Author: roovari

ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದಿಂದ ನಡೆಯುತ್ತಿರುವ ವಿನೂತನ ಕಾರ್ಯಕ್ರಮ “ಮನೆಯೇ ಗ್ರಂಥಾಲಯ” ಇದರ ಸುವರ್ಣ ಸಂಭ್ರಮವು ಉಡುಪಿಯ ಗಾಂಧಿ ಆಸ್ಪತ್ರೆಯಲ್ಲಿ ದಿನಾಂಕ 15-07- 2024ರಂದು  ನಡೆಯಿತು. ಕನ್ನಡದ ಪ್ರಸಿದ್ಧ ವಿಮರ್ಶಕ ಪ್ರೊ. ಮುರುಳೀಧರ ಉಪಾಧ್ಯ ಹಿರಿಯಡ್ಕ ಅವರು ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಹರಿಶ್ಚಂದ್ರ ಅವರಿಗೆ ಪುಸ್ತಕಗಳನ್ನು ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು “ಆಸ್ಪತ್ರೆಗಳಲ್ಲಿ ಗ್ರಂಥಾಲಯ ಮಾಡುವ ಮೂಲಕ ರೋಗಿಗಳ ಸ್ವಸ್ಥ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ. ರೋಗಿಗಳ ಮನಸ್ಥಿತಿಗೆ ಅನುಗುಣವಾಗಿ ವಿವಿಧ ರೀತಿಯ ಆರೋಗ್ಯಕ್ಕೆ, ಸಮಾಜಕ್ಕೆ ಹಾಗೂ ಪರಿಸರಕ್ಕೆ ಸಂಬಂಧಿಸಿದ ವಿವಿಧ ಬಗೆಯ ಪುಸ್ತಕಗಳು ಲಭ್ಯವಾಗಲಿ.” ಎಂದು ಆಶಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಹರಿಶ್ಚಂದ್ರ ಇವರನ್ನು ಕ. ಸಾ. ಪ. ಉಡುಪಿ ತಾಲೂಕು ಘಟಕದ ವತಿಯಿಂದ ಗೌರವಿಸಲಾಯಿತು . ಉಡುಪಿ ಕರಾವಳಿಯ ಭಾರತೀಯ ವೈದ್ಯಕೀಯ ಸಂಘ ಇದರ ಅಧ್ಯಕ್ಷೆಯಾದ ಡಾ. ರಾಜಲಕ್ಷ್ಮೀ,…

Read More

ಕಾರ್ಕಳ : ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕದ ಪದಾಧಿಕಾರಿಗಳ ಸಭೆಯು ಪ್ರಕಾಶ್ ಹೋಟೆಲ್ ಇದರ ಸಭಾಂಗಣದಲ್ಲಿ ದಿನಾಂಕ 13-07-2024ರಂದು ನಡೆಯಿತು. ‘ಸಾಹಿತ್ಯದ ಖುಷಿ ಸಾವಯವ ಕೃಷಿ’ ಎಂಬ ಶೀರ್ಷಿಕೆಯಡಿ ಈ ವರ್ಷದ ಸಾಹಿತ್ಯದ ಸರಣಿ ಕಾರ್ಯಕ್ರಮವನ್ನು ಕಾರ್ಕಳ ತಾಲೂಕಿನ ಶಾಲಾ ಕಾಲೇಜುಗಳಲ್ಲಿ ಸಾಹಿತ್ಯ ನಂದನ, ತಾಲೂಕಿನ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಸಾಹಿತ್ಯ ಚಂದನ, ತಾಲೂಕಿನ ವಿವಿಧ ಸಂಘ ಸಂಸ್ಥೆಗಳಲ್ಲಿ ಸಾಹಿತ್ಯ ಸಂಭ್ರಮ, ತಾಲೂಕಿನ ಹಿರಿಯ ಸಾಹಿತ್ಯ ಸಾಧಕರಿಗೆ ಸನ್ಮಾನ ಸಾಹಿತ್ಯ ಸಿರಿ, ತಾಲೂಕಿನ ಬರಹಗಾರ ಸಮ್ಮೇಳನ ಸಾಹಿತ್ಯ ಸೌರಭ ಹೀಗೆ ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ‘ಇಳೆಯ ತುಂಬ ಮುಂಗಾರು ಮಳೆ’ ಶೀರ್ಷಿಕೆಯಲ್ಲಿ ಕ.ಸಾ.ಪ. ಸದಸ್ಯರ ಕವಿಗೋಷ್ಠಿ ನಡೆಯಲಿದ್ದು, ಗೋಷ್ಠಿ ಅಧ್ಯಕ್ಷತೆಯನ್ನು ಲೇಖಕಿ ಮಿತ್ರ ಪ್ರಭಾ ಹೆಗ್ಡೆ ವಹಿಸಲಿದ್ದಾರೆ. ಸಭೆಯಲ್ಲಿ ಶಿವಸುಬ್ರಹ್ಮಣ್ಯ ಜಿ. ಭಟ್, ದೇವುದಾಸ್ ನಾಯಕ್, ಆರ್. ರಮೇಶ್ ಪ್ರಭು, ಆಶೀಶ್ ಶೆಟ್ಟಿ, ಡಾ. ಸುಮತಿ ಪಿ., ಸುಲೋಚನಾ ಬಿ.ವಿ., ಮಾಲತಿ ಜಿ. ಪೈ, ಲಕ್ಷ್ಮೀ ಹೆಗಡೆ, ಶೈಲಜಾ…

Read More

ಮಂಗಳೂರು : ಉರ್ವ ಮಾರ್ಕೆಟ್ ಸುಲ್ತಾನ್ ಬತ್ತೇರಿ ರಸ್ತೆಯಲ್ಲಿರುವ ಯುವ ವೇದಿಕೆ ಟ್ರಸ್ಟ್ (ರಿ.) ಮತ್ತು ಅಶೋಕನಗರದ ಗೋಕುಲದಲ್ಲಿರುವ ದ್ರಾವಿಡ ಬ್ರಾಹ್ಮಣರ ಎಸೋಸಿಯೇಶನ್ (ರಿ.) ಇವರ ಯುವ ವೇದಿಕೆ ಇದರ ಜಂಟಿ ಆಶ್ರಯದಲ್ಲಿ ‘ಆಷಾಢ ಶ್ರಾವ್ಯ’ದ ಪ್ರಯುಕ್ತ ಯಕ್ಷಗಾನ ತಾಳಮದ್ದಳೆಯು ದಿನಾಂಕ 21-07-2024ರಂದು ಮಧ್ಯಾಹ್ನ 2-30ಕ್ಕೆ ಮಂಗಳೂರಿನ ಅಶೋಕನಗರದ ಗೋಕುಲ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಕವಿ ತಿರುಮಲ ವಿರಚಿತ ‘ಭಾರ್ಗವ ರಾಮ’ ಪ್ರಸಂಗದ ತಾಳಮದ್ದಳೆಯ ಹಿಮ್ಮೇಳದಲ್ಲಿ ಶ್ರೀ ರವಿಚಂದ್ರ ಕನ್ನಡಿಕಟ್ಟೆ, ಶ್ರೀ ಕೃಷ್ಣ ಪ್ರಕಾಶ್ ಉಳಿತ್ತಾಯ ಮತ್ತು ಶ್ರೀ ಮುರಾರಿ ಕಡಂಬಳಿತ್ತಾಯ ಹಾಗೂ ಮುಮ್ಮೇಳದಲ್ಲಿ ಶ್ರೀ ಸೂರಿಕುಮೇರಿ ಗೋವಿಂದ ಭಟ್, ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್, ಶ್ರೀ ಮಧೂರು ವಾಸುದೇವ ರಂಗ ಭಟ್ ಮತ್ತು ವಿದ್ವಾನ್ ಶ್ರೀ ಸುಂಕದಗುಂಡಿ ಗಣಪತಿ ಭಟ್ ಭಾಗವಹಿಸಲಿರುವರು.

Read More

ಮಂಗಳೂರು : ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಸಾಹಿತ್ಯ ಪರ ಅಮೃತ ಪ್ರಕಾಶ ಪತ್ರಿಕೆ ಇದೀಗ 11ನೇ ವರುಷದ ಸಂಭ್ರಮದಲ್ಲಿದೆ. ಈಗಾಗಲೇ ಹಿರಿಯ ಕಿರಿಯ ಸಾಹಿತಿಗಳ ಕೃತಿಗಳನ್ನು ಪತ್ರಿಕೆ ವತಿಯಿಂದ ಸರಣಿ ಕೃತಿ ಬಿಡುಗಡೆ ಕಾರ್ಯಕ್ರಮದಡಿ 41 ಕೃತಿಗಳು ಬಿಡುಗಡೆಗೊಂಡಿವೆ. ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಸಾಹಿತ್ಯ ಅಭಿರುಚಿವೆನ್ನುವ ವಿನೂತನ ಕಾರ್ಯಾಕ್ರಮ ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಸೇರಿದಂತೆ ಈಗಾಗಲೇ 101 ಯಶಸ್ವಿ ಕಾರ್ಯಯಕ್ರಮ ಮಾಡಿದೆ. ಈ ಕಾರ್ಯರಕ್ರಮ ನಿರಂತರ ಈ ವರುಷವೂ ನಡೆಯಲಿದೆ. ಹಿರಿಯ ಕಿರಿಯ ಸಾಹಿತಿಗಳ ಮನೆಗೆ ತೆರಳಿ, ಗುರುತಿಸಿ, ಗೌರವಿಸುವ ಕಾರ್ಯಕ ನಿರಂತರ ಹತ್ತು ವರುಷದಿಂದ ನಡೆಯುತ್ತಾ ಬಂದಿದೆ. ರಾಜ್ಯ ಮಟ್ಟದ ಲೇಖನ, ಕವನ, ಚುಟುಕು ಸ್ಪರ್ಧೆ ಮಾಡಿ ಬಹುಮಾನ ನೀಡುತ್ತಾ ಬಂದಿದೆ. ಇದೀಗ ಅಮೃತ ಪ್ರಕಾಶ ಪತ್ರಿಕೆ 11 ವರುಷ ಸವಿ ಸಂಭ್ರಮದ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯ ಕ್ರಮ ಮಂಗಳೂರು ಪತ್ರಿಕಾ ಭವನದಲ್ಲಿ ದಿನಾಂಕ 22-07-2024ರಂದು ಬೆಳಗ್ಗೆ 10-30ಕ್ಕೆ ಬಿಡುಗಡೆಗೊಳ್ಳಲಿದೆ. ಕಾರ್ಯಈಕ್ರಮದ ಅಧ್ಯಕ್ಷತೆಯನ್ನು…

Read More

ಸುರತ್ಕಲ್ : ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ಕರ್ನಾಟಕ ಗಮಕ ಕಲಾ ಪರಿಷತ್ತು ದ.ಕ. ಜಿಲ್ಲೆ, ಕರ್ನಾಟಕ ಗಮಕ ಕಲಾ ಪರಿಷತ್ತು ಮಂಗಳೂರು ಮತ್ತು ಸುರತ್ಕಲ್‌ ಗೋವಿಂದದಾಸ ಪದವಿ ಪೂರ್ವ ಕಾಲೇಜಿನ ಸಹಯೋಗದೊಂದಿಗೆ ಗೋವಿಂದ ದಾಸ ಪದವಿ ಪೂರ್ವ ಕಾಲೇಜಿನಲ್ಲಿ 9ನೇ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ‘ಗಮಕ ಕಲಾ ಸಮ್ಮೇಳನ’ವು ದಿನಾಂಕ 13-07-2024ರಂದು ನಡೆಯಿತು. ಈ ಸಮ್ಮೇಳನವನ್ನು ಜ್ಯೋತಿ ಪ್ರಜ್ವಲನೆ ಮಾಡಿ ಉದ್ಘಾಟನೆ ಮಾಡಿದ ಕರ್ನಾಟಕ ಗಮಕ ಕಲಾ ಪರಿಷತ್‌ನ ಅಧ್ಯಕ್ಷ ಎ.ವಿ. ಪ್ರಸನ್ನ ಮಾತನಾಡಿ “ಕಾವ್ಯದ ಜೊತೆಗೆ ಬೆಳೆದಿರುವ ಗಮಕ ಕಲೆ ಶ್ರೇಷ್ಠವಾದುದು. ಜನ ಸಾಮಾನ್ಯರಿಗೆ ಕಾವ್ಯಗಳನ್ನು ಪರಿಚಯಿಸಿ ನಾಡಿನ ಶ್ರೇಷ್ಠ ಸಂಸ್ಕೃತಿ ಪಸರಿಸುವ ಕಾರ್ಯವನ್ನು ಗಮಕಿಗಳು ಮಾಡುತ್ತಿದ್ದಾರೆ” ಎಂದು ನುಡಿದರು. ಸಮ್ಮೇಳನಾಧ್ಯಕ್ಷ ಗಮಕ ವಿದ್ವಾನ್ ಹೆಚ್. ಯಜ್ಞೇಶಾಚಾರ್ಯ ಹೊಸಬೆಟ್ಟು ಮಾತನಾಡಿ “ಗಮಕ ವಾಚನ ಮನೆಮನೆಗಳಲ್ಲಿ ಚಳುವಳಿಯ ರೂಪದಲ್ಲಿ ನಡೆಸಬೇಕಾಗಿದೆ. ಗಮಕ ಅಭಿಮಾನಿಗಳು ಈ ನಿಟ್ಟಿನಲ್ಲಿ ಶ್ರಮಿಸಬೇಕು. ಶ್ರೇಷ್ಠತರ ಕಲೆಯಾದ ಗಮಕವನ್ನು ಸಾಂಸ್ಕೃತಿಕ ಸಂಸ್ಥೆಗಳು ರಕ್ಷಿಸುವ ಕಾರ್ಯ…

Read More

ಕಲಬುರಗಿ : ರಂಗಸಂಗಮ ಕಲಾ ವೇದಿಕೆ ಕಲಬುರಗಿ ಇದರ ವತಿಯಿಂದ ಶ್ರೀ ಎಸ್.ಬಿ. ಜಂಗಮ ಶೆಟ್ಟಿ ಹಾಗೂ ಶ್ರೀಮತಿ ಸುಭದ್ರಾದೇವಿ ಜಂಗಮಶೆಟ್ಟಿ ರಾಜ್ಯ ಮಟ್ಟದ ರಂಗ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 18-07-2024ರಂದು ಬೆಳಿಗ್ಗೆ 10-30 ಗಂಟೆಗೆ ಕಲಬುರಗಿಯ ಜಿಲ್ಲಾ ಕೋರ್ಟ್ ಎದುರುಗಡೆ ಇರುವ ವಿಶ್ವೇಶ್ವರಯ್ಯ ಭವನದಲ್ಲಿ ನಡೆಯಲಿದೆ. ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಪೂಜ್ಯ ಶ್ರೀ ಸದಾಶಿವ ಸ್ವಾಮಿಗಳ ಸಾನಿಧ್ಯದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಶ್ರೀ ಕೆ.ವಿ. ನಾಗರಾಜ ಮೂರ್ತಿ ಇವರು ಪ್ರಶಸ್ತಿ ಪ್ರದಾನ ಮಾಡಲಿರುವರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ. ಶರಣಪ್ಪ ವಿ. ಹಲಸೆ ಇವರು ಅಧ್ಯಕ್ಷತೆ ವಹಿಸಲಿದ್ದು, ಶ್ರೀ ಎಸ್.ಬಿ. ಜಂಗಮ ಶೆಟ್ಟಿ ಹಾಗೂ ಶ್ರೀಮತಿ ಸುಭದ್ರಾದೇವಿ ಜಂಗಮಶೆಟ್ಟಿ ಇವರ ಕುರಿತು ಹಿರಿಯ ಶ್ರೇಣಿ ನ್ಯಾಯಾಲಯದ ಆದೇಶ ಜಾರಿಕಾರರಾದ ಶ್ರೀ ಮಹಾದೇವ ಎಮ್. ಹಂಗರಗಿ ಇವರು ಮಾತನಾಡಲಿದ್ದಾರೆ. ರಂಗಸಂಗಮ ಕಲಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಶಿವಗೀತಾ ಬಸವಪ್ರಭು…

Read More

ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ವತಿಯಿಂದ ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ‘ಸಿರಿಬಾಗಿಲು ಯಕ್ಷ ವೈಭವ’ವು ದಿನಾಂಕ 17-07-2024 ರಿಂದ 20-07-2024ರ ವರೆಗೆ ನಡೆಯಲಿದೆ. ಪ್ರಪ್ರಥಮ ಬಾರಿಗೆ ಹವ್ಯಾಸಿ ಕಲಾತಂಡಗಳ ಚಾರಿತ್ರಿಕ ಯಕ್ಷಗಾನ ಪ್ರದರ್ಶನ, ವಿಚಾರ ಸಂಕಿರಣ, ಭರತನಾಟ್ಯ, ಕನ್ನಡ ನಾಡಗೀತೆ ಗಾಯನ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳನ್ನು ಇದು ಒಳಗೊಂಡಿದೆ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇದರ ಸಹಯೋಗದೊಂದಿಗೆ ‘ಕರ್ನಾಟಕ ಸಂಭ್ರಮ-50ರ ಸವಿ ನೆನಪು 2023-24’ ಮತ್ತು ಕಲಾಪೋಷಕರ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ. ದಿನಾಂಕ 17-07-2024 ರಂದು ಬೆಳಗ್ಗೆ 10.30ಕ್ಕೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಚಾಲನೆ ನೀಡುವರು. ಯಕ್ಷಗಾನ ಕಲಾಪೋಷಕ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ, ಸದಸ್ಯ ಎ.…

Read More

ಮಂಗಳೂರು : ಹಿರಿಯ ರಂಗಕರ್ಮಿ ಸದಾನಂದ ಸುವರ್ಣ ಅವರು ದಿನಾಂಕ 16-07-2024ರಂದು ಮಂಗಳೂರಿನಲ್ಲಿ ನಿಧನರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು  ‘ಕೋಟ್೯ ಮಾರ್ಷಲ್’, ‘ಮಳೆ ನಿಲ್ಲುವ ವರೆಗೆ’, ‘ಉರುಳು’, ‘ಕಲಂಕ್ ದಿ ನೀರ್’ ಮುಂತಾದ ಅಧ್ಬುತ ನಾಟಕಗಳು ಇವರ  ನಿರ್ದೇಶನದಿಂದ ಮೂಡಿಬಂದಿತ್ತು. ಮೂಲತಃ ಮೂಲ್ಕಿಯವರಾದ ಸುವರ್ಣರು ಮುಂಬೈನಲ್ಲಿ ರಾತ್ರಿ ಶಾಲೆಯಲ್ಲಿ ಕಲಿತು, ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿ ಸೇವೆ ಸಲ್ಲಿಸಿ  ಹತ್ತಾರು ವರ್ಷಗಳ ಹಿಂದೆ ಮಂಗಳೂರಿಗೆ ಬಂದು ನೆಲೆಸಿದ್ದರು. ಇವರು ನಿರ್ಮಿಸಿದ ಮೊದಲ ಸಿನಿಮಾ ‘ಘಟಶ್ರಾದ್ಧ’ ಇದು ಗಿರೀಶ್ ಕಾಸರವಳ್ಳಿಯವರ ಮೊದಲ ನಿರ್ದೇಶನದ ಸಿನಿಮಾ‌ ಕೂಡಾ. ಗಿರೀಶ್ ಕಾಸರವಳ್ಳಿಯವರು ಕನ್ನಡ ಸಿನಿಮಾ ರಂಗದಲ್ಲಿ ಗಟ್ಟಿಯಾಗಿ ನೆಲೆ ಊರಲು ನೆರವಾದವರು ಸುವರ್ಣರು. ಬಳಿಕ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ‘ಮನೆ’, ‘ಕುಬಿ ಮತ್ತು ಇಯಾಲ’ ಮತ್ತು ‘ತಬರನ ಕಥೆ’ ಸಿನಿಮಾಗಳ ಕಾರ್ಯನಿರ್ವಾಹಕ ನಿರ್ಮಾಪಕರಾಗಿದ್ದರು. ದೂರದರ್ಶನಕ್ಕೆ ಗುಡ್ಡದ ಭೂತ ಧಾರಾವಾಹಿ ನಿರ್ಮಿಸಿ, ನಿರ್ದೇಶಿಸಿದ್ದರು. ಇದು ಪ್ರಕಾಶ್ ರೈ ಅವರಿಗೆ ಬ್ರೇಕ್ ಕೊಟ್ಟಿತು. ದೂರದರ್ಶನಕ್ಕೆ‌ ಇವರ ನಿರ್ದೇಶನದಲ್ಲಿ ಕೋಟ…

Read More

ಮಂಗಳೂರು : ಮಂಗಳೂರಿನ ಉರ್ವದಲ್ಲಿರುವ  ನಾಟ್ಯಾರಾಧನಾ ಕಲಾ ಕೇಂದ್ರ ಇದರ ‘ತ್ರಿಂಶೋತ್ಸವ’ದ ಅಂಗವಾಗಿ ನಡೆಯುವ ಸರಣಿ ನೃತ್ಯ ಕಾರ್ಯಕ್ರಮ  “ನೃತ್ಯಾಮೃತ -6” ಅಂಗವಾಗಿ ನಾಟ್ಯಾರಾಧನಾ ಕಲಾ ಕೇಂದ್ರದ ಕಿರಿಯ ವಿದ್ಯಾರ್ಥಿಗಳಿಂದ “ಮುಕುಲ ಮಂಜರಿ” ವೈವಿಧ್ಯಮಯ ನೃತ್ಯ ಕಾರ್ಯಕ್ರಮವು ದಿನಾಂಕ 17-07-2024ರ ಬುಧವಾರದಂದು ಸಂಜೆ 4.45 ರಿಂದ ಮಂಗಳೂರಿನ ಕುದ್ಮುಲ್ ರಂಗರಾವ್ ಭವನ( ಪುರಭವನ)ದಲ್ಲಿ ನಡೆಯಲಿದೆ.  ತ್ರಿಂಶೋತ್ಸವದ ಸಹ ಸಮಿತಿಗಳ ಸಹಕಾರದೊಂದಿಗೆ ನಡೆಯುವ ಈ ಕಾರ್ಯಕ್ರಮವನ್ನು  ಕಲ್ಬಾವಿ ಕ್ಯಾಶೂಸ್ ಇದರ ಮಾಲಿಕರಾದ ಶ್ರೀ ಪ್ರಕಾಶ್ ರಾವ್ ಕಲ್ಬಾವಿ ಉದ್ಘಾಟಿಸಲಿದ್ದು, ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಲಿದ್ದಾರೆ. ಅಖಿಲ ಭಾರತ ಬ್ರಾಹ್ಮಣ ಮಹಾ ಸಭಾ (ರಿ.) ಬೆಂಗಳೂರು ಇದರ ರಾಜ್ಯ ಜತೆ ಕಾರ್ಯದರ್ಶಿ ಶ್ರೀಮತಿ ಕಾತ್ಯಾಯಿನೀ ಸೀತಾರಾಂ, ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠ ಮತ್ತು ತುಳು ಅಧ್ಯಯನ ಸ್ನಾತಕೋತ್ತರ ವಿಭಾಗ ಮಂಗಳೂರಿನ ಸಂಯೋಜಕರಾದ ಡಾ. ಮಾಧವ ಎಂ. ಕೆ., ಲಲಿತಕಲಾ ಸದನ ಮಂಗಳೂರಿನ ನಿರ್ದೇಶಕರಾದ ವಿದ್ವಾನ್ ಸುದರ್ಶನ್ ಪ್ರೇಮನಾಥ್, ನೃತ್ಯಸುಧಾ (ರಿ.)…

Read More

ಮೂಡಬಿದಿರೆ:  ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ಮೂವತ್ತೇಳನೇ ಉಪನ್ಯಾಸ ಕಾರ್ಯಕ್ರಮವು ದಿನಾಂಕ 12-07-2024 ರಂದು ಮೂಡಬಿದಿರೆಯ ಆಳ್ವಾಸ್(ಸ್ವಾಯತ್ತ) ಕಾಲೇಜಿನಲ್ಲಿ ನಡೆಯಿತು.  “ಸಮಾಜ ಸೇವೆ: ಸ್ವಾಮಿ ವಿವೇಕಾನಂದರ ಆದರ್ಶ ಮತ್ತು ಸೋದರಿ ನಿವೇದಿತಾ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಮಂಗಳೂರಿನ ಭಾರತ್ ಅಕಾಡೆಮಿಯ ಅಕಾಡೆಮಿಕ್ ಸಂಯೋಜಕರಾದ ಸ್ವಾತಿ ರೈ “ಸೋದರಿ ನಿವೇದಿತಾ, ವಿವೇಕಾನಂದರ ಶಿಷ್ಯೆ, ಭಾರತದ ಸ್ವಾತಂತ್ರ‍್ಯ ಸಂಗ್ರಾಮಕ್ಕೆ ಮತ್ತು ಮಹಿಳಾ ಶಿಕ್ಷಣಕ್ಕೆ ತನ್ನ ಜೀವನವನ್ನೇ ಅರ್ಪಿಸಿದವರು. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಆಳವಾದ ಗೌರವವನ್ನು ಉತ್ತೇಜಿಸಿದರು. ಇವರ ಸೇವಾಭಾವನೆಯು ನಮ್ಮೆಲ್ಲರಿಗು ಪ್ರೇರಣೆಯಾಗಿದೆ. ಜನಸೇವೆಯನ್ನು ಸಮರ್ಥವಾಗಿ ಮಾಡುವ ಮೂಲಕ ಸಮಾಜದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯನ್ನು ಸುಧಾರಿಸಲು ಇವರ ಆದರ್ಶಗಳು ನಮಗೆ ಮಾರ್ಗದರ್ಶನ.” ಎಂದು ಹೇಳಿದರು. ಈ ಸಂದರ್ಭದಲ್ಲಿ ಮೂಡಬಿದಿರೆಯ ಆಳ್ವಾಸ್(ಸ್ವಾಯತ್ತ) ಕಾಲೇಜಿನ ಪರೀಕ್ಷಾಂಗ ಕುಲಸಚಿವರಾದ ಡಾ. ನಾರಾಯಣ ಶೆಟ್ಟಿ, ರಾಮಕೃಷ್ಣ ಮಿಷನ್ ಹಿರಿಯ ಸ್ವಯಂಸೇವಕರಾದ ಶ್ರೀ ಬೆಳ್ಳಾಲ…

Read More