Author: roovari

ಕಾಸರಗೋಡು : ಪೆರ್ಲ ಸಮೀಪದ ಬಳ್ಳಂಬೆಟ್ಟು ಶ್ರೀ ಪರಿವಾರ ಸಹಿತ ಶಾಸ್ತರ ದೇವಳದಲ್ಲಿ ಮಕರ ಸಂಕ್ರಮಣದ ಅಂಗವಾಗಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ವತಿಯಿಂದ ದಿನಾಂಕ 14 ಜನವರಿ 2025ರಂದು ಅಗರಿ ಭಾಗವತ ವಿರಚಿತ ‘ಶಾಂಭವಿ ವಿಲಾಸ’ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಗಿರೀಶ್ ರೈ ಕಕ್ಕೆಪದವು, ಶ್ರೇಯಾ ಆಚಾರ್ಯ ಆಲಂಕಾರು, ಪದ್ಮನಾಭ ಉಪಾಧ್ಯಾಯ, ನೆಕ್ಕರೆಮೂಲೆ ಗಣೇಶ್ ಭಟ್ ಸಹಕರಿಸಿದರು. ಮುಮ್ಮೇಳದಲ್ಲಿ ಗಾಯತ್ರೀ ಹೆಬ್ಬಾರ್ (ಕೌಶಿಕೆ), ಹರಿಣಾಕ್ಷಿ ಜೆ. ಶೆಟ್ಟಿ (ಶುಂಭ), ಶುಭಾ ಅಡಿಗ (ರಕ್ತಬೀಜ ಮತ್ತು ಸುಗ್ರೀವ), ಕಿಶೋರಿ ದುಗ್ಗಪ್ಪ ನಡುಗಲ್ಲು (ಚಂಡ), ಶಾರದ ಅರಸ್ (ಮುಂಡ) ಸಹಕರಿಸಿದರು. ನಿರ್ದೇಶಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ವಂದಿಸಿದರು. ಬದಿಯಡ್ಕ ಉದ್ಯಮಿ ಗಿರಿಧರ ಪೈ ಕಾರ್ಯಕ್ರಮ ಪ್ರಾಯೋಜಿಸಿದ್ದರು.

Read More

ಮಂಗಳೂರು : ಮಂಗಳೂರಿನ ಡಾ. ಟಿ. ಎಂ. ಎ. ಪೈ ಇಂಟರ್ನೇಷನಲ್ ಕನ್ವೆನ್ಷನ್ ಸೆಂಟರ್ ಇಲ್ಲಿ ನಡೆದ ಮಂಗಳೂರು ಸಾಹಿತ್ಯ ಉತ್ಸವದ 7ನೇ ಆವೃತ್ತಿಯ ಅಂಗವಾಗಿ ದಿನಾಂಕ 11 ಜನವರಿ 2025 ರಂದು ‘ಕಥಾ ಓದು’ ಕಾರ್ಯಕ್ರಮವು ಸಾಹಿತ್ಯ ಪ್ರೇಮಿಗಳಿಗೆ ಅನನ್ಯ ಅನುಭವ ನೀಡಿತು. ಈ ವಿಶೇಷ ಕಾರ್ಯಕ್ರಮದಲ್ಲಿ ಮೂರು ಪ್ರಮುಖ ವ್ಯಕ್ತಿತ್ವಗಳು ಭಾಗವಹಿಸಿದರು – ಪತ್ರಕರ್ತ ಹಾಗೂ ಲೇಖಕ ಗೋಪಾಲಕೃಷ್ಣ ಕುಂಟಿನಿ, ಕಥೆಗಾರ ಸಚಿನ್ ತೀರ್ಥಹಳ್ಳಿ ಮತ್ತು ಗುರುವಂದನ ಸಾಹಿತ್ಯ ಪ್ರಶಸ್ತಿ ವಿಜೇತೆಯಾದ ಲೇಖಕಿ ಸ್ಮಿತಾ ರಾಘವೇಂದ್ರ ‘ಕಥಾ ಓದು’ ಸಂವಾದದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವು ಕಥಾ ಓದು ಕಲೆ ಕುರಿತು ಪರಿಚಯ ನೀಡುವ ಮೂಲಕ ಆರಂಭವಾಯಿತು, ಇದು ಸಂಸ್ಕೃತಿಗಳನ್ನು ಸಂಪರ್ಕಿಸುವ, ಪರಂಪರೆಯನ್ನು ಕಾಪಾಡುವ ಮತ್ತು ಚಿಂತನೆಗೆ ಉತ್ತೇಜನ ನೀಡುವ ಒಂದು ಸಶಕ್ತ ಮಾಧ್ಯಮವಾಗಿದೆ. ಪ್ರತ್ಯೇಕವಾಗಿ ತಮ್ಮ ಕಥೆಗಳನ್ನು ಓದುವುದರ ಮೂಲಕ ಎಲ್ಲರೂ ತಮ್ಮ ವಿಶಿಷ್ಟ ಶೈಲಿಯನ್ನು ಪರಿಚಯಿಸಿದರು. ಕಥೆಗಳ ಮೂಲಕ ಸಂಸ್ಕೃತಿಯ ಆಳವಾದ ವ್ಯಾಖ್ಯಾನ, ಸಾಹಿತ್ಯದ ಸಮಾಜಶಾಸ್ತ್ರೀಯ ಪ್ರಭಾವ, ಮತ್ತು…

Read More

ಕಾಸರಗೋಡು : ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಮೈಸೂರು ಇದರ ಕೇರಳ ಗಡಿನಾಡ ಘಟಕವಾದ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಶಿವರಾಮ ಕಾಸರಗೋಡು ಅಧ್ಯಕ್ಷತೆಯಲ್ಲಿ ಅಸ್ತಿತ್ವಕ್ಕೆ ಬಂದು 25 ವರ್ಷ ಪೂರ್ಣಗೊಂಡಿದೆ. ದಿನಾಂಕ 27 ಮಾರ್ಚ್ 2025 ಗುರುವಾರದಂದು ಇದರ ಬೆಳ್ಳಿ ಹಬ್ಬ ವರ್ಷಾಚರಣೆಯ ಸಂಭ್ರಮವು ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆಯಲಿದೆ. ದಿನಾಂಕ 12 ಜನವರಿ 2025ರಂದು ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನದ ಲಾಂಛನವನ್ನು ವಿಟ್ಲದಲ್ಲಿ ನಡೆದ ಬಂಟ್ವಾಳ ತಾಲೂಕು 6ನೇ ಚುಟುಕು ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಮೈಸೂರು ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿಯ ಸ್ಥಾಪಕರಾದ ರಾಜ್ಯ ಪ್ರಧಾನ ಸಂಚಾಲಕ ಡಾ. ಎಂ.ಜಿ.ಆರ್. ಅರಸ್ ಇದನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರುಗಳಾದ ದಕ್ಷಿಣ ಕನ್ನಡ ಜಿಲ್ಲೆಯ ಹರೀಶ್ ಸುಲಾಯ ಒಡ್ಡಂಬೆಟ್ಟು, ಕಾಸರಗೋಡು ಜಿಲ್ಲೆಯ ಶಿವರಾಮ ಕಾಸರಗೋಡು, ಮಂಗಳೂರು ತಾಲೂಕಿನ ಗೋಪಾಲಕೃಷ್ಣ ಶಾಸ್ತ್ರಿ, ಸುಳ್ಯದ ಶ್ರೀಮತಿ ಅಶ್ವಿನಿ ಕೋಡಿಬೈಲು, ಬಂಟ್ವಾಳ…

Read More

ಸುರತ್ಕಲ್ : ಯಕ್ಷಗಾನ ಮತ್ತು ಲಲಿತಕಲಾ ಅಧ್ಯಯನ ಕೇಂದ್ರ ಮತ್ತು ಗೋವಿಂದ ದಾಸ ಕಾಲೇಜು ಸುರತ್ಕಲ್ ಇವರು ಜಂಟಿಯಾಗಿ ಆಯೋಜಿಸುವ ‘ನೀನಾಸಂ ತಿರುಗಾಟ 2024 ನಾಟಕೋತ್ಸವ’ವನ್ನು ದಿನಾಂಕ 18 ಮತ್ತು 19 ಜನವರಿ 2025ರಂದು ಪ್ರತಿದಿನ ಸಂಜೆ 6-50 ಗಂಟೆಗೆ ಸುರತ್ಕಲ್ಲಿನ ಗೋವಿಂದ ದಾಸ ಕಾಲೇಜಿನ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 18 ಜನವರಿ 2025ರಂದು ಭವಭೂತಿ ರಚನೆ ಹಾಗೂ ಅಕ್ಷರ ಕೆ.ವಿ. ಇವರ ನಿರ್ದೇಶನದಲ್ಲಿ ಹೆಗ್ಗೋಡು ನೀನಾಸಂ ತಂಡದವರಿಂದ ‘ಮಾಲತಿ ಮಾಧವ’ ಮತ್ತು ದಿನಾಂಕ 19 ಜನವರಿ 2025ರಂದು ಅಭಿರಾಮ್ ಭಡ್ಕಮ್ಕರ್ ರಚಿಸಿರುವ ಜಯಂತ್ ಕಾಯ್ಕಿಣಿ ಕನ್ನಡಕ್ಕೆ ಅನುವಾದಿಸಿರುವ ವಿದ್ಯಾನಿಧಿ ವನಾರಸೆ ಇವರ ನಿರ್ದೇಶನದಲ್ಲಿ ಹೆಗ್ಗೋಡು ನೀನಾಸಂ ತಂಡದವರಿಂದ ‘ಅಂಕದ ಪರದೆ’ ನಾಟಕ ಪ್ರದರ್ಶನಗೊಳ್ಳಲಿದೆ.

Read More

ಮಂಗಳೂರು : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಪ್ರಸ್ತುತ ಪಡಿಸುವ ಆನ್ಲೈನ್ ಸಂಗೀತ ಕಾರ್ಯಾಗಾರವು ದಿನಾಂಕ 25 ಮತ್ತು 26 ಜನವರಿ 2025 ಹಾಗೂ 01 ಮತ್ತು 02 ಫೆಬ್ರುವರಿ 2025ರಂದು ಬೆಳಿಗ್ಗೆ 8-00 ಗಂಟೆಯಿಂದ 9-30 ಗಂಟೆ ತನಕ ವಿದುಷಿ ಪ್ರಾರ್ಥನಾ ಸಾಯಿ ನರಸಿಂಹನ್ ಇವರಿಂದ ನಡೆಯಲಿದೆ. ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ +91 7411916098 ವಿಭು ರಾವ್ ಇವರನ್ನು ಸಂಪರ್ಕಿಸಬಹುದು.

Read More

ಮಂಗಳೂರು : ಮಂಗಳೂರಿನ ಟಿ.ಎಂ.ಎ. ಪೈ ಇಂಟನ್ಯಾಷನಲ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ಮಂಗಳೂರು ಸಾಹಿತ್ಯ ಉತ್ಸವದ 7ನೇ ಆವೃತ್ತಿಯ ಅಂಗವಾಗಿ ಕನ್ನಡ ಸಾಹಿತ್ಯ ವಿಮರ್ಶೆ –  ಒಂದು ಅಕಾಡೆಮಿಕ್ ಚರ್ಚೆ’ಯು ಎರಡನೇ ಸಭಾಂಗಣದಲ್ಲಿ ದಿನಾಂಕ 11 ಜನವರಿ 2025ರಂದು ನಡೆಯಿತು. ಈ ಚರ್ಚೆಯನ್ನು ಸಂವಾಹಕರಾಗಿ ಡ. ಕಾಖಂಡಕಿ ಹೆಚ್.ವಿ. ಅವರು ನಡೆಸಿಕೊಟ್ಟರು. ಈ ಚರ್ಚಾ ಫಲಕದಲ್ಲಿ ಡಾ. ಜಿ.ಬಿ. ಹರೀಶ್, ಡಾ. ಎನ್.ಎಸ್. ಗುಂಡೂರು ಹಾಗೂ ಡಾ. ಶಾಮಸುಂದರ ಖಿದರಕುಂದಿ ಭಾಗವಹಿಸಿದರು. ಡಾ. ಜಿ. ಬಿ. ಹರೀಶ್ : ಬರಹಗಾರರಾಗಿರುವ ಇವರಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಜೈನ್ ಮತ್ತು ಪ್ರಾಕೃತ ಭಾಷೆಯ ಪರಂಪರೆಯ ಅಧ್ಯಯನಕ್ಕಾಗಿ ಡಾಕ್ಟರೇಟ್ ಪದವಿ ದೊರಕಿದೆ. ಡಾ. ಎನ್. ಎಸ್. ಗುಂಡೂರು : ಶ್ರೀಯುತರು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದು, ಇವರಿಗೆ ಕರ್ನಾಟಕ ವಿಶ್ವವಿದ್ಯಾನಿಲಯದಿಂದ 2004ರಲ್ಲಿ ವಿಭಜನೆಯ ಕಾದಂಬರಿಗಳ ಕುರಿತು ಅಧ್ಯಯನಕ್ಕಾಗಿ ಡಾಕ್ಟರೇಟ್ ಪದವಿ ದೊರಕಿದೆ. ಡಾ. ಶಾಮಸುಂದರ ಖಿದರಕುಂದಿ : ಗದಗಿನ ಎ. ಎಸ್. ಏಸ್. ವಾಣಿಜ್ಯ ಕಾಲೇಜಿನಲ್ಲಿ…

Read More

ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕು ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಜಿಲ್ಲಾ ರಜತೋತ್ಸವ ಸಮಿತಿಯ ಸಹಕಾರದಲ್ಲಿ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ 11 ಜನವರಿ 2025ರ ಶನಿವಾರದಂದು ಬ್ರಹ್ಮಾವರದ ಬಂಟರ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಮೂಡಬಿದಿರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್‌ ಆಳ್ವಾ ಮಾತನಾಡಿ “ಸಮುದಾಯದ ಧ್ವನಿಯಾಗಿ, ಸಮಾಜದ ಸಾಧ್ಯತೆಗಳನ್ನು ಬದುಕಿನ‌ ವೈವಿಧ್ಯತೆಯ ಚಿತ್ರಣವಾಗಿ, ಸಾಮಾಜಿಕ ಜವಾಬ್ದಾರಿಯ ಎಚ್ಚರಿಕೆಯ ಗಂಟೆಯಾಗಿ ಪತ್ರಿಕೆ ಕೆಲಸ ಮಾಡುತ್ತಿದೆ.” ಎಂದು ಹೇಳಿದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಮಾತನಾಡಿ “ಪತ್ರಿಕೋದ್ಯಮ ಇಂದು ಸಂದಿಗ್ಧ ಸ್ಥಿತಿಯಲ್ಲಿದೆ. ಪ್ರಾಮಾಣಿಕ ಸುದ್ದಿ ಮತ್ತು ಪ್ರಾಮಾಣಿಕ ನಿರ್ಭೀತ ಪತ್ರಿಕೋದ್ಯಮ ಇಂದು ಅಗತ್ಯವಾಗಿದೆ. ಇಂದಿನ ಪತ್ರಿಕೆ ಮತ್ತು ಪತ್ರಕರ್ತರಿಗೆ ಅತಿಯಾಗಿ ವಿಜೃಂಭಿಸದೇ ವಾಸ್ತವವನ್ನು ಬಿಂಬಿಸುವ ಪತ್ರಕರ್ತರನ್ನಾಗಿ ಮಾಡಲು ವಡ್ಡರ್ಸೆ ಅವರು ಮಾದರಿ ಹಾಕಿ ಕೊಟ್ಟಿದ್ದಾರೆ” ಎಂದು ಹೇಳಿದರು. ಸಂಘದ…

Read More

ಕಾರ್ಕಳ : ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಇವುಗಳ ಸಹಭಾಗಿತ್ವದಲ್ಲಿ 2025 ಜನವರಿಯಿಂದ ಡಿಸೆಂಬರ್ ತನಕ ಪ್ರತೀ ತಿಂಗಳು ‘ರಾಮಸಾಗರಗಾಮಿನೀ’ ಎಂಬ ಶ್ರೀಮದ್ ವಾಲ್ಮೀಕಿ ರಾಮಾಯಣ ದರ್ಶನ ಉಪನ್ಯಾಸ ಮಾಲೆಯನ್ನು ಹಮ್ಮಿಕೊಂಡಿದ್ದು, ಮಾಲೆಯ ಮೊದಲ ಸೋಪಾನ ‘ವಾಲ್ಮೀಕಿ ಗಿರಿಯಲ್ಲಿ ಜನಿಸಿ’ ಎಂಬ ವಿಷಯದ ಕುರಿತು ದಿನಾಂಕ 11 ಜನವರಿ 2025ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಖ್ಯಾತ ವಿದ್ವಾಂಸರೂ, ವಾಗ್ಮಿಗಳೂ ಆಗಿರುವ ಡಾ. ರಾಘವೇಂದ್ರ ರಾವ್ ಪಡುಬಿದ್ರಿಯವರು ಮಾತನಾಡುತ್ತಾ ಆದಿಕಾವ್ಯವಾಗಿ ರಾಮಾಯಣವು ಇಂದು ಭಾರತೀಯ ಸಂಸ್ಕೃತಿಯ ಆಗರವಾಗಿ ನಿಂತಿದೆ. ಸರ್ವ ಸದ್ಗುಣಗಳನ್ನು ಹೊಂದಿರುವ ವ್ಯಕ್ತಿ ಯಾರಾದರೂ ಈ ಪ್ರಪಂಚದಲ್ಲಿದ್ದಾರೆಯೇ ಎಂಬ ವಾಲ್ಮೀಕಿ ಮಹರ್ಷಿಗಳ ಪ್ರಶ್ನೆಗೆ ನಾರದರು ಉತ್ತರ ರೂಪವಾಗಿ ಅಂತಹ ಒಬ್ಬ ವ್ಯಕ್ತಿ ಈ ಜಗತ್ತಿನಲ್ಲಿದ್ದು, ಆತನೇ ಅಯೋಧ್ಯೆಯನ್ನು ಆಳುತ್ತಿರುವ ಪ್ರಭು ಶ್ರೀರಾಮಚಂದ್ರ ಎಂಬುದಾಗಿ ತಿಳಿಸುತ್ತಾ ಬಾಲಕಾಂಡದ…

Read More

ಧಾರವಾಡ : ವರಕವಿ ದ.ರಾ. ಬೇಂದ್ರೆ ಹೆಸರಲ್ಲಿ ಕೊಡುವ 2025ನೇ ಸಾಲಿನ ‘ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ’ ಲೇಖಕಿ ಡಾ. ವೀಣಾ ಶಾಂತೇಶ್ವರ ಹಾಗೂ ಕವಿ, ವಿಮರ್ಶಕ ಮತ್ತು ಚಿಂತಕ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಇವರುಗಳಿಗೆ ಒಲಿದಿದೆ. ಬೇಂದ್ರೆಯವರ 129ನೇ ಜನ್ಮದಿನದ ನಿಮಿತ್ತ ದಿನಾಂಕ 31 ಜನವರಿ 2025ರಂದು ಬೇಂದ್ರೆ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಡಾ. ದ.ರಾ. ಬೇಂದ್ರೆ ಟ್ರಸ್ಟ್ ಅಧ್ಯಕ್ಷರಾದ ಡಾ. ಡಿ.ಎಂ. ಹಿರೇಮಠ ಇವರು ತಿಳಿಸಿದರು. ಪ್ರಶಸ್ತಿ ಮೊತ್ತ ರೂಪಾಯಿ ಒಂದು ಲಕ್ಷವಿದ್ದು, ಇಬ್ಬರು ಹಂಚಿಕೊಂಡಿದ್ದಾರೆ. ಪ್ರಶಸ್ತಿ ಫಲಕ, ಫಲ-ಪುಷ್ಪಗಳನ್ನು ಒಳಗೊಂಡಿದೆ. ಧಾರವಾಡದ ನವೋದಯ ಸಾಹಿತ್ಯದ ಸ್ತ್ರೀ ಸಂವೇದನೆ ಸೃಜನಶೀಲ ಲೇಖಕಿ ಡಾ. ವೀಣಾ ಶಾಂತೇಶ್ವರ ಮತ್ತು ಗಾಂಧಿ, ಅಂಬೇಡ್ಕರ್, ಲೋಹಿಯಾ, ಕುವೆಂಪು ಇವರ ವಿಚಾರಧಾರೆಗಳಿಂದ ಪ್ರಭಾವಿತರಾದ ತುಮಕೂರು ಮೂಲದ ಪ್ರೊ. ಎಸ್.ಜಿ. ಸಿದ್ದರಾಮಯ್ಯರವರನ್ನು ಪ್ರಶಸ್ತಿ ಆಯ್ಕೆ ಸಮಿತಿ ಒಮ್ಮತದಿಂದ ಆಯ್ಕೆ ಮಾಡಿದೆ. ಪ್ರೊ. ವೀಣಾ ಶಾಂತೇಶ್ವರ : ಧಾರವಾಡದಲ್ಲಿ ಹುಟ್ಟಿದ ಪ್ರೊ. ವೀಣಾ…

Read More

ಕೋಣಾಜೆ : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಮಂಗಳೂರು ವಿವಿ ವತಿಯಿಂದ ವಿವಿಯ ಆಡಳಿತ ಸೌಧದ ರಾಣಿ ಅಬ್ಬಕ್ಕ ಸಭಾಂಗಣದಲ್ಲಿ ದಿನಾಂಕ 09 ಜನವರಿ 2025ರಂದು ನಾ. ಡಿಸೋಜ ನುಡಿನಮನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಂಗಳೂರು ವಿವಿಯ ಕುಲಸಚಿವ ರಾಜು ಮೊಗವೀರ ಇವರು ಮಾತನಾಡಿ “ಅಭಿವೃದ್ಧಿ ಮತ್ತು ಪರಿಸರದ ನಡುವೆ ಸಮತೋಲನ ಕಾಯ್ದುಕೊಳ್ಳಬೇಕಾದ ಅಗತ್ಯವನ್ನು ಪ್ರತಿಪಾದಿಸಿದ ಕನ್ನಡದ ಲೇಖಕ ನಾ. ಡಿಸೋಜ, ಅವರ ಕಾದಂಬರಿಗಳಲ್ಲಿ ಪ್ರಕೃತಿ ವಿನಾಶದ ದುಷ್ಪರಿಣಾಮಗಳ ಕುರಿತು, ಅಭಿವೃದ್ಧಿಯ ಅಮಾನವೀಯ ಮುಖ ಅನಾವರಣಗೊಂಡಿದೆ. ಅಭಿವೃದ್ಧಿಯ ಮಾದರಿಗಳು ಭಿನ್ನ ಇರಬಹುದು. ಶರಾವತಿಯಲ್ಲಿ ಮುಳುಗಡೆಯಿಂದ, ರಸ್ತೆ ಅಗಲೀಕರಣದಿಂದ, ವಿಮಾನ ನಿಲ್ದಾಣದಿಂದ ಹೀಗೆ ಬೇರೆ ಬೇರೆ ಕಾರಣಗಳಿಂದ ಮನೆ, ಜಾಗ ಕಳೆದುಕೊಂಡು ವಲಸೆ ಹೋಗಬೇಕಾದವರ ಭಾವನೆಗಳು, ಸಂಕಟಗಳು ಸಮಾನ. ಬರಹಗಾರರು ಇಂತಹ ನೋವಿಗೆ ಮಿಡಿಯುತ್ತಾರೆ. ನಾ. ಡಿಸೋಜರ ಬರಹದಲ್ಲಿ ಅದನ್ನು ಕಾಣಬಹುದಾಗಿದೆ.” ಎಂದು ತಿಳಿಸಿದರು. ದ.ಕ. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಮಾತನಾಡಿದರು. ವಿಧಾನ…

Read More