Author: roovari

ಬಂಟ್ವಾಳ : ಬಂಟ್ವಾಳ ಮಂಚಿಯ ಬಿ. ವಿ. ಕಾರಂತ ರಂಗಭೂಮಿಕಾ ಟ್ರಸ್ಟ್ ವತಿಯಿಂದ ಆಯೋಜಿಸಿದ ಮೂರು ದಿನಗಳ ‘ಮಂಚಿ ನಾಟಕೋತ್ಸವ’ದ ಉದ್ಘಾಟನಾ ಸಮಾರಂಭವು ದಿನಾಂಕ 17-05-2024 ರಂದು ಕುಕ್ಕಾಜೆ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಚಾಲನೆನೀಡಿ ಮಾತನಾಡಿದ ಉಡುಪಿ ಜಾದೂಗಾರ ಪ್ರೊ. ಶಂಕರ್ “ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಬಿ. ವಿ. ಕಾರಂತರು ಕನ್ನಡ ನಾಡಿನ ಶ್ರೇಷ್ಠ ಕಲಾವಿದರಾಗಿ ಗೌರವ ತಂದು ಕೊಟ್ಟಿರುವುದನ್ನು ಇಲ್ಲಿನ ಜನತೆ ‘ಮಂಚಿ ನಾಟಕೋತ್ಸವ’ದ ಮೂಲಕ ಪ್ರತಿ ವರ್ಷ ನೆನಪಿಸುತ್ತಿರುವುದು ಶ್ಲಾಘನೀಯ. ಜಾದೂ ಹಾಗೂ ನಾಟಕ ಒಂದಕ್ಕೊಂದು ಪೂರಕವಾದ ಕಲೆ. ಮಂಚಿಯಲ್ಲಿ ಬಿ. ವಿ. ಕಾರಂತ ರಂಗ ಮಂದಿರ ನಿರ್ಮಾಣವಾಗಲಿ.” ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಂಗಾಯಣದ ಮಾಜಿ ನಿರ್ದೇಶಕ ಸಂದೇಶ ಜವಳಿ ಶಿವಮೊಗ್ಗ ಮಾತನಾಡಿ “ಬಿ. ವಿ. ಕಾರಂತರ ನಾಟಕಗಳಲ್ಲಿ ವೈಶಿಷ್ಟ್ಯ ಭಿನ್ನವಾಗಿ ಗುರುತಿಸಿಕೊಂಡಿದೆ.” ಎಂದರು. ಕ್ಯಾಂಪ್ಕೊ ನಿರ್ದೇಶಕ ಜಯಪ್ರಕಾಶ್ ನಾರಾಯಣ್ ಮಾತನಾಡಿದರು. ಟ್ರಸ್ಟಿನ ಅಧ್ಯಕ್ಷ ಕಜೆ ರಾಮಚಂದ್ರ ಭಟ್…

Read More

ಉಡುಪಿಯ ಪೆರ್ಡೂರಿನ ಕಾರ್ ಸ್ಟ್ರೀಟ್ ನಲ್ಲಿ ಹೊರಾಂಗಣ ಚಿತ್ರ ಕಾರ್ಯಾಗಾರ | ಮೇ 19 ಉಡುಪಿ : ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಮತ್ತು ಆರ್ಟಿಸ್ಟ್ಸ್ ಫೋರಂ ಉಡುಪಿ ಇವುಗಳ ಸಹಯೋಗದಲ್ಲಿ ಹೊರಾಂಗಣ ಚಿತ್ರ ಕಾರ್ಯಾಗಾರವನ್ನು ದಿನಾಂಕ 19-05-2024ರಂದು ಬೆಳಿಗ್ಗೆ 6.30ಕ್ಕೆ ಉಡುಪಿಯ ಪೆರ್ಡೂರಿನ ಕಾರ್ ಸ್ಟ್ರೀಟ್ ನಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಹೊರಾಂಗಣದಲ್ಲಿ ಚಿತ್ರ ಬಿಡಿಸಲು ಹಾಗೂ ಹಿರಿಯ ಕಲಾವಿದರ ಪ್ರಾತ್ಯಕ್ಷಿಕೆ ವೀಕ್ಷಿಸಲು ಅವಕಾಶವಿದೆ. ಎಲ್ಲಾ ಕಲಾವಿದರು ಮತ್ತು ಛಾಯಾಗ್ರಾಹಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜನಾರ್ದನ ಹಾವಂಜೆ 9845650544 ಮತ್ತು ಗಣೇಶ್ ಕೆ. 7760218447 ಸಂಪರ್ಕಿಸಬಹುದು.

Read More

ಮಂಗಳೂರು:  ಮಂಗಳೂರಿನ ಚಿಣ್ಣರ ಚಾವಡಿ ಮತ್ತು ಸಂತ ಮದ‌ರ್ ತೆರೇಸ ವಿಚಾರ ವೇದಿಕೆ ಆಶ್ರಯದಲ್ಲಿ ಜೆಪ್ಪು ಸಂತ ಜೆರೋಸಾ ಶಾಲೆಯಲ್ಲಿ ‘ಚಿಣ್ಣರ ಕಲರವ-2024’ ಮಕ್ಕಳ ಕಲಿಕಾ ಕಾರ್ಯಾಗಾರವು ದಿನಾಂಕ 13-05-2024 ರಂದು ಉದ್ಘಾಟನೆಗೊಂಡಿತು. ಶಿಬಿರವನ್ನು ಉದ್ಘಾಟಿಸಿದ ಜನಪದ ವಿದ್ವಾಂಸ ಹಾಗೂ ನಿವೃತ್ತ ಶಿಕ್ಷಕ ಕೆ.ಕೆ ಪೇಜಾವರ ಮಾತನಾಡಿ “ಸಮಾಜವು ಮನುಷ್ಯ ಪ್ರೀತಿಯನ್ನು ಮರೆತಿದೆ, ಮಾನವೀಯ ಮೌಲ್ಯಗಳ ಕೊರತೆಯು ಆಧುನಿಕ ಸಮಾಜದಲ್ಲಿ ಎದ್ದು ಕಾಣುತ್ತಿದೆ. ಸಮಾಜವು ಅಸ್ವಸ್ಥಗೊಂಡಾಗ ಮಕ್ಕಳು ಕೂಡ ಬದಲಾಗುತ್ತಾರೆ. ಹಾಗಾಗಿ ಮಾನವೀಯ ಗುಣಗಳನ್ನು ಮರು ಸ್ಥಾಪಿಸುವ ಕೆಲಸ ಶಿಕ್ಷಣದಿಂದ ಆಗಬೇಕು. ಮಾನವೀಯ ಮೌಲ್ಯಗಳನ್ನು ಬೆಳೆಸುವುದೇ ನಿಜವಾದ ಶಿಕ್ಷಣ.” ಎಂದು ಹೇಳಿದರು. ಸೇಂಟ್ ಜೆರೋಸಾ ಶಾಲೆಯ ಮುಖ್ಯಶಿಕ್ಷಕಿ ಸಿಸ್ಟರ್ ಅರ್ಪಿತಾ ಮಾತನಾಡಿ “ಮಕ್ಕಳು ತಮ್ಮ ಆಸಕ್ತಿಯ ಕ್ಷೇತ್ರದ ಬಗ್ಗೆ ಗಮನ ಹರಿಸಿ ನಿರಂತರ ಶ್ರಮ ಪಟ್ಟು ಅಧ್ಯಯನ ಮಾಡಿ ಗುರಿಯತ್ತ ಮುನ್ನಡೆಯಬೇಕು. ನಿರಂತರ ಅಭ್ಯಾಸ ಮಾತ್ರ ಮಕ್ಕಳನ್ನು ಬೆಳೆಸಬಲ್ಲದು.” ಎಂದರು. ಚಿಂತಕ ಮಾಕ್ಸಿಂ ಡಿಸೋಜ ಬೋಂದೆಲ್ ಹಾಗೂ ಸಮುದಾಯ ಕರ್ನಾಟಕದ ರಾಜ್ಯ…

Read More

ಮೈಸೂರು : ಮೈಸೂರಿನ ಶ್ರೀಗುರು ಕಲಾ ಶಾಲೆ ಅರ್ಪಿಸುವ ‘ರಂಗ ತರಬೇತಿ ಶಿಬಿರ’ವು ದಿನಾಂಕ 01-06-2024ರಿಂದ ಪ್ರತಿ ಶನಿವಾರ ಮತ್ತು ಭಾನುವಾರದಂದು ನಡೆಯಲಿದೆ. 4ರಿಂದ 14 ವರ್ಷ ವಯಸ್ಸಿನ ಆಸಕ್ತರು ದಿನಾಂಕ 30-05-2024ರೊಳಗೆ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ 9980794690 ಮತ್ತು 9916617084. ಶ್ರೀಗುರು ಕಲಾ ಶಾಲೆಯು ಮೈಸೂರಿನ ಶ್ರೀರಾಂಪುರದಲ್ಲಿ (ಪ್ರೀತಿ ಲೇಔಟ್)ನಲ್ಲಿ 2016ರಂದು ಸ್ಥಾಪನೆಯಾಯಿತು. ಇಲ್ಲಿ ಮಕ್ಕಳು, ಮಹಿಳೆಯರು ಒಳಗೊಂಡಂತೆ ಎಲ್ಲ ವಯೋಮಾನದ ಆಸಕ್ತರಿಗೂ ಸಂಗೀತವನ್ನು ಹೇಳಿಕೊಡಲಾಗುತ್ತಿದೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮೈಸೂರಿನ ಆಕಾಶವಾಣಿಯಲ್ಲಿ ‘ಮಕ್ಕಳ ಮಂಟಪ’ ಮತ್ತು ‘ಕೇಳಿ ಗಿಳಿಗಳಿರ’ ಎಂಬ ಕಾರ್ಯಕ್ರಮಗಳನ್ನು ಹಲವಾರು ಬಾರಿ ನೀಡಿದ್ದಾರೆ. ಪ್ರತಿ ವಾರದ ಎರಡು ದಿನಗಳಂದು ರಂಗ ತರಬೇತಿ ಶಿಬಿರವನ್ನು ನಡೆಸುತ್ತಿದ್ದಾರೆ. ಮೂರು ತಿಂಗಳ ಅವಧಿಗೆ ಹತ್ತು ವಿದ್ಯಾರ್ಥಿಗಳನ್ನು ಮಾತ್ರ ಆಯ್ದುಕೊಂಡು ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ಅವರಿಗೆ ರಂಗಭೂಮಿಯ ಎಲ್ಲಾ ಆಯಾಮಗಳನ್ನು ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ. ಶಿಬಿರದ ಕೊನೆಯಲ್ಲಿ ಮಕ್ಕಳು ಒಂದು ನಾಟಕದಲ್ಲಿ ಅಭಿನಯಿಸಿ…

Read More

ಕುರುಡಪದವು : ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಪ್ರತಿಷ್ಠಾನದ ವತಿಯಿಂದ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 10-05-2024ರಂದು ಕುರುಡಪದವಿನಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ ನಿವೃತ್ತ ಯೋಧ ಮಧುಕರ ಭಾಗವತರು ತಾವು ವಿಠಲ ಶಾಸ್ತ್ರಿಗಳಿಂದ ಪ್ರಭಾವಿತರಾದ ನೆನೆಪುಗಳನ್ನು ಸ್ಮರಿಸಿಕೊಂಡು ಮಾತನಾಡುತ್ತಾ “ಕುರಿಯ ಎನ್ನುವ ಹೆಸರು ಯಕ್ಷಗಾನ ಇರುವಷ್ಟು ಕಾಲ ಉಳಿಯಬಲ್ಲ ಮನೆತನ. ಯಾಕೆಂದರೆ ಕಲಾ ಕ್ಷೇತ್ರದಲ್ಲಿ ಅದರ ಬೇರು ಅಷ್ಟು ಗಟ್ಟಿಯಾಗಿದೆ. ವಿಠಲ ಶಾಸ್ತ್ರಿಗಳ ಒಡನಾಡಿಗಳಾದ ನೆಡ್ಲೆ ನರಸಿಂಹ ಭಟ್ಟ ಹಾಗೂ ಕರುವೋಳು ದೇರಣ್ಣ ಶೆಟ್ಟಿರ ಹೆಸರಿನಲ್ಲಿ ಕೊಡ ಮಾಡುವ ಪ್ರಶಸ್ತಿಗಳು ಶ್ರೇಷ್ಟ ವಾದವುಗಳು. ಗಣಪತಿ ಶಾಸ್ತ್ರಿಗಳು ಕೂಡ ಕುರಿಯದ ಖ್ಯಾತಿಯನ್ನು ವಿಸ್ತರಿಸಿದ್ದಾರೆ” ಎಂದು ಹೇಳಿದರು. ಸಂಸ್ಮರಣಾ ಭಾಷಣ ಮಾಡಿದ ಡಾ. ಮುರಳೀಧರ ಶೆಟ್ಟಿ ಮೂರು ಹಿರಿಯ ಚೇತನಗಳ ಸಾಧನೆ ಹಾಗೂ ವ್ಯಕ್ತಿತ್ವವನ್ನು ಮನೋಜ್ಞವಾಗಿ ಮಂಡಿಸಿದರು. ವಿಠಲ ಶಾಸ್ತ್ರಿ ಪ್ರಶಸ್ತಿಯನ್ನು ಶ್ರೀ ಪುಂಡರೀಕಾಕ್ಷ ಉಪಾಧ್ಯಾಯರಿಗೆ, ನೆಡ್ಲೆ ನರಸಿಂಹ ಭಟ್ಟ ಪ್ರಶಸ್ತಿಯನ್ನು ಮಿಜಾರು ಶ್ರೀ ಮೋಹನ ಶೆಟ್ಟಿಗಾರರಿಗೆ ಹಾಗೂ ದೇರಣ್ಣ…

Read More

ಕನ್ನಡದ ಮಹತ್ವದ ಲೇಖಕರಾದ ಸೂರ್ಯನಾರಾಯಣ ಚಡಗರು ತಮ್ಮ ಕಾದಂಬರಿ, ಕಥಾ ಸಂಕಲನಗಳ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರು. ಕರಾವಳಿ ಭಾಗದ ಕೋಟೇಶ್ವರದವರಾದ ಚಡಗರ ಕಾದಂಬರಿಗಳು ದಕ್ಷಿಣ ಕನ್ನಡ, ಉಡುಪಿ, ಕೋಟೇಶ್ವರ, ಮಂಗಳೂರು ಮೊದಲಾದ ಕರಾವಳಿ ಪ್ರದೇಶದ ಭಾಷಾ ಸೊಗಡಿನಿಂದ ಕೂಡಿದ್ದು, ಅಲ್ಲಿನ ಸಾಮಾಜಿಕ ಕೌಟುಂಬಿಕ ಚಿತ್ರಣ, ಜನರ ಕುಲ ಕಸುಬು, ಆಚಾರ – ವಿಚಾರಗಳ ವಿವರಗಳನ್ನು ನೀಡುತ್ತವೆ. ನಿತ್ಯ ಮುತ್ತೈದೆಯಾದ ಸೀಮಂತಿನಿಯು ಕಾದಂಬರಿಯ ಉದ್ದಕ್ಕೂ ಕಾಣಸಿಗುವ ಸಹಜ ಪಾತ್ರ. ತನ್ನ ತಾಯಿ ಚಂದ್ರಮ್ಮನ ಕಾಲದಿಂದಲೂ ಚಾಲ್ತಿಯಲ್ಲಿದ್ದ ಸೂಳೆಗಾರಿಕೆಯನ್ನು ವೃತ್ತಿಯಾಗಿ ಮುಂದುವರೆಸುತ್ತಿರುವ ಆಕೆಯು ತನ್ನ ತಾಯಿಯಂತೆ ಧನಮೋಹಿಯಲ್ಲ. ಆಸ್ತಿ, ಅಂತಸ್ತು ಹಾಗೂ ಕಾಂಚನದ ಲಾಲಸೆಗೆ ಅತಿಯಾಗಿ ಜೋತು ಬೀಳದೇ ವ್ಯಕ್ತಿಗಳ ಅಂತರಂಗಕ್ಕೆ ಮಹತ್ವ ಕೊಟ್ಟು ಸಾಗುವ ಸೀಮಂತಿನಿಯ ನಡೆ ಅವಳ ಹೆಜ್ಜೆಗಳಿಗೆ ಮುಳುವಾಗುವ ಬಗೆಯು ಕಾದಂಬರಿಯ ಪ್ರಧಾನ ಅಂಶವಾಗಿದ್ದು, ಆಕೆಯ ಬದುಕಿನ ವಾಸ್ತವ ಮತ್ತು ಭವಿಷ್ಯತ್ತಿನ ಬದುಕು ಈ ಅಂಶವನ್ನು ಬುನಾದಿಯಲ್ಲಿರಿಸಿಕೊಂಡೇ ಸಾಗುತ್ತದೆ. ಪ್ರತಿಷ್ಠೆ ಅಥವಾ ತೆವಲಿಗೆ ಸಿಕ್ಕುಬಿದ್ದು ಸುಖವನ್ನಷ್ಟೇ ಬಯಸಿ…

Read More

ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಮತ್ತು ಉಡುಪಿ ತಾಲೂಕು ಘಟಕ ಇದರ ಆಶ್ರಯದಲ್ಲಿ ‘ಮನೆಯೇ ಗ್ರಂಥಾಲಯ’ ವಿನೂತನ ಕಾರ್ಯಕ್ರಮವು ದಿನಾಂಕ 21-05-2024ರಂದು ಸಂಜೆ 5.30ಕ್ಕೆ ರಂಗ ಕಲಾವಿದರಾದ ಶ್ರೀಮತಿ ಶಶಿಪ್ರಭಾ ಮತ್ತು ವಿವೇಕಾನಂದ ಎನ್. ಇವರ ಮನೆಯಲ್ಲಿ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಇದರ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಇದರ ಸ್ಥಾಪಕರಾದ ಉಡುಪಿ ವಿಶ್ವನಾಥ್ ಶೆಣೈ, ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ, ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್ ಮತ್ತು ಸಹ ಸಂಘಟನಾ ಕಾರ್ಯದರ್ಶಿ ಮೋಹನ್ ಉಡುಪ ಹಂದಾಡಿ ಇವರ ಉಪಸ್ಥಿತಿಯಲ್ಲಿ ಹಿರಿಯ ವಿದ್ವಾಂಸರಾದ ನಾಡೋಜ ಡಾ. ಕೆ.ಪಿ. ರಾವ್ ಇವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

Read More

ಮಂಗಳೂರು : ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ.) ಮತ್ತು ಬೆಂಗಳೂರಿನ ಸುಶಾಂತ ಪ್ರಕಾಶನ ಇದರ ಸಂಯುಕ್ತ ಆಶ್ರಯದಲ್ಲಿ ಕೃತಿ ಲೋಕಾರ್ಪಣೆ ಸಮಾರಂಭವು ದಿನಾಂಕ 25-05-2024ರಂದು ಮಂಗಳೂರಿನ ಜ್ಯೋತಿ ಸರ್ಕಲ್ ಇಲ್ಲಿರುವ ಮಹಿಳಾ ಸಭಾದಲ್ಲಿ ನಡೆಯಲಿದೆ. ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷರಾದ ಡಾ. ಜ್ಯೋತಿ ಚೇಳಾಯ್ರು ಇವರ ಅಧ್ಯಕ್ಷತೆಯಲ್ಲಿ ಮಹಿಳಾ ಸಭಾದ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮೀ ಬಿ. ಶೆಟ್ಟಿ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನಳಿನಾಕ್ಷಿ ಉದಯರಾಜ್ ಇವರ ‘ಬದುಕಿನ ಸತ್ಯಗಳು’ – ಸಮಕಾಲೀನ ಚಿಂತನೆಗಳ ಸಂಕಲನವನ್ನು ಖ್ಯಾತ ಬರಹಗಾರರು ಸಂಶೋಧಕಿ ಶ್ರೀಮತಿ ಬಿ.ಎಂ. ರೋಹಿಣಿ ಮತ್ತು ‘ಸ್ವಾತಿ ಮುತ್ತು’ – ಚುಟುಕು ಸಂಕಲನವನ್ನು ಶ್ರೀ ಸದಾನಂದ ನಾರಾವಿ ಇವರು ಲೋಕಾರ್ಪಣೆಗೊಳಿಸಲಿದ್ದಾರೆ.

Read More

ಮೂಲ್ಕಿ: ಕೆ. ಪಿ. ಎಸ್‌. ಕೆ. ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 09-05-2024ರಂದು ಶಾಲಾ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ. ಪಿ. ಎಸ್‌. ಕೆ. ಪ್ರೌಢ ಶಾಲೆಯ ಸಂಚಾಲಕ ಗಂಗಾಧರ್ ಶೆಟ್ಟಿ ಬರ್ಕೆ “ವಿದ್ಯಾರ್ಥಿಗಳು ಬಾಲ್ಯದಿಂದಲೇ ಸಂಸ್ಕಾರಯುತ ಬದುಕಿನ ಮೌಲ್ಯಗಳನ್ನು ಅರಿತು ಅವರ ನಿತ್ಯ ಬದುಕಿನಲ್ಲಿ ಶಿಕ್ಷಣದ ಜೊತೆಗೆ ಗುರು ಹಿರಿಯರಲ್ಲಿ ಭಕ್ತಿಯಿಂದ ವ್ಯವಹರಿಸಿ ದೇಶಕ್ಕೆ ಸತ್ಪ್ರಜೆಗಳಾಗುವಲ್ಲಿ ಬೇಸಿಗೆ ಶಿಬಿರಗಳ ಕಾರ್ಯಕ್ರಮಗಳು ಮಹತ್ವ ಪಡೆದಿದೆ.” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಭಾರತ್ ಸೌಟ್ ಆ್ಯಂಡ್ ಗೈಡ್ಸ್‌ ಮೂಲ್ಕಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಎಂ. ಸರ್ವೋತ್ತಮ ಅಂಚನ್ ಅತಿಥಿಗಳಾಗಿ ಭಾಗವಹಿಸಿದರು. ಹೆತ್ತವರ ಪರವಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಉಪನ್ಯಾಸಕಿ ಶೈಲಜಾ ಮಾತನಾಡಿ “ಮಕ್ಕಳ ಬೆಳವಣಿಗೆಯಲ್ಲಿ ಬೇಸಿಗೆ ಶಿಬಿರ ಅವರಿಗೆ ಹಿತ ಕೊಡುವ ಜೊತೆಗೆ ಮಕ್ಕಳ ತುಂಟತನದಿಂದ ಹೆತ್ತವರ ಕಷ್ಟ ಹಾಗು ಸಮಸ್ಯೆಗಳಿಗೆ ಉತ್ತಮ ಫಲಿತಾಂಶ ಕೊಟ್ಟಿದೆ.” ಎಂದರು. ವಿದ್ಯಾಪ್ರಚಾರಿಣಿ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ ಮಾತನಾಡಿ…

Read More

ಕುಂದಾಪುರ : ಯಶಸ್ವೀ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆಯ ಸಂಯೋಜನೆಯಲ್ಲಿ ‘ಸಿನ್ಸ್ 1999 ಶ್ವೇತಯಾನ’ದ 28ನೇಯ ಕಾರ್ಯಕ್ರಮ ದಿನಾಂಕ 16-05-2024ರಂದು ಕುಂದಾಪುರದ ಹಂಗಳೂರಿನ ಶ್ರೀ ರಾಮಚಂದ್ರ ವರ್ಣರ ಮನೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀ ಪಾದರು “ಯಾತ್ರ ಸ್ಥಳಗಳು ಒಂದೊಕ್ಕೊಂದು ವಿಭಿನ್ನವಾಗಿದೆ. ತೀರ್ಥಕ್ಷೇತ್ರದ ಯಾತ್ರೆಯಿಂದ ಪುರಾಣ ಕಥೆಗಳ ಮೌಲ್ಯವನ್ನು ಅರಿಯುವುದಕ್ಕೆ ಸಾಧ್ಯವಾಗುತ್ತದೆ. ಪ್ರಸ್ತುತ ಕಾಲಘಟ್ಟಕ್ಕೆ ಪೂರಕವಾಗಿ ಪುರಾಣ ಕಥೆಗಳು ಹೆಣೆದಿರುತ್ತವೆ. ಈಗಿನ ವಿದ್ಯಾಮಾನಗಳಿಗೂ ಪುರಾಣಗಳಿಗೂ ಹೆಚ್ಚು ಸಂಬಂಧವಿರುವ ಹಲವು ಕಥೆಗಳು ತೀರ್ಥಕ್ಷೇತ್ರದ ಕಥೆಗಳಿಂದ ಲಭ್ಯವಾಗುತ್ತವೆ. ಯಾತ್ರಾ ದಿನದ ಅನುಭವದ ಸವಿಸ್ತಾರವಿರುವ ಧಾರ್ಮಿಕ ಪ್ರವಚನ ಕಾರ್ಯಕ್ರಮಕ್ಕೂ ಪುರಾಣ ಕಥನದ ಭಕ್ತಿ ಭಾವಗಳನ್ನೊಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮವೂ ಹೆಚ್ಚು ಸಾಮ್ಯತೆ ಇದೆ.” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಮಾರಂಭದಲ್ಲಿ ಉದ್ಯಮಿ ರಾಮಚಂದ್ರ ವರ್ಣ, ಗುರುಗಳಾದ ಲಂಬೋದರ ಹೆಗಡೆ, ರಾಘವೇಂದ್ರ ಹೆಗಡೆ ಯಲ್ಲಾಪುರ, ಸುದೀಪ ಉರಾಳ, ದರ್ಶನ್ ಗೌಡ, ಪಂಚಮಿ ವೈದ್ಯ, ಕಿಶನ್ ಕುಂದಾಪುರ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು.…

Read More