Author: roovari

ಮಂಗಳೂರು: ಬಂಟ್ವಾಳದ ಯುವ ಸಾಹಿತಿ ದಾ. ನಾ. ಉಮಾಣ್ಣ ಇವರ ಜಾನಪದ ಅಧ್ಯಯನ ಕೃತಿ ‘ಅರದರ್ ಬಿರದೆರ್’ ಇದರ ಲೋಕರ್ಪಣಾ ಸಮಾರಂಭವು ದಿನಾಂಕ 16 ಜನವರಿ 2025ರಂದು ಮಂಗಳೂರಿನ ಪತ್ರಿಕಾ ಭವನದಲ್ಲಿ ಲೋಕಾರ್ಪಣೆಗೊಂಡಿತು. ಸಮಾರಂಭದಲ್ಲಿ ಕೃತಿಯನ್ನು ಲೋಕಾರ್ಪಣೆಗೊಳಿಸಿದ ಕವಿ, ಸಾಹಿತಿ ಮತ್ತು ವಿದ್ವಾಂಸರಾದ ಡಾ. ವಸಂತಕುಮಾರ ಪೆರ್ಲ ಮಾತನಾಡಿ “ತುಳು ಜಾನಪದ ಕ್ಷೇತ್ರವು ಅಕ್ಷಯವಾದ ಗಣಿ ಇದ್ದಂತೆ. ಜಾನಪದ ಕ್ಷೇತ್ರದಲ್ಲಿ ಸಂಸ್ಕೃತಿ ಅಧ್ಯಯನ ಮಾಡುವವರಿಗೆ ಕರಾವಳಿ ಜಿಲ್ಲೆಗಳಲ್ಲಿ ಇನ್ನೂ ಬಹುಮುಖಿಯಾದ ವಸ್ತುವಿಷಯಗಳಿವೆ. ತುಳು ಪಾಡ್ದನದಲ್ಲಿ ಬರುವಂತೆ ‘ಅರದರ್ ಬಿರದೆರ್ ವರದರ್’ ಎಂದರೆ ಪಾಂಡವರು ಕೌರವರು ಮತ್ತು ಯಾದವರು. ಯಾದವರ ಪತನದ ಬಳಿಕ ಕೃಷ್ಣನು ಅಳಿದುಳಿದ ಕೊನೆಯ ಒಬ್ಬ ಪುರುಷನಿಗೆ ಮಹಾಭಾರತ ಕಥೆಯನ್ನು ಬರೆದಿಡುವಂತೆ ಹೇಳುತ್ತಾನೆ. ಅದರಂತೆ ಆತ ಬರೆದ ಕಥೆ ಪಾಡ್ದನದಲ್ಲಿ ವರ್ಣಿತವಾಗಿದೆ. ಇದೊಂದು ಅತ್ಯಂತ ವಿಶಿಷ್ಟವಾದ ಪಾಡ್ದನ. ಮಹಾಭಾರತದ ಬಗ್ಗೆ ಜನಪದರ ದೃಷ್ಟಿ ಇದರಲ್ಲಿ ಕಂಡುಬರುತ್ತದೆ. ಅದಕ್ಕೆ ಉಮಾಣ್ಣ ಅವರು ಅರ್ಥವಿವರಣೆಯನ್ನೂ ನೀಡಿದ್ದಾರೆ. ತುಳುನಾಡಿನ ಅಪರೂಪದ ಇತರ ಹಲವಾರು ಜಾನಪದ…

Read More

ಬಂಟ್ವಾಳ: ಕರ್ನಾಟಕ ಸರಕಾರ ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ’, ‘ಚಿಣ್ಣರಲೋಕ’, ‘ಮೋಕೆದ ಕಲಾವಿದೆರ್’ ಹಾಗೂ ‘ಸೇವಾಬಂಧು’ ಸಂಸ್ಥೆಗಳ ವತಿಯಿಂದ ‘ಕರಾವಳಿ ಕಲೋತ್ಸವ’ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸರಪಾಡಿ ಯಕ್ಷಗಾನ ಅಭಿಮಾನಿ ಬಳಗದ ಸಹಕಾರದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿಯವರ ಯಕ್ಷಪಯಣದ 50ರ ಸಂಭ್ರಮ ಮತ್ತು ಪುಸ್ತಕ ಬಿಡುಗಡೆ ಸಮಾರಂಭ ‘ಸುವರ್ಣ ಸರಪಾಡಿ’ ಕಾರ್ಯಕ್ರಮವು ದಿನಾಂಕ 11 ಜನವರಿ 2025ರ ಶನಿವಾರದಂದು ಬಿ. ಸಿ. ರೋಡಿನ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಗೊಳಿಸುವ ಮೂಲಕ ಉದ್ಘಾಟಿಸಿದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮಾಜಿ ಸದಸ್ಯ ನಳಿನ್ ಕುಮಾರ್ ಕಟೀಲ್ ಮಾತನಾಡಿ “ಇಂದು ಯಕ್ಷಗಾನದಲ್ಲಿ ಪಾತ್ರೋಚಿತವಾದ ಮಾತುಗಳನ್ನು ಅದ್ಭುತ ಅಭಿನಯದ ಮೂಲಕ ನಿರ್ವಹಿಸುವ ಕಲಾವಿದರ ಪೈಕಿ ಸರಪಾಡಿ ಅಶೋಕ ಶೆಟ್ಟರು ಅಗ್ರಪಂಕ್ತಿಗೆ ಸೇರುತ್ತಾರೆ. ಅವರು ಯಕ್ಷಗಾನವಷ್ಟೇ ಅಲ್ಲ, ರಾಜಕೀಯ, ಸಮಾಜಸೇವೆಯಲ್ಲೂ ಮಿಂಚಿದವರು. ಕಲಾವಿದರಿಗಾಗಿ ಸ್ಪಂದಿಸಿದವರು” ಎಂದು ಶ್ಲಾಘಿಸಿದರು. ಸಮಾರಂಭದಲ್ಲಿ ಅಭಿನಂದನಾ ಭಾಷಣಗೈದ ಕರ್ನಾಟಕ ಜಾನಪದ – ಯಕ್ಷಗಾನ ಮತ್ತು ತುಳು…

Read More

ವಿಟ್ಲ : ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇದರ ಕಾಲಾವಧಿ ಜಾತ್ರೆಯ ಪ್ರಯುಕ್ತ 2ನೇ ವರ್ಷದ ಕಲಾಕಾಣಿಕೆ ‘ಕಥೆ ಬರೆದಾತಿಜಿ’ ತುಳು ನಾಟಕ ಪ್ರದರ್ಶನವನ್ನು ದಿನಾಂಕ 17 ಜನವರಿ 2025ರಂದು ರಾತ್ರಿ 8-30 ಗಂಟೆಗೆ ದೇವಸ್ಥಾನದ ವಠಾರದಲ್ಲಿ ಆಯೋಜಿಸಲಾಗಿದೆ. ರಮೇಶ್ ವರಪ್ಪಾದೆ ಇವರ ಸಾರಥ್ಯದಲ್ಲಿ ವಿಟ್ಲ ವರಪ್ಪಾದೆ ದುರ್ಗಾಂಬಾ ಕಲಾವಿದರು ಅಭಿನಯಿಸುವ ವಿನೂತನ ಶೈಲಿಯ ನಾಟಕ ಇದಾಗಿದ್ದು, ಯದು ವಿಟ್ಲ ಸಂಭಾಷಣೆ, ಸಾಹಿತ್ಯ ಮತ್ತು ನಿರ್ದೇಶನ ಮಾಡಿರುತ್ತಾರೆ.

Read More

ಸಾಲಿಗ್ರಾಮ : ಸಮಸ್ತರು ರಂಗ ಸಂಶೋಧನ ಕೇಂದ್ರ ಬೆಂಗಳೂರು ಪ್ರಸ್ತುತ ಪಡಿಸುವ ದೇಶೀ ಖ್ಯಾತಿಯ ರಂಗ ನಿರ್ದೇಶಕ ಸಾಂಸ್ಕೃತಿಕ ಸಂಘಟಕ ಗೋಪಾಲಕೃಷ್ಣ ನಾಯರಿಯವರ ಎರಡನೇ ವರ್ಷದ ಸಂಸ್ಮರಣಾ ಕಾರ್ಯಕ್ರಮ ಮತ್ತು ‘ಶ್ರೀ ಗೋಪಾಲಕೃಷ್ಣ ನಾಯರಿ ರಂಗ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ದಿನಾಂಕ 19 ಜನವರಿ 2025ರಂದು ಗುಂಡ್ಮಿ ಸಾಲಿಗ್ರಾಮ ಸದಾನಂದ ರಂಗ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ಇದರ ಅಧ್ಯಕ್ಷರಾದ ಶ್ರೀ ಆನಂದ ಸಿ. ಕುಂದರ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಅಧ್ಯಕ್ಷರಾದ ಶ್ರೀ ವೈಕುಂಠ ಹೇರ್ಳೆ ಇವರು ಸಂಸ್ಮರಣಾ ಮಾತುಗಳನ್ನಾಡಲಿರುವರು. ಶ್ರೀ ಗೋಪಾಲಕೃಷ್ಣ ದೇವರು ಭಟ್ಟ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಉದಯೋನ್ಮುಖ ಬಾಲ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಾಲಿಗ್ರಾಮದ ಆರಾಧನಾ ಮೇಲೋಡಿಸ್ (ರಿ.) ಇವರಿಂದ ಭಾವಗೀತೆ ಮತ್ತು ಜಾನಪದ ಹಾಡುಗಳು ಗಾಯನ ಪ್ರಸ್ತುತಗೊಳ್ಳಲಿದೆ.

Read More

ಕೊಪ್ಪಳ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಬೆಂಗಳೂರು ಸಂಸ್ಥೆಯ ವತಿಯಿಂದ ‘ಅಖಿಲ ಕರ್ನಾಟಕ ನಾಲ್ಕನೇ ಕವಿ-ಕಾವ್ಯ ಸಮ್ಮೇಳನ -2025’ವನ್ನು ದಿನಾಂಕ 19 ಜನವರಿ 2025ರಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿರುವ ಶ್ರೀ ಚನ್ನಬಸವೇಶ್ವರ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 9-00 ಗಂಟೆಗೆ ಗೀತಗಾಯನ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷರಾದ ಅನಸೂಯ ಜಹಗೀರದಾರ ಇವರ ಅಧ್ಯಕ್ಷತೆಯಲ್ಲಿ ಧಾರವಾಡದ ಪ್ರಸಿದ್ಧ ಸಾಹಿತಿ ರಂಜಾನ್ ದರ್ಗಾ ಇವರು ಈ ಸಮ್ಮೇಳನವನ್ನು ಉದ್ಘಾಟಿಸಲಿರುವರು. ಇದೇ ಸಂದರ್ಭದಲ್ಲಿ ಡಾ. ಹನುಮಂತ ಹೇರೂರುರವರ ‘ಹದ್ದುಗಳ ನೆರಳಲ್ಲಿ’, ಶರಣಪ್ಪ ತಳ್ಳಿ ಕುಪ್ಪಿಗುಡ್ಡರವರ ‘ನಾಕು ತಾವಿನ ತಿರುವು’, ರಮೇಶ್ ಗಬ್ಬೂರುರವರ ‘ತತ್ವ ಪದಗಳು’, ನಾಗಭೂಷಣ್ ಅರಳಿಯವರ ‘ನೂರೆಂಟು ಹೆಜ್ಜೆಗಳು’, ರಮೇಶ್ ಬನ್ನಿಕೊಪ್ಪರವರ ‘ಆಫ್ ಚಹಾ’, ಡಾ. ಹನುಮಂತ ಹೇರೂರುರವರ ‘ನುಡಿದಷ್ಟೇ ಬಯಲು’, ಡಾ. ಯಮನೂರಪ್ಪ ವಡಕಿಯವರ ‘ಒಡಲ ಜೋಗುಳ’, ಡಾ. ಯಮನೂರಪ್ಪ ವಡಕಿಯವರ ‘ಕೊಪ್ಪಳ ಜಿಲ್ಲೆಯ ಆಯ್ದ ತತ್ವ ಪದಗಳು’ ಎಂಬ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಧಾರವಾಡ ಹಿರಿಯ ಸಾಹಿತಿ…

Read More

ತೀರ್ಥಹಳ್ಳಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ ಇವರ ನೇತೃತ್ವದಲ್ಲಿ ತೀರ್ಥಹಳ್ಳಿ ತಾಲೂಕಿನಲ್ಲಿ 2024ರ ನವೆಂಬರ್ ತಿಂಗಳಿನಲ್ಲಿ ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯನ್ನು ರಚಿಸಲಾಗಿದ್ದು, ಶ್ರೀಮತಿ ರೇಣುಕಾ ಹೆಗಡೆ – ಅಧ್ಯಕ್ಷರು ಮತ್ತು ಶ್ರೀಮತಿ ಲೀಲಾವತಿ ಎಸ್. – ಕಾರ್ಯದರ್ಶಿಗಳು ಇವರ ಮುಂದಾಳತ್ವದಲ್ಲಿ ಸುಮಾರು 50 ಸದಸ್ಯರನ್ನು ಒಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಈ ಸಂಘಟನೆಯ ಅಡಿಯಲ್ಲಿ ಹಲವಾರು ಸಾಹಿತ್ಯಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಈ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯಡಿಯಲ್ಲಿ ಈವರೆಗೆ ಎರಡು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ತೀರ್ಥಹಳ್ಳಿ ತಾಲೂಕಿನಲ್ಲಿ ಆಯೋಜಿಸಿ ಮಕ್ಕಳಲ್ಲಿ ಹುದುಗಿರುವ ಕಾವ್ಯ ರಚನೆ, ಕಥೆ ಹೇಳುವ ಸಾಮರ್ಥ್ಯ ಹಾಗೂ ಪ್ರಬಂಧ ರಚನೆ ಮತ್ತು ಮಂಡನೆಗೆ ಸಂಬಂಧಿಸಿದಂತೆ ಗೋಷ್ಠಿಗಳನ್ನು ಆಯೋಜಿಸಿ, ತಾಲೂಕು ಮಟ್ಟದ ಸಮ್ಮೇಳನಗಳನ್ನು ಅದ್ದೂರಿಯಾಗಿ ನಡೆಸಿ ಇಲ್ಲಿ…

Read More

ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇದರ ವತಿಯಿಂದ ‘ತಿಂಗಳ ನಾಟಕ ಸಂಭ್ರಮ’ದ ಪ್ರಯುಕ್ತ ನಾಟಕ ಪ್ರದರ್ಶನವು ದಿನಾಂಕ 18 ಜನವರಿ 2025ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಮುಚ್ಚಯ ಭವನದಲ್ಲಿ ನಡೆಯಲಿದೆ. ಈ ಸಂಭ್ರಮದಲ್ಲಿ ಕಲಾ ನಿರ್ದೇಶಕರಾದ ಶ್ರೀ ಶಶಿಧರ ಅಡಪ ಇವರು ತಿಂಗಳ ಅತಿಥಿಯಾಗಿ ಭಾಗವಹಿಸಲಿರುವರು. ಎಂ. ಗಣೇಶ್ ಇವರ ನಿರ್ದೇಶನದಲ್ಲಿ ಶ್ರೀ ಗಜಾನನ ಯುವಕ ಮಂಡಳಿ – ಶೇಷಗಿರಿ ಕಲಾ ತಂಡದವರು ಅಭಿನಯಿಸುವ ಕುವೆಂಪುರವರ ‘ಶ್ರೀ ರಾಮಾಯಣ ದರ್ಶನ’ ಆಧಾರಿತ ನಾಟಕ ‘ವಾಲಿವಧೆ’ ಪ್ರದರ್ಶನಗೊಳ್ಳಲಿದೆ.

Read More

ಬೆಂಗಳೂರು : ಶಿರಸಿ ತಾಲೂಕಿನ ಸಣ್ಣಕೇರಿಯ ಪೂರ್ಣಿಮಾ ಭಟ್ಟ ಅವರ ‘ಕತೆ ಜಾರಿಯಲ್ಲಿರಲಿ’ ಅಪ್ರಕಟಿತ ಕಥಾಸಂಕಲನಕ್ಕೆ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ಹಾಗೂ ಬೆಳಗಾವಿ ಜಿಲ್ಲೆ ಮೋಳೆಯ ಡಾ. ವಿ.ಎ. ಲಕ್ಷ್ಮಣ ಅವರ ‘ಪರಿಮಳದ ಬಾಕಿ ಮೊತ್ತ’ ಅಪ್ರಕಟಿತ ಕವನ ಸಂಕಲನಕ್ಕೆ ‘ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’ ಪ್ರಕಟಿಸಲಾಗಿದೆ. ಕಥೆ ವಿಭಾಗಕ್ಕೆ ‘ಸುಧಾ’ ವಾರ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರಘುನಾಥ ಚ.ಹ. ಹಾಗೂ ಕಾವ್ಯ ವಿಭಾಗಕ್ಕೆ ದೂರದರ್ಶನದ ನಿರ್ದೇಶಕಿ ಆರತಿ ಎಚ್.ಎನ್. ತೀರ್ಪುಗಾರರಾಗಿದ್ದರು. ಎರಡೂ ಪ್ರಶಸ್ತಿಗಳು ತಲಾ ರೂ.10,000/- ನಗದು ಹಾಗೂ ಫಲಕಗಳನ್ನು ಒಳಗೊಂಡಿವೆ. ಪೂರ್ಣಿಮಾ ಭಟ್ಟ ಸಣ್ಣಕೇರಿ : ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ವಿಜೇತರಾದ ಪೂರ್ಣಿಮಾ ಭಟ್ಟ ಸಣ್ಣಕೇರಿಯವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದು, ಇವರು ಕೆಲ ಕಾಲ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, ಕೆಲ ವರ್ಷ ಪತ್ರಿಕೆಗಳಲ್ಲಿ ಉಪ ಸಂಪಾದಕಿಯಾಗಿ ಕಾರ್ಯ ನಿರ್ವಹಿಸಿದ್ದು, ಪ್ರಸ್ತುತ ಮಕ್ಕಳಿಗೆ ಮನೆಪಾಠ ಮಾಡುವ ಮೂಲಕ ಕನ್ನಡ ಕಲಿಸುತ್ತಿದ್ದಾರೆ. ಇವರು ಬರೆದ ಕತೆ, ಕವನ, ಲೇಖನಗಳು ಪತ್ರಿಕೆಗಳಲ್ಲಿ,…

Read More

ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿಪ್ರಶಸ್ತಿಗಳಲ್ಲಿ ಅತ್ಯಂತ ಪ್ರತಿಷ್ಟಿತವಾದ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ. ಈ ದತ್ತಿಯನ್ನು ಗೌರಮ್ಮರವರ ಪುತ್ರ ಬಿ.ಜಿ. ವಸಂತರು ಕೊಡಗಿನ ಮಹಿಳಾ ಲೇಖಕಿಯರು ಪ್ರಕಟ ಪಡಿಸಿದ ಉತ್ತಮ ‌ಕೃತಿಗೆ ನೀಡಿ ಗೌರವಿಸುವ ಸಲುವಾಗಿ ಸ್ಥಾಪಿಸಲಾಗಿದೆ. ಇಲ್ಲಿಯವರೆಗೆ 20 ಲೇಖಕಿಯರಿಗೆ ಈ ಪ್ರಶಸ್ತಿ ನೀಡಲಾಗಿದ್ದು, 2024-25ನೇ ಸಾಲಿನ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದ್ದು 15 ಲೇಖಕಿಯರು ತಮ್ಮ ಕೃತಿಗಳನ್ನು ಪ್ರಶಸ್ತಿಗಾಗಿ ಪ್ರಸ್ತುತ ಪಡಿಸಿದ್ದರು. ಜಿಲ್ಲೆಯ ಹಿರಿಯ ಮೂರು ಸಾಹಿತಿಗಳನ್ನು ತೀರ್ಪುಗಾರರನ್ನಾಗಿಸಿ ಅವರು ಎಲ್ಲ ಪುಸ್ತಕಗಳನ್ನು ಪರಮಾರ್ಶಿಸಿ‌ ಶ್ರೀಮತಿ ಕೂಡಕಂಡಿ ಓಂಶ್ರೀ ದಯಾನಂದ ಇವರ ‘ಪುಟಾಣಿ ರೈಲು – ಅಂದದ ಕಥೆಗಳ ಲೋಕದಲ್ಲೊಂದು ಸುಂದರ ಪಯಣ’ ಕಥಾ ಸಂಕಲನಕ್ಕೆ ಪ್ರಶಸ್ತಿ ಲಭ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ತಿಳಿಸಿದ್ದಾರೆ. ಶ್ರೀಮತಿ ಕೂಡಕಂಡಿ ಓಂಶ್ರೀ ದಯಾನಂದ ಇವರು ಭಾಗಮಂಡಲ ನಾಡು ತಾವೂರು ಗ್ರಾಮದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿವೃತ್ತ…

Read More

ಮಂಗಳೂರು : ಕರಾವಳಿ ಲೇಖಕಿಯರ – ವಾಚಕಿಯರ ಸಂಘದ ಆಶ್ರಯದಲ್ಲಿ ಸಂಘದ ಕಾರ್ಯದರ್ಶಿ ಯಶೋದಾ ಮೋಹನ್ ಇವರ ಎರಡು ಕೃತಿಗಳ ಅನಾವರಣ ಕಾರ್ಯಕ್ರಮವು ಸಂಘದ ಸಭಾಂಗಣ ‘ಸಾಹಿತ್ಯ ಸದನ’ದಲ್ಲಿ ದಿನಾಂಕ 05 ಜನವರಿ 2025ರಂದು ನಡೆಯಿತು. ಸಂಘದ ಅಧ್ಯಕ್ಷರಾದ ಶಕುಂತಳಾ ಟಿ. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ‘ಇಳಿ ಹಗಲಿನ ತೇವಗಳು’ ಕನ್ನಡ ಕಥಾ ಸಂಕಲನವನ್ನು ಹಿರಿಯ ಸಾಹಿತಿ ಶ್ರೀ ಮುದ್ದು ಮೂಡುಬೆಳ್ಳೆಯವರು ಬಿಡುಗಡೆ ಮಾಡಿದರು. ಕೃತಿಯನ್ನು ಪರಿಚಯಿಸಿದ ಡಾ. ಸುಧಾರಾಣಿಯವರು “ಈ ಸಂಕಲನದಲ್ಲಿ ಲೇಖಕಿ ತನ್ನ ಅಸ್ಮಿತೆಯನ್ನು ಹುಡುಕಿಕೊಳ್ಳುತ್ತಲೇ ಮನುಷ್ಯ ಸಂಬಂಧಗಳ ತೇವವನ್ನು ಅರಸ ಬಯಸಿದ್ದಾರೆ. ಇಲ್ಲಿನ ಕಥೆಗಳು ಹೆಣ್ಣು ಕೇಂದ್ರಿತ ಮತ್ತು ಹೆಣ್ಣು ನೋಟವೇ ಆಗಿದ್ದರೂ ಸೀಮಿತ ಚೌಕಟ್ಟಿನದ್ದಲ್ಲ. ಆಧುನಿಕ ಕಾಲಘಟ್ಟದ ಮಾನವ ಸಂಬಂಧಗಳ ಬಿರುಕು, ಇಕ್ಕಟ್ಟು, ಬಿಕ್ಕಟ್ಟುಗಳನ್ನು ನಿರೂಪಿಸುವ ಈ ಕತೆಗಳು ನಿಜ ಅರ್ಥದಲ್ಲಿ ಇಳಿ ಹಗಲಿನ ತೇವಗಳು.” ಎಂದು ಅಭಿಪ್ರಾಯಪಟ್ಟರು. ‘ತಡ್ಯ ಕಡಪುನಗ’ ತುಳು ಕವಿತೆಗಳ ಸಂಕಲನವನ್ನು ಅನಾವರಣ ಮಾಡಿದ ಡಾ. ಜ್ಯೋತಿ ಚೇಳಾಯ್ರು ಮಾತನಾಡಿ “ಹೆಣ್ಣು ಮಕ್ಕಳು…

Read More