Subscribe to Updates
Get the latest creative news from FooBar about art, design and business.
Author: roovari
ಉಡುಪಿ : ‘ಹಮ್’ – ಯು.ಎನ್. ಉಮೆನ್.ಲೀಡ್ ಆಧರಿಸಿದ, ಪೋರ್ಡ್ ಫೌಂಡೇಶನ್ ಸಹಯೋಗದೊಂದಿಗೆ ಯು.ಎನ್. ಉಮೆನ್ ಇಂಡಿಯಾ ನಿರ್ಮಿಸಿದ ಈ ಪುಸ್ತಕದಲ್ಲಿ ಭಾರತೀಯ ಮಹಿಳಾ ಪರಿವರ್ತಕ ನಾಯಕತ್ವದ ಕುರಿತಾದ 75 ಕಥೆಗಳ ಸಂಕಲನವನ್ನು ಒಳಗೊಂಡಿದೆ. ಮಹಿಳಾ ನಾಯಕರನ್ನು ಗೌರವಿಸಲು ಪೋರ್ಡ್ ಫೌಂಡೇಶನ್ ಸಹಯೋಗದೊಂದಿಗೆ ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ. U.N. Women Asia-Pacific leading from the front ಇದರ ‘ಹಮ್’ ಎಂಬ ಕಥಾ ಸಂಗ್ರಹವನ್ನು ಹೊಂದಿದೆ. ಇದು ಭಾರತದಲ್ಲಿ ಮಹಿಳೇಯರ ನೇತೃತ್ವದ ಅಭಿವೃದ್ಧಿಯ ವಿಷಯ-ಕಥೆಗಳನ್ನು ಒಳಗೊಂಡಿದೆ. ಈ ಪುಸ್ತಕದಲ್ಲಿ ಕರ್ನಾಟಕದಿಂದ ಯಕ್ಷ ಗುರು ಪ್ರಿಯಾಂಕ ಕೆ. ಮೋಹನ್ ಅವರ ಕೆಲಸದ ಬಗ್ಗೆ, ಅವರ ಅಭಿಪ್ರಾಯ ಒಳಗೊಂಡಿರುವುದು ಹೆಮ್ಮೆಯ ವಿಚಾರವಾಗಿದೆ. ಪರಿವರ್ತನಾಶೀಲ ನಾಯಕತ್ವದ ಶಕ್ತಿಗೆ ಪ್ರಿಯಾಂಕ ಅವರ ಪ್ರಯಾಣ ಸಾಕ್ಷಿಯಾಗಿದೆ. ಸಂಪ್ರದಾಯವನ್ನು ನಾವೀನ್ಯತೆಯೊಂದಿಗೆ ಸಂಯೋಜಿಸುವ, ಲಿಂಗ ಸ್ಟೀರಿಯೊ ಟೈಪ್ಗಳಿಗೆ ಸವಾಲು ಹಾಕುವ ಮತ್ತು ಯುವ ಕಲಾವಿದರನ್ನು ಪ್ರೇರೇಪಿಸುವ ಮತ್ತು ಸಬಲಗೊಳಿಸುವ ಅವರ ಸಾಮರ್ಥ್ಯವು ಯಕ್ಷಗಾನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವಲ್ಲಿ ಮತ್ತು ವಿಕಸನಗೊಳಿಸುವಲ್ಲಿ…
ಬೆಂಗಳೂರು : ಇತ್ತೀಚೆಗೆ ನಿಧನರಾದ ಸಾಹಿತಿ ಕಮಲಾ ಹಂಪನಾ ಇವರಿಗೆ ‘ನುಡಿ ಗೌರವ’ ಕಾರ್ಯಕ್ರಮವು ದಿನಾಂಕ 12-07-2024 ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವ ಶ್ರೀಕೃಷ್ಣರಾಜ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕಮಲಾ ಹಂಪನಾ ಇವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ “ಕಮಲಾ ಹಂಪನಾ ಅವರ ಅಗಲುವಿಕೆಯಿಂದ ಕನ್ನಡ ಸಾಹಿತ್ಯದಲ್ಲಿ ಒಂದು ಯುಗದ ಮುಕ್ತಾಯವಾಗಿದೆ ಎಂದರೆ ತಪ್ಪಾಗದು. ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅಷ್ಟು ದೊಡ್ಡದು. ಅವರ ಅಗಲುವಿಕೆಯಿಂದ ಮನೆಯ ಹಿರಿಯರನ್ನು ಕಳೆದುಕೊಂಡ ತಬ್ಬಲಿ ಭಾವವನ್ನು ಅನುಭವಿಸುತ್ತಿದ್ದೇನೆ. ಪತಿ ಡಾ. ಹಂಪನಾಗರಾಜಯ್ಯನವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗುವ ಮೊದಲಿಂದಲೂ ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆಗೆ ನಿಕಟ ಸಂಬಂಧವನ್ನು ಇಟ್ಟುಕೊಂಡಿದ್ದ ಡಾ. ಕಮಲಾ ಹಂಪನಾ ಮೂಡಬಿದರೆಯಲ್ಲಿ ನಡೆದ 71ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಜಿಲ್ಲಾ ಸಾಹಿತ್ಯ ಸಮ್ಮೇಳನ, ಲೇಖಕಿಯರ ಸಮ್ಮೇಳನ, ಅತ್ತಿಮಬ್ಬೆ ಅಂತರರಾಷ್ಟ್ರೀಯ ವಿಚಾರ ಸಂಕಿರಣ ಹೀಗೆ ಹಲವು ಪ್ರಮುಖ ಸಮ್ಮೇಳನಗಳ…
ಬೆಂಗಳೂರು : ಶ್ರೀ ಚೆನ್ನಕೇಶವ ಸಾಂಸ್ಕೃತಿಕ ಸಂಘ (ರಿ.) ಇದರ ವಾರ್ಷಿಕೋತ್ಸವದ ಅಂಗವಾಗಿ ‘ಜಾಂಬವತಿ ಕಲ್ಯಾಣ’ ಯಕ್ಷಗಾನ ತಾಳಮದ್ದಳೆಯು ದಿನಾಂಕ 14-07-2024ರಂದು ಮಧ್ಯಾಹ್ನ 3-30 ಗಂಟೆಗೆ ದೊಡ್ಡಕಲ್ಲಸಂದ್ರ ಮೆಟ್ರೊ ಬಳಿಯಿರುವ ಶಂಕರ ಫೌಂಡೇಷನ್ – ಢಮರು ಆಡಿಟೋರಿಯಂನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು ಹೆಚ್ಚಿನ ಮಾಹಿತಿಗಾಗಿ 7676330365ಗೆ ಕರೆ ಮಾಡಿ.
ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 15-07-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಉಡುಪಿಯ ಕುಮಾರಿ ಗೌತಮಿ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ರಾಘವೇಂದ್ರ ಸೋಮಯಾಜಿ ಮತ್ತು ಅನುರಾಧಾ ಸೋಮಯಾಜಿ ಇವರ ಸುಪುತ್ರಿಯಾಗಿರುವ ಗೌತಮಿ ಎಂ. ಸೋಮಯಾಜಿ ಇವರು 2013ರಿಂದ ವಿದುಷಿ ಮಾನಸಿ ಸುಧೀರ್ ಇವರಲ್ಲಿ ನೃತ್ಯಾಭ್ಯಾಸ ಆರಂಭಿಸಿದ್ದು, ಭರತನಾಟ್ಯ ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಗಳನ್ನು ವಿದ್ವಾನ್ ಶ್ರೀ ಸುಧೀರ್ ರಾವ್ ಕೊಡವೂರು ಇವರ ಮಾರ್ಗದರ್ಶನದಲ್ಲಿ ಉತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದಿ ಪ್ರಸ್ತುತ ವಿದ್ವತ್ ಪಾಠಗಳನ್ನು ಕಲಿಯುತ್ತಿದ್ದಾರೆ. ಗುರು ಶ್ರೀ ನಾಗರಾಜ ಉಪಾಧ್ಯಾಯ ಇವರ ಮಾರ್ಗದರ್ಶನದಲ್ಲಿ ಸಂಗೀತ ತರಗತಿಯ ಜೂನಿಯರ್ ಮುಗಿಸಿ, ಸೀನಿಯರ್ ವಿಭಾಗದಲ್ಲಿ ಕಲಿಯುತ್ತಿದ್ದು, ಯಕ್ಷಗಾನ ಕಲೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.
ಕಾಸರಗೋಡು : ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ನಡೆಯುತ್ತಿರುವ ಈ ವರ್ಷದ ನಾಟ್ಯ ತರಗತಿ ಮತ್ತು ಹೊಸದಾಗಿ ಯಕ್ಷಗಾನ ಹಿಮ್ಮೇಳ ತರಗತಿಯನ್ನು ಯಕ್ಷರಂಗದ ಖ್ಯಾತ ಕಲಾವಿದ ರಾಧಾಕೃಷ್ಣ ನಾವಡ ಮಧೂರು ಇವರು ದಿನಾಂಕ 06-07-2024ರಂದು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ವ್ಯಾಸ ಮಂಟಪದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿದರು. ಯಕ್ಷಗಾನದ ಮಹತ್ವದ ಕುರಿತು ವಿಸ್ತಾರವಾಗಿ ನುಡಿದರು. ತರಬೇತಿ ಕೇಂದ್ರದ ಅಧ್ಯಕ್ಷರಾದ ಶ್ರೀ ಕೆ.ಎನ್. ರಾಮಕೃಷ್ಣ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಹಿಮ್ಮೇಳ ಗುರುಗಳಾದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರಾಘವ ಬಲ್ಲಾಳ್ ಕಾರಡ್ಕ, ನಾಟ್ಯ ಗುರುಗಳಾದ ರಾಕೇಶ್ ರೈ ಅಡ್ಕ, ಶ್ರೀ ವೆಂಕಟರಮಣ ಸ್ವಾಮಿ ಕೃಪಾಶ್ರಿತ ಕಲಾ ಸಂಘದ ಅಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ ಉಪಸ್ಥಿತರಿದ್ದರು. ನಾಟ್ಯ ತರಬೇತಿ ಉಚಿತವಾಗಿ ನೀಡುತ್ತಿದ್ದು, ಹಿಮ್ಮೇಳ ತರಗತಿಗೆ ಸಣ್ಣ ಶುಲ್ಕವನ್ನಿರಿಸಿ ತರಬೇತಿ ನೀಡಲಾಗುವುದು. ರಾಮಕೃಷ್ಣ ಹೊಳ್ಳ ಸ್ವಾಗತಿಸಿ, ಕಿಶೋರ್ ಕುಮಾರ್ ವಂದಿಸಿದರು.
ಪುತ್ತೂರು : ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು, ಗುರುಕುಲ ಕಲಾ ಪ್ರತಿಷ್ಠಾನ (ರಿ.) ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಹಯೋಗದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಸಹಕಾರದೊಂದಿಗೆ, ಪುತ್ತೂರಿನ ಐ.ಆರ್.ಸಿ.ಎಂ.ಡಿ. ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ, ಮುಂಗಾರು ಕವಿಗೋಷ್ಠಿ (ಕವಿತೆಯೊಂದಿಗೆ ಪುಷ್ಪವೃಷ್ಠಿ) ಕಾರ್ಯಕ್ರಮವು ದಿನಾಂಕ 17-07-2024ರಂದು ಪುತ್ತೂರಿನ ಐ.ಆರ್.ಸಿ.ಎಂ.ಡಿ. ಶಿಕ್ಷಣ ಸಂಸ್ಥೆಯ ಹೋಟೆಲ್ ಸ್ವಾಗತ್ ಒಂದನೇ ಮಹಡಿಯಲ್ಲಿ ನಡೆಯಲಿದೆ. ಪುತ್ತೂರು ತಾಲೂಕು ಕ.ಸಾ.ಪ.ದ ಡಾ. ಹರ್ಷ ಕುಮಾರ್ ರೈ ಮಾಡಾವು ಇವರ ಅಧ್ಯಕ್ಷತೆಯಲ್ಲಿ ಐ.ಆರ್.ಸಿ.ಎಂ.ಡಿ. ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಪ್ರಪುಲ್ಲ ಗಣೇಶ್ ಇವರು ಉದ್ಘಾಟನೆ ಮಾಡಲಿದ್ದಾರೆ. ಗುರುಕುಲ ಕಲಾ ಪ್ರತಿಷ್ಠಾನದ ಅಧ್ಯಕ್ಷರಾದ ಮುಖ್ಯ ಅತಿಥಿ ಗಳಾಗಿ ಭಾಗವಹಿಸಲಿರುವರು.
ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕಾಂಜವೇ ಸಾಂಸ್ಕೃತಿಕ ವೇದಿಕೆ ಬೆಳ್ತಂಗಡಿ, ವಿದ್ಯಾಪ್ರಕಾಶನ ಅತ್ತಾವರ ಮತ್ತು ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಇವುಗಳ ಸಹಯೋಗದಲ್ಲಿ ಶೀನಾ ನಾಡೋಳಿಯವರ ‘ಬೊಳಂತ್ಯೆ-ಉರ್ಪೆಲ್’ (ತುಳು ಅಕಾಡೆಮಿ ಪ್ರಕಟಿತ), ‘ಧರ್ಮದೃಷ್ಟಿ’ ಮತ್ತು ‘ಫೀಸ್ ನನ್ನ ಫೀಸ್ ಕೊಡಿ’ ಕೃತಿ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 12-07-2024ರಂದು ಕೆನರಾ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಹಿರಿಯ ಜಾನಪದ ವಿದ್ವಾಂಸ ಡಾ. ಕೆ. ಚಿನ್ನಪ್ಪ ಗೌಡ ಮಾತನಾಡಿ, “ಒಂದು ಕಾಲದಲ್ಲಿ ಅನುವಾದ ಸಾಹಿತ್ಯ ಎರಡನೇ ದರ್ಜೆಯ ಸಾಹಿತ್ಯ ಎಂಬ ಅಭಿಪ್ರಾಯ ಇತ್ತು. ಆದರೆ ಒಂದು ಸಾಹಿತ್ಯದ ಗ್ರಹಿಕೆಗೆ ಸೀಮಿತವಾಗಿ ಈ ಅಭಿಪ್ರಾಯವಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಲೇಖಕ ಶೀನಾ ಅವರು ಅನುವಾದಿಸಿರುವ ಆಂಗ್ಲ ಕವಿತೆಗಳು ತುಳುವಿನದ್ದೇ ಎಂಬಂತೆ ಇವೆ. ಅಷ್ಟರ ಮಟ್ಟಿಗೆ ತುಳುವಿನ ಸಂದರ್ಭಕ್ಕೆ ಒಗ್ಗಿಸಲು ಅವರು ಯಶಸ್ವಿಯಾಗಿದ್ದಾರೆ. ಇಂಗ್ಲೀಷ್ ಕಾವ್ಯವನ್ನು ತುಳುವಿಗೆ ಸಮರ್ಪಕವಾಗಿ ದಾಟಿಸಿರುವ ಅವರ ಕೃತಿಗಳಲ್ಲಿ ಸಂಸ್ಕೃತಿ ಅನುವಾದದ ಅತ್ಯುತ್ತಮ ಮಾದರಿಯನ್ನು ಕಾಣಬಹುದಾಗಿದೆ” ಎಂದರು. ತುಳು ಸಾಹಿತ್ಯ ಅಕಾಡೆಮಿ…
ಉಡುಪಿ : ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸದಸ್ಯರನ್ನಾಗಿ ಉಡುಪಿಯ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರನ್ನು ಸರ್ಕಾರವು ನೇಮಕ ಮಾಡಿ ಆದೇಶ ಹೊರಡಿಸಿದೆ. ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಇವರು ಸಾಹಿತ್ಯದ ಕಾವ್ಯ , ಕತೆ, ನಾಟಕ, ವಿಮರ್ಶೆ, ಅಂಕಣ ಬರಹ, ಅನುವಾದ, ಸಂಶೋಧನೆ ಮಂತಾದ ಪ್ರಕಾರಗಳಲ್ಲಿ ಈಗಾಗಲೇ ಸುಮಾರು 30ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ‘ಕಾಯಕಾವ್ಯ’, ‘ಅವನು ಹೆಣ್ಣಾಗಬೇಕು’ ಹಾಗೂ ‘ನಕ್ಷತ್ರ ನಕ್ಕ ರಾತ್ರಿ’, ಮುಂತಾದ ಕವನ ಸಂಗ್ರಹಗಳು, ‘ತೊಗಲು ಗೊಂಬೆ’ ಕಾದಂಬರಿ, ‘ಇರವಿನ ಅರಿವು’ ಮತ್ತು ‘ಮೊಗ್ಗಿನ ಮಾತು’, ಮುಂತಾದವು ಇವರ ಕೆಲವು ಕೃತಿಗಳು. ಕನಕದಾಸರ ಕೀರ್ತನೆಗಳನ್ನು ಮತ್ತು ವಚನಗಳನ್ನು ತುಳುವಿಗೆ ಅನುವಾದ ಮಾಡಿರುವ ಇವರು ಕನಕನ ಕೃತಿಗಳನ್ನು ಆಧರಿಸಿ ನಾಟಕಗಳನ್ನು ಬರೆದಿದ್ದಾರೆ. ‘ರಾಮಧಾನ್ಯ ಚರಿತೆ’ಯನ್ನು ತುಳುವಿಗೆ ಅನುವಾದ ಮಾಡಿ ಮೂಲದೊಂದಿಗೆ ಪ್ರಕಟಿಸಿದ್ದಾರೆ .ಇದಕ್ಕಾಗಿ ಅವರಿಗೆ ಕರ್ನಾಟಕ ಸರ್ಕಾರವು ‘ಕನಕ ಯುವ ಪ್ರಶಸ್ತಿ’ಯನ್ನು ನೀಡಿದೆ. ಸಾಹಿತ್ಯ ಸಂಸ್ಕೃತಿಗೆ ಇವರು ಕೊಟ್ಟಿರುವ ಕೊಡುಗೆಯನ್ನು ಗಮನಿಸಿ ಸರ್ಕಾರವು…
ಉಡುಪಿ : ಉಡುಪಿ ಡಿ. ವೈ. ಎಸ್ಪಿ.ಯಾದ ಡಿ. ಟಿ. ಪ್ರಭು ಇವರ ಪುತ್ರಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿರುವ ಪ್ರಿಯದರ್ಶಿನಿ ಪಿ. ವಿರಚಿತ `ಕೀಕಾ’ ಪುಸ್ತಕದ ಲೋಕರ್ಪಣಾ ಸಮಾರಂಭವು ದಿನಾಂಕ 12-07-2024ನೇ ಶುಕ್ರವಾರದಂದು ಉಡುಪಿಯ ಪುರಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ “ಮಕ್ಕಳಿಗೆ ಎಳವೆಯಲ್ಲಿಯೇ ಓದಿನ ಹವ್ಯಾಸ ಬೆಳೆಸಬೇಕು. ಈಚಿನ ದಿನಗಳಲ್ಲಿ ಬರೆಯುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಓದುವವರ ಸಂಖ್ಯೆ ವಿರಳವಾಗಿದೆ. ಆದ್ದರಿಂದ ಓದಿನ ಹವ್ಯಾಸ ಹೆಚ್ಚಿಸುವ ಕಾರ್ಯಕ್ರಮ ಆಯೋಜಿಸಬೇಕು. ಇಂಜಿನಿಯರಿಂಗ್ ವಿದ್ಯಾರ್ಥಿನಿಯಾದರೂ ಪ್ರಿಯದರ್ಶಿನಿ ಅವರು ಈ ಪುಸ್ತಕದಲ್ಲಿ ಪರಿಸರ, ಸ್ವಾತಂತ್ರ್ಯ ಹೋರಾಟ, ಹೆಚ್ಚಾಗಿ ರಾಣಾ ಪ್ರತಾಪಸಿಂಹ ಬಗೆಗೆ ಅನೇಕರಿಗೆ ಗೊತ್ತಿಲ್ಲದ ವಿಚಾರಗಳನ್ನು ದಾಖಲಿಸಿದ್ದಾರೆ. ಇದು ಶಿಕ್ಷಕ ಕೈಪಿಡಿಯಾಗಲು ಯೋಗ್ಯವಾಗಿದೆ.” ಎಂದರು. ಹೂವಿನ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಹಾಸ್ಯ ಸಾಹಿತಿ ಶಾಂತರಾಜ ಐತಾಳ್ ಮಾತನಾಡಿ “ಮೊಬೈಲ್ ಯುಗದಲ್ಲಿ ಜನರಿಗೆ ಓದಿನ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ.” ಎಂದು ವಿಷಾದಿಸಿದರು.…
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ತೀರ್ಥಹಳ್ಳಿಯ ಇಂದಿರಾ ನಗರದ ಸ. ಹಿ. ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ಕಥೆ, ಕವನ ಹಾಗೂ ಪ್ರಬಂಧ ರಚನಾ ಕಮ್ಮಟವು ದಿನಾಂಕ 13-07-2024ರಂದು ಶಾಲಾ ಆವರಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕ. ಸಾ. ಪ. ಅಧ್ಯಕ್ಷ ಟಿ. ಕೆ. ರಮೇಶ್ ಶೆಟ್ಟಿ ಉದ್ಘಾಟಿಸಿದರು. ಸಮಾರಂಭದಲ್ಲಿ ಅತಿಥಿಗಳಾಗಿ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷೆಯಾದ ರೇಣುಕಾ ಹೆಗ್ಡೆ, ಕ. ಸಾ. ಪ. ಕಾರ್ಯದರ್ಶಿ ಗಾಯತ್ರಿ ಶೇಷಗಿರಿ, ಮುಖ್ಯೋಪಾಧ್ಯಾಯನಿ ಕುಸುಮಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಬಲೇಶ್ ಹೆಗಡೆ ಮತ್ತು ಶಾಲೆಯ ಶಿಕ್ಷಕರು ಪಾಲ್ಗೊಂಡಿದ್ದರು. ನಿವೃತ್ತಿ ಶಿಕ್ಷಕಿ ಸುಧೀಷ್ಣ ಕುಮಾರಿ, ಗಾಯತ್ರಿ ಶೇಷಗಿರಿ, ಶಿಕ್ಷಕಿ ಸುರೇಖಾ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಪರಿಣಾಮಕಾರಿಯಾಗಿ ಕಮ್ಮಟ ನಡೆಸಿಕೊಟ್ಟರು.