Author: roovari

ಹೊಸಬೆಟ್ಟು : ಶ್ರೀಕೃಷ್ಣ ಮುಖ್ಯಪ್ರಾಣ ಹವ್ಯಾಸಿ ಯಕ್ಷಗಾನ ಬಳಗದ ದ್ವಿತೀಯ ವರ್ಷದ ವಾರ್ಷಿಕೋತ್ಸವವು ದಿನಾಂಕ 12-05-2024ರ ಆದಿತ್ಯವಾರದಂದು ಸಂಜೆ ಹೊಸಬೆಟ್ಟು ಶ್ರೀ ರಾಘವೇಂದ್ರ ಮಠದಲ್ಲಿ ಜರಗಿತು. ಕಾರ್ಯಕ್ರಮದ ಉದ್ಘಾಟಿಸಿದ ಯಕ್ಷಗಾನಾಭಿಮಾನಿ ಹಾಗೂ ಪ್ರೋತ್ಸಾಹಕರದ ಶ್ರೀ ಎಚ್. ಗುರುರಾಜ ಆಚಾರ್ಯ ಮಾತನಾಡಿ “ಈ ಬಳಗದವರಿಗೆ ಪ್ರತೀ ತಿಂಗಳು ಯಕ್ಷಗಾನ ಮಾಡುವ ಅವಕಾಶ ಸಿಗಲಿ.” ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಿಕ್ಷಕರು, ಸಾಹಿತಿಗಳು ಹಾಗೂ ಕನ್ನಡ ಜಾನಪದ ಪರಿಷತ್ ವಿಜಯಪುರ ಇದರ ಜಿಲ್ಲಾಧ್ಯ ಕ್ಷರಾಗಿರುವ ಶ್ರೀ ಬಾಳನಗೌಡ ಎಸ್. ಪಾಟೀಲ “ಯಕ್ಷಗಾನವು ಕೇವಲ ಕರಾವಳಿಯ ಕಲೆ ಮಾತ್ರವಲ್ಲದೆ ಇಡೀ ಕರ್ನಾಟಕದ ಕಲೆಯಾಗಿದ್ದು ತನ್ನ ಶಿಸ್ತುಬದ್ಧ ಪ್ರದರ್ಶನದಿಂದ ಕಡಲು ದಾಟಿ ಹೊರದೇಶಗಳಲ್ಲೂ ಜನಪದ ರಂಗಭೂಮಿಯನ್ನು ಶ್ರೀಮಂತಗೊಳಿಸಿದ ಶ್ರೇಷ್ಠ ಕಲೆಯಾಗಿದೆ. ಇದು ಕೇವಲ ತುಳುನಾಡಿನ ಕಲೆಯಾಗದೆ ಕನ್ನಡ ನಾಡಿನ ಪ್ರತಿಷ್ಟಿತ ಜನಪದ ಕಲೆಯಾಗಿದ್ದು ಯುವಕರು ಸಂಸ್ಕೃತಿಯತ್ತ ಆಕರ್ಷಿತರಾಗುತ್ತಿರುವುದು ನಮ್ಮ ನಾಡಿನ ಹೆಮ್ಮೆಯಾಗಿದೆ.” ಎಂದು ಸಂತೋಷ ವ್ಯಕ್ತ ಪಡಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.…

Read More

ಕಾಸರಗೋಡು : ಕೊಲ್ಲಂಗಾನ ಶ್ರೀ ನಿಲಯ ನಿವಾಸಿ, ನಿವೃತ್ತ ಉಪತಹಸೀಲ್ದಾರ್, ಕಲಾವಿದ ಉದಯ ಶಂಕರ್ ಎನ್.ಎ. ಸೋಮವಾರ ದಿನಾಂಕ 13-05-2024 ರಂದು ನಿಧನರಾದರು. ಅವರಿಗೆ 76ವರ್ಷ ವಯಸ್ಸಾಗಿತ್ತು. ಜಿಲ್ಲೆಯ ತುಳು, ಕನ್ನಡ ಹಾಗೂ ಮಲಯಾಳ ರಂಗಭೂಮಿ ಸಾಹಿತ್ಯ ರಚನೆಯ ಮೂಲಕ ಗುರುತಿಸಿಕೊಂಡಿದ್ದ ಇವರು ನಾಟಕ ರಚನೆ, ನಿರ್ದೇಶನ, ಪ್ರಸಾದನ, ರಂಗ ಸಜ್ಜಿಕೆಯಲ್ಲಿ ಖ್ಯಾತರಾಗಿದ್ದರು. ಕಂದಾಯ ಇಲಾಖೆಯಲ್ಲಿ ಉಪತಹಸೀಲ್ದಾರ್ ಆಗಿ ನಿವೃತ್ತರಾಗಿದ್ದ ಶ್ರೀಯುತರು ಕಾಸರಗೋಡು ಜಿಲ್ಲಾ ತುಳುಕೂಟದ ಕಾರ್ಯದರ್ಶಿಯಾಗಿ, ನವರಂಗ ಆರ್ಟ್ಸ್‌ನ ಸ್ಥಾಪಕ ಅಧ್ಯಕ್ಷರಾಗಿ ಹಾಗೂ ಕೊಲ್ಲಂಗಾನ ಶ್ರೀ ಶಾರದಾ ಭಜನಾ ಮಂದಿರದ ಸ್ಥಾಪಕ ಅಧ್ಯಕ್ಷರಾಗಿದ್ದರು. ಕೇರಳ ರಾಜ್ಯೋದಯ ಪ್ರಶಸ್ತಿ, ಧರ್ಮಸ್ಥಳ ದಿ. ರತ್ನವರ್ಮ ಹೆಗ್ಡೆ ಸ್ಮಾರಕ ನಾಟಕ ಪ್ರಶಸ್ತಿ ಎರಡು ಬಾರಿ ಇದಲ್ಲದೇ ಆನೇಕ ಪ್ರಶಸ್ತಿ, ಸನ್ಮಾನಗಳು ಇವರ ಸಾಧನೆಗೆ ಸಂದ ಗೌರವಗಳು ಮೃತರು ಪತ್ನಿ ಶಶಿಪ್ರಭ, ಪುತ್ರಿಯರಾದ ಶ್ರೀರಕ್ಷಾ, ಶ್ರೀದೀಕ್ಷಾ ಹಾಗೂ ಸಹೋದರ, ಸಹೋದರಿಯರನ್ನಗಲಿದ್ದಾರೆ.

Read More

ಮಂಗಳೂರು : ಮಲ್ಲಿಕಟ್ಟೆಯ ಶ್ರೀ ಕೃಷ್ಣ ಸಭಾಭವನದಲ್ಲಿ ‘ಗುಬ್ಬಿದ ಗೂಡು’ ಮಕ್ಕಳ ವಾದ್ಯಗೋಷ್ಠಿ ಗಾಯನ ತಂಡದವರು ಆಯೋಜಿಸಿದ ಪುಟಾಣಿ ಮಕ್ಕಳ ತುಳು ಪದ ಪ್ರಾಸ ಗಾಯನ ಕಾರ್ಯಕ್ರಮವು ದಿನಾಂಕ 12-05-2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ತುಳುವೆರೆ ಕಲದ ಅಧ್ಯಕ್ಷೆ, ತುಳು ಶಿಕ್ಷಕಿ ಶ್ರೀಮತಿ ಗೀತಾ ಲಕ್ಷ್ಮೀಶ್ “ತುಳುವನ್ನು ಕಟ್ಟುವ ಮತ್ತು ಮುಟ್ಟಿಸುವ ಕೆಲಸವನ್ನು ಮಕ್ಕಳ ಹಂತದಿಂದಲೇ ಮಾಡುತ್ತಾ ಬಂದರೆ ಅದೇ ತುಳುವಿಗೆ ನಾವು ಕೊಡುವ ಮಾನ್ಯತೆ. ತುಳುವನ್ನು ಉಳಿಸುವಲ್ಲಿ ಅಮ್ಮಂದಿರ ಪಾತ್ರ ಬಹಳ ಮುಖ್ಯವಾದದ್ದು. ತುಳುವನ್ನು ಮಕ್ಕಳ ಪದ ಪ್ರಾಸಗಳ ಮೂಲಕ ಹೇಳಿಕೊಟ್ಟರೆ ಮಕ್ಕಳಿಗೆ ಭಾಷೆ ಇಷ್ಟವಾಗುತ್ತದೆ” ಎಂದು ಹೇಳಿದರು. ತುಳು ಪದ ಪ್ರಾಸ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ ಮಕ್ಕಳನ್ನು ಹೆತ್ತವರು ಮತ್ತು ಅತಿಥಿಗಳ ಸಮ್ಮುಖದಲ್ಲಿ ಅಭಿನಂದಿಸಲಾಯಿತು. ಕಾರ್ಯಕ್ರಮವನ್ನು ನಮ್ಮ ತುಳುನಾಡು ಟ್ರಸ್ಟ್ (ರಿ.) ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ರೋಹಿತಾಶ್ವ ಇವರು ದೀಪ ಬೆಳಗಿ ಉದ್ಘಾಟಿಸಿ ಮಾತನಾಡುತ್ತಾ “ತುಳುತನವನ್ನು ಮತ್ತು ತುಳು ಸಂಸ್ಕೃತಿಯನ್ನು ನಾವು…

Read More

ಮಂಗಳೂರು : ಶಾಂತಿ ಕಲಾ ಕೇಂದ್ರ ಬಜ್ಪೆ ಮತ್ತು ಸಾಧನಾ ಸಂಗೀತ ಪ್ರತಿಷ್ಠಾನ (ರಿ) ಪುತ್ತೂರು ಇದರ ಆಶ್ರಯದಲ್ಲಿ ಎರಡು ದಿನಗಳ ‘ಕೃತಿಗಳು ಹಾಗೂ ದಾಸರ ಪದಗಳ ಸಂಗೀತ ಶಿಬಿರ’ವು ಕಟೀಲು ದೇವಸ್ಥಾನದ ಶಾಲಾ ವಠಾರದಲ್ಲಿ ದಿನಾಂಕ 11-05-2024 ಮತ್ತು 12-05-2024ರಂದು ನಡೆಯಿತು. ಶಿಬಿರದ ಉದ್ಘಾಟನೆಯನ್ನು ಕಟೀಲಿನ ಅನುವಂಶಿಕ ಮುಕ್ತೇಸರರಾದ ಕಮಲಾದೇವಿ ಪ್ರಸಾದ ಅಸ್ರಣ್ಣರು ನೆರವೇರಿಸಿಕೊಟ್ಟರು. ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ಸಂಗೀತ ಕಲಾವಿದರಾದ ವಿದುಷಿ ಡಾ. ಸುಚಿತ್ರ ಹೊಳ್ಳ ಅವರು ಶಿಬಿರಾರ್ಥಿಗಳಿಗೆ ಅಪರೂಪದ ಪ್ರಸಿದ್ಧ ಕೃತಿಗಳು ಹಾಗೂ ದೇವರ ನಾಮಗಳನ್ನು ಮನಮುಟ್ಟುವಂತೆ ಹೇಳಿಕೊಟ್ಟರು. ಸುಮಾರು 65 ಶಿಬಿರಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಿದ್ದರು. ಶಿಬಿರದ ಎರಡನೆಯ ದಿನ ಕಟೀಲು ದೇವಸ್ಥಾನದ ಪ್ರಾಂಗಣದಲ್ಲಿ ಶಿಬಿರಾರ್ಥಿಗಳಿಂದ ಗೋಷ್ಠಿ ಗಾಯನ ನಡೆಯಿತು. ಪಕ್ಕವಾದ್ಯದಲ್ಲಿ ವಯಲಿನ್ ನಲ್ಲಿ ಧನಶ್ರೀ ಶಬರಾಯ ಹಾಗೂ ಮೃದಂಗದಲ್ಲಿ ಶೈಲೇಶ್ ಸಹಕರಿಸಿದರು. ಶಾಂತಿ ಕಲಾ ಕೇಂದ್ರ ಬಜ್ಪೆ ಇದರ ನಿರ್ದೇಶಕರಾದ ಶ್ರೀಮತಿ ಚಂದ್ರಕಲಾ ಆರ್. ಆಚಾರ್ ಉಪಸ್ಥಿತರಿದ್ದರು.

Read More

ಮಂಗಳೂರು : ಸಂಗೀತ ಭಾರತಿ ಪ್ರತಿಷ್ಠಾನ ಆಯೋಜಿಸಿರುವ ಶಾಸ್ತ್ರೀಯ ಹಿಂದುಸ್ತಾನಿ ಸಂಗೀತ ಜುಗಲ್ ಬಂಧಿ ಕಾರ್ಯಕ್ರಮ ‘ಸ್ವರ ಸಂಧ್ಯಾ’ ದಿನಾಂಕ 19-05-2024ರಂದು ಸಂಜೆ 5.30ಕ್ಕೆ ಸೇಂಟ್ ಅಲೋಶಿಯಸ್ ಕಾಲೇಜು ಆವರಣದ ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ನಡೆಯಲಿದೆ. ಸಂಜೆ 5.30ಕ್ಕೆ ಆರಂಭವಾಗಲಿರುವ ಕಾರ್ಯಕ್ರಮದಲ್ಲಿ ಮೊದಲು, ರಾಷ್ಟ್ರ ಮಟ್ಟದ ಕಲಾವಿದ ದೆಹಲಿಯ ಪಿಟೀಲು ವಾದಕ ಪಂಡಿತ್ ಸಂತೋಷ್ ಕುಮಾರ್ ನಹರ್ ಇವರ ವಯಲಿನ್ ವಾದನ ನಡೆಯಲಿದೆ. ನಂತರ ಶಿವಮೊಗ್ಗದ ನೌಶಾದ್ ಹರ್ಲಾಪುರ್ ಮತ್ತು ನಿಶಾದ್ ಹರ್ಲಾಪುರ್ ಅವರಿಂದ ಗಾಯನ ಜುಗಲ್ ಬಂದಿ ಕಾರ್ಯಕ್ರಮ ನಡೆಯಲಿದೆ. ರಾಜೇಂದ್ರ ನಾಕೋಡ್, ಶ್ರೀಧರ್ ಭಟ್ ಹಾಗೂ ಗುರುರಾಜ್ ಅಡುಕಳ ಅವರು ತಬ್ಲಾ ಸಾಥ್ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಂಗೀತಾಸಕ್ತರೆಲ್ಲರಿಗೂ ಮುಕ್ತ ಪ್ರವೇಶಾವಕಾಶವಿದೆ ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.

Read More

ಮಂಗಳೂರು : ಹರಿಕಥಾ ಪರಿಷತ್‌ (ರಿ.) ಮಂಗಳೂರು ಇದರ 14ನೇ ವಾರ್ಷಿಕೋತ್ಸವವು ದಿನಾಂಕ 18-05-2024ರಂದು ಉರ್ವಸ್ಟೋರ್‌ನ ಶ್ರೀ ಮಹಾಗಣಪತಿ ದೇವಸ್ಥಾನದ ಅಂಗಣದಲ್ಲಿ ಜರಗಲಿದೆ. ಈ ಕಾರ್ಯಕ್ರಮದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಸುರೇಂದ್ರ ರಾವ್ ಇವರು ದೀಪ ಪ್ರಜ್ವಲನೆಗೊಳಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಶ್ರೀ ಹರಿಕೃಷ್ಣ ಪುನರೂರು ಶುಭಾಶಂಸನೆಗೈಯಲಿದ್ದಾರೆ. ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ, ಉದ್ಯಮಿಗಳಾದ ಹರಿದಾಸ್ ಎಸ್‌.ಪಿ. ಆಚಾರ್ಯ, ಕೆ. ದಾಮೋದರ ರೈ, ಯಜ್ಞೇಶ್ವರ ಆಚಾರ್ಯ ಕೃಷ್ಣಾಪುರ, ಶೈಲೇಂದ್ರ ವೈ. ಸುವರ್ಣ ಇವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಹಿರಿಯ ಹರಿದಾಸರು, ಪ್ರವಚನಕಾರ ಶ್ರೀ ಯಜ್ಞೇಶ್ ಹೊಸಬೆಟ್ಟು, ಹಿರಿಯ ಕಲಾಪೋಷಕರಾದ ಶ್ರೀ ರಘುರಾಮ್ ಭಟ್ ಕಣ್ವತೀರ್ಥ, ಹಿರಿಯ ಹಾರ್ಮೋನಿಯಂ, ಕೀಬೋರ್ಡ್ ವಾದಕ ಶ್ರೀ ಸತೀಶ್ ಸುರತ್ಕಲ್ ಇವರಿಗೆ ಗೌರವ ಸಮ್ಮಾನವು ಇದೇ ಸಂದರ್ಭದಲ್ಲಿ ನಡೆಯಲಿದೆ. ಅಪರಾಹ್ನ 2.30ರಿಂದ ಹರಿಕಥಾ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ವಿಜೇತೆ ಕುಮಾರಿ ಶೃದ್ಧಾ ಗುರುದಾಸ್ ಅವರಿಂದ ‘ಏಕಲವ್ಯ’ ಹಾಗೂ ಹರಿದಾಸ ಶರತ್ ಶೆಟ್ಟಿ ಪಡುಪಳ್ಳಿ…

Read More

ಕಾರ್ಕಳ : ಕನ್ನಡ ಸಂಘ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಮತ್ತು ಅಲ್ಲಮಪ್ರಭು ಪೀಠ ಕಾಂತಾವರ ಇವುಗಳ ಸಹಯೋಗದಲ್ಲಿ ತಿಂಗಳ ಉಪನ್ಯಾಸ ‘ಅರಿವು ತಿಳಿವು’ ಕಾರ್ಯಕ್ರಮವು ದಿನಾಂಕ 11-05-2024ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ‘ಕೇನೋಪನಿಷತ್ತು’ ಇದರ ಕುರಿತು ಉಪನ್ಯಾಸ ನೀಡಿದ ಕರ್ನಾಟಕ ರಾಜ್ಯ ಮುಕ್ತ ವಿ.ವಿ. ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಜ್ಯೋತಿ ಶಂಕರ್ “ಬದುಕನ್ನು ಸರಿಯಾದ ಕ್ರಮದಲ್ಲಿ ಬದುಕುವುದಕ್ಕೆ ಗುರುಗಳ ಮುಖಾಂತರ ಯಾವ ಉಪದೇಶಗಳನ್ನು ಕೇಳಬೇಕೋ ಅದನ್ನು ಕೇಳಿ ತಿಳಿದುಕೊಳ್ಳುವ, ಸಂದೇಹಗಳನ್ನು ನಿವಾರಿಸುವ ಕಾರ್ಯವನ್ನು ಕೇನೋಪನಿಷತ್ತು ಮಾಡುತ್ತದೆ. ಪಂಚೇಂದ್ರಿಯಗಳಿಂದ ಕೂಡಿದ ಈ ಶರೀರದ ಕ್ರಿಯೆಗಳೇ ಒಂದು ವಿಸ್ಮಯವಾದರೂ ಇಂದ್ರಿಯಗಳಿಗೆ ಅತೀತವಾಗಿ ನಿಲ್ಲುವುದೇ ಪರಬ್ರಹ್ಮ, ಗುರುವಿನ ಮತ್ತು ಶಾಸ್ತ್ರಗಳ ವಚನಗಳನ್ನು ಒಟ್ಟಿಗೆ ಮನನ ಮಾಡುವುದರಿಂದ ಪುಟ್ಟ ಪುಟ್ಟ ಹೆಜ್ಜೆಯಿಡುತ್ತಾ ಬ್ರಹ್ಮನೆಡೆಗೆ ಸಾಗಲು ಸಾಧ್ಯವಾಗುತ್ತದೆ. ಬ್ರಹ್ಮಜ್ಞಾನವನ್ನು ಪಡೆದುಕೊಳ್ಳುವುದರಿಂದ ಸತ್ಯದ ಅರಿವಾಗುತ್ತದೆ. ಅಂಥವರು ಹೇಡಿಗಳಾಗದೆ ಆತ್ಮವಿಶ್ವಾಸ ವೃದ್ಧಿಯೊಂದಿಗೆ ಸತ್ಯವನ್ನು ಎದುರಿಸುವ ಧೀರರಾಗುತ್ತಾರೆ.…

Read More

ಮಾನವೀಯ ಸಂಬಂಧಗಳು ಶಿಥಿಲವೂ ಅಪರಿಚಿತವೂ ಆಗುತ್ತಿರುವ ಈ ಹೊತ್ತಿನಲ್ಲಿ ಪ್ರೀತಿಯ ದನಿಗಳು ಅನಿವಾರ್ಯವೂ ಅಪೇಕ್ಷಣೀಯವೂ ಆಗಿವೆ. ಸರಕು ಸಂಸ್ಕೃತಿಯ ಭೌತಿಕ ಸಂಪನ್ನತೆ, ಬೌದ್ಧಿಕ ಹೆಚ್ಚುಗಾರಿಕೆ, ಶುಷ್ಕ ತತ್ವೋಪದೇಶಗಳು ಬದುಕನ್ನು ಆರ್ದ್ರಗೊಳಿಸಲಾರವು. ಪ್ರೀತಿ ಎಂಬ ಎರಡಕ್ಷರಗಳೇ ಬದುಕಿನ ತಾರಕ ಮಂತ್ರ ಎನಿಸಬಲ್ಲವು. ಪ್ರೀತಿಯ ತುಡಿತವನ್ನು ಹೊಂದಿದ ಸಾಹಿತ್ಯ ಸದಾ ಜೀವಂತವಾಗಿರುತ್ತದೆ. ಬದುಕಿನ ಮುಖ್ಯ ಆಸರೆಯಾದ ಪ್ರೀತಿಗೆ ಆದ್ಯತೆಯನ್ನು ನೀಡುವ ವನಜಾಕ್ಷಿ ಪಿ. ಚೆಂಬ್ರಕಾನ ಅವರ ‘ಮೌನಭಾವ’ ಸಂಕಲನದ ಕವಿತೆಗಳಲ್ಲಿ ಪ್ರೀತಿಯ ವೈವಿಧ್ಯಪೂರ್ಣ ಮುಖಗಳಿವೆ. ಒಲವಿನ ಎಳೆಗಳಿಂದ ಸಂಬಂಧವನ್ನು ಬೆಸೆಯಲಾಗಿದೆ. ಪ್ರೀತಿಗಾಗಿ ಮಿಡುಕುತ್ತಾ ನಲ್ಲನಿಗಾಗಿ ಕಾತರಪಡುವ, ನೆನಪಿನ ದೋಣಿಯಲ್ಲಿ ಸಾಗುವ, ಕನಸಿನ ಮುಗಿಲಲ್ಲಿ ತೇಲುವ, ಹತಾಶೆಯಿಂದ ಚಡಪಡಿಸುವ, ನಿರೀಕ್ಷೆಯಲ್ಲಿ ಬೇಯುವ ನಲ್ಲೆಯ ಚಿತ್ರಗಳು ಎದುರಾಗುತ್ತವೆ. ಯಾವುದೇ ಹಳಹಳಿಕೆ ತಕರಾರುಗಳಿಲ್ಲದೆ ನಲ್ಲನನ್ನು ಕನವರಿಸುವ ಕವಿಯತ್ರಿಯು ಪ್ರೀತಿ, ಚೆಲುವು, ಮೌನ ಮತ್ತು ವಿರಹದ ಭಾವಗಳನ್ನು ಹೆಣೆದಿದ್ದಾರೆ. ಕಣ್ಣಿನಿಂದ ಮರೆಯಾದರೂ ಹೃದಯದಲ್ಲಿ ಉಳಿದುಕೊಂಡಿರುವ ವ್ಯಕ್ತಿಯನ್ನು ನೆನೆಯುತ್ತಾ ಒಲವಿನ ಮುಖಗಳನ್ನು ಹುಡುಕಾಡಿದ್ದಾರೆ. ತಾರುಣ್ಯದ ಸವಿಗನಸು, ಗಂಡುಹೆಣ್ಣಿನ ಪ್ರೇಮ-ವಿರಹಗಳಿಗೆ ಸಂಬಂಧಿಸಿದ ರಚನೆಗಳಲ್ಲಿ…

Read More

ಉಡುಪಿ : ಯಕ್ಷಗಾನ ಕೇಂದ್ರ ಇಂದ್ರಾಳಿ ಇದರ ವತಿಯಿಂದ ದಿನಾಂಕ 06-05-2024ರಿಂದ ಪ್ರಾರಂಭಗೊಂಡ ಯಕ್ಷಗಾನ ವೇಷಭೂಷಣ ಮತ್ತು ಬಣ್ಣಗಾರಿಕೆ ಬೇಸಿಗೆ ಶಿಬಿರವು ದಿನಾಂಕ 13-05-2024ರಂದು ಸಮಾಪನಗೊಂಡಿತು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಲ.ವಿ.ಜಿ. ಶೆಟ್ಟಿಯವರು “ಯಕ್ಷಗಾನ ಕೇಂದ್ರ ಇಂದ್ರಾಳಿ, ಉಡುಪಿ ಇದು ಯಕ್ಷಗಾನದ ಮೂಲಮಠ ಎಂಬುದಾಗಿ ಹೇಳುವುದು ಸಾರ್ಥಕವಾಗಿದೆ. ಯಕ್ಷಗಾನದ ಪಾರಂಪರಿಕ ಶೈಲಿಯ ಸಂರಕ್ಷಣೆಗೆ ಈ ಕೇಂದ್ರ ಅನುಪಮವಾದ ಕೊಡುಗೆ ಸಲ್ಲಿಸಿದೆ. ಯಕ್ಷಗಾನ ಹೆಜ್ಜೆ ತರಬೇತಿ ಶಿಬಿರಗಳು ಎಲ್ಲಾ ಕಡೆ ನಡೆಯುತ್ತದೆ. ಆದರೆ ಇದೊಂದು ವಿಶಿಷ್ಟವಾದ ಶಿಬಿರ” ಎಂಬುದಾಗಿ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಸಲಹಾ ಸಮಿತಿ ಅಧ್ಯಕ್ಷರಾದ ಶ್ರೀ ಪಳ್ಳಿ ಕಿಶನ್ ಹೆಗ್ಡೆಯವರು ಯಕ್ಷಗಾನ ಕೇಂದ್ರವು ಈ ವಿಶಿಷ್ಟ ಶಿಬಿರ ನಡೆಸುವುದಕ್ಕೆ ಕಾರಣವಾದ ಪ್ರೇರಣೆಯನ್ನು ತಿಳಿಸಿ ಕೇಂದ್ರದ ಚಟುವಟಿಕೆಗಳ ಬಗ್ಗೆ ವಿವರವನ್ನಿತ್ತರು. ವೇದಿಕೆಯಲ್ಲಿ ಸಲಹಾ ಸಮಿತಿ ಸದಸ್ಯರಾದ ಶ್ರೀ ಭುವನ ಪ್ರಸಾದ್ ಹೆಗ್ಡೆ, ಶ್ರೀ ಮಂಜುನಾಥ ಮಯ್ಯ ಹಾಗೂ ಶ್ರೀಮತಿ ಪೂರ್ಣಿಮಾ ಸುರೇಶ್ ಉಪಸ್ಥಿತರಿದ್ದರು. ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೆ…

Read More

ಮಂಗಳೂರು : ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀ ಸಾಯಿ ಪರಿವಾರ್ ಟ್ರಸ್ಟ್ (ರಿ.) ಇದರ ಆಶ್ರಯದಲ್ಲಿ ಉಳ್ಳಾಲದಲ್ಲಿ ಪ್ರಪ್ರಥಮ ಬಾರಿಗೆ ‘ಸುಗಿತ್ ನಲಿಪುಗ -2024’ ತ್ರಿವಳಿ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆಯನ್ನು ದಿನಾಂಕ 19-05-2024ರಂದು ಬೆಳಗ್ಗೆ 10-00ರಿಂದ ತೊಕ್ಕೊಟ್ಟು ಅಂಬಿಕಾರೋಡು ಗಟ್ಟಿ ಸಮಾಜ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ತಂಡಗಳಿಂದ ನಗದು, ಮಾನ ಫಲಕ, ಪ್ರಶಂಸಾ ಪತ್ರ ಹಾಗೂ ಭಾಗವಹಿಸಿದ ಎಲ್ಲಾ ತಂಡಗಳಿಗೂ ಪ್ರೋತ್ಸಾಹ ಧನ ಮತ್ತು ಪ್ರಶಂಸಾ ಪತ್ರ ನೀಡಲಾಗುವುದು.

Read More