದಲ್ಲಿ ಸ್ತುತಿಸತೊಡಗಿದಂತೆ, ಸಾಕೇತರಾಮನ ಸೇತುಬಂಧನದ ಸೂಕ್ಷ್ಮಸಂಚಾರಿಯನ್ನು ಕೀರ್ತನಾ ಚಿತ್ರಿಸುತ್ತ, ರಾಮನನ್ನು ಪರಿಪರಿಯಾಗಿ ನುತಿಸುತ್ತ, ಅವನ ದಿವ್ಯರೂಪವನ್ನು, ಸುಂದರ ಭಂಗಿಗಳನ್ನು ತನ್ನ ಮನೋಜ್ಞ ಅಭಿನಯ ಮತ್ತು ಬಾಗು-ಬಳಕುಗಳ ಆಂಗಿಕಾಭಿನಯದಿಂದ ಚಿತ್ರಿಸಿದಳು. ಆಂಜನೇಯನ ಭಕ್ತಿಯ…
ಸೃಜನಶೀಲ ಸಾಹಿತ್ಯ ಅರಳುವುದು ನೋವು, ಕಷ್ಟ, ಜಂಜಾಟಗಳ ಜೀವನದ ನಡುವೆ ಎಂಬುದು ಜನಜನಿತ ಮಾತು. ಈ ರೀತಿಯ ಜೀವನ ನಡೆಸಿ ಪ್ರಸಿದ್ಧರಾದ ಎಷ್ಟೋ ಸೃಜನಶೀಲ ಸಾಹಿತಿಗಳನ್ನು ನಮ್ಮ ನಾಡು ಕಂಡಿದೆ. ಇಂತಹ ಸಾಹಿತಿಗಳ ನಡುವೆ ಎದ್ದು ಕಾಣುವ ಮಹಿಳಾ ಸಾಹಿತಿ, ಹಲವು ಪ್ರಥಮಗಳಿಗೆ ಸಾಕ್ಷಿಯಾದವರು ನಾಡೋಜ ಗೀತಾ ನಾಗಭೂಷಣ. ಅವರು ಅನುಭವಿಸಿದ ಕಷ್ಟ, ನೋವು, ತಿರಸ್ಕಾರ, ಅಪಮಾನ, ಕಹಿ ಘಟನೆಗಳ ಪ್ರೇರಣೆಯಿಂದಲೇ ಅವರೊಳಗಿನ ಸಾಹಿತಿ ಬೆಳಕಿಗೆ ಬಂದದ್ದು. ಗುಲ್ಬರ್ಗ ಜಿಲ್ಲೆಯ ಹಿಂದುಳಿದ ಪುಟ್ಟ ಹಳ್ಳಿಯಾದ ಸಾವಳಗಿ ಎಂಬಲ್ಲಿ 1942 ಮಾರ್ಚ್ 25ರಂದು ಗೀತಾ ಜನಿಸಿದರು. ಗುಲ್ಬರ್ಗದ ಬಟ್ಟೆ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಶಾಂತಪ್ಪ ಮತ್ತು ಶರಣಮ್ಮ ದಂಪತಿಗಳ ಸುಪುತ್ರಿ. ಕನ್ನಡದ ಪ್ರಸಿದ್ಧ ಲೇಖಕಿಯಾದ ಇವರು ಬಡ ಕುಟುಂಬದಲ್ಲಿ ಜನಿಸಿ ಸಿಟ್ಟು, ತಿರಸ್ಕಾರ, ಅಪಮಾನಗಳ ಮಧ್ಯೆ ಎಲ್ಲವನ್ನೂ ಎದುರಿಸಿ ತ್ರಿವಿಕ್ರಮನಂತೆ ಎದ್ದು ನಿಂತವರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ತನ್ನ ಹುಟ್ಟೂರಿಯನಲ್ಲಿ ಮುಗಿಸಿದ ಇವರು ಒಂದು ಕಲೆಕ್ಟರ್ ಕಚೇರಿಯಲ್ಲಿ ಉದ್ಯೋಗಿಯಾಗಿದ್ದುಕೊಂಡು ದುಡಿಯುತ್ತಲೇ ಕಾಲೇಜಿನ ಪದವಿ ಶಿಕ್ಷಣವನ್ನು…