Author: roovari

ತೀರ್ಥಹಳ್ಳಿ : ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಮೇಲಿನ ಕುರುವಳ್ಳಿಯಲ್ಲಿ ದಿನಾಂಕ 25 ಜುಲೈ 2024ರಂದು ತಾಲೂಕು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಸಾಹಿತ್ಯ ಪರಿಷತ್ತು ತೀರ್ಥಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಹೋಬಳಿ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಕಥೆ, ಕವನ, ಪ್ರಬಂಧ ರಚನೆ ಮತ್ತು ಮಂಡನೆಯ ಕುರಿತಾದ ಒಂದು ವಿಭಿನ್ನವಾದ ‘ಸಾಹಿತ್ಯ ಕಮ್ಮಟ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ರೇಣುಕಾ ಹೆಗಡೆ, ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಶ್ರೀ ರಮೇಶ್ ಶೆಟ್ಟಿ ಹಾಗೂ ಆಗಮಿಸಿದ ಮುಖ್ಯ ಅತಿಥಿಗಳು ‘ಕಾವ್ಯ ಕಮ್ಮಟ’ ಕಾರ್ಯಕ್ರಮದ ಮೂಲ ಉದ್ದೇಶಗಳು, ಪ್ರಸ್ತುತ ಸನ್ನಿವೇಶಕ್ಕೆ ಅದರ ಅವಶ್ಯಕತೆಗಳು ಹಾಗೂ ಮಕ್ಕಳು ಉತ್ತಮ ಸಂಸ್ಕಾರ ಮತ್ತು ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಲ್ಲಿ ಕಾವ್ಯ ಕಮ್ಮಟದ ಮಹತ್ವವನ್ನು ತಿಳಿಸಿಕೊಟ್ಟರು. ವಿವಿಧ ಶಾಲೆಗಳಿಂದ ಆಗಮಿಸಿದ ಮಕ್ಕಳ ಆಸಕ್ತಿಗೆ ಅನುಗುಣವಾಗಿ ಕಥೆ, ಕವನ ಮತ್ತು ಪ್ರಬಂಧಕ್ಕೆ ಮೂರು ವಿಭಾಗ ಮಾಡಿ ಪ್ರತ್ಯೇಕ ಕೊಠಡಿಗಳಲ್ಲಿ…

Read More

ಕಾಸರಗೋಡು : ಸಾಹಿತಿ, ಭಾಷಾಂತರಕಾರ, ಸಮಾಜಸೇವಕ ಕೆ.ವಿ. ಕುಮಾರನ್ ಮಾಸ್ಟರಿಗೆ ಕಾಸರಗೋಡು ಕನ್ನಡ ಭವನದ ಗುರುನಮನ ಹಾಗೂ ‘ಕನ್ನಡ ಭವನ ಅಭಿನಂದನಾ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವು ಇವರ ವಿದ್ಯಾನಗರದ ಸ್ವಗೃಹದಲ್ಲಿ ದಿನಾಂಕ 28 ಜುಲೈ 2024ರ ಆದಿತ್ಯವಾರ ಬೆಳಿಗ್ಗೆ 9.30 ಗಂಟೆಗೆ ನಡೆಯಲಿದೆ. ಶಿವರಾಮ ಕಾರಂತರ ‘ಚೋಮನ ದುಡಿ’, ಭೈರಪ್ಪನವರ ‘ಯಾನ’, ಗೋಪಾಲಕೃಷ್ಣ ಪೈಯವರ ‘ಸ್ವಪ್ನಸಾರಸ್ವತ’ ಸಹಿತ ಹಲವು ಕಾದಂಬರಿಗಳನ್ನು ಮಲಯಾಳಕ್ಕೆ ಅನುವಾದಿಸಿದ ಕೆ.ವಿ. ಕುಮಾರನ್ ಇವರಿಗೆ ಕೇರಳ ಸಾಹಿತ್ಯ ಅಕಾಡಮಿ ಅವಾರ್ಡ್ ಪ್ರಕಟಿಸಿದೆ. ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಈ ಗೌರವ ಪ್ರಶಸ್ತಿ ಲಭಿಸಿದೆ. ಇವರು ಹೈಸ್ಕೂಲ್ ಅಧ್ಯಾಪಕರಾಗಿ, ಸಹಾಯಕ ವಿದ್ಯಾಧಿಕಾರಿಯಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ. ನಿವೃತ್ತ ಜೀವನವನ್ನು ಸಾಹಿತ್ಯ ಸೃಷ್ಟಿ ಹಾಗೂ ವಿವಿಧ ಸಂಘಟನೆಗಳ ಸಾಹಿತ್ಯಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಇವರು ಹಿಂದಿಯಿಂದಲೂ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ. ಇವರ ಸಾಹಿತ್ಯ, ಸಾಮಾಜಿಕ ಸರ್ವತೋಮುಖ ಸೇವೆಯನ್ನು ಪರಿಗಣಿಸಿ ಕನ್ನಡ ಭವನ ‘ಗುರುನಮನ’ ನೀಡಿ ಗೌರವಿಸಲಿರುವುದು. ಕೇರಳ ಸಾಹಿತ್ಯ ಅಕಾಡೆಮಿ ಅವಾರ್ಡ್…

Read More

ಕಿನ್ನಿಗೋಳಿ : ಕಿನ್ನಿಗೋಳಿಯ ಯುಗಪುರುಷದ ಸಂಸ್ಥಾಪಕ ದಿ. ಕೊ. ಅ. ಉಡುಪ ಸಂಸ್ಮರಣಾ ಸಮಾರಂಭ, ಕೊ. ಅ. ಉಡುಪ ಪ್ರಶಸ್ತಿ ಪ್ರದಾನ, ವೇದ ವಿದ್ವಾಂಸರ ಸನ್ಮಾನ, ಕೃತಿ ಬಿಡುಗಡೆ ಸಮಾರಂಭ ಹಾಗೂ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ 24 ಜುಲೈ 2024ರಂದು ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನ ನೀಡಿ, “ದಿ. ಕೊ. ಅ. ಉಡುಪರು ಆದರ್ಶ ಕೃಷಿಕರಾಗಿ, ಉತ್ತಮ ಗುರುಗಳಾಗಿ, ಸಾಂಸ್ಕೃತಿಕ ರಾಯಭಾರಿಯಾಗಿ, ಅಜಾತಶತ್ರುವಾಗಿದ್ದು ಅವರ ಸಾಧನೆಗಳು ಕಾಲಕಾಲಕ್ಕೂ ಪ್ರಸ್ತುತ” ಎಂದರು. ಉಳೆಪಾಡಿ ದೇವಸ್ಥಾನದ ಧರ್ಮದರ್ಶಿ ಮೋಹನದಾಸ ಸುರತ್ಕಲ್ ಅವರಿಗೆ ಕೊ. ಅ. ಉಡುಪ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಎಡಪದವು ರಾಧಾಕೃಷ್ಣ ತಂತ್ರಿ ಅವರನ್ನು ಕಮಲಾಕ್ಷಿ ಉಡುಪ ಸ್ಮರಣಾರ್ಥ ವೇದ ವಿದ್ವಾಂಸರ ನೆಲೆಯಲ್ಲಿ ಗೌರವಿಸಲಾಯಿತು. ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಎಂ.ವಿ. ಭಟ್ ರಚಿತ ‘ಆಧುನಿಕ…

Read More

ತುಮಕೂರು : ಲೇಖಕ ಪತ್ರಕರ್ತ ಜಿ. ಇಂದ್ರಕುಮಾರ್ ಪ್ರತಿಷ್ಠಾನ ತುಮಕೂರು ಇದರ ವತಿಯಿಂದ ಪುಸ್ತಕ ಲೋಕಾರ್ಪಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 28 ಜುಲೈ 2024ರಂದು ಬೆಳಿಗ್ಗೆ 10-30ಕ್ಕೆ ತುಮಕೂರಿನ ಅಮಾನಿಕೆರೆ ಎದುರು, ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರು ಹಾಗೂ ಸಾಹಿತಿಗಳಾದ ಡಾ. ಸಿ. ಸೋಮಶೇಖರ್ ಇವರು ಲೇಖಕ ಜಿ. ಇಂದ್ರಕುಮಾರ್ ಇವರ ‘ನೆರೆದೆಲಗ’ ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ. ಸಾಹಿತಿ ಶ್ರೀಮತಿ ನಾಗರತ್ನ ಚಂದ್ರಪ್ಪ, ಹಿರಿಯ ಪತ್ರಕರ್ತ ಶ್ರೀ ಹೆಚ್.ಎನ್. ಮಲ್ಲೇಶ್, ಹಿರಿಯ ಪತ್ರಿಕಾ ಛಾಯಾ ಗ್ರಾಹಕರಾದ ಶ್ರೀ ಟಿ. ಎಸ್. ತ್ರಿಯಂಬಕ ಮತ್ತು ರಂಗಭೂಮಿ ಕಲಾವಿದರಾದ ಶ್ರೀ ಎನ್. ಸಿದ್ಧರಾಜು ಇವರುಗಳಿಗೆ ಜಿ. ಇಂದ್ರಕುಮಾರ್ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಆರ್. ದೊಡ್ಡಲಿಂಗಪ್ಪ ಇವರು ಪ್ರಶಸ್ತಿ ಪ್ರದಾನ ಮಾಡಲಿರುವರು.

Read More

ಧಾರವಾಡ : ಮಹಾನಗರದ ಹಿರಿಯ ರಂಗ ಸಂಸ್ಥೆ ಅಭಿನಯ ಭಾರತಿಯು ಈ ವರ್ಷದಿಂದ ರಂಗ ದಿಗ್ಗಜರ ಸವಿ ನೆನಪಿನಲ್ಲಿ ಪ್ರತಿ ತಿಂಗಳು ಮಾಸಿಕ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸುತ್ತಿದೆ. ಈ ಸರಣಿಯ ಏಳನೆಯ ಕಾರ್ಯಕ್ರಮವನ್ನು ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಸಹಯೋಗದೊಂದಿಗೆ ದಿನಾಂಕ 29 ಜುಲೈ 2024ರಂದು ಸಂಜೆ 6-00 ಗಂಟೆಗೆ ಧಾರವಾಡದ ಮನೋಹರ ಗ್ರಂಥ ಮಾಲಾದ ಅಟ್ಟದಲ್ಲಿ ಏರ್ಪಡಿಸಿದೆ. ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಮನೋಹರ ಗ್ರಂಥ ಮಾಲೆಯ ಅನನ್ಯ ಕೊಡುಗೆ ಹಾಗೂ ಶತಮಾನದತ್ತ ಹೆಜ್ಜೆ ಇಡುತ್ತಿರುವ ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ‘ಶ್ರಮಸಾಫಲ್ಯ’ ಜಿ.ಬಿ. ಜೋಶಿ ಹಾಗೂ ಕೀರ್ತಿನಾಥ ಕುರ್ತಕೋಟಿ ಅವರಿಗೆ ಸಲ್ಲುತ್ತದೆ. ಜುಲೈ 29 ಜಿ.ಬಿ. ಜೋಶಿಯವರ 120ನೇ ಹುಟ್ಟುಹಬ್ಬ ಹಾಗೂ ಜುಲೈ 31 ಶ್ರೀ ಕೀರ್ತಿನಾಥ ಕುರ್ತುಕೋಟಿಯವರ 21ನೇ ಪುಣ್ಯತಿಥಿ. ತಮಗೆಲ್ಲ ಗೊತ್ತಿರುವಂತೆ ಜಿ.ಬಿ. ಜೋಶಿಯವರ ಶತಮಾನೋತ್ಸವ ಸಂದರ್ಭದಲ್ಲಿ ಆ ಕಾರ್ಯಕ್ರಮದ ಜವಾಬ್ದಾರಿಗಳನ್ನು ನಿರ್ವಹಿಸಿ ಮಾರನೇ ದಿನವೇ ಅವರೀರ್ವರ ಅವಿನಾಭಾವ ಸಂಬಂಧದ ಸಂಕೇತವೆಂಬಂತೆ ಕೀರ್ತಿಯವರು ನಮ್ಮನ್ನು ಅಗಲಿದ್ದರು.…

Read More

ಸುರತ್ಕಲ್ : ಅಗರಿ ಪ್ರಶಸ್ತಿ, ಅಗರಿ ರಘುರಾಮ ಸಮ್ಮಾನ, ಅಗರಿ ಸಂಸ್ಮರಣೆ, ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಯಕ್ಷಗಾನ ಬಯಲಾಟ ಕಾರ್ಯಕ್ರಮವು 28 ಜುಲೈ 2024ರಂದು ಹೊಸಬೆಟ್ಟು ನವಗಿರಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. 2023ನೇ ಸಾಲಿನ ಪ್ರತಿಷ್ಠಿತ ‘ಅಗರಿ ಪ್ರಶಸ್ತಿ’ಗೆ ಅಭಿಜ್ಞ ಯಕ್ಷಗಾನ ಭಾಗವತ ಪುತ್ತಿಗೆ ರಘುರಾಮ ಹೊಳ್ಳ ಆಯ್ಕೆಯಾಗಿದ್ದು, ಅಗರಿ ರಘುರಾಮ ಸಮ್ಮಾನ ಪುರಸ್ಕಾರಕ್ಕೆ ಉಡುಪಿಯ ಕಲೆ ಮತ್ತು ಸಮಾಜ ಸೇವಾ ಸಂಸ್ಥೆ ‘ಯಕ್ಷಗಾನ ಕಲಾರಂಗ’ ಆಯ್ಕೆ ಯಾಗಿದೆ. ಅಂದು ಸಂಜೆ ಘಂಟೆ 3.00ರಿಂದ ನಡೆಯಲಿರುವ ಈ ಕಾರ್ಯಕ್ರಮಾದಲ್ಲಿ ಮೂಡುಬಿದಿರೆಯ ಉದ್ಯಮಿ ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದು, ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಶ್ರೀಹರಿನಾರಾಯಣ ದಾಸ ಆಸ್ರಣ್ಣ ಶುಭ ಹಾರೈಸಲಿದ್ದಾರೆ. ಈ ಸಂದರ್ಭದಲ್ಲಿ  ಸಾಧನೆ ಮಾಡಿದ ಸಂಘದ ಸದಸ್ಯರಾದ ನಿಧೀಶ ಹೊಸಬೆಟ್ಟು, ರಾಘವೇಂದ ಎಚ್. ವಿ., ರಾಕೇಶ್ ಹೊಸಬೆಟ್ಟು ಇವರನ್ನು ಅಭಿನಂದಿಸಲಾಗುವುದು. ಸಂಸದ ಕ್ಯಾ.  ಬ್ರಿಜೇಶ್ ಚೌಟ, ಉದ್ಯಮಿ ಶ್ರೀಕಾಂತ್ ಭಟ್, ಗುರುರಾಜ್ ಆಚಾ‌ರ್ ಹೊಸಬೆಟ್ಟು, ಪೆರ್ಮುದೆ ಸ.…

Read More

ಕೋಟ : ವಿವೇಕ ವಿದ್ಯಾ ಸಂಸ್ಥೆಗಳಲ್ಲಿ ಯಕ್ಷಶಿಕ್ಷಣವು ದಿನಾಂಕ 27 ಜುಲೈ 2024ರಂದು ಪ್ರಾರಂಭಗೊಂಡಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಖ್ಯಾತ ಯಕ್ಷಗಾನ ಕಲಾವಿದ ಕೋಟ ಸುರೇಶ್ ಇವರು ಮಾತನಾಡಿ “ಪಾರಂಪರಿಕ ಯಕ್ಷಗಾನವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ, ಪ್ರೌಢಶಾಲೆಗಳಲ್ಲಿ ಯಕ್ಷಗಾನ ಕಲಿಸುತ್ತಿರುವ ಯಕ್ಷಶಿಕ್ಷಣ ಟ್ರಸ್ಟಿಗೆ ಅಭಿನಂದನೆಗಳು. ಓರ್ವ ವೃತ್ತಿ ಕಲಾವಿದನಾಗಿ ನನಗೆ ತುಂಬಾ ಸಂತೋಷವನ್ನು ಕೊಟ್ಟ ಯೋಜನೆ ಇದಾಗಿದ್ದು, ಯಶಸ್ವಿಯಾಗಲಿ” ಎಂದು ಹಾರೈಸಿದರು. “ಈ ಬಾರಿ ಕುಂದಾಪುರ ವಿಧಾನಸಭಾ ವ್ಯಾಪ್ತಿಯ 24 ಪ್ರೌಢಶಾಲೆಗಳಲ್ಲಿ ಯಕ್ಷಶಿಕ್ಷಣ ಆರಂಭಗೊಂಡಿದ್ದು, ಇದಕ್ಕೆ ಕಾರಣೀಕರ್ತರಾದ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರು ಅಭಿನಂದನೀಯರು. ರಾಜ್ಯಕ್ಕೆ ಮಾದರಿಯಾದ ವಿವೇಕ ವಿದ್ಯಾ ಸಂಸ್ಥೆಯ ಆವರಣದಲ್ಲಿ ಹುಡುಗರ ಮತ್ತು ಹುಡುಗಿಯರ ಎರಡು ತಂಡಗಳಿಗೆ ಯಕ್ಷಶಿಕ್ಷಣ ನೀಡುತ್ತಿರುವುದು ಟ್ರಸ್ಟಿಗೆ ಅಭಿಮಾನದ ವಿಚಾರವಾಗಿದೆ” ಎಂಬುದಾಗಿ ಯಕ್ಷಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್ ಈ ಸಂದರ್ಭದಲ್ಲಿ ಸಂತಸ ವ್ಯಕ್ತಪಡಿಸಿದರು. ಈ ಎರಡೂ ಪ್ರೌಢಶಾಲೆಗಳಿಗೆ ಗುರುಗಳಾಗಿ ಕಾರ್ಯ ನಿರ್ವಹಿಸುವ ನರಸಿಂಹ ತುಂಗರು ಮಾತನಾಡುತ್ತಾ, “ತಾನು ವಿದ್ಯಾರ್ಜನೆಗೈದ ಶಾಲೆಯಲ್ಲಿ ಯಕ್ಷಗಾನ ಕಲಿಸಲು…

Read More

ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 29-07-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಕುಮಾರಿ ಖುಷಿ ಕನ್ನರ್ಪಾಡಿ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ರಂಜನಾ ಎಸ್. ನಾಯಕ್ ಹಾಗೂ ಶ್ರೀಧರ್ ಜಿ. ನಾಯಕ್ ದಂಪತಿಗಳ ಸುಪುತ್ರಿಯಾದ ಕು. ಖುಶಿ ಎಸ್. ನಾಯಕ್ ಇವರು ಬಾಲ್ಯದಿಂದಲೇ ನೃತ್ಯದಲ್ಲಿ ಬಹಳ ಆಸಕ್ತಿಯುಳ್ಳ ಈಕೆ ಸುಮಾರು 17 ವರ್ಷಗಳಿಂದ ಸುಧೀರ್ ರಾವ್ ಹಾಗೂ ಮಾನಸಿ ಸುಧೀರ್ ಇವರಲ್ಲಿ ನೃತ್ಯಾಭ್ಯಾಸವನ್ನು ನಡೆಸುತಿದ್ದು, ಜೂನಿಯರ್ ಹಾಗೂ ಸೀನಿಯರ್ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಗಳೊಂದಿಗೆ ತೇರ್ಗಡೆಯಾಗಿದ್ದಾಳೆ. ನೃತ್ಯನಿಕೇತನ ಕೊಡವೂರಿನ ತಂಡದ ಭಾಗವಾಗಿ ಸುಮಾರು 200ಕ್ಕೂ ಹೆಚ್ಚು ನೃತ್ಯ ಕಾರ್ಯಕ್ರಮಗಳನ್ನು ನೀಡಿರುತ್ತಾಳೆ. ತನ್ನ ಶಾಲಾ ಕಾಲೇಜಿನ ದಿನಗಳಲ್ಲಿ ಹಲವಾರು ಅಂತರ್ ಶಾಲಾ ಹಾಗೂ ಅಂತರ್…

Read More

ಉಡುಪಿ : ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ (ರಿ.)  ಪ್ರಾಯೋಜಿತ 2024ನೇ ಸಾಲಿನ ಗುರು ಮಟಪಾಡಿ ವೀರಭದ್ರ ನಾಯಕ್ ಪ್ರಶಸ್ತಿಗೆ ಖ್ಯಾತ ಯಕ್ಷಗಾನ ಬಣ್ಣದ ವೇಷಧಾರಿ ಶ್ರೀ ಎಳ್ಳಂಪಳ್ಳಿ ಜಗನ್ನಾಥ ಆಚಾರ್ಯ ಅವರು ಆಯ್ಕೆಯಾಗಿರುತ್ತಾರೆ ಯಕ್ಷಗಾನ ಕೇಂದ್ರ ಇಂದ್ರಾಳಿ ಇದರ ಸಹಯೋಗದಲ್ಲಿ ಕೊಡಮಾಡುವ ಈ ಪ್ರಶಸ್ತಿಯು ರೂಪಾಯಿ 10,000 ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಪ್ರಶಸ್ತಿಯನ್ನು 09 ನವಂಬರ್ 2024ರಂದು ಎಂ. ಜಿ. ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ  ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ ಇವರ ಸಹಯೋಗದಲ್ಲಿ ನೀಡಿ ಗೌರವಿಸಲಾಗುವುದು ಎಂದು ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ. ಬಡಗುತಿಟ್ಟು ಯಕ್ಷಗಾನ ಪ್ರಪಂಚದಲ್ಲಿ ಬಣ್ಣದ ವೇಷಧಾರಿಯಾಗಿ ವಿಖ್ಯಾತರಾಗಿರುವ ಶ್ರೀ ಎಳ್ಳಂಪಳ್ಳಿ ಜಗನ್ನಾಥ ಆಚಾರ್ಯ ಇವರು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ನೀಲಾವರ ಸಮೀಪದ ಎಲ್ಲಂಪಳ್ಳಿ ಎಂಬಲ್ಲಿ 1956ರಲ್ಲಿ ಜನಿಸಿದರು.  ಉಡುಪಿ ಬಸವ, ವಂಡ್ಸೆ ನಾರಾಯಣ ಗಾಣಿಗ, ಪೇತ್ರಿ ಮಾಧವ ನಾಯ್ಕ್ ಇವರಿಂದ ಪ್ರಾಥಮಿಕ ನೃತ್ಯಾಭ್ಯಾಸ…

Read More

ಧಾರವಾಡ : ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆ ಧಾರವಾಡ ಇದರ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡ ಜಿಲ್ಲಾ ಘಟಕ ಇದರ ಸಹಯೋಗದೊಂದಿಗೆ 2023ನೇ ಸಾಲಿನ ‘ರಾಘವೇಂದ್ರ ಪಾಟೀಲ ಕಥಾಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 28 ಜುಲೈ 2024ರಂದು ಅಪರಾಹ್ನ 4-30 ಗಂಟೆಗೆ ಧಾರವಾಡದ ಆರ್.ಎನ್. ಶೆಟ್ಟಿ ಕ್ರೀಡಾಂಗಣದ ಪಕ್ಕ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ‘ರಾಘವೇಂದ್ರ ಪಾಟೀಲ ಕಥಾಪ್ರಶಸ್ತಿ’ಯನ್ನು ಧಾರವಾಡದ ಪ್ರಸಿದ್ಧ ಸಾಹಿತಿಗಳಾದ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಇವರು ಲೇಖಕಿ ಶ್ರೀಮತಿ ಕಾವ್ಯಾ ಕಡಮೆ ಇವರಿಗೆ ಪ್ರದಾನ ಮಾಡಲಿರುವರು. ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಪ್ರೊ. ಮಲ್ಲಿಕಾರ್ಜುನ ಹಿರೇಮಠ ಇವರು ಅಧ್ಯಕ್ಷತೆ ವಹಿಸಲಿದ್ದಾರೆ.

Read More